ಸಮರಕ್ಕೆ ಸಜ್ಜಾಯಿತು ಸಾಮಾಜಿಕ ಜಾಲತಾಣ..ಫೇಸ್‌ಬುಕ್‌ನಿಂದ 200 ಆಪ್‌ಗಳು ಸ್ಥಗಿತ!!
ಕೇಂಬ್ರಿಡ್ಜ್ ಅನಾಲಿಟಿಕಾ ಪ್ರಕರಣದ ನಂತರ ಫೇಸ್‌ಬುಕ್‌ನೊಂದಿಗೆ ಸಂಪರ್ಕ ಹೊಂದಿದ್ದ ಕೆಲವು ಆಪ್‌ಗಳು ಬಳಕೆದಾರರ ಮಾಹಿತಿಯನ್ನು ಕಳ್ಳತನ ಮಾಡುತ್ತಿದ್ದ ಆರೋಪ ಕೇಳಿಬಂದಿತ್ತು. ಇದರ ಬೆನ್ನಲ್ಲೇ ಸಾಮಾಜಿಕ ಜಾಲತಾಣ ಫೇಸ್‌ಬುಕ್ ಸಂಸ್ಥೆ ಅಂತಹ ಆಪ್‌ಗಳ ವಿರುದ್ಧ ಸಮರ ಸಾರಿ, 200 ಆಪ್ ಗಳನ್ನು ಸ್ಥಗಿತಗೊಳಿಸಿದೆ.
ಫೇಸ್‌ಬುಕ್ ಸುಮಾರು 2 ಶತಕೋಟಿ ಬಳಕೆದಾರರ ಡೇಟಾವನ್ನು ಪ್ರವೇಶಿಸುವ ಪ್ರತಿಯೊಂದು ಅಪ್ಲಿಕೇಶನ್ ಮತ್ತು ಲೆಕ್ಕಪರಿಶೋಧನೆ ಮಾಡುತ್ತಿದೆ ಮತ್ತು ಅದರ ನೀತಿಗಳಿಗೆ ಅನುಸಾರವಾಗಿ ವಿಫಲವಾದ 200 ಅಪ್ಲಿಕೇಶನ್ಗಳನ್ನು ಈಗಾಗಲೇ ಅಮಾನತ್ತುಗೊಳಿಸಿದೆ ಎಂದು ಸಾಮಾಜಿಕ ಮಾಧ್ಯಮ ದೈತ್ಯ ಫೇಸ್‌ಬುಕ್ ಸೋಮವಾರ ತಿಳಿಸಿದೆ.

ಫೇಸ್‌ಬುಕ್ ಮೂಲಕ ಬಳಕೆದಾರರ ವೈಯಕ್ತಿಕ ಮಾಹಿತಿಗಳನ್ನು ಕದ್ದ ಆರೋಪಗಳು ಎದುರಾದ ನಂತರ ಫೇಸ್‌ಬುಕ್ ತೆಗೆದುಕೊಳ್ಳುತ್ತಿರುವ ಕ್ರಮಗಳಲ್ಲಿ ಇದು ಸಹ ಒಂದಾಗಿದೆ. ಫೇಸ್‌ಬುಕ್ ನೊಂದಿಗೆ ಸಂಪರ್ಕ ಹೊಂದಿದ್ದ 200 ಆಪ್‌ಗಳಿಗೆ ತನ್ನ ಖಾತೆಯಿಂದ ಲಾಗಿನ್ ಆಗಲು ಸಾಧ್ಯವಾಗದಂತೆ ಫೇಸ್‌ಬುಕ್ ಸ್ಥಗಿತಗೊಳಿಸಲಿದೆ ಎಂದು ತಿಳಿದುಬಂದಿದೆ.

ಫೇಸ್‌ಬುಕ್ ಬಳಕೆದಾರರ ಮಾಹಿತಿಯನ್ನು ಹೊಂದಿದ್ದ ಆಪ್‌ಗಳ ಬಗ್ಗೆ ಸೂಕ್ತ ತನಿಖೆ ನಡೆಸುವುದಾಗಿ ಫೇಸ್‌ಬುಕ್ ಸಂಸ್ಥಾಪಕ ಮಾರ್ಕ್ ಜುಕರ್ಬರ್ಗ್ ಭರವಸೆ ನೀಡಿದ್ದರು. ಅದರಂತೆ, ಆಪ್ ಗಳ ಬಗೆಗಿನ ತನಿಖೆ ಚುರುಕುಗೊಂಡಿದ್ದು, ಬಳಕೆದಾರರ ಮಾಹಿತಿ ಹೊಂದಿದ್ದ 200 ಆಪ್ ಗಳನ್ನು ಗುರುತಿಸಿ ಸ್ಥಗಿತಗೊಳಿಸಲಾಗಿದೆ ಎಂದು ಫೇಸ್‌ಬುಕ್ ತಿಳಿಸಿದೆ.

ಫೇಸ್‌ಬುಕ್ ಮೂಲಕ ಸಂಪರ್ಕ ಹೊಂದಿದ್ದ ಕೆಲವು ಸಾವಿರ ಆಪ್ ಗಳನ್ನು ಪರೀಕ್ಷಿಸಲಾಗಿದ್ದು, ಈ ಪೈಕಿ 200 ಆಪ್‌ಗಳು ಫೇಸ್‌ಬುಕ್ ಬಳಕೆದಾರರ ಮಾಹಿತಿ ಹೊಂದಿದ್ದವು. ಹಾಗಾಗಿ, ಈ ಆಪ್ ಗಳು ಬಳಕೆದಾರರ ಮಾಹಿತಿಯನ್ನು ದುರುಪಯೋಗಪಡಿಸಿಕೊಂಡಿವೆಯೇ ಎಂಬುದರ ಬಗ್ಗೆ ಇನ್ನಷ್ಟೇ ತನಿಖೆ ನಡೆಯಬೇಕಿದೆ ಎಂದು ಫೇಸ್‌ಬುಕ್ ಅಧಿಕಾರಿಗಳು ತಿಳಿಸಿದ್ದಾರೆ.
ಓದಿರಿ: ಆನ್‌ಲೈನ್ ಸುರಕ್ಷತೆಗೆ ಎಲ್ಲರೂ ತಿಳಿಯಲೇಬೇಕಾದ ಟಾಪ್ 5 ಟಿಪ್ಸ್!!


Click it and Unblock the Notifications








