ಫೇಸ್ ಬುಕ್ ನಿಂದ ಲಿಪ್ ಸಿಂಕ್ ಲೈವ್... ಡಬ್ ಸ್ಮಾಷಿಗರಿಗೆ ಹೊಸ ಆಯ್ಕೆ..!
ಸಾಮಾಜಿಕ ಜಾಲತಾಣದ ದೈತ್ಯ ಫೇಸ್ ಬುಕ್ ಒಂದಲ್ಲ ಒಂದು ಕಾರಣಕ್ಕೆ ಸುದ್ದಿಯಲ್ಲಿರುತ್ತೆ. ಕೆಲವು ದಿನಗಳಿಂದ ಬಳಕೆದಾರರ ಮಾಹಿತಿ ಹಂಚಿಕೆ ಕುರಿತು ಸುದ್ದಿಯಲ್ಲಿರುವ ಫೇಸ್ ಬುಕ್ ತನ್ನ ಬಳಕೆದಾರರಿಗೆ ಹೊಸ ಫೀಚರ್ ಪರಿಚಯಿಸಿ ಸುದ್ದಿಯಲ್ಲಿದೆ. ಸದಾ ಹೊಸ ಫೀಚರ್ ಗಳನ್ನು ಗ್ರಾಹಕರಿಗೆ ನೀಡುವಲ್ಲಿ ಮುಂದಿರರುವ ಫೇಸ್ ಬುಕ್ ಹೊಸ ಲಿಪ್ ಸಿಂಕ್ ಲೈವ್ ಅನ್ನು ಪರಿಚಯಿಸುತ್ತಿದೆ.

ಹೀಗಾಗಲೇ ಜನಪ್ರಿಯವಾಗಿರುವ ಡಬ್ ಸ್ಮಾಷ್ ಮತ್ತು ಮ್ಯೂಸಿಕ್ ಲಿ ಆಪ್ ಗಳಂತೆ ಕಾರ್ಯನಿರ್ವಹಿಸುವ ಲಿಪ್ ಸಿಂಕ್ ಲೈವ್ ಅನ್ನು ಫೇಸ್ ಬುಕ್ ಪರಿಚಯಿಸುತ್ತಿದ್ದು, ಡಬ್ ಸ್ಮಾಷ್ ಮತ್ತು ಮ್ಯೂಸಿಕ್ ಲಿ ಆಪ್ ಗಳಿಗೆ ಫಿದಾ ಆಗಿರುವ ಸ್ಮಾರ್ಟ್ ಪೋನ್ ಗ್ರಾಹಕ ಫೇಸ್ ಬುಕ್ ನೀಡುತ್ತಿರುವ ಮತ್ತೊಂದು ಆಯ್ಕೆಯತ್ತ ಕುತೂಹಲ ನೆಟ್ಟಿದ್ದಾನೆ. ಆಗಿದ್ರೇ ಹೊಸ ಫೀಚರ್ ಹೇಗಿರಲಿದೆ ಎಂಬುದನ್ನು ತಿಳಿಯಲು ಮುಂದೆ ಓದಿ.
ಲೈವ್ ವಿಡಿಯೋದಲ್ಲಿದೆ ಹೊಸ ಫೀಚರ್
ಫೇಸ್ ಬುಕ್ ತನ್ನ ಹೊಸ ಫೀಚರ್ ಅನ್ನು ಲೈವ್ ವಿಡಿಯೋ ಆಯ್ಕೆಯಲ್ಲಿಯೇ ಪರಿಚಯಿಸಿದೆ. ಲೈವ್ ಮಾಡಬೇಕಾದರೆ ಕೆಳಗಿರುವ ಟ್ಯಾಬ್ ನಲ್ಲಿ ಬೇರೆ ಫೀಚರ್ ಗಳೊಂದಿಗೆ ಲಿಪ್ ಸಿಂಕ್ ಲೈವ್ ಫೀಚರ್ ಇರಲಿದ್ದು, ಬಳಸಬಹುದಾಗಿದೆ.

ಜನಪ್ರಿಯ ಹಾಡುಗಳೊಂದಿಗೆ ಲಿಪ್ ಸಿಂಕ್
ಮ್ಯೂಸಿಕ್ ಇಂಡಸ್ಟ್ರೀಯ ಕೆಲವು ಕಂಪನಿಗಳೊಂದಿಗೆ ಟೈ ಅಪ್ ಆಗುತ್ತಿರುವ ಫೇಸ್ ಬುಕ್, ಜನಪ್ರಿಯ ಹಾಡುಗಳನ್ನು ಲಿಪ್ ಸಿಂಕ್ ಲೈವ್ ನಲ್ಲಿ ನೀಡಲು ಮುಂದಾಗಿದೆ. ಸದ್ಯಕ್ಕೆ ಸಿಮೀತ ಸಂಖ್ಯೆಯಲ್ಲಿ ಹಾಡುಗಳನ್ನು ನೀಡಿದ್ದು, ನಂತರ ಭಾರೀ ಪ್ರಮಾಣದಲ್ಲಿ ವಿಸ್ತರಿಸುವ ಇರಾದೆಯಲ್ಲಿ ಫೇಸ್ ಬುಕ್ ಇದೆ. ಮೊದಲೇ ಅಪಡೇಟ್ ಆದ ಹಾಡುಗಳ ಪಟ್ಟಿಯಿಂದ ಹಾಡನ್ನು ಆಯ್ಕೆ ಮಾಡಿಕೊಂಡು ಲಿಪ್ ಸಿಂಕ್ ಮಾಡಬಹುದು.
ಲೈವ್ ಕಮೆಂಟ್ ಕೂಡ ಮಾಡಬಹುದು
ಲಿಪ್ ಸಿಂಕ್ ಲೈವ್ ನಲ್ಲಿ ಪ್ಲೇ ಐಕಾನ್ ಪ್ರೆಸ್ ಮಾಡುವುದರ ಮೂಲಕ ಲೈವ್ ಹೋಗಬಹುದು. ನೀವು ಲಿಪ್ ಸಿಂಕ್ ಮಾಡುತ್ತಿರುವಾಗಲೇ ನಿಮ್ಮ ಫೇಸ್ ಬುಕ್ ಸ್ನೇಹಿತರು ಕಮೆಂಟ್ ಮಾಡಬಹುದಾಗಿದೆ. ಈ ಆಯ್ಕೆ ಡಬ್ ಸ್ಮಾಷ್ ಮತ್ತು ಮ್ಯೂಸಿಕ್ ಲಿ ಅಲ್ಲಿ ಇದ್ದಿಲ್ಲ. ಲಿಪ್ ಸಿಂಕ್ ಲೈವ್ ನಂತರ ನೀವು ಅದನ್ನು ನಿಮ್ಮ ಫೀಡ್ ನಲ್ಲಿ ಪೋಸ್ಟ್ ಮತ್ತು ಶೇರ್ ಮಾಡಬಹುದು.

ಲಿಪ್ ಸಿಂಕ್ ಲೈವ್ ಜತೆ ಹಲವು ಆಯ್ಕೆ
ಫೇಸ್ ಬುಕ್ ಲೈವ್ ನಂತೆಯೇ ಇಲ್ಲೂ ಬೇರೆ ಫೀಚರ್ ಗಳನ್ನು ಬಳಸಬಹುದು. ಲಿಪ್ ಸಿಂಕ್ ಪ್ರಾರಂಭಿಸುವ ಮುನ್ನ ಸಣ್ಣ ವಿವರಣೆ ಬರೆಯುವುದಕ್ಕೆ ಅವಕಾಶವಿದೆ. ಫಿಲ್ಟರ್ಸ್ ಮತ್ತು ಮಾಸ್ಕ್ ಗಳನ್ನು ಬಳಸಬಹುದು. ಇದಲ್ಲದೆ, ನಿಮ್ಮ ಸ್ನೇಹಿತರು ನಿಮ್ಮ ಲಿಪ್ ಸಿಂಕ್ ಲೈವ್ ಸಮಯದಲ್ಲಿ ಕಲಾವಿದನ ಮೇಲೆ ಟ್ಯಾಪ್ ಮಾಡಿ ಅವರ ಪುಟ ಫಾಲೋ ಮಾಡಬಹುದು.


Click it and Unblock the Notifications








