ಹೊಸ ಫೀಚರ್‌ನಿಂದ ಫೇಸ್‌ಬುಕ್ ಪ್ರೊಫೈಲ್ ಇನ್ನಷ್ಟು ಸಂಗೀತಮಯ..!
ಮ್ಯೂಸಿಕ್ ಪ್ರಿಯರಿಗೆ ಇಷ್ಟವಾಗುವ ಸುದ್ದಿಯೊಂದನ್ನು ಫೇಸ್ ಬುಕ್ ನೀಡುತ್ತಿದೆ. ಹೊಸ ವೈಶಿಷ್ಟ್ಯತೆಯೊಂದು ಫೇಸ್ ಬುಕ್ ಗೆ ಸೇರ್ಪಡೆಗೊಳ್ಳುತ್ತಿದ್ದು ಇದು ಮ್ಯೂಸಿಕ್ ಪ್ರಿಯರನ್ನು ಆಕರ್ಷಿಸಲಿದೆ. ಹೌದು ಫೇಸ್ ಬುಕ್ ಪ್ರೊಫೈಲಿಗೆ ಇನ್ನು ಮುಂದೆ ಹಾಡನ್ನು ಕೂಡ ಸೇರಿಸಿಕೊಳ್ಳಬಹುದು.

ಇತ್ತೀಚೆಗೆ ಫೇಸ್ ಬುಕ್ ಭದ್ರತೆ ಮತ್ತು ಸುರಕ್ಷತೆಯ ಕಾರಣದಿಂದಾಗಿ ಎಲ್ಲರ ಕೆಂಗಣ್ಣಿಗೆ ತುತ್ತಾಗಿರುವ ಬೆನ್ನಲ್ಲೇ ಇದೀಗ ಬಳಕೆದಾರರಿಗೆ ಇನ್ನಷ್ಟು ಉತ್ತಮ ಅನುಭವವನ್ನು ನೀಡಲು ಫೇಸ್ ಬುಕ್ ಪ್ರಯತ್ನಿಸುತ್ತಿದೆ. ಈ ಬಾರಿ ಫೇಸ್ ಬುಕ್ ನಲ್ಲಿ ಜನರು ತಮ್ಮ ಅನುಭವವನ್ನು, ಭಾವನೆಯನ್ನು ಸಂಗೀತಮಯವಾಗಿಸಲು ಅವಕಾಶ ನೀಡುತ್ತಿದೆ. ಮ್ಯೂಸಿಕ್ ಬಗ್ಗೆ ಪ್ರೀತಿ ಇರುವವರಿಗೆ ಇದು ಖಂಡಿತ ಇಷ್ಟವಾಗುತ್ತದೆ. ಫೇಸ್ ಬುಕ್ ಸ್ಟೋರೀಸ್ ನಲ್ಲಿ ಮ್ಯೂಸಿಕ್ ವೈಶಿಷ್ಟ್ಯತೆಯು ಬಿಡುಗಡೆಗೊಂಡಿದ್ದು ಲಿಪ್ ಸಿಂಕ್ ಲೈವ್ ಫೀಚರ್ ನ್ನು ಇನ್ನಷ್ಟು ವಿಸ್ತರಿಸಲಾಗುತ್ತಿದೆ. ಇನ್ನು ಕೆಲವೇ ದಿನಗಳಲ್ಲಿ ಬಳಕೆದಾರರು ಹಾಡುಗಳನ್ನು ತಮ್ಮ ಪ್ರೊಫೈಲ್ ಗೆ ಸೇರಿಸಿಕೊಳ್ಳಬಹುದಾಗಿದೆ.

ಪ್ರೊಫೈಲಿಗೆ ಹಾಡನ್ನು ಸೇರಿಸುವುದು ಹೇಗೆ?
ಬಳಕೆದಾರರಿಗೆ ಇನ್ನು ಕೆಲವೇ ದಿನಗಳಲ್ಲಿ ಈ ವೈಶಿಷ್ಟ್ಯತೆ ಲಭ್ಯವಾಗುತ್ತದೆ. ನಿಮ್ಮ ಪ್ರೊಫೈಲ್ ನಲ್ಲಿ ಇದರ ಭಾಗವಾಗಿ ಹೊಸದಾಗಿರುವ ಮ್ಯೂಸಿಕ್ ಸೆಕ್ಷನ್ ಗೆ ಹಾಡನ್ನು ಸೇರಿಸುವುದಕ್ಕೆ ಅವಕಾಶವಿರುತ್ತದೆ.ನಿಮ್ಮ ಪ್ರೊಫೈಲ್ ನ ಟಾಪ್ ನಲ್ಲಿ ಸಾಂಗ್ ನ್ನು ಪಿನ್ ಮಾಡುವುದಕ್ಕೂ ಕೂಡ ಆಗುತ್ತದೆ. ಸಾಂಗ್ ನಲ್ಲಿ ಯಾರು ಹಾಡಿದ್ದು ಯಾವ ಟ್ರ್ಯಾಕ್ ಎಂಬುದನ್ನು ತೋರಿಸಲಾಗುತ್ತದೆ. ಇತರರು ಈ ಹಾಡನ್ನು ಪ್ಲೇ ಮಾಡಬಹುದು ಮತ್ತು ಅದಕ್ಕೆ ಸಂಬಂಧಿಸಿದ ವೀಡಿಯೋಗಳನ್ನು ಕೂಡ ನೋಡಬಹುದು.
ನಿಮ್ಮ ಪ್ರೊಫೈಲ್ ನಲ್ಲಿರುವ ಹಾಡನ್ನು ಇತರರು ಕ್ಲಿಕ್ಲಿಸಿದಾಗ ಅವರಿಗೆ ಹಾಡು ಮತ್ತು ಅದಕ್ಕೆ ಸಂಬಂಧಿಸಿದ ವೀಡಿಯೋ ಅಥವಾ ಆಲ್ಬಂ ಆರ್ಟ್ ಪ್ಲೇ ಆಗುತ್ತದೆ. ಆ ಹಾಡನ್ನು ಅವರು ಅವರ ಪ್ರೊಫೈಲ್ ಗೆ ಆಡ್ ಮಾಡಿಕೊಳ್ಳುವುದಕ್ಕೂ ಅವಕಾಶವಿರುತ್ತದೆ ಅಥವಾ ಆ ಆರ್ಟಿಸ್ಟ್ ಪೇಜಿಗೆ ತೆರಳುವುದಕ್ಕೂ ಕೂಡ ಅವಕಾಶವಿರುತ್ತದೆ. ಫೇಸ್ ಬುಕ್ ಈ ವೈಶಿಷ್ಟ್ಯತೆಯನ್ನು ಬಿಡುಗಡೆಗೊಳಿಸುವ ಬಗ್ಗೆ ಪ್ಲಾನ್ ಮಾಡಿದಾಗ ಇದರ ಬಗ್ಗೆ ಯಾವುದೇ ಸುಳಿವನ್ನೂ ಬಿಟ್ಟುಕೊಟ್ಟಿರಲಿಲ್ಲ.

ಫೇಸ್ ಬುಕ್ ಸ್ಟೋರೀಸ್ ನಲ್ಲಿ ಮ್ಯೂಸಿಕ್ :
ಬಳಕೆದಾರರು ತಮ್ಮ ಫೇಸ್ ಬುಕ್ ಸ್ಟೋರೀಸ್ ಗೆ ಹೊಸ ಮ್ಯೂಸಿಕ್ ಗಳನ್ನು ಇದೀಗ ಸೇರಿಸಬಹುದು. ನೀವು ಮಾಡಬೇಕಾಗಿರುವುದು ಇಷ್ಟೇ.ಫೇಸ್ ಬುಕ್ ಕ್ಯಾಮರಾದಿಂದ ಫೋಟೋ ಅಥವಾ ವೀಡಿಯೋವನ್ನು ತೆಗೆದುಕೊಳ್ಳಿ ಅಥವಾ ಸ್ಟಿಕ್ಕರ್ ಸೆಕ್ಷನ್ ನಲ್ಲಿರುವ ಮ್ಯೂಸಿಕ್ ಸ್ಟಿಕ್ಕರ್ ನಿಂದ ಆಯ್ಕೆ ಮಾಡಿಕೊಳ್ಳಿ.ನೀವು ಸೇರಿಸಬೇಕು ಎಂದುಕೊಂಡಿರುವ ಹಾಡನ್ನು ಹುಡುಕಾಡಲೂ ಬಹುದು ಮತ್ತು ನೀವು ನಿಮ್ಮ ಸ್ಟೋರೀಸ್ ಗೆ ಹಾಡಿನ ಯಾವ ಭಾಗವನ್ನು ಸೇರಿಸಬೇಕು ಎಂದುಕೊಂಡಿದ್ದೀರೋ ಅದನ್ನು ಕೂಡ ಆಯ್ಕೆ ಮಾಡಿಕೊಳ್ಳಬಹುದು.

ಲಿಪ್ ಸಿಂಕ್ ಲೈವ್ ನ್ನು ಎಕ್ಸ್ ಪಾಂಡ್ ಮಾಡುವಿಕೆ ಮತ್ತು ಹೊಸ ಲಿರಿಕ್ಸ್ ಸೇರಿಸುವಿಕೆ:
ಈ ವೈಶಿಷ್ಟ್ಯತೆ ಕೂಡ ಇದೀಗ ಬಳಕೆದಾರರಿಗೆ ಲಭ್ಯವಿದೆ. ಫೇಸ್ ಬುಕ್ ನ ಎಲ್ಲಾ ಪ್ರೊಫೈಲ್ ಗಳಿಗೂ ಕೂಡ ಲಿಪ್ ಸಿಂಕ್ ವೈಶಿಷ್ಟ್ಯತೆಯು ಬಿಡುಗಡೆಗೊಂಡಿದೆ. ಪೇಜಿಗೂ ಕೂಡ ಈ ವೈಶಿಷ್ಟ್ಯತೆಯನ್ನು ಕಂಪೆನಿಯು ಬಿಡುಗಡೆಗೊಳಿಸಿದೆ. ಹೆಚ್ಚಿನ ಎಲ್ಲಾ ಸಾಂಗ್ ಗಳಿಗೆ ಲಿಪ್ ಸಿಂಕ್ ಲೈವ್ ಮತ್ತು ಲಿರಿಕ್ಸ್ ವೈಶಿಷ್ಟ್ಯತೆಯನ್ನು ಫೇಸ್ ಬುಕ್ ನಲ್ಲಿ ಸೇರಿಸಲಾಗುತ್ತಿದೆ.


Click it and Unblock the Notifications








