ಫೇಸ್‌ಬುಕ್‌ನಲ್ಲಿಯೇ ಡೇಟಿಂಗ್ ಮಾಡಿ: ಇನ್ನು ಸಿಂಗಲ್ ಆಗಿರುವವರಿಗೆ CEO ಕೊಟ್ಟ ಹೊಸ ಆಫರ್ ಏನು...?
ಕ್ಯಾಲಿಫೊರ್ನಿಯಾದ ಸ್ಯಾನ್ ಜೋಸ್‌ನಲ್ಲಿ ನಡೆದ 'ಫೇಸ್‌ಬುಕ್ ಎಫ್8' ಡೆವಲಪರ್‌ಗಳ ವಾರ್ಷಿಕ ಸಭೆಯಲ್ಲಿ ಫೇಸ್‌ಬುಕ್, ತನ್ನ ಒಡೆತನಕ್ಕೆ ಸೇರಿರುವ ಸೋಶಿಯಲ್ ಮೀಡಿಯಾಗಳ ಮುಂದಿನ ಬದಲಾವಣೆಯ ಬಗ್ಗೆ ಸಾಕಷ್ಟು ವಿಷಯಗಳು ಬಹಿರಂಗಗೊಳಿಸಿದೆ. ಇದೇ ಮಾದರಿಯಲ್ಲಿ ಮುಂದಿನ ಕೆಲವೇ ದಿನಗಳಲ್ಲಿ ಫೇಸ್‌ಬುಕ್ ತನ್ನ ಖ್ಯಾತಿಯನ್ನು ಇನ್ನಷ್ಟು ಹೆಚ್ಚಿಸಿಕೊಳ್ಳುವ ಸಲುವಾಗಿ ಹೊಸದೊಂದು ಆಯ್ಕೆಯನ್ನು ನೀಡುವ ವಿಚಾರವನ್ನು ತಿಳಿಸಿದೆ.

ಈಗಾಗಲೇ ಪಶ್ವಿಮದ ರಾಷ್ಟ್ರಗಳಲ್ಲಿ ಸೋಶಿಯಲ್ ಮೀಡಿಯಾದಲ್ಲಿಯೇ ಡೇಟಿಂಗ್ ಮಾಡುವ ಪದ್ದತಿ ಹೆಚ್ಚಾಗುತ್ತಿದ್ದು, ಇದನ್ನು ವಿಶ್ವದ ಮೂಲೆ ಮೂಲೆಗೆ ತಲುಪಿಸಲು ಫೇಸ್‌ಬುಕ್ ತನ್ನ ವಿಶ್ವಾದಾದ್ಯಂತ ಇರುವ ಬಳಕೆದಾರರಿಗೆ ಹೊಸದಾಗಿ ಡೇಟಿಂಗ್ ಸೇವೆಯನ್ನೂ ನೀಡಲಿದೆ ಎನ್ನಲಾಗಿದೆ. ಇದರಿಂದಾಗಿ 2.2 ಬಿಲಿಯನ್ ಸಂಖ್ಯೆಯಲ್ಲಿರುವ ಫೇಸ್‌ಬುಕ್ ಬಳಕೆದಾರರು ಡೇಟಿಂಗ್‌ಗಾಗಿ ಮತ್ತೊಂದು ಆಪ್ ಬಳಸುವ ಅವಶ್ಯಕತೆ ಇಲ್ಲ.

ಮಾರ್ಕ್ ಜುಕರ್‌ಬರ್ಗ್:
‘ಫೇಸ್‌ಬುಕ್ ಎಫ್8' ಡೆವಲಪರ್‌ಗಳ ವಾರ್ಷಿಕ ಸಭೆಯಲ್ಲಿ CEO ಮಾರ್ಕ್ ಜುಕರ್‌ಬರ್ಗ್ ಈ ಮಾಹಿತಿ ನೀಡಿದ್ದು, ಈಗಾಗಲೇ ಫೇಸ್‌ಬುಕ್ ಹೆಚ್ಚಿನ ಬಳಕೆದಾರರನ್ನು ತಲುಪಿದೆ. ಇನ್ನಷ್ಟು ಹೊಸ ಬಳಕೆದಾರರನ್ನು ಸೆಳೆಯಲು ಡೇಟಿಂಗ್ ಸೇವೆಯನ್ನು ನೀಡಲಾಗುತ್ತಿದೆ ಎಂದಿದ್ದಾರೆ.

ಹೊಸ ಫೀಚರ್:
ಪ್ರತಿಬಾರಿಯೂ ಹೊಸದಾಗಿ ಏನ್ನನಾದರು ನೀಡುವ ಫೇಸ್‌ಬುಕ್, ಈ ಹಿಂದೆಯೇ ಕೇಳಿ ಬಂದಿದ್ದ ಡೇಟಿಂಗ್ ಸೇವೆಯನ್ನು ಈ ಬಾರಿ ಬಳಕೆದಾರರಿಗೆ ನೀಡಲಿದೆ ಎನ್ನಲಾಗಿದೆ. ಫೇಸ್‌ಬುಕ್ ಮೊಬೈಲ್ ಆ್ಯಪ್‌ನಲ್ಲಿ ಹೊಸ ಫೀಚರ್ ಅಸ್ತಿತ್ವಕ್ಕೆ ಬರಲಿದೆ. ವರ್ಷದ ಅಂತ್ಯದಲ್ಲಿ ಈ ಹೊಸ ಸೇವೆ ಆರಂಭವಾಗಲಿದೆ.

ಯುವ ಸಮುಹವೇ ಟಾರ್ಗೆಟ್:
ಫೇಸ್‌ಬುಕ್ ತನ್ನ ಬಳಕೆದಾರರಲ್ಲಿ ಯುವ ಸಮುಹವನ್ನು ಟಾರ್ಗೆಟ್ ಮಾಡಿದ್ದು, ಹೊಸದಾಗಿ ಡೇಟಿಂಗ್ ಸೇವೆ ನೀಡುವ ಮೂಲಕ ಯುವ ಜನರನ್ನು ಹೆಚ್ಚು ತಲುಪುವುದು ಫೇಸ್‌ಬುಕ್ ಗುರಿ ಹೊಂದಿದೆ ಎನ್ನಲಾಗಿದೆ.

ಅವಿವಾಹಿತರಿಗೆ ವೇದಿಕೆ:
ಈ ಬಗ್ಗೆ ಮಾಹಿತಿಯನ್ನು ನೀಡಿದ CEO ಮಾರ್ಕ್ ಜುಕರ್‌ಬರ್ಗ್, ಫೇಸ್‌ಬುಕ್‌ನಲ್ಲಿ ಸುಮಾರು 20 ಕೋಟಿ ಬಳಕೆದಾರರು ಅವಿವಾಹಿತರು. ಹೀಗಾಗಿ ಹೆಚ್ಚಿನ ಜನರನ್ನು ಒಂದು ಗೂಡಿಸಲು ಈ ಆಯ್ಕೆಯನ್ನು ನೀಡುತ್ತಿರುವುದಾಗಿ ತಿಳಿಸಿದ್ದಾರೆ.

ಮಾಹಿತಿ ಸಿಕ್ಕಲ್ಲ:
ಫೇಸ್‌ಬುಕ್‌ನ ಬಳಕೆದಾರರು ಹೊಸದಾಗಿ ಕ್ರಿಯೇಟ್ ಮಾಡಿರುವ ಡೇಟಿಂಗ್ ಪ್ರೊಫೈಲ್ ಅವರ ಸ್ನೇಹಿತರಿಗೆ ಕಾಣಿಸುವುದಿಲ್ಲ. ಇದರಿಂದಾಗಿ ಬಳಕೆದಾರರು ಯೋಚಿಸದೆ ಮುಕ್ತವಾಗಿ ಡೇಟಿಂಗ್ ಮಾಡಬಹುದು ಎನ್ನಲಾಗಿದೆ.


ಚಿಂತಿಸಬೇಕಿಲ್ಲ:
ಬಳೆಕೆದಾರರ ಮಾಹತಿಯನ್ನು ಸುರಕ್ಷಿತವಾಗಿ ಇಡಲು ಫೇಸ್‌ಬುಕ್ ಯೋಜನೆಯನ್ನು ರೂಪಿಸಿದೆ. ಇದಕ್ಕಾಗಿಯೇ ಹೊಸದಾಗಿ ಡೇಟಿಂಗ್ ಪ್ರೊಫೈಲ್ ಕ್ರಿಯೇಟ್ ಮಾಡಿಕೊಳ್ಳುವ ಅವಕಾಶವನ್ನು ನೀಡಲಿದೆ ಎನ್ನಲಾಗಿದ್ದು, ಫೇಸ್‌ಬುಕ್ ಫೆಂಡ್ಸ್ ಅನ್ನು ಬಿಟ್ಟು ಅಪರಿಚಿತರೊಂದಿಗೆ ಡೇಟಿಂಗ್ ಮಾಡಲು ಸಹಾಯ ಮಾಡಲಿದೆ.


Click it and Unblock the Notifications