ಮೇಸೆಂಜರ್ ಇನ್ಸೆಂಟ್ ಗೇಮ್ಸ್ ಸಂಖ್ಯೆ ಹೆಚ್ಚಳ; ಮನೊರಂಜನೆಯ ಮಹಾಪೂರ
ಈ ಹಿನ್ನಲೆಯಲ್ಲಿ ಫೇಸ್ ಬುಕ್ ತನ್ನ ಮೇಸೆಂಜರ್ ಆಪ್ ನಲ್ಲಿ ಇನ್ಸೆಂಟ್ ಆಪ್ ಗಳನ್ನು ಪರಿಚಯ ಮಾಡಿದ್ದು, ಸುಮಾರು 20ಕ್ಕೂ ಹೆಚ್ಚು ಗೇಮ್ ಗಳನ್ನು ಈ ಚಾಟ್ ಆಪ್ ನಲ್ಲಿ ಆಡಬಹುದಾಗಿದೆ.
ಫೇಸ್ ಬುಕ್ ಮೇಸೆಂಜರ್ ಚಾಟ್ ಆಪ್ ಗಳಲ್ಲಿ ಹೆಚ್ಚಿನ ಖ್ಯಾತಿಯನ್ನು ಪಡೆದುಕೊಂಡಿದೆ. ಈ ಹಿನ್ನಲೆಯಲ್ಲಿ ಫೇಸ್ ಬುಕ್ ಮೇಸೆಂಜರ್ ಆಪ್ ನಲ್ಲಿ ಸಾಕಷ್ಟು ಬದಲಾವಣೆಯನ್ನು ಮಾಡುತ್ತಿದೆ ಮತ್ತು ಹೊಸ ಹೊಸ ಆಯ್ಕೆಗಳನ್ನು ನೀಡಲು ಮುಂದಾಗಿದೆ.

ಈ ಹಿನ್ನಲೆಯಲ್ಲಿ ಫೇಸ್ ಬುಕ್ ತನ್ನ ಮೇಸೆಂಜರ್ ಆಪ್ ನಲ್ಲಿ ಇನ್ಸೆಂಟ್ ಆಪ್ ಗಳನ್ನು ಪರಿಚಯ ಮಾಡಿದ್ದು, ಸುಮಾರು 20ಕ್ಕೂ ಹೆಚ್ಚು ಗೇಮ್ ಗಳನ್ನು ಈ ಚಾಟ್ ಆಪ್ ನಲ್ಲಿ ಆಡಬಹುದಾಗಿದೆ. ಅದಲ್ಲೇ ಕೆಲವು ದಿನಗಳ ಹಿಂದೆ ರಿಚ್ ಗೇಮ್ ಅನುಭವನ್ನು ನೀಡಲು ದೊಡ್ಡ ಗೇಮ್ ಗಳನ್ನು ನಿರ್ಮಿಸುವ ಕಾರ್ಯಕ್ಕೂ ಮುಂದಾಗಿದೆ.
ಕೆಲವು ಆಯ್ದ ಡೆವಲಪರ್ ಗಳು ನಿರ್ಮಿಸಿರುವಂತ ಗೇಮಗಳನ್ನು ತನ್ನ ಚಾಟಿಂಗ್ ಆಪ್ ನಲ್ಲಿ ಸೇರಿಸಲು ಫೇಸ್ ಬುಕ್ ಮುಂದಾಗಿದ್ದು, ಗೇಮ್ ಗಳೊಂದಿಗೆ ಆಡ್ ಗಳನ್ನು ಪ್ರಸಾರ ಮಾಡಲು ಮುಂದಾಗಿದೆ. ಅಲ್ಲದೇ ಗೇಮ್ ಡೆವಲಪರ್ ಗಳಿಗೂ ಗೇಮ್ ನಿರ್ಮಿಸುವು ಮುಕ್ತ ಅವಕಾಶವನ್ನು ನೀಡಿದೆ. '
ಗೇಮ ನೊಂದಿಗೆ ವಿಡಯೋ ಆಡ್ ಗಳನ್ನು ಬಿಡುಗಡೆ ಮಾಡಿ ಹಣ ಸಂಪಾದಿಸುವ ಗುರಿಯನ್ನು ಫೇಸ್ ಬುಕ್ ಹೊಂದಿದೆ ಎನ್ನಲಾಗಿದೆ. ಅಲ್ಲದೇ ಇದರಿಂದ ಡೆವಲಪರ್ ಗಳಿಗೂ ಲಾಭ ಮಾಡಿಕೊಡುವ ಇರಾದೆ ಫೇಸ್ ಬುಕ್ ಗೆ ಇದೆ ಎನ್ನಲಾಗಿದೆ.
ದಿನೇ ದಿನೇ ಫೇಸ್ ಬುಕ್ ಮೆಸೆಂಜರ್ ಇನ್ ಸ್ಟಾ ಗೇಮಸ್ ಗಳು ಹೆಚ್ಚು ಖ್ಯಾತಿಯನ್ನು ಪಡೆಯುತ್ತಿರುವ ಹಿನ್ನಲೆಯಲ್ಲಿ ಇದನ್ನು ತನ್ನ ಲಾಭಕ್ಕೆ ಬಳಕೆ ಮಾಡಿಕೊಳ್ಳಲು ಮುಂದಾಗಿದೆ ಎನ್ನಲಾಗಿದೆ.


Click it and Unblock the Notifications








