ಆದಾಯಗಳಿಸಲು ಫೇಸ್ ಬುಕ್ ನಿಂದ ಹೊಸ ಮಾರ್ಗಗಳ ಹುಡುಕಾಟ..!!

By: Precilla Dias

ಸೋಶಿಯಲ್ ಮೀಡಿಯಾ ದೈತ್ಯ ಫೇಸ್ ಬುಕ್ ನ್ಯೂಸ್ ಫೀಡ್ಸ್ ನಲ್ಲಿ ಆಡ್ ನೀಡುವ ಮೂಲಕ ಸಾವಿರಾರು ಕೋಟಿ ರೂಗಳ ಆದಾಯವನ್ನು ತನ್ನದಾಗಿಸಿಕೊಳ್ಳುತ್ತಿದೆ.

ಆದಾಯಗಳಿಸಲು ಫೇಸ್ ಬುಕ್ ನಿಂದ ಹೊಸ ಮಾರ್ಗಗಳ ಹುಡುಕಾಟ..!!

ಇದಲ್ಲದೇ ಸದ್ಯ ವಾಟ್ಸ್ ಆಪ್, ಮೆಸೇಜೆಂಗ್ ಆಪ್ ಗಳಾದ ವಾಟ್ಸ್ ಆಪ್ , ಮೆಸೆಂಜರ್ ಮತ್ತು ಇನ್ ಸ್ಟಾಗ್ರಾಮ್ ನಿಂದಲೂ ಹಣ ಮಾಡುವ ಯೋಜನೆ ರೂಪಿಸುತ್ತಿದೆ.

ಫೇಸ್ ಬುಕ್ ತನ್ನ ಬಳಕೆದಾರರಿಗೆ ಯಾವುದೇ ರೀತಿಯಲ್ಲೂ ತೊಂದರೆ ಮಾಡದ ರೀತಿಯಲ್ಲಿ ಯೂಸರ್ ನ್ಯೂಸ್ ಫೀಡ್ ನಲ್ಲಿ ಆಡ್ ಗಳನ್ನು ನೀಡಲು ಮುಂದಾಗಿದೆ.

ಫೇಸ್ ಬುಕ್ ಸದ್ಯ ವಿಡಿಯೋ ಮಧ್ಯದಲ್ಲಿ ಆಡ್ ಗಳನ್ನು ಹಾಕಲು ಮುಂದಾಗಿದ್ದು, ಇದಲ್ಲದೇ ಯೂಟ್ಯೂಬ್ ವಿಡಿಯೋ ಗಳನ್ನು ಮಾಡುವ ಮಾದರಿಯಲ್ಲಿ ಫೇಸ್ ಬುಕ್ ಗಾಗಿಯೇ ಟಿವಿ ಶೋ ಮಾಡುವ ಯೋಜನೆಯನ್ನು ರೂಪಿಸಿದೆ.

ಇದಲ್ಲದೇ ಇನ್ ಸ್ಟಾಗ್ರಾಮ್ ಸ್ಟೋರಿಯ ಮಧ್ಯದಲ್ಲಿ, ಹಾಗೇ ಮೆಸೆಂಜರ್ ನಲ್ಲಿ ಮತ್ತು ವಾಟ್ಸ್ ಆಪ್ ನಲ್ಲಿಯೂ ಆಡ್ ಗಳನ್ನು ನೀಡಲು ಚಿಂತನೆ ನಡೆಸುತ್ತಿದೆ.

ಈಗಾಗಲೇ ಫೇಸ್ ಬುಕ್ ಸುಮಾರು 700 ಮಿಲಿಯನ್ ಬಳಕೆದಾರರನ್ನು ಹೊಂದಿದ್ದು, 1.2 ಬಿಲಿಯನ್ ವಾಟ್ಸ್ ಆಪ್ ಬಳಕೆದಾರರನ್ನು ಹೊಂದಿದೆ.

2016ರಲ್ಲಿ $ 2 ಬಿಲಿಯನ್ ಆದಾಯಯನ್ನು ಹೊಂದಿದೆ. ಇದೇ ಮಾದರಿಯಲ್ಲಿ $ 22 ಬಿಲಿಯನ್ ಆದಾಯವನ್ನು ಗಳಿಸುವ ನಿರೀಕ್ಷೆಯನ್ನು ಹೊಂದಿದೆ.

Read more about:
English summary
Apart from News Feed, Facebook is now turning to its other platforms- WhatsApp, Messenger and Instagram to place ads to generate more revenue.
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot