ಶುಭಾಶಯ ಕೋರಲು ಬರಲಿದೆ ಫೇಸ್ಬುಕ್ ನ ಹೊಸ ಗ್ರೀಟಿಂಗ್ಸ್ ಫೀಚರ್
ಫೇಸ್ಬುಕ್ ಬಳಕೆದಾರರಿಗೆ ಶೀಘ್ರದಲ್ಲಿಯೇ ಸಿಗಲಿದೆ ತಮ್ಮ ಗೆಳೆಯರೊಂದಿಗೆ ಶುಭಾಶಯ ವಿನಿಮಯ ಮಾಡಿಕೊಳ್ಳುವ ಹೊಸ ಫೀಚರ್. ಕಳೆದ ದಶಕದಿಂದ ಲಭ್ಯವಿರುವ 'ಪೋಕ್' ಫೀಚರ್ ನ ಹೊರತಾಗಿ ಈಗ ಬಳಕೆದಾರರು ತಮ್ಮ ಗೆಳೆಯರಿಗೆ ವಿಂಕ್, ಹೈಫೈ, ಹಗ್ ಮತ್ತು ವೇವ್ ಮೊದಲಾದ ವಿಭಿನ್ನ ರೀತಿಗಳಲ್ಲಿ ಶುಭಾಶಯಗಳನ್ನು ಕಳುಹಿಸಬಹುದಾಗಿದೆ.

ದಿ ನೇಶನ್ ನ ವರದಿಯೊಂದರ ಅನುಸಾರ ಈ ಹೊಸ ಆಯ್ಕೆಗಳು ಈಗಾಗಲೇ ಫ್ರಾನ್ಸ್, ಬ್ರಿಟನ್, ಥೈಲ್ಯಾಂಡ್, ಆಸ್ಟ್ರೇಲಿಯಾ, ಕೊಲಂಬಿಯಾ, ಕೆನಡಾ ಮೊದಲಾದ ದೇಶಗಳಲ್ಲಿ ಪರೀಕ್ಷೆಯ ಹಂತದಲ್ಲಿದೆ. ವಿಶೇಷವೆಂದರೆ, ಈ ಹೊಸ ಆಯ್ಕೆಗಳು ಪೋಕ್ ನ ಹತ್ತನೇ ವಾರ್ಷಿಕೋತ್ಸವದ ಸಂದರ್ಭದಲ್ಲಿ ಬಿಡುಗಡೆಯಾಗುತ್ತಿದೆ.
ನಿಮ್ಮ ಫೇಸ್ಬುಕ್ ಗೆಳೆಯರ ಪ್ರೊಫೈಲ್ ನ ಕೆಳಗಿರುವ ಹೆಲೋ ಬಟನ್ ಅನ್ನು ಒತ್ತುವ ಮೂಲಕ ಈ ಹೊಸ ಆಯ್ಕೆಗಳನ್ನು ಕಾಣಬಹುದಾಗಿದೆ. ನಿಮ್ಮ ಡೆಸ್ಕ್ಟಾಪ್ ನಲ್ಲಾದರೆ ಹೆಲೋ ಬಟನ್ ನ ಮೇಲೆ ಮೌಸ್ ಪಾಯಿಂಟರ್ ಅನ್ನು ಸುಮ್ಮನೆ ಹರಿದಾಡಿಸುವ ಮೂಲಕ ಈ ಹೊಸ ಆಯ್ಕೆಗಳನ್ನು ಕಾಣಬಹುದು.
ಫೋಟೋ ಅಥವಾ ಸ್ಟೇಟಸ್ ಗಳಿಗೆ ನೀಡಲಾಗಿರುವ 'ರಿಯಾಕ್ಷನ್ಸ್' ನ ಮಾದರಿಯಲ್ಲಿಯೇ ಇದೂ ಕೂಡ ಕಾರ್ಯನಿರ್ವಹಿಸಲಿದೆ. ಫೇಸ್ಬುಕ್ ಈ ಹೆಲೋ ಬಟನ್ ಅನ್ನು ಜೂನ್ ತಿಂಗಳಲ್ಲಿ ಪ್ರಸ್ತುತಪಡಿಸಿತ್ತಲ್ಲದೆ, ಜನರ ಪ್ರೊಫೈಲ್ ನ ಮೇಲ್ಭಾಗದಲ್ಲಿ ಇರಿಸಿತ್ತು. ಈ ಹೊಸ ಗ್ರೀಟಿಂಗ್ಸ್ ಗೆ ಅನ್ಡೂ ಬಟನ್ ಕೂಡ ಇದ್ದು, ಆಕಸ್ಮಿಕವಾಗಿ ಕಳುಹಿಸಿದ ಶುಭಾಶಯಗಳನ್ನು ಹಿಂಪಡೆಯಲು ಇದು ಸಹಾಯಕವಾಗಿದೆ.
ಪೋಕ್ ಗೆ ಹೋಲಿಸಿದರೆ ಈ ಹೊಸ ಗ್ರೀಟಿಂಗ್ಸ್ ಫೀಚರ್ ಹೆಚ್ಚು ಅರ್ಥಪೂರ್ಣವಾಗಿದೆ. ಯಾರಿಗೂ ಕೂಡ ಪೋಕ್ ಬಟನ್ ನ ನೈಜ ಅಗತ್ಯ ತಿಳಿದಿರಲಿಲ್ಲ. ಸ್ವತ: ಫೇಸ್ಬುಕ್ ಕೂಡ ಪೋಕ್ ಬಟನ್ ಗೆ ಯಾವುದೇ ಮಹತ್ವ ಅಥವಾ ನಿರ್ದಿಷ್ಟ ಗುರಿ ಇರಲಿಲ್ಲ ಎಂದು ಒಪ್ಪಿಕೊಂಡಿದೆ.
ಇದರ ಹೊರತಾಗಿ ಫೇಸ್ಬುಕ್ ಯಾವುದೇ ನಿರ್ದಿಷ್ಟ ಗುರಿಯಿಲ್ಲದ ಫೀಚರ್ ಒಂದನ್ನು ಹೊಂದುವುದು 'ಕೂಲ್' ಎಂದು ಯೋಚಿಸಿ ಪೋಕ್ ಫೀಚರ್ ತಂದಿತ್ತೇನೋ ಎಂದು ನಾವು ಭಾವಿಸುತ್ತೇವೆ. ಜನರು ಈ ಪೋಕ್ ಫೀಚರ್ ಅನ್ನು ಅವರಿಗೆ ಬೇಕಾದಂತೆ ಅರ್ಥೈಸಿಕೊಳ್ಳಬಹುದಾಗಿತ್ತು. ಫೇಸ್ಬುಕ್ ತನ್ನ ಹೆಲ್ಪ್ ಪುಟದಲ್ಲಿ "ಫೇಸ್ಬುಕ್ನಲ್ಲಿ ಜನರು ತಮ್ಮ ಗೆಳೆಯರಿಗೆ ಅಥವಾ ಗೆಳೆಯರ ಗೆಳೆಯರಿಗೆ ಪೋಕ್ ಮಾಡಬಹುದು. ನೀವು ಯಾರಿಗಾದರೂ ಪೋಕ್ ಮಾಡಿದರೆ ಅವರಿಗೆ ಅದರ ಸೂಚನೆ ಅಥವಾ ನೋಟಿಫಿಕೇಶನ್ ಸಿಗುತ್ತದೆ" ಎಂದಷ್ಟೇ ತಿಳಿಸಿದ್ದಾರೆ.


Click it and Unblock the Notifications








