ಫೇಸ್‌ಬುಕ್‌ನಲ್ಲಿ ಫ್ರೆಂಡ್ ರಿಕ್ವೆಸ್ಟ್ ಕಳುಹಿಸಿದರೆ ಕ್ಷಣಾರ್ಧದಲ್ಲಿ ಡಿಲೀಟ್ ಆಗಲಿದೆ ಅಕೌಂಟ್!!
ಈ ವರ್ಷದ ಮೊದಲ ಮೂರು ತಿಂಗಳಲ್ಲಿ 58.3 ಕೋಟಿ ನಕಲಿ ಖಾತೆಗಳನ್ನು ಫೇಸ್‌ಬುಕ್ ಮುಚ್ಚಿರುವುದು ವರದಿಯಾಗಿದೆ. ಫೇಸ್‌ಬುಕ್‌ನಲ್ಲಿ ನಕಲಿ ಖಾತೆಗಳ ಮೂಲಕ ಸಮಾಜದ ಮೇಲೆ ಬೀರುತ್ತಿರುವ ಪರಿಣಾಮಗಳನ್ನು ಗಮನಿಸಿ ಈ ಕ್ರಮಕೈಗೊಂಡಿರುವುದಾಗಿ ಫೇಸ್‌ಬುಕ್ ತಿಳಿಸಿರುವುದು ಖುಷಿಯ ಸಂಗತಿಯಾದರೂ ಕೂಡ ಸಂಕಷ್ಟವನ್ನು ತಂದೊಡ್ಡಿದೆ.
ಹೌದು, ಲೈಂಗಿಕ ದೌರ್ಜನ್ಯ, ಭಯೋತ್ಪಾದನೆ, ಕ್ರೌರ್ಯ ಒಳಗೊಂಡ ಪೋಸ್ಟ್‌ಗಳನ್ನು ಕೃತಕ ಬುದ್ದಿಮತ್ತಯಿಂದ ಗುರುತಿಸಿ ಅವರ ವಿರುದ್ಧ ಕ್ರಮ ಕೈಗೊಳ್ಳಲು ಫೇಸ್‌ಬುಕ್ ಮುಂದಾಗಿದೆ. ಈ ಮೂಲಕ ಶೇಕಡಾ 100ರಷ್ಟು ನಕಲಿ ಖಾತೆಗಳನ್ನ ನಿವಾರಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿರುವುದಾಗಿ ಫೇಸ್‌ಬುಕ್ ಹೇಳಿದೆ. ಇದು ಈಗ ಚಿಂತೆಗೆ ಕಾರಣವಾಗಿದೆ.!

ಫೇಸ್‌ಬುಕ್ ನಕಲಿ ಖಾತೆಗಳನ್ನು ಗುರುತಿಸಲು ಫೇಸ್‌ಬುಕ್ ಪೋಸ್ಟ್‌ಗಳನ್ನು ಬಳಸಿಕೊಳ್ಳುತ್ತಿರುವುದು ಸಾಮಾನ್ಯ ಬಳಕೆದಾರರ ಖಾತೆಗಳಿಗೂ ಸಮಸ್ಯೆ ತಂದೊಡ್ಡಿದೆ. ಪೋಸ್ಟ್‌ಗಳನ್ನು ಹಾಕುವಾಗ ಮತ್ತು ಯಾವುದೇ ವಿಷಯವನ್ನು ಶೇರ್ ಮಾಡಿಕೊಳ್ಳುವಾಗ ಅದರಲ್ಲಿನ ಈ ಕೆಳಗಿನ ವಿಷಯಗಳು ಫೇಸ್‌ಬುಕ್ ಖಾತೆಯೇ ಡಿಲೀಟ್ ಆಗುವಂತೆ ಮಾಡಲಿವೆ ಎಂದು ತಿಳಿದುಬಂದಿದೆ.

ಮೋಸದ ಉದ್ದೇಶದ ಸಂಪರ್ಕ!
ಯಾವುದೇ ಫೇಸ್‌ಬುಕ್ ಖಾತೆಯಿಂದ ಮತ್ತೊಂದು ಅಪರಿಚಿತ ಖಾತೆಯನ್ನು ಸಂಪರ್ಕಿಸಲು ಪ್ರಯತ್ನಿಸಿದರೆ ಅದನ್ನು ಫೇಸ್‌ಬುಕ್ ಗಮನಿಸಲಿದೆ. ಒಂದು ವೇಳೆ ಅಪರಿಚಿತ ಖಾತೆಗಳೀಗೆ ಮೆಸೇಜ್ ಮಾಡುವುದು ಮತ್ತು ಫ್ರೆಂಡ್ ರಿಕ್ವೆಸ್ಟ್ ಕಳುಹಿಸುವುದು ಹೆಚ್ಚಿನದಾಗಿದ್ದರೆ ಪೇಸ್‌ಬುಕ್ ಸಂಸ್ಥೆ ಆ ಖಾತೆಯನ್ನು ಡಿಲೀಟ್ ಮಾಡಲಿದೆ.

ಮಾದಕ ವಸ್ತುಗಳು!!
ಫೇಸ್‌ಬುಕ್ ಮೂಲಕ ಮಾದಕ ವಸ್ತುಗಳ ಮಾರಾಟ ಅಥವಾ ಖರೀದಿಯಾಗುತ್ತಿದ್ದ ಸುದ್ದಿಯ ನಂತರ ಫೇಸ್‌ಬುಕ್ ಎಚ್ಚೆತ್ತಿದೆ. ಮಾದಕ ವಸ್ತುಗಳ ಅಗತ್ಯವಿದೆ ಎಂದು ಫೇಸ್‌ಬುಕ್ ಮೂಲಕ ಸಂಪರ್ಕಿಸುವುದಾಗಲೀ, ಮಾರಾಟ ನಡೆಸಲು ಯತ್ನಿಸುವುದು ಕಾನೂನು ಬಾಹಿರವಾಗಿದೆ. ಇಂತಹ ವಿಷಯಗಳು ಕಂಡುಬಂದರೆ ಫೇಸ್‌ಬುಕ್ ಖಾತೆ ಡಿಲೀಟ್ ಆಗಲಿದೆ.

ಮಾನಿಸುವ ಫೋಟೊ!!
ಲೈಂಗಿಕ ದೌರ್ಜನ್ಯಕ್ಕೊಳಗಾದ ವ್ಯಕ್ತಿಯ ಫೋಟೊ ಅಥವಾ ಅದಕ್ಕೆ ಸಂಬಂಧಿಸಿದ ವಿಡಿಯೊಗಳನ್ನು ಫೇಸ್‌ಬುಕ್ಕಿನಲ್ಲಿ ಶೇರ್ ಮಾಡಬೇಡಿ. ಯಾವುದೇ ಕಾರಣಕ್ಕೂ ವ್ಯಕ್ತಿ ನಿಂದನೆ ಅಥವಾ ಅವರ ಖಾಸಗಿತನಕ್ಕೆ ಧಕ್ಕೆ ತರುವ ವಿಷಯಗಳು ಸಾಮಾಜಿಕತಾಣದಲ್ಲಿ ಶೇರ್ ಮಾಡುವುದು ತಪ್ಪು. ಇಂತಹ ಪೋಸ್ಟ್‌ನಿಂದಾಗಿ ನಿಮ್ಮ ಫೇಸ್‌ಬುಕ್ ಖಾತೆ ಡಿಲೀಟ್ ಆಗಬಹುದು.

ಭಯೋತ್ಪಾದನೆ!!
ಮೊದಲೇ ಹೇಳಿದಂತೆ ಸಮಾಜದಲ್ಲಿ ಭಯೋತ್ಪಾದನೆ ಉಂಟು ಮಾಡುವವರನ್ನು ಫೇಸ್‌ಬುಕ್ ತನ್ನಿಂದ ದೂರವಿಡಲು ಮುಂದಾಗಿದೆ. ಭಯೋತ್ಪಾದನೆ ಅಂಶಗಳನ್ನು ಹೊಂದಿರುವ ಚಿತ್ರಗಳು, ವಿಡಯೋಗಳನ್ನು ಪೋಸ್ಟ್ ಅಥವಾ ಶೇರ್ ಮಾಡುವ ಫೇಸ್‌ಬುಕ್ ಖಾತೆಗಳನ್ನು ಫೇಸ್‌ಬುಕ್ ಸ್ಥಗಿತಗೊಳಿಸಲಿದೆ ಎಂಬುದನ್ನು ತಿಳಿದಿರಿ.

ಅಪಹಾಸ್ಯದ ಪೋಸ್ಟ್‌ಗಳು
ಯಾವುದೇ ವ್ಯಕ್ತಿಯನ್ನು ನಿಂದಿಸಿ, ಅಪಹಾಸ್ಯ ಮಾಡುವ ಪೋಸ್ಟ್‌ಗಳು ಒಂದು ಮಿತಿಯನ್ನು ಹೊಂದಿರುತ್ತವೆ. ಆದರೆ, ಅದನ್ನೇ ಮಾಡಲು ಹುಟ್ಟಿಕೊಂಡಿರುವ ಖಾತೆಗಳ ಬಗ್ಗೆ ಫೇಸ್‌ಬುಕ್ ಎಚ್ಚೆತ್ತುಕೊಂಡಿದೆ. ಮಹಿಳೆಯರನ್ನು ನಿಂದಿಸುವ ಪೋಸ್ಟ್‌ಗಳನ್ನು ಶೇರ್ ಮಾಡಿದರೆ ಖಾತೆ ಡಿಲೀಟ್ ಆಗುವ ಜೊತೆಗೆ ಕಾನೂನು ಕ್ರಮಗಳನ್ನು ಎದುರಿಸಬೇಕಾಗುತ್ತದೆ.


Click it and Unblock the Notifications








