Home
Social media

ಫೇಸ್ ಬುಕ್ ನಿಂದ ಥರ್ಡ ಪಾರ್ಟಿ ಆಪ್ ತೆಗೆದು ಹಾಕಲು ಹೊಸ ಸೇವೆ..!

By Precilla Dias

ಕೆಂಬ್ರಿಡ್ಜ್ ಅನಾಲಿಟಿಕಾ ಪ್ರಕರಣದಿಂದ ಪಾಠ ಕಲಿತಂತೆ ಕಾಣುತ್ತಿರುವ ಫೇಸ್ ಬುಕ್, ತನ್ನ ಬಳಕೆದಾರರ ಹಿತವನ್ನು ಕಾಯುವ ಸಲುವಾಗಿ ಹಲವು ಬದಲಾವಣೆಗೆ ಮುಂದಾಗಿದೆ. ಫೇಸ್ ಬುಕ್ ನಲ್ಲಿ ಕಾಣಿಸಿಕೊಂಡಿರುವ ಆಪ್ ಗಳ ಮೂಲಕವೇ ಬಳಕೆದಾರರ ಮಾಹಿತಿಯೂ ಲೀಕ್ ಆಗುತ್ತಿರುವ ಬಗ್ಗೆ ತಿಳಿದುಕೊಂಡಿರುವ ಫೇಸ್ ಬುಕ್ ತನ್ನ ಬಳಕೆದಾರರಿಗೆ ಹೊಸದೊಂದು ಆಯ್ಕೆಯನ್ನು ನೀಡಲು ಮುಂದಾಗಿದೆ. ಬಳಕೆದಾರರು ತಮ್ಮಲ್ಲಿರುವ ಎಲ್ಲಾ ಆಪ್ ಗಳನ್ನು ಒಂದೇ ಬಾರಿಗೆ ತೆಗೆದುಹಾಕುವ ಕ್ರಮಕ್ಕೆ ಮುಂದಾಗಿದೆ.

ಫೇಸ್ ಬುಕ್ ನಿಂದ ಥರ್ಡ ಪಾರ್ಟಿ ಆಪ್ ತೆಗೆದು ಹಾಕಲು ಹೊಸ ಸೇವೆ..!


ತನ್ನಿಂದಾಗಿರುವ ತಪ್ಪನ್ನು ಸರಿ ಪಡಿಸಲು ಮುಂದಾಗಿರುವ ಫೇಸ್ ಬುಕ್, ಬಳಕೆದಾರರಿಗೆ ಹೊಸ ಟೂಲ್ ವೊಂದನ್ನು ನೀಡಲು ಮುಂದಾಗಿದ್ದು, ತಾವು ಸದ್ಯ ಬಳಕೆ ಮಾಡಿಕೊಳ್ಳುತ್ತಿರುವ ಥರ್ಡ್ ಪಾರ್ಟಿ ಆಪ್ ಗಳನ್ನು ಪ್ಲೇ ಸ್ಟೋರಿನಿಂದ ತೆಗೆದು ಹಾಕುವ ಕಾರ್ಯಕ್ಕೆ ಮುಂದಾಗಿದೆ. ಅಲ್ಲದೇ ಇದಕ್ಕಾಗಿ ಒಮ್ಮೆಗೆ ಎಲ್ಲಾ ಆಪ್ ಗಳನ್ನು ರಿಮ್ಯೂ ಮಾಡುವ ಅವಕಾಶವನ್ನು ಮಾಡಿಕೊಟ್ಟಿದೆ.

ಈ ಆಯ್ಕೆಯನ್ನು ನೀಡುವ ಮೊದಲು ಎಲ್ಲಾ ಆಪ್ ಗಳನ್ನು ಹುಡುಕಿ ಡಿಲೀಟ್ ಮಾಡುವುದು ಕಷ್ಟವಾಗುತ್ತಿತ್ತು. ಆದರೆ ಹೊಸದಾಗಿ ಫೇಸ್ ಬುಕ್ ನೀಡಿರುವ ಆಯ್ಕೆಯಿಂದಾಗಿ ಬಳಕೆದಾರರು ಸುಲಭವಾಗಿ ಬೇರೆ ಆಪ್ ಗಳನ್ನು ಒಮ್ಮೆಗೆ ಡಿಲೀಟ್ ಮಾಡಬಹುದಾಗಿದೆ. ಇದು ಸುಲಭವಾಗಿ ಮತ್ತು ಸುರಕ್ಷಿತವಾಗಿ ಆಪ್ ಗಳನ್ನು ರಿಮ್ಯೂ ಮಾಡುವ ವಿಧಾನವಾಗಿದೆ.

ಇದಲ್ಲದೇ ಬಳಕೆದಾರರರು ಯಾವುದೇ ಆಪ್ ಅನ್ನು ಮೂರು ತಿಂಗಳಿಗೂ ಹೆಚ್ಚಿನ ಸಮಯದಿಂದ ಬಳಕೆ ಮಾಡುತ್ತಿಲ್ಲವಾದರೆ ಅದನ್ನು ಆಟೋಮೆಟಿಕ್ ಆಗಿ ಡಿಲೀಟ್ ಆಗುವಂತೆ ವಿನ್ಯಾಸ ಮಾಡಲಾಗಿದ್ದು, ಇದರಿಂದಾಗಿ ಹೆಚ್ಚಿನ ದಿನಗಳ ಕಾಲ ಬಳಕೆದಾರರು ಆಪ್ ಬಳಕೆ ಮಾಡಿಲ್ಲವಾದರೆ ಅದು ತಾನಾಗಿಯೇ ಅಳಿಸಿಹೊಗಲಿದೆ.

Facebook ನಲ್ಲಿ ಫೇಸ್‌ ರೆಕಗ್ನಿಷನ್ ಆಯ್ಕೆಯನ್ನು ಬಳಸುವುದು ಹೇಗೆ?

ಈ ಎಲ್ಲಾ ಹೊಸ ಸೇವೆಗಳಿಂದ ಫೇಸ್ ಬುಕ್ ತಾನು ಕಳೆದುಕೊಂಡಿರುವ ನಂಬಿಕೆಯನ್ನು ಮತ್ತೆ ಪಡೆಯುವುದಾಗಿ ಮಾಡುತ್ತಿದೆ. ಈಗಾಗಲೇ ಬಳಕೆದಾರರ ಮಾಹಿತಿಯನ್ನು ಹೊಂದಿದವರು ಸಹ ಅದರಿಂದ ಯಾವುದೆ ಲಾಭವನ್ನು ಪಡೆಯಲು ಸಾಧ್ಯವಾದ ಮಾದರಿಯಲ್ಲಿ ಹೊಸ ಸೆಕ್ಯೂರಿಯನ್ನು ಫೇಸ್ ಬುಕ್ ನಿರ್ಮಾಣ ಮಾಡುತ್ತಿದೆ ಎನ್ನಲಾಗಿದೆ.

Best Mobiles in India

English summary
Facebook has quietly added a new tool to its platform which lets users remove third-party apps and all the posts made by those apps at once. You can now go the Apps section of their Facebook settings and then click on any number of third-party apps. You will get a remove option and then a prompt to delete all posts those apps may have posted on your timeline.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+