Home
Social media

ಫೇಸ್‌ಬುಕ್‌ನಲ್ಲಿ ಒಂದಿಕ್ಕಿಂತ ಹೆಚ್ಚು ಅಕೌಂಟ್ ಹೊಂದಿದ್ದವರಿಗೆ ಬಿಗ್ ಶಾಕ್!!

ತನ್ನ ಆಪ್ ಅನ್ನು ಮತ್ತಷ್ಟು ಅಪ್‌ಡೇಟ್ ಮಾಡಿಕೊಳ್ಳಲು ಮುಂದಾಗಿರುವ ಫೇಸ್‌ಬುಕ್ ಸಂಸ್ಥೆ ಭವಿಷ್ಯದ ತಂತ್ರಜ್ಞಾನವೊಂದನ್ನು ಅಳವಡಿಸಿಕೊಳ್ಳಲು ಮುಂದಾಗಿದೆ.!!

By Bhaskar N J

ವಿಶ್ವದಲ್ಲಿಯೇ ಅತಿ ಹೆಚ್ಚು ಬಳಕೆದಾರರನ್ನು ಹೊಂದಿರುವ ನಂ 1 ಸಾಮಾಜಿಕ ಜಾಲತಾಣ ಫೇಸ್‌ಬುಕ್ ತನ್ನ ಫೇಕ್ ಬಳಕೆದಾರರಿಗೆ ಭಾರೀ ಶಾಕ್ ನೀಡಲು ಮುಂದಾಗಿದೆ.! ತನ್ನ ಆಪ್ ಅನ್ನು ಮತ್ತಷ್ಟು ಅಪ್‌ಡೇಟ್ ಮಾಡಿಕೊಳ್ಳಲು ಮುಂದಾಗಿರುವ ಫೇಸ್‌ಬುಕ್ ಸಂಸ್ಥೆ ಭವಿಷ್ಯದ ತಂತ್ರಜ್ಞಾನವೊಂದನ್ನು ಅಳವಡಿಸಿಕೊಳ್ಳಲು ಮುಂದಾಗಿದೆ.!!

ಹೌದು, ಇತ್ತೀಚಿನ ಮಾಧ್ಯಮ ವರದಿಗಳ ಪ್ರಕಾರ ಫೇಸ್‌ಬುಕ್ ಭವಿಷ್ಯದ 'ಫೇಸ್‌ ರೆಕಗ್ನೈಶನ್' ತಂತ್ರಜ್ಞಾನವನ್ನು ತನ್ನ ಆಪ್‌ನಲ್ಲಿ ಅಳವಡಿಸಿಕೊಳ್ಳಲು ಮುಂದಾಗಿದೆ. ಫೇಸ್‌ಬುಕ್ ತನ್ನ ಬಳಕೆದಾರರಿಗೆ ಹೆಚ್ಚಿನ ಫೀಚರ್ ಒಂದನ್ನು ನೀಡಲು ಮುಂದಾಗಿರುವುದು ಫೇಸ್‌ಬುಕ್ ಪ್ರಪಂಚದಲ್ಲಿ ಭಾರೀ ಬದಲಾವಣೆಗಳಾಗಲಿವೆ ಎಂದು ತಿಳಿದುಬಂದಿದೆ.!!

ಫೇಸ್‌ಬುಕ್‌ನಲ್ಲಿ ಒಂದಿಕ್ಕಿಂತ ಹೆಚ್ಚು ಅಕೌಂಟ್ ಹೊಂದಿದ್ದವರಿಗೆ ಬಿಗ್ ಶಾಕ್!!

ಫೇಸ್‌ಬುಕ್ 'ಫೇಸ್‌ ರೆಕಗ್ನೈಶನ್' ತಂತ್ರಜ್ಞಾನವನ್ನು ತರುತ್ತಿರುವುದು ಫೇಸ್‌ಬುಕ್‌ನಲ್ಲಿರುವ ಫೇಕ್ ಬಳಕೆದಾರರಿಗೆ ಕಡಿವಾಣಬೀಳಲಿದೆ. ಹಾಗಾದರೆ, ಫೇಸ್‌ಬುಕ್ ಫೇಕ್ ಬಳಕೆದಾರರಿಗೆ 'ಫೇಸ್‌ ರೆಕಗ್ನೈಶನ್' ತಂತ್ರಜ್ಞಾನದಿಂದ ಆಗುವ ತೊಂದರೆ ಏನು? 'ಫೇಸ್‌ ರೆಕಗ್ನೈಶನ್' ನಿಂದ ಫೇಸ್‌ಬುಕ್‌ನಲ್ಲಿ ಆಗಬಹುದಾದ ಬದಲಾವಣೆಗಳೇನು ಎಂಬುದನ್ನು ಮುಂದೆ ತಿಳಿಯಿರಿ.!!

ಫೇಕ್ ಅಕೌಂಟ್‌ಗಳಿಗೆ ಕಡಿವಾಣ!!

ಫೇಕ್ ಅಕೌಂಟ್‌ಗಳಿಗೆ ಕಡಿವಾಣ!!

ಒಂದು ವರದಿಯ ಪ್ರಕಾರ ಫೇಸ್‌ಬುಕ್ ಹೊಂದಿರುವ ಖಾತೆಗಳಲ್ಲಿ ಶೇ. 20 ರಷ್ಟು ಖಾತೆಗಳು ನಕಲಿ ಖಾತೆಗಳಾಗಿವೆ ಇವರಲ್ಲಿ ಒಂದಕ್ಕಿಂತ ಹೆಚ್ಚು ಖಾತೆ ಹೊಂದಿರುವವರ ಸಂಖ್ಯೆಯೇ ಹೆಚ್ಚಾಗಿದೆ ಎನ್ನಲಾಗಿರುವುದರಿಂದ 'ಫೇಸ್‌ ರೆಕಗ್ನೈಶನ್' ತಂತ್ರಜ್ಞಾನದ ಮೂಲಕ ಫೇಕ್ ಫೇಸ್‌ಬುಕ್ ಖಾತೆಗಳಿಗೆ ಕಡಿವಾಣಹಾಕಲು ಮುಂದಾಗಿದೆ.!!

ಒಬ್ಬರಿಗೆ ಒಂದೇ ಅಕೌಂಟ್!!

ಒಬ್ಬರಿಗೆ ಒಂದೇ ಅಕೌಂಟ್!!

ವಿಶ್ವದ ಎಲ್ಲಾ ಬಳಕೆದಾರರಿಗೂ 'ಫೇಸ್‌ ರೆಕಗ್ನೈಶನ್' ತಂತ್ರಜ್ಞಾನವನ್ನು ನೀಡಲು ಮುಂದಾಗಿರುವ ಫೇಸ್‌ಬುಕ್ ಒಬ್ಬನಿಗೆ ಒಂದೇ ಅಕೌಂಟ್ ಇರುವಂತೆ ಮಾಡಲು ಮುಂದಾಗಿದೆ.! ನೂತನ ತಂತ್ರಜ್ಞಾನದಿಂದ ಬಳಕೆದಾರರ ಮುಖವನ್ನು ರೆಕಗ್ನೈಸ್ ಮಾಡಿ ಅವರಿಗೆ ಒಂದೇ ಅಕೌಂಟ್ ತೆರೆಯಲು ಸಾಧ್ಯವಾಗುವಂತೆ ಮಾಡುವ ಆಲೋಚನೆಯಲ್ಲಿದೆ ಫೇಸ್‌ಬುಕ್!!

ಬಳಕೆದಾರರಿಗೆ ಅತ್ಯತ್ತಮ ಫೀಚರ್!!

ಬಳಕೆದಾರರಿಗೆ ಅತ್ಯತ್ತಮ ಫೀಚರ್!!

ಫೇಸ್‌ಬುಕ್ ಯಾವ ಆಲೋಚನೆಯಲ್ಲಿ 'ಫೇಸ್‌ ರೆಕಗ್ನೈಶನ್' ತಂತ್ರಜ್ಞಾನವನ್ನು ತರುತ್ತಿದೆ ಎಂಬುದು ಈ ವರೆಗೂ ಸ್ಪಷ್ಟವಾಗಿಲ್ಲ. ಆದರೆ, ಫೇಸ್‌ಬುಕ್ 'ಫೇಸ್‌ ರೆಕಗ್ನೈಶನ್' ತಂತ್ರಜ್ಞಾನ ಬಳಕೆಗೆ ಬಂದರೆ ಬಳಕೆದಾರರಿಗೆ ತಮ್ಮ ಫೇಸ್‌ಬುಕ್ ಅಕೌಂಟ್ ರಕ್ಷಣೆಗಾಗಿ ಮತ್ತು ಲಾಗಿನ್ ಆಗಲು ಸುಲಭವಾಗುವಂತೆ ಸಹಾಯಕವಾಗಲಿದೆ.!!

ಸೆಲ್ಫಿ ಫೋನ್‌ಗಳಿಗೆ ಮಾತ್ರ ಫೇಸ್‌ಬುಕ್!?

ಸೆಲ್ಫಿ ಫೋನ್‌ಗಳಿಗೆ ಮಾತ್ರ ಫೇಸ್‌ಬುಕ್!?

ಫೇಸ್‌ಬುಕ್ ವಿಶ್ವದ ಎಲ್ಲಾ ಬಳಕೆದಾರರಿಗೂ 'ಫೇಸ್‌ ರೆಕಗ್ನೈಶನ್' ತಂತ್ರಜ್ಞಾನವನ್ನು ತರಲು ಮುಂದಾಗಿರುವುದರಿಂದ, ಭವಿಷ್ಯದಲ್ಲಿ ಸೆಲ್ಫಿ ಕ್ಯಾಮೆರಾ ಫೋನ್‌ಗಳಲ್ಲಿ ಮಾತ್ರ ಫೇಸ್‌ಬುಕ್ ಆಪ್ ಕಾರ್ಯಾಚರಣೆ ನೀಡಲಿದೆಯೇ ಎಂಬ ಅನುಮಾನ ವಿಶ್ವದ ಟೆಕ್ ತಜ್ಞರಿಗೆ ಕಾಡುತ್ತಿದೆ.!!

ತಂತ್ರಜ್ಞಾನ ಬರುವುದು ಯಾವಾಗ?

ತಂತ್ರಜ್ಞಾನ ಬರುವುದು ಯಾವಾಗ?

ಎಲ್ಲಾ ಫೇಸ್‌ಬುಕ್ ಬಳಕೆದಾರರಿಗೂ 'ಫೇಸ್‌ ರೆಕಗ್ನೈಶನ್' ತಂತ್ರಜ್ಞಾನವನ್ನು ತರಲು ಫೇಸ್‌ಬುಕ್ ಕಂಪೆನಿಗೆ ತೊಂದರೆಗಳನ್ನು ಎದುರಾಗಿವೇ ಎನ್ನಲಾಗಿದೆ. ಫೇಸ್‌ಬುಕ್ ಸಂಸ್ಥೆ 'ಫೇಸ್‌ ರೆಕಗ್ನೈಶನ್' ತಂತ್ರಜ್ಞಾನವನ್ನು ಹೊಂದಿದ್ದರೂ ಕೂಡ ಅದರ ಸಾಧಕ ಬಾಧಕಗಳನ್ನು ಪರೀಶೀಲಿಸಿ ಮಾರುಕಟ್ಟೆಗೆ ಪರಿಚಯಿಸುವ ಉದ್ದೇಶವನ್ನು ಹೊಂದಿದೆ.!!

ವಿಶ್ವದ ಮೊದಲ ಮೊಬೈಲ್ 5G ಚಿಪ್‌ಸೆಟ್ ಬಿಡುಗಡೆ!!..ಡೇಟಾ ಸ್ಪೀಡ್ ಎಷ್ಟು ಗೊತ್ತಾ?

ವಿಶ್ವದ ಮೊದಲ ಮೊಬೈಲ್ 5G ಚಿಪ್‌ಸೆಟ್ ಬಿಡುಗಡೆ!!..ಡೇಟಾ ಸ್ಪೀಡ್ ಎಷ್ಟು ಗೊತ್ತಾ?

2020ರ ವೇಳೆಗೆ ಭಾರತ ದೇರಿದಂತೆ ಜಗತ್ತಿನ ಹಲವು ರಾಷ್ಟ್ರಗಳಲ್ಲಿ 5ಜಿ ಸಂಪರ್ಕ ಪೂರೈಕೆ ಪ್ರಾರಂಭವಾಗಲಿದ್ದು, ಅದಕ್ಕೆ ಪೂರಕವಾಗಿ 5Gಯ ಮುಂದಿನ ತಲೆಮಾರಿನ ಸಂಪರ್ಕ ವ್ಯವಸ್ಥೆಗೆ ‍ಪೂರಕವಾದ 'ಬಾಲಾಂಗ್ 5ಜಿ01 ಚಿಪ್‌' ಅನ್ನು ಚೀನಾದ ಪ್ರಖ್ಯಾತ ಮೊಬೈಲ್ ತಯಾರಿಕ ಸಂಸ್ಥೆ ಹುವಾವೇ ಸಿದ್ಧಪಡಿಸಿರುವುದಾಗಿ ಘೋಷಿಸಿದೆ.!!

ಬಾಲಾಂಗ್ '5ಜಿ01 ಚಿಪ್‌' ಮುಂದಿನ ತಲೆಮಾರಿನ(5G) ಸಂಪರ್ಕ ವ್ಯವಸ್ಥೆಗೆ ‍ಪೂರಕವಾಗಿದ್ದು, ಮೊಬೈಲ್‌ ಹಾಗೂ ಇತರೆ ಸಂಪರ್ಕ ಸಾಧನಗಳಲ್ಲಿ 5ಜಿಗೆ ಅಗತ್ಯವಿರುವ ವ್ಯವಸ್ಥೆ ಕಲ್ಪಿಸುವುದಾಗಿ ಹುವಾವೇ ಸಂಸ್ಥೆ ಹೇಳಿದೆ. ಹಾಗಾದರೆ, ಹುವಾವೆ ಸಿದ್ದಪಡಿಸಿರುವ '5ಜಿ01 ಚಿಪ್‌' ತಂತ್ರಜ್ಞಾನ ಹೇಗಿದೆ? '5ಜಿ01 ಚಿಪ್‌' ಡೇಟಾ ಸ್ಪೀಡ್ ಎಷ್ಟು ಎಂಬುದನ್ನು ಮುಂದಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.!!

ಹುವಾವೇ ‘5ಜಿ01 ಚಿಪ್‌’ !!

ಹುವಾವೇ ‘5ಜಿ01 ಚಿಪ್‌’ !!

ಬಾರ್ಸಿಲೋನಾದಲ್ಲಿ ನಡೆದ 2018ನೇ ಸಾಲಿನ ಮೊಬೈಲ್ ವರ್ಲ್ಡ್ ಕಾಂಗ್ರೆಸ್‌ನಲ್ಲಿ ಹುವಾವೇ ಕಂಪೆನಿ ‘5ಜಿ01 ಚಿಪ್‌'ತಯಾರಿಸಿರುವುದಾಗಿ ಘೋಷಿಸಿಕೊಂಡಿದೆ. ಈ ಚಿಪ್‌ಸೆಟ್ 5Gಯ ಮುಂದಿನ ಪೀಳಿಗೆಯ ಸೆಲ್ಯುಲರ್ ನೆಟ್‌ವರ್ಕ್‌ಗಳನ್ನು ಪ್ರವೇಶಿಸಲು ಅನುವು ಮಾಡಿಕೊಡುತ್ತದೆ ಎಂದು ಕಂಪೆನಿ ತಿಳಿಸಿದೆ.!!

ಹುವಾವೇಗೆ ಮೊದಲ ಯಶಸ್ಸು!!

ಹುವಾವೇಗೆ ಮೊದಲ ಯಶಸ್ಸು!!

5ಜಿ ಚಿಪ್‌ ತಯಾರಿಕೆಯಲ್ಲಿ ಇಂಟೆಲ್‌, ಕ್ವಾಲ್‌ಕಾಮ್‌ ಹಾಗೂ ಹುವೈ ಕಂಪೆನಿಗಳ ನಡುವೆ ಏರ್ಪಟ್ಟಿರುವ ಪೈಪೋಟಿಯಲ್ಲಿ ಹುವಾವೇ ಸಂಸ್ಥೆ ಮೊದಲಯಶಸ್ಸನ್ನು ಗಳಿಸಿದೆ. ವಿಶ್ವ ಮಾರುಕಟ್ಟೆಗೆ 5G ಸಪೋರ್ಟೆಡ್ ಚಿಪ್‌ಸೆಟ್ ಒದಗಿಸುವಲ್ಲಿ ಮುಂಚೂಣಿಗೆ ಬರಬೇಕು ಎನ್ನುವ ಹುವಾವೆ ಆಸೆ ಕೈಗೂಡಿದೆ.!!

ವಿಶ್ವದ ಮೊದಲ ಕಮರ್ಶಿಯಲ್ 5G ಚಿಪ್‌ಸೆಟ್?

ವಿಶ್ವದ ಮೊದಲ ಕಮರ್ಶಿಯಲ್ 5G ಚಿಪ್‌ಸೆಟ್?

5Gಯ ಮುಂದಿನ ತಲೆಮಾರಿನ ಸಂಪರ್ಕ ವ್ಯವಸ್ಥೆಗೆ ‍ಪೂರಕವಾದ ‘ಬಾಲಾಂಗ್ 5ಜಿ01 ಚಿಪ್‌' ವಿಶ್ವದ ಮೊದಲ 3GPP 5G ಕಮರ್ಶಿಯಲ್ ಚಿಪ್‌ಸೆಟ್ ಆಗಿದೆ. ಬಹುಬೇಗ ಗ್ರಾಹಕ ಸೇವೆಗೆ ಲಭ್ಯವಿರುವ ಮೊದಲ ಕಮರ್ಶಿಯಲ್ 5G ಚಿಪ್‌ಸೆಟ್ ಇದಾಗಿದೆ ಎಂದು ಹುವಾವೆ ಕಂಪೆನಿ ಹೇಳಿಕೊಂಡಿದೆ!!

5G ಡೌನ್‌ಲೋಡ್ ವೇಗ ಎಷ್ಟು?

5G ಡೌನ್‌ಲೋಡ್ ವೇಗ ಎಷ್ಟು?

ಹುವಾವೇ ಕಂಪೆನಿ 'ತಯಾರಿಸಿರುವ ‘5ಜಿ01 ಚಿಪ್‌ ಸೆಟ್ ಮೂಲಕ ಪ್ರತಿ ಸೆಕೆಂಡ್‌ಗೆ 2.3 ಜಿಬಿ ವೇಗದಲ್ಲಿ ಮಾಹಿತಿ ಡೌನ್‌ಲೋಡ್‌ ಮಾಡಿಕೊಳ್ಳಲು ಸಾಧ್ಯ ಎಂದು ಹುವಾವೇ ಕಂಪೆನಿ ಕಂಪೆನಿ ತಿಳಿಸಿದೆ. ಪ್ರಸ್ತುತ 4G ಗಿಂತ ಹಲವು ಪಟ್ಟು ಹೆಚ್ಚು ವೇಗದಲ್ಲಿ ಇಂಟರ್‌ನೆಟ್ ಬಳಕೆ ವೇಗ ಸಾಧ್ಯವಾಗಲಿದೆ ಎಂದು ಹೇಳಲಾಗಿದೆ.!!

ಇಂಡಿಯಾದಲ್ಲಿ 5G ಲೋಕ?

ಇಂಡಿಯಾದಲ್ಲಿ 5G ಲೋಕ?

ಕೆಲವೇ ದಿನಗಳ ಹಿಂದಷ್ಟೆ ಭಾರತದಲ್ಲಿ 5G ತಂತ್ರಜ್ಞಾನದ ಯಶಸ್ವಿ ಪರೀಕ್ಷೆಯಲ್ಲಿ ಏರ್‌ಟೆಲ್ ಜತೆ ಭಾಗಿಯಾಗಿದ್ದ ಹುವಾವೆ ಕಂಪೆನಿ ಇದೀಗ ಯಶಸ್ವಿ 5G ಚಿಪ್ಸೆಟ್ ತಯಾರಿಸಿರುವುದು ಇಂಡಿಯಾದಲ್ಲಿ ಬಹುಬೇಗ 5G ಬರುವ ವಿಶ್ವಾಸವನ್ನು ಮೂಡಿಸಿದೆ. ಹುವಾವೆ ಮತ್ತು ಏರ್‌ಟೆಲ್ ಸೇರಿ ಭಾರತದಲ್ಲಿ 5G ಬಾಗಿಲನ್ನು ತೆರೆಯುವ ನಿರೀಕ್ಷೆ ಇದೆ.!!

Best Mobiles in India

English summary
users from around the world have come across an unusual warning about facial recognition when accessing the social network giant Facebook. to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+