ಸಾಮಾಜಿಕ ಜಾಲತಾಣದಲ್ಲಿ ಪುಲ್ವಾಮಾ ಅಟ್ಯಾಕ್, ಏರ್ ಸ್ಟ್ರೈಕ್ ಬಗ್ಗೆ ಸುಳ್ಳು ಸುದ್ದಿಗಳ ಹರಿದಾಟ
ಭಾರತ ಮತ್ತು ಪಾಕಿಸ್ತಾನ ನಡುವಿನ ಆಂತರಿಕ ಬಿಕ್ಕಟ್ಟು ಏರ್ ಸ್ಟ್ರೈಕ್ ನ ನಂತರ ಬಹಳ ಸುದ್ದಿಯಲ್ಲಿರುವ ಇಂದಿನ ದಿನಗಳಲ್ಲಿ ಅಂತರ್ಜಾಲದಲ್ಲಿ ಸುಳ್ಳು ಸುದ್ದಿಗಳು ಮತ್ತು ತಪ್ಪು ಮಾಹಿತಿಗಳು ಲೀಲಾಜಾಲವಾಗಿ ಹರಿದಾಡುತ್ತಿವೆ.

#BalakotAirStrike #BringbackAbhinandan, #SayNoToWar, #MiG21, #F16, #PakFakeClaim #PakistanPM ನಿಂದ ಟ್ವೀಟ್ ಗಳು ಬುಧವಾರದಿಂದಲೂ ಎರಡೂ ದೇಶದ ಗಡಿರೇಖೆಯ ಬಗ್ಗೆ ಹಂಚಿಕೆಯಾಗುತ್ತಲೇ ಇದೆ.

ಸುಳ್ಳು ಸುದ್ದಿಗಳ ಹರಿದಾಟ:
ಬೇರೆಬೇರೆ ಫ್ಲಾಟ್ ಫಾರ್ಮ್ ಗಳಲ್ಲೂ ಹಳೆಯ ಫೋಟೋಗಳು, ಕ್ರ್ಯಾಷ್ ಆಗಿರುವ ಫೈಟರ್ ಜೆಟ್ ಗಳ ವೀಡಿಯೋಗಳನ್ನು ಹೊಸತು ಎಂದು ಹೇಳಿ ಪ್ರಚಾರ ಮಾಡಲಾಗುತ್ತಿದೆ.

ಮಹಿಳಾ ಪೈಲೆಟ್ ಹೆಸರು ಪ್ರಸ್ತಾಪ:
ಪುಲ್ವಾಮ ಅಟ್ಯಾಕ್ ಮತ್ತು ಬಾಲಾಕೋಟ್ ಏರ್ ಸ್ಟ್ರೈಕ್ ಬಗ್ಗೆ ಹಲವಾರು ಸ್ಟೋರಿಗಳು ದೊಡ್ಡ ಸಂಖ್ಯೆಯಲ್ಲಿ ಅಂತರ್ಜಾಲದಲ್ಲಿ ಹರಿದಾಡುತ್ತಿದೆ. ಮಹಿಳಾ ಪೈಲೆಟ್ ಒಬ್ಬರು ಈ ಆಪರೇಷನ್ ನಲ್ಲಿ ಭಾಗವಹಿಸಿದ್ದರು ಮತ್ತು ಕೆಲವು ಹಳೆಯ ವೀಡಿಯೋಗಳು ಮತ್ತು ಫೋಟೋಗಳು ಕೂಡ ಹರಿದಾಡುತ್ತಿದೆ.
ಸೋಷಿಯಲ್ ಮೀಡಿಯಾದಲ್ಲಿ ಹರಿದಾಡಿದ ಕೆಲವು ಸುದ್ದಿಗಳಿಂದಾಗಿ ಪಾಕಿಸ್ತಾನ ಭಾರತದ ಯುದ್ಧವೇ ನಡೆಯುತ್ತಿದೆ ಎಂಬ ಬಗ್ಗೆ ಭಯ ಸೃಷ್ಟಿಯಾಗಿತ್ತು.

ಕಂಟ್ರೋಲ್ ಇಟ್ಟುಕೊಳ್ಳುವುದು ಕಷ್ಟ:
ದೇಶದ ಬಾರ್ಡರ್ ಬಗೆಗಿನ ಆಕ್ರಮಣಶಾಲಿ ವಿಚಾರಕ್ಕೆ ಸಂಬಂಧಿಸಿದಂತೆ ನಡೆಯುವ ಸುದ್ದಿಗಳ ಬಗ್ಗೆ ಕಂಟ್ರೋಲ್ ಇಟ್ಟುಕೊಳ್ಳುವುದು ಒಂದು ದೊಡ್ಡ ಸವಾಲಾಗಿರುತ್ತದೆ ಎಂದು ಜೆನ್ಸಿ ಜಾಕೋಬ್ ಅವರು ತಿಳಿಸಿದ್ದಾರೆ. ಫ್ಯಾಕ್ಟ್ ಚೆಕ್ಕಿಂಗ್ ವೆಬ್ ಸೈಟ್ ಭೂಮ್ ನ ಮ್ಯಾನೇಜಿಂಗ್ ಡೈರೆಕ್ಟರ್ ಆಗಿ ಇವರು ಕಾರ್ಯ ನಿರ್ವಹಿಸುತ್ತಿದ್ದಾರೆ. ಈ ಕಂಪೆನಿಯು ಫೇಸ್ ಬುಕ್ ಜೊತೆಗೆ ಸಹಭಾಗಿತ್ವವನ್ನು ಹೊಂದಿದೆ.

ಘಟನೆಗೆ ಸಂಬಂಧವಿಲ್ಲದ ಸೈನಿಕರ ಫೋಟೋ ಶೇರ್:
ಆಂಟಿ ಏರ್ ಕ್ರಾಫ್ಟ್ ಗನ್ ಸೇರಿದಂತೆ ಹಲವು ಆಶ್ಚರ್ಯಕರವಾಗಿರುವ ಮತ್ತು ಮಾಹಿತಿಗಳು ಹರಿದಾಡುತ್ತಿದ್ದು ಮುಂಬೈ ಪೋಲೀಸರು ಈ ಬಗ್ಗೆ ಕ್ರಾಸ್ ಚೆಕ್ ಕೂಡ ಮಾಡಿದ್ದಾರೆ. ಫೈಟರ್ ಜೆಟ್ ಧ್ವಂಸಗೊಳಿಸಿರುವ ಕೆಲವು ಪ್ರದೇಶದ ವೀಡಿಯೋಗಳನ್ನು ಕೂಡ ಅಂತರ್ಜಾಲದಲ್ಲಿ ಹರಿಯಬಿಡಲಾಗಿದ್ದು ಅದು ಕೆಲವು ಗೇಮಿಂಗ್ ವೀಡಿಯೋಗಳಾಗಿದೆ. ಈ ಘಟನೆಗೆ ಸಂಬಂಧವೇ ಇಲ್ಲದ ಕೆಲವು ಸೈನಿಕರ ಫೋಟೋಗಳನ್ನು ಕೂಡ ಹಾಕಲಾಗಿದೆ.

ಹಳೆಯ ಫೈಟರ್ ಜೆಟ್ ಮತ್ತು ಕ್ರ್ಯಾಷ್ ಗಳ ವೀಡಿಯೋ ಹರಿದಾಟ:
ಕೆಲವು ಹಳೆಯ ಕ್ರ್ಯಾಷ್ ಗಳ ಫೋಟೋಗಳು ಕೂಡ ಸರ್ಕ್ಯುಲೇಟ್ ಆಗುತ್ತಿದೆ ಮತ್ತು ಅದನ್ನು ಪಾಕಿಸ್ತಾನ ಫೈಟರ್ ಜೆಟ್ ಎಂದು ಕೂಡ ಹೇಳಲಾಗಿದೆ. ಮುಂದಿನ ಕೆಲವು ದಿನಗಳಲ್ಲಿ ಜನರೇ ಎಲ್ಲಾ ಸತ್ಯದ ಮತ್ತು ಸುಳ್ಳಿನ ಫೋಟೋ, ವೀಡಿಯೋಗಳ ಬಗ್ಗೆ ತಿಳಿದುಕೊಳ್ಳಲಿದ್ದಾರೆ.

ಟ್ವೀಟ್ ಗಳ ಸಂಖ್ಯೆ:
ಫೇಸ್ ಬುಕ್, ಇನ್ಸ್ಟಾಗ್ರಾಂ ಮತ್ತು ವಾಟ್ಸ್ ಆಪ್ ನಲ್ಲಿ ಇಂಡಿಯಾ ಪಾಕಿಸ್ತಾನದ ಬೆಳವಣಿಗೆಗೆ ಸಂಬಂಧಿಸಿದ ಮಾಹಿತಿಗಳನ್ನು ಪ್ರಚಾರಗೊಳ್ಳದಂತೆ ನೋಡಿಕೊಳ್ಳಲು ತಿಳಿಸಲಾಗಿದೆ. ಹಾಗಾಗಿ ಇಂಡಿಯಾ, ಪಾಕಿಸ್ತಾನ, ಎಫ್-16 ಇಂತಹ ಹ್ಯಾಷ್ ಟ್ಯಾಗ್ ಗಳಿರುವ ಸುಮಾರು 2.21 ಲಕ್ಷ ಟ್ವೀಟ್ ಗಳು ಮತ್ತು 89,000 ಟ್ವೀಟ್ ಗಳು ಬುಧವಾರದ ವೇಳೆಗೆ ಲಭ್ಯವಾಗಿತ್ತು.
ಟ್ವೀಟರ್ ನಲ್ಲಿ ಅಕೌಂಟ್ ಡಿಲೀಟ್:
ನಾವು ನಮ್ಮ ಸೇವೆಯನ್ನು ದುರ್ಬಳಕೆ ಮಾಡಿಕೊಳ್ಳುವುದಕ್ಕೆ ಮತ್ತು ಪೂರ್ವಯೋಜಿತ ಕೆಟ್ಟ ಕೆಲಸಗಳಿಗೆ ತೊಡಗುವ ಅಕೌಂಟಿಗಳಿಗೆ ಅವಕಾಶ ನೀಡದೇ ಅಂತಹ ಅಕೌಂಟ್ ಗಳನ್ನು ತೆಗೆದುಹಾಕುತ್ತೇವೆ ಎಂದು ಟ್ವೀಟರ್ ವಕ್ತಾರರು ತಿಳಿಸಿದ್ದಾರೆ.ಆದರೆ ಯಾವುದೇ ನಿರ್ಧಿಷ್ಟ ಅಕೌಂಟ್ ಬಗೆಗಿನ ಮಾಹಿತಿಯನ್ನು ಅವರು ಹೊರಹಾಕಿಲ್ಲ.
ಜನರ ಜವಾಬ್ದಾರಿ:
ಪ್ರತಿಯೊಬ್ಬರಿಗೂ ಕೂಡ ತಪ್ಪು ಸುದ್ದಿಗಳು ಮತ್ತು ಸುಳ್ಳು ಸುದ್ದಿಗಳು ಹರಡದಂತೆ ನೋಡಿಕೊಳ್ಳಬೇಕಾಗಿರುವ ಜವಾಬ್ದಾರಿ ಇದೆ. ನಾವು ಆ ನಿಟ್ಟಿನಲ್ಲಿ ಜನರಲ್ಲಿ ಜಾಗೃತಿ ಮೂಡಿಸುತ್ತಿದ್ದೇವೆ. ಯಾವುದೇ ಮಾಹಿತಿಯನ್ನು ಪರೀಕ್ಷಿಸಿದೆ ಹಂಚಿಕೊಳ್ಳಬೇಡಿ ಎಂದು ಜನರಿಗೆ ತಿಳಿಸಲಾಗಿದೆ ಎಂಬ ಬಗ್ಗೆಯೂ ವಕ್ತಾರರು ತಿಳಿಸಿದ್ದಾರೆ.
ವಾಟ್ಸ್ ಆಪ್ ಪಾತ್ರವೇ ದೊಡ್ಡದು:
ಸೋಷಿಯಲ್ ಮೀಡಿಯಾದ ಪೋಸ್ಟ್ ಗಳ ಬಗ್ಗೆ ವೆರಿಫೈ ಮಾಡುವ ನಾನ್-ಪ್ರಾಫಿಟ್ ಎಂಟಿಟಿ ಆಗಿರುವ ಚೆಕ್4ಸ್ಪ್ಯಾಮ್ ವೆಬ್ ಸೈಟ್ ತಿಳಿಸಿರುವ ಪ್ರಕಾರ ವೆಬ್ ಸೈಟ್ ಗಳಿಗೆ ಸ್ಟೋರಿ ಚೆಕ್ ಮಾಡುವುದಕ್ಕೆ ವಿಸಿಟ್ ಮಾಡುವ ಜನರ ಸಂಖ್ಯೆಯು ಕಳೆದ ತಿಂಗಳಿಗೆ ಹೋಲಿಸಿದರೆ ಫೆಬ್ರವರಿ 26 ರಿಂದ 79% ಅಧಿಕವಾಗಿದೆಯಂತೆ.ವೆಬ್ ಸೈಟ್ ತಿಳಿಸಿರುವ ಪ್ರಕಾರ ಈ ರೀತಿ ಮಾಹಿತಿ ಹಂಚಿಕೆಯಲ್ಲಿ ವಾಟ್ಸ್ ಆಪ್ ನ ಪಾತ್ರ ಬಹಳ ದೊಡ್ಡದು ಎನ್ನಲಾಗಿದೆ.
ನಿರೀಕ್ಷೆಗಿಂತಲೂ ಅಧಿಕ:
ನೀವು ನಿರೀಕ್ಷಿಸುವುದಕ್ಕಿಂತಲೂ ಅಧಿಕ ಸಂಖ್ಯೆಲ್ಲಿ ವಾಟ್ಸ್ ಆಪ್ ನಲ್ಲಿ ಫೇಕ್ ನ್ಯೂಸ್ ಹರಡಿದೆ. ಇನ್ನು ಮಾಧ್ಯಮಗಳು ಕೂಡ ಕೆಲವು ಮಾಹಿತಿಗಳನ್ನು ಯಾವುದೇ ವಿಮರ್ಷೆ ಮತ್ತು ಪರೀಕ್ಷೆಗೆ ಒಳಪಡಿಸಿದೆ ತೆಗೆದುಕೊಳ್ಳುತ್ತಿದೆ. ಕೆಲವು ಹಳೆಯ ಪಾಕಿಸ್ತಾನದ ವೀಡಿಯೋಗಳನ್ನು ತೋರಿಸಿ ಭಾಗಲ್ ಕೋಟ್ ವೀಡಿಯೋ ಎಂದು ತೋರಿಸಿರುವ ಮೀಡಿಯಾಗಳು ಇವೆ. ಜೋಧಪುರ್ ಫೈಯರ್ ಜೆಟ್ ಕ್ರಾಷ್ ವೀಡಿಯೋವನ್ನು ಕೂಡ ಬಳಸಿರುವ ಉದಾಹರಣೆಗಳು ನಡೆದಿವೆ ಎಂದು ತಿಳಿದುಬಂದಿದೆ.


Click it and Unblock the Notifications