Home
Social media

ಬಳಕೆದಾರರಿಗೆ ಮೋಸ ಮಾಡಿದ 'ಗೂಗಲ್ ಪ್ಲಸ್' ವೃತ್ತಾಂತ!..ಖಾತೆ ಇದ್ದವರ ಕಥೆ ಏನು?

ಗೂಗಲ್ ಅನ್ನು ನಾವೆಷ್ಟು ನಂಬುತ್ತೇವೆ ಎಂಬುದಕ್ಕೆ ಒಂದು ಉದಾಹರಣೆ ಎಂದರೆ, ಇಂದು ಇಂಟರ್‌ನೆಟ್ ಎಂದರೆ ಗೂಗಲ್ ಎನ್ನುವ ಮಟ್ಟಕ್ಕೆ ಒಂದು ಖಾಸಾಗಿ ಸಂಸ್ಥೆ ಬೆಳೆದು ನಿಂತಿದೆ. ಗೂಗಲ್ ನಮಗೆ ಯಾವತ್ತೂ ಸಹ ಮೋಸ ಮಾಡುವುದಿಲ್ಲ ಎಂಬ ಭ್ರಮೆಯಲ್ಲಿ ನಾವು ಬದುಕ್ಕಿದ್ದೇವೆ .ಒಂದು ರೀತಿಯಲ್ಲಿ ಇಲ್ಲಿಯವರೆಗೂ ಗೂಗಲ್ ಜನರ ನಂಬಿಕೆಯನ್ನು ಉಳಿಸಿಕೊಂಡೇ ಬಂದಿದೆಯಾದರೂ ಗೂಗಲ್ ಅನ್ನು ಸಹ ನಾವು ನಂಬುವಂತಿಲ್ಲ.!

ಹೌದು, ಗೂಗಲ್ ನಮಗೆ ನೇರವಾಗಿ ಮೋಸ ಮಾಡದೇ ಇರಬಹುದು. ಆದರೆ, ತನ್ನ ಬಳಕೆದಾರರ ವಿಶ್ವಾಸವನ್ನು ಉಳಿಸಿಕೊಳ್ಳುವುದರಲ್ಲಿ ಗೂಗಲ್ ಕಂಪೆನಿ ಎಡವಿದರೂ ಕೂಡ ಅದು ಮೋಸವೇ ಎಂಬುದನ್ನು ತಿಳಿಯಬೇಕು. ಇದೀಗ ಲಕ್ಷಾಂತರ ಬಳಕೆದಾರರ ಖಾಸಗಿ ಮಾಹಿತಿ ಬಹಿರಂಗಗೊಂಡಿರುವ ಆರೋಪ ಹೊತ್ತಿರುವ ಗೂಗಲ್ ಪ್ಲಸ್ ತನ್ನ ತಾಣದ ಕಾರ್ಯ ಸ್ಥಗಿತಗೊಳಿಸುತ್ತಿದೆ ಎಂಬ ಸುದ್ದಿ ಇಂತಹುದೇ ಒಂದು ಮೋಸಕ್ಕೆ ಉದಾಹರಣೆಯಾಗಬಲ್ಲದು.

ಬಳಕೆದಾರರಿಗೆ ಮೋಸ ಮಾಡಿದ 'ಗೂಗಲ್ ಪ್ಲಸ್' ವೃತ್ತಾಂತ!..ಖಾತೆ ಇದ್ದವರ ಕಥೆ ಏನು?

ಗೂಗಲ್‌ ಪ್ಲಸ್‌ನಲ್ಲಿ ಕಂಡುಬಂದ ಸುರಕ್ಷತಾ ದೋಷದಿಂದ 5 ಲಕ್ಷಕ್ಕೂ ಹೆಚ್ಚು ಬಳಕೆದಾರರ ಖಾತೆಗಳಲ್ಲಿನ ಖಾಸಗಿ ದತ್ತಾಂಶ ಬಹಿರಂಗವಾಗಿದೆ. ಇನ್ನು ತಂತ್ರಜ್ಞಾನದ ನಾವಿನ್ಯತೆ ವೇಗವನ್ನು ಗಮನಿಸಲಾರದೆ ಕೆಲವೇ ತಿಂಗಳಲ್ಲಿ ಗೂಗಲ್ ಪ್ಲಸ್ ಕೂಡ ಕೊನೆಗಾಣುತ್ತಿದೆ. ಆದರೆ, ಗೂಗಲ್ ಪ್ಲಸ್ ಖಾತೆ ತೆರೆದವರ ಕಥೆ ಏನು? ಹೊಸ ತಲೆಮಾರಿನ ಯೋಚನೆಗಳ ಮುಂದೆ ಏಳಿಗೆ ಕಾಣದ ಗೂಗಲ್ ಪ್ಲಸ್ ಕೊನೆಗಾಣುತ್ತಿರುವುದು ಏಕೆ ಎಂಬುದನ್ನು ಇಂದಿನ ಲೇಖನದಲ್ಲಿ ತಿಳಿಯೋಣ.

ಅದ್ದೂರಿಯಾಗಿ ಬಂದಿತ್ತು ಗೂಗಲ್ ಪ್ಲಸ್!

ಅದ್ದೂರಿಯಾಗಿ ಬಂದಿತ್ತು ಗೂಗಲ್ ಪ್ಲಸ್!

ಇಂದು ನಮ್ಮಿಂದ ಮರೆಯಾಗುತ್ತಿರುವ ಗೂಗಲ್ ಪ್ಲಸ್ 2011ರಲ್ಲಿ ಅದ್ದೂರಿಯಾಗಿ ಕಾಲಿಟ್ಟಿತ್ತು. ಪರಿಣಾಮಕಾರಿ ಹಾಗೂ ಸುರಕ್ಷಿತ ಸಾಮಾಜಿಕ ಸಂಪರ್ಕ ತಾಣವಾಗಿ ಗೂಗಲ್‌ ಸಂಸ್ಥೆ 2011ರಲ್ಲಿ 'ಗೂಗಲ್ ಪ್ಲಸ್ (ಜಿ+)' ಅನ್ನು ಪರಿಚಯಿಸಿತು. ಫೇಸ್‌ಬುಕ್‌ಗೆ ಪೈಪೋಟಿ ನೀಡುವ ನಿರೀಕ್ಷೆಯೊಂದಿಗೆ ಗೂಗಲ್ ಆಗಿನ ಸಿಇಒ ಲ್ಯಾರಿ ಪೇಜ್ ‘ಗೂಗಲ್ ಪ್ಲಸ್' ಹೊರತಂದರು. ಜಿ+ ಆರಂಭವಾಗಿ ಎರಡು ವಾರಗಳಲ್ಲಿ 10 ಕೋಟಿ ಬಳಕೆದಾರರನ್ನು ತನ್ನದಾಗಿಸಿಕೊಳ್ಳುವ ಮೂಲಕ 'ಗೂಗಲ್ ' ತನ್ನ ಬಳಕೆದಾರರ ಶಕ್ತಿಯನ್ನು ಜಗತ್ತಿಗೆ ತೋರಿಸಿತ್ತು.

ಗೂಗಲ್ ಪ್ಲಸ್ ವೃತ್ತಾಂತ

ಗೂಗಲ್ ಪ್ಲಸ್ ವೃತ್ತಾಂತ

ಹೀಗೆ ಭಾರೀ ನಿರೀಕ್ಷೆಯನ್ನು ಹೊತ್ತು ಬಂದಿದ್ದ ಗೂಗಲ್ ಪ್ಲಸ್ ಕೆಲವೇ ತಿಂಗಳುಗಳಲ್ಲಿ ನೆಲಕಚ್ಚಿತು. ತಂತ್ರಜ್ಞಾನದ ನಾವಿನ್ಯತೆ ವೇಗವನ್ನು ಗಮನಿಸಲಾರದೆ ಗೂಗಲ್ ಪ್ಲಸ್ ಮುಗ್ಗರಿಸಿತು. ಆ ತಾಣದಲ್ಲಿ ಫೋಟೋ, ಅನುಭವ, ಅಭಿಪ್ರಾಯಗಳನ್ನು ಹಂಚಿಕೊಳುವುದನ್ನೇ ಬಳಕೆದಾರರು ಮರೆತರು. ಬ್ಲಾಗ್‌ಗಳು ಹಾಗೂ ಸುದ್ದಿ ತಾಣಗಳು ಶೇರ್ ಆಯ್ಕೆಯಲ್ಲಿ ಗೂಗಲ್ ಪ್ಲಸ್ ಕೈಬಿಟ್ಟವು. ಇವೆಲ್ಲವುಗಳಿಂದ ಗೂಗಲ್ ಪ್ಲಸ್ ಎಂಬ ಜಾಲತಾಣ ಇದೆಯೇ ಎಂದು ಪ್ರಶ್ನಿಸುವಂತೆ ಗೂಗಲ್ ಪ್ಲಸ್ ಮರೆಯಾಯಿತು.

ಸುರಕ್ಷತೆ ಉಳಿಸಿಕೊಳ್ಳಲಿಲ್ಲ ಗೂಗಲ್!

ಸುರಕ್ಷತೆ ಉಳಿಸಿಕೊಳ್ಳಲಿಲ್ಲ ಗೂಗಲ್!

ಗೂಗಲ್ ಪ್ಲಸ್ ಏನೋ ನೆಲಕಚ್ಚಿತು. ಆದರೆ, ಇದಾದ ಕೆಲವೇ ತಿಂಗಳುಗಲ್ಲಿ ಗೂಗಲ್ ತನ್ನ ಸುರಕ್ಷತೆ ಉಳಿಸಿಕೊಳ್ಳಲಿಲ್ಲ ಗೂಗಲ್‌ ಪ್ಲಸ್‌ನಲ್ಲಿ ಕಂಡುಬಂದ ಸುರಕ್ಷತಾ ದೋಷದಿಂದ 5 ಲಕ್ಷಕ್ಕೂ ಹೆಚ್ಚು ಬಳಕೆದಾರರ ಖಾತೆಗಳಲ್ಲಿನ ಖಾಸಗಿ ದತ್ತಾಂಶ ಬಹಿರಂಗವಾಗಿದೆ. 2015ರಿಂದ ಮಾರ್ಚ್‌ 2018ರ ವರೆಗೂ ಗ್ರಾಹಕರ ದತ್ತಾಂಶ ಬಹಿರಂಗಗೊಂಡಿದೆ. ಸುರಕ್ಷತಾ ದೋಷದಿಂದಾಗಿ ಹ್ಯಾಕರ್‌ಗಳಿಗೆ ಗೂಗಲ್‌ ಪ್ಲಸ್‌ ಬಳಕೆದಾರರ ಖಾಸಗಿ ದತ್ತಾಂಶ ಸುಲಭವಾಗಿ ದೊರೆತಿದೆ ಹೆಸರು, ಬಳಕೆದಾರ ಮಾಹಿತಿ, ಇ-ಮೇಲ್‌ ವಿಳಾಸ, ಉದ್ಯೋಗ ಮಾಹಿತಿ ಎಲ್ಲವೂ.

ಮುಚ್ಚಿಟ್ಟು ಕೊನೆಗೊಳಿಸಿತು ಗೂಗಲ್!

ಮುಚ್ಚಿಟ್ಟು ಕೊನೆಗೊಳಿಸಿತು ಗೂಗಲ್!

2018ರ ಮಾರ್ಚ್‌ನಲ್ಲಿ 'ಬಗ್‌' ಇರುವುದನ್ನು ಗೂಗಲ್‌ ಗಮನಿಸಿ ಸರಿಪಡಿಸಿತ್ತಾದರೂ, ಬಹಿರಂಗ ಪಡಿಸಿರಲಿಲ್ಲ .ಆದರೆ, ಆ ದತ್ತಾಂಶಗಳ ದುರುಪಯೋಗ ಆಗಿಲ್ಲ ಎಂದು ಗೂಗಲ್‌ ಹೇಳಿದೆ. ಈಗ
ಗೂಗಲ್‌ ಪ್ಲಸ್‌ ಅಭಿವೃದ್ಧಿ ಮತ್ತು ನಿರ್ವಹಣೆಯಲ್ಲಿ ಸೋತಿರುವುದು, ನಿರೀಕ್ಷಿತ ಬಳಕೆದಾರರನ್ನು ತಲುಪುವಲ್ಲಿ ವಿಫಲರಾಗಿರುವುದರಿಂದ ಸ್ಥಗಿತಗೊಳಿಸುವ ನಿರ್ಧಾರ ತೆಗೆದುಕೊಂಡಿರುವುದಾಗಿ ಸಂಸ್ಥೆಯ ವಕ್ತಾರರು ತಿಳಿಸಿದ್ದಾರೆ. ಒಂದು ವರದಿಯಂತೆ, , ಶೇ 90ರಷ್ಟು ಗೂಗಲ್‌ + ಬಳಕೆದಾರರು 5 ಸೆಕೆಂಡ್‌ಗಳಿಗೂ ಕಡಿಮೆ ಅವಧಿ ತಾಣವನ್ನು ಬಳಸುತ್ತಿದ್ದರಂತೆ.

ನಾವು ಮಾಡಬೇಕಿರುವುದು ಏನು?

ನಾವು ಮಾಡಬೇಕಿರುವುದು ಏನು?

ಗೂಗಲ್ ಈಗ ಗೂಗಲ್ ಪ್ಲಸ್ ತಾಣವನ್ನು ಸ್ಥಗಿತಗೊಳಿಸುತ್ತಿರುವುದರಿಂದ ಗೂಗಲ್ ಪ್ಲಸ್‌ನಲ್ಲಿ ಬಳಕೆದಾರರು ಹಂಚಿಕೊಂಡಿರುವ ಮಾಹಿತಿ, ಫೋಟೊಗಳನ್ನು ಡೌನ್ ಲೋಡ್ ಮಾಡಿಕೊಳ್ಳಲು ಸಾಧ್ಯವಿದೆ. ನಿಮ್ಮೆಲ್ಲಾ ಮಾಹಿತಿಯನ್ನು ಗೂಗಲ್‌ ಪ್ಲಸ್‌ನಲ್ಲಿ ಅಳಿಸಲು ಅವಕಾಶವಿದೆ. ಗೂಗಲ್ + ತಾಣಕ್ಕೆ ಲಾಗಿನ್ ಆಗಿ ರಿಮೂಲ್ ಆಕ್ಟೀವ್ ಅಕೌಂಟ್ ಆಯ್ಕೆ ಒತ್ತಿ ಆಪ್‌ನಲ್ಲಿ ಡಾಟಾ ಕ್ಲಿಯರ್ ಮಾಡಬಹುದಾಗಿದೆ. ಅಂತೂ ಹೆಸರಾಂತ ಕಂಪೆನಿ ಕೂಡ ಮುಗ್ಗರಿಸಿ ಬಳಕೆದಾರರಿಗೆ ಮೋಸ ಮಾಡಿದೆ.

Best Mobiles in India

English summary
Former Google+ designer explains why Google's social media play failed. to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+