ವಾಟ್ಸಾಪ್‌ನ ಸಾವಿರ ಸಮಸ್ಯೆಗಳಿಗೆ ಇಲ್ಲಿದೆ ಒಂದೇ ಪರಿಹಾರ

By Shwetha
|

ವಾಟ್ಸಾಪ್ ಇಂದು ಹೆಚ್ಚು ಜನಪ್ರಿಯ ತ್ವರಿತ ಮೆಸೇಜಿಂಗ್ ಅಪ್ಲಿಕೇಶನ್ ಆಗಿ ಪ್ರಸಿದ್ಧಿ ಪಡೆದುಕೊಂಡಿದೆ. 1 ಬಿಲಿಯನ್ ಬಳಕೆದಾರರನ್ನು ವಾಟ್ಸಾಪ್ ಇಂದು ಹೊಂದಿದ್ದು ಇದು ಬಳಕೆದಾರರಿಗೆ ಎಷ್ಟು ಅಚ್ಚುಮೆಚ್ಚಿನದು ಎಂಬುದು ಇದರಲ್ಲೇ ತಿಳಿಯುವ ಅಂಶವಾಗಿದೆ. ಆದರೆ ನಿತ್ಯವೂ ಬಳಸುವ ವಾಟ್ಸಾಪ್ ಒಂದಿಲ್ಲೊಂದು ಸಮಸ್ಯೆಯನ್ನು ಹೊಂದಿರುವುದು ದಿಟವಾಗಿದೆ ಅಲ್ಲವೇ? ಒಮ್ಮೊಮ್ಮೆ ಬ್ಲ್ಯೂಟಿಕ್ ಮಾರ್ಕ್ ಆಗಿರಬಹುದು ಇಲ್ಲವೇ ನಿಮ್ಮ ಪ್ರೊಫೈಲ್ ಚಿತ್ರ ಎಲ್ಲರಿಗೂ ತೋರಬಾರದು ಎಂಬ ನಿಮ್ಮ ನಿಯಮವಾಗಿರಬಹುದು

ಹೀಗೆ ವಾಟ್ಸಾಪ್ ಒಂದಿಲ್ಲೊಂದು ಸಮಸ್ಯೆಗಳನ್ನು ಉಂಟಮಾಡುತ್ತಿರುವುದು ನಿಜವಾಗಿದೆ. ಹಾಗಿದ್ದರೆ ಈ ಸಮಸ್ಯೆಗಳನ್ನು ಒಮ್ಮೆಲೇ ನಿವಾರಿಸಲು ಆಗದಿದ್ದರೂ ಕೆಲವೊಂದು ವಿಧಾನಗಳಿಂದ ಒಂದೆರಡು ಸಮಸ್ಯೆಗಳನ್ನಾದರೂ ಹೋಗಲಾಡಿಸಬಹುದು ಅದು ಏನು ಎಂಬುದನ್ನೇ ಇಂದಿನ ಲೇಖನದಲ್ಲಿ ನಾವು ನಿಮಗೆ ತಿಳಿಸಲಿದ್ದೇವೆ.

#1

#1

ನಿಮ್ಮ ವಾಟ್ಸಾಪ್‌ನಲ್ಲಿ ಕ್ಲಾಕ್ ಗುರುತು ನಿಮ್ಮ ಸಂದೇಶವನ್ನು ಇನ್ನೂ ಕಳುಹಿಸಬೇಕಾಗಿದೆ ಎಂಬುದನ್ನು ಸೂಚಿಸುತ್ತದೆ ಒನ್ ಟಿಕ್‌ನ ಅರ್ಥ ಸಂದೇಶವನ್ನು ಕಳುಹಿಸಲಾಗಿದೆ ಎಂದಾಗಿದೆ ಮತ್ತು ವಾಟ್ಸಾಪ್ ಸರ್ವರ್ ಸಂದೇಶವನ್ನು ಸ್ವೀಕೃತಿದಾರರು ಸ್ವೀಕರಿಸಿದ್ದಾರೆ ಎಂಬುದನ್ನು ಸೂಚಿಸುತ್ತದೆ. ಟು ಟಿಕ್ ಸಂದೇಶವು ನಿಮ್ಮ ಸಂಬಂಧಿತ ವ್ಯಕ್ತಿಗೆ ಡೆಲಿವರಿ ಆಗಿದೆ ಎಂಬುದನ್ನು ಸೂಚಿಸುತ್ತದೆ.

#2

#2

ನೀವು ಒಂದು ವರ್ಷಕ್ಕಿಂತಲೂ ಹೆಚ್ಚು ಸಮಯ ವಾಟ್ಸಾಪ್ ಅನ್ನು ಬಳಸುತ್ತಿದ್ದೀರಿ ಎಂದಾದಲ್ಲಿ ನೀವು ಸ್ವಲ್ಪ ಮೊತ್ತವನ್ನು ಪಾವತಿಸಬೇಕಾಗುತ್ತದೆ. ನಿಮ್ಮ ಪೇಪಾಲ್ ಖಾತೆಯೊಂದಿಗೆ ನಿಮ್ಮ ನ್ಯಾವಿಗೇಟರ್ ಮೂಲಕ ಪಾವತಿಸಬೇಕಾಗುತ್ತದೆ.

#3

#3

ವಾಟ್ಸಾಪ್‌ನಲ್ಲಿ ನೀವು ನಿಮ್ಮ ಸ್ನೇಹಿತರ ಸಂದೇಶಗಳನ್ನು ಅವರಿಗೆ ತಿಳಿಯದೇ ಓದಬಹುದಾಗಿದೆ.

#4

#4

ಸಂಪರ್ಕವನ್ನು ನಿರ್ಬಂಧಿಸಲು, ನೀವು ನಿರ್ಬಂಧ ಬಯಸುವ ಸಂಪರ್ಕದ ಸಂವಾದಕ್ಕೆ ಹೋಗಿ ಅಲ್ಲಿ ಆಪ್ಶನ್ ಬಟನ್ ಅನ್ನು ಸ್ಪರ್ಶಿಸಿ "ಮೋರ್" ಸ್ಪರ್ಶಿಸಿ ನಂತರ "ಬ್ಲಾಕ್" ಸ್ಪರ್ಶಿಸಿ.

#5

#5

ನಿಮ್ಮ ಸಂಪರ್ಕಗಳಲ್ಲಿ ಅಂತರಾಷ್ಟ್ರೀಯ ಸಂಪರ್ಕವನ್ನು ಸೇರಿಸಲು, ಆ ಪ್ರದೇಶದ ಕೋಡ್ ಅನ್ನು ಹೊಂದಿರಬೇಕು ಮತ್ತು ನಿಮ್ಮ ಸಂಖ್ಯೆ ಅದೇ ಕೋಡ್ ಅನ್ನು ಬಳಸುತ್ತಿರಬೇಕು.

#6

#6

*ನಿಮ್ಮ ಸಂಪರ್ಕ ಮತ್ತು ಸಂಪರ್ಕ ಸಂಖ್ಯೆಗಳನ್ನು ಖಾತ್ರಿಪಡಿಸಿ. *ನಿಮ್ಮ ಸ್ನೇಹಿತರೂ ವಾಟ್ಸಾಪ್ ಅನ್ನು ಹೊಂದಿದ್ದಾರೆ ಎಂಬುದನ್ನು ಖಾತ್ರಿಪಡಿಸಿ. *ವಾಟ್ಸಾಪ್‌ನ ಅತ್ಯಾಧುನಿಕ ಆವೃತ್ತಿಯನ್ನು ನೀವು ಹೊಂದಿದ್ದೀರಿ ಎಂಬುದನ್ನು ಖಾತ್ರಿಪಡಿಸಿ.

#7

#7

ನಿಮ್ಮ 3ಜಿ ಸಂಪರ್ಕವನ್ನು ಆಧರಿಸಿ ಅಥವಾ ವಾಟ್ಸಾಪ್ ಬಳಸಲು ಪ್ರಯತ್ನಿಸುವ ನೆಟ್‌ವರ್ಕ್ ಸಂಪರ್ಕವನ್ನು ಆಧರಿಸಿ ಸಂಪರ್ಕ ನಷ್ಟವಾಗುತ್ತದೆ ಆ ಸಂದರ್ಭದಲ್ಲಿ *ನಿಮ್ಮ ಫೋನ್ ಸ್ವಿಚ್ ಆನ್ ಆಗಿದೆ ಎಂಬುದನ್ನು ಖಾತ್ರಿಪಡಿಸಿಕೊಳ್ಳಿ. *ಪ್ಲೇ ಸ್ಟೋರ್‌ನಿಂದ ಅಪ್ಲಿಕೇಶನ್‌ನ ಇತ್ತೀಚಿನ ಆವೃತ್ತಿಯನ್ನು ಇನ್‌ಸ್ಟಾಲ್ ಮಾಡಿಕೊಳ್ಳಿ. *ನಿಮ್ಮ ಇಂಟರ್ನೆಟ್ ಸಂಪರ್ಕವನ್ನು ಪರಿಶೀಲಿಸಿಕೊಳ್ಳಿ ಅಪ್ಲಿಕೇಶನ್ ಕ್ಯಾಶ್ ಅನ್ನು ಖಾಲಿ ಮಾಡಿ.

#8

#8

ವೈಫೈ ಮಾತ್ರ ಕಾರ್ಯನಿರ್ವಹಿಸುವ ಟ್ಯಾಬ್ಲೆಟ್ ಅನ್ನು ನೀವು ಹೊಂದಿದ್ದೀರಿ ಎಂದಾದಲ್ಲಿ, ನಿಮಗೆ ವಾಟ್ಸಾಪ್ ಇನ್‌ಸ್ಟಾಲ್ ಮಾಡಲು ಸಾಧ್ಯವಿಲ್ಲ. ಕಾರ್ಯನಿರ್ವಹಿಸುತ್ತಿರುವ ಸೆಲ್ ಫೋನ್ ಅಥವಾ ನಿಮ್ಮ ಫೋನ್ ಅತ್ಯವಶ್ಯಕವಾಗಿರಬೇಕು.

#9

#9

ವಾಟ್ಸಾಪ್ ಅನ್ನು ನಿಮ್ಮ ಫೋನ್‌ನಲ್ಲಿ ಡೌನ್‌ಲೋಡ್ ಮಾಡಬೇಕಿದ್ದಲ್ಲಿ, ಆಂಡ್ರಾಯ್ಡ್ ಆವೃತ್ತಿ 2.1 ಅಥವಾ ಅದಕ್ಕಿಂತ ಹೆಚ್ಚಿನ ಓಎಸ್ ಅನ್ನು ನೀವು ಹೊಂದಿರಬೇಕು. ಇದನ್ನು ನೋಡಲು ಸೆಟ್ಟಿಂಗ್ಸ್ ಇಲ್ಲಿ "ಅಬೌಟ್ ಡಿವೈಸ್" ನೋಡಿ.

Best Mobiles in India

English summary
Here we are giving some good suggetion on whatsapp problems. Thease solution help you to over come some problems.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X