ಇನ್‌ಸ್ಟಾಗ್ರಾಮ್ ಅಕೌಂಟ್ ಡಿಲೀಟ್ ಮಾಡುವುದು ಹೇಗೆ?

  |

  ಒಬ್ಬೊಬ್ಬರಿಗೆ ಒಂದೊಂದು ರೀತಿಯ ಚಟವಾದರೆ, ಸಾಮಾಜಿಕ ಜಾಲ ತಾಣಗಳಲ್ಲಿ ಸಮಯ ಕಳೆಯುವುದು ಕೂಡ ಕೆಲವರಿಗೆ ಒಂದು ರೀತಿಯ ಚಟವಿದ್ದಂತೆ. ವೀಡಿಯೋ ನೋಡುವುದು, ಫೋಟೋ ನೋಡುವುದು, ಸ್ಟೋರಿಗಳನ್ನು ಓದುತ್ತಾ ಕುಳಿತರೆ ಖಂಡಿತ ಗಂಟೆಗಳು ಉರುಳಿ ಬಿಡುತ್ತದೆ. ಅದರಲ್ಲೂ ಇನ್ಸ್ಟಾಗ್ರಾಂವಿದೆಯಲ್ಲ ಅದರಲ್ಲಿ ಸಮಯ ಕಳೆದದ್ದೇ ಗೊತ್ತಾಗುವುದಿಲ್ಲ. ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಎಷ್ಟು ಸಮಯ ಕಳೆದಿದ್ದೇವೆ ಎಂಬುದನ್ನು ಕೂಡ ತಿಳಿಸಲಾಗುತ್ತದೆ. ಯಾಕೆಂದರೆ ಅದೆಷ್ಟೋ ಮಂದಿ ತಮ್ಮ ಕುಟುಂಬದವರೊಂದಿಗೆ ಬೆರೆಯುವುದು, ಹೊರಗಡೆ ಸುತ್ತಾಡುವುದು, ಸಮಯ ಸಿಕ್ಕಾಗ ಸಂಬಂಧಿಗಳೊಂದಿಗೆ ಮಾತನಾಡುವುದು ಎಲ್ಲವನ್ನೂ ತ್ಯಜಿಸಿಬಿಟ್ಟಿದ್ದಾರೆ. ಇಂಟರ್ನೆಟ್ ನಲ್ಲಿ ಸಮಯ ಕಳೆಯುವುದೊಂದು ಹವ್ಯಾಸಕ್ಕಿಂತ ಹೆಚ್ಚಾಗಿ ಚಟವಾಗಿ ಹಲವರನ್ನು ಕಾಡುತ್ತಿದೆ ಮತ್ತು ಅದು ಹಲವಾರು ಕಾಯಿಲೆಗಳಿಗೆ ಹಾದಿಯಾಗುತ್ತದೆ ಎಂಬುದನ್ನು ಕೂಡ ಇತ್ತೀಚೆಗಿನ ಅಧ್ಯಯನಗಳು ತಿಳಿಸಿವೆ.

  ಇನ್‌ಸ್ಟಾಗ್ರಾಮ್ ಅಕೌಂಟ್ ಡಿಲೀಟ್ ಮಾಡುವುದು ಹೇಗೆ?

  ಫೇಸ್ ಬುಕ್ ಮಾಲೀಕತ್ವದ ಫೋಟೋ ಹಂಚಿಕೊಳ್ಳುವ ಫ್ಲಾಟ್ ಫಾರ್ಮ್ ಆಗಿರುವ ಇನ್ಸ್ಟಾಗ್ರಾಂ ಕಳೆದ ಹಲವು ದಿನಗಳಿಂದ ಇತರೆ ಸಾಮಾಜಿಕ ಜಾಲತಾಣಗಳಾದ ಸ್ನ್ಯಾಪ್ ಚಾಟ್ ಸೇರಿದಂತೆ ಹಲವು ಫ್ಲಾಟ್ ಫಾರ್ಮ್ ಗಳಿಗೆ ಕಠಿಣ ಸವಾಲುಗಳನ್ನು ಹಾಕುತ್ತಿದೆ.ವಿಶ್ವದಾದ್ಯಂತದ ಮಿಲಿಯನ್ ಗಟ್ಟಲೆ ಇನ್ಸ್ಟಾಗ್ರಾಂ ಬಳಕೆದಾರರು ಪ್ರತಿದಿನ ಅದೆಷ್ಟೋ ಫೋಟೋ, ವೀಡಿಯೋ ಮತ್ತು ಸ್ಟೋರಿಗಳನ್ನು ಹಂಚಿಕೊಳ್ಳುತ್ತಿದ್ದಾರೆ.

  ಆದರೆ ಇನ್ಸ್ಟಾಗ್ರಾಂ ಒಂದು ರೀತಿಯ ಅಂಟಿನಂತೆ. ಕೂತುಬಿಟ್ಟರೆ ಕುಳಿತೇ ಇರೋಣ ಅನ್ನಿಸುತ್ತದೆ. ಅದೆಷ್ಟು ಸಮಯ ಇನ್ಸ್ಟಾಗ್ರಾಂ ಮುಂದೆ ಕಳೆದು ಬಿಟ್ಟೆವು ಎಂಬುದರ ಪರಿಜ್ಞಾನವೇ ಇಲ್ಲದಂತೆ ಮಾಡಿ ಬಿಡುತ್ತದೆ.

  ಅಷ್ಟಕ್ಕೂ ಇಷ್ಟೆಲ್ಲ ಪೀಠಿಕೆ ಯಾಕೆ ಹಾಕುತ್ತಿದ್ದೇವೆ ಎಂದು ಕೇಳುತ್ತಿದ್ದೀರಾ, ಒಂದು ವೇಳೆ ನೀವು ಅಂತರ್ಜಾಲದ ಇನ್ಸ್ಟಾಗ್ರಾಂನಲ್ಲಿ ಹೆಚ್ಚು ಸಮಯ ಕಳೆಯುತ್ತಿರುವುದು ನಿಮ್ಮ ಗಮನಕ್ಕೆ ಬಂದು ನೀವು ಅದರಿಂದ ಹೊರ ಬರಲು ಇಚ್ಛಿಸುತ್ತಿದ್ದೀರಾದರೆ ಅದು ಹೇಗೆ ಎಂಬ ಬಗ್ಗೆ ನಾವು ನಿಮಗೆ ಮಾಹಿತಿ ನೀಡುತ್ತೇವೆ. ಅಂದರೆ ಸೋಷಿಯಲ್ ಮೀಡಿಯಾದಿಂದ ನೀವು ಸ್ವಲ್ಪ ಸಮಯ ಹೊರಗೆ ಇರಬೇಕು ಎಂದು ಬಯಸುವುದಾದರೆ ಏನು ಮಾಡಬೇಕು? ಇನ್ಸ್ಟಾಗ್ರಾಂ ಅಕೌಂಟನ್ನು ಡಿಲೀಟ್ ಮಾಡುವುದು ಹೇಗೆ ಎಂಬುದನ್ನು ಈ ಲೇಖನದಲ್ಲಿ ನಾವು ತಿಳಿಸಿಕೊಡಲಿದ್ದೇವೆ,

  ನೀವು ತಿಳಿದುಕೊಳ್ಳಬೇಕಾಗಿರುವ ಅಂಶಗಳು :

  • ಬಳಕೆದಾರರು ತಮ್ಮ ಖಾತೆಯನ್ನು ತಾತ್ಕಾಲಿಕವಾಗಿ ನಿಷ್ಕ್ರಿಯಗೊಳಿಸಲೂ ಬಹುದು ಅಥವಾ ಶಾಶ್ವತವಾಗಿ ಡಿಲೀಟ್ ಕೂಡ ಮಾಡಬಹುದು.

  • ಒಮ್ಮೆ ನಿಮ್ಮ ಇನ್ಸ್ಟಾಗ್ರಾಂ ಖಾತೆಯನ್ನು ಶಾಶ್ವತವಾಗಿ ಡಿಲೀಟ್ ಮಾಡಿದ ನಂತರ ಅದನ್ನು ಯಾವುದೇ ಕಾರಣಕ್ಕೂ ಪುನಃ ರಿಕವರ್ ಮಾಡಲು ಸಾಧ್ಯವಾಗುವುದಿಲ್ಲ. ನಿಮ್ಮ ಎಲ್ಲಾ ವಯಕ್ತಿಕ ಮಾಹಿತಿಗಳು ಮತ್ತು ನೀವು ಹಂಚಿಕೊಂಡಿರುವ ವಿಚಾರಗಳು ಎಲ್ಲವೂ ಶಾಶ್ವತವಾಗಿ ಡಿಲೀಟ್ ಆಗುತ್ತದೆ. ಹಾಗಾಗಿ ನೀವು ಇನ್ಸ್ಟಾಗ್ರಾಂ ಖಾತೆಯನ್ನು ಶಾಶ್ವತವಾಗಿ ಡಿಲೀಟ್ ಮಾಡುವ ಮುನ್ನ ಅದರಲ್ಲಿನ ಮಾಹಿತಿಗಳು ಯಾವುದಾದರೂ ನಿಮಗೆ ಅಗತ್ಯವಿದ್ದಲ್ಲಿ ಮೊದಲೇ ಅದರ ಬ್ಯಾಕ್ ಅಪ್ ತೆಗೆದುಕೊಳ್ಳಿ.

  ಅಗತ್ಯತೆಗಳು:

  • ಲ್ಯಾಪ್ ಟಾಪ್ ಅಥವಾ ಪಿಸಿ ಗೆ ಅಂತರ್ಜಾಲದ ಸಂಪರ್ಕವಿರಬೇಕು.

  ತಾತ್ಕಾಲಿಕವಾಗಿ ಒಂದು ಇನ್ಸ್ಟಾಗ್ರಾಂ ಖಾತೆಯನ್ನು ನಿಷ್ಕ್ರಿಯಗೊಳಿಸುವುದು ಹೇಗೆ?

  1. ನಿಮ್ಮ ಲ್ಯಾಪ್ ಟಾಪ್ ಅಥವಾ ಪಿಸಿಯಿಂದ ಇನ್ಸ್ಟಾಗ್ರಾಂ. ಕಾಂ ನ್ನು ಯಾವುದೇ ಬ್ರೌಸರ್ ಬಳಸಿ ತೆರೆಯಿರಿ.

  2. ನಿಮ್ಮ ಇನ್ಸ್ಟಾಗ್ರಾಂ ಲಾಗ್ ಇನ್ ಕ್ರಿಡೆನ್ಶಿಯಲ್ಸ್ ಬಳಸಿ ಲಾಗ್ ಇನ್ ಆಗಿ.

  3. ಮೇಲ್ಬಾಗದ ಬಲ ಬದಿಯಲ್ಲಿರುವ ಪ್ರೊಫೈಲ್ ಬಟನ್ ನ್ನು ಕ್ಲಿಕ್ಕಿಸಿ.

  4. ಎಡಿಟ್ ಪ್ರೊಫೈಲ್ ಆಯ್ಕೆಯನ್ನು ಕ್ಲಿಕ್ಕಿಸಿ

  5. ಸ್ಕ್ರೋಲ್ ಡೌನ್ ಮಾಡಿ ಮತ್ತು 'Temporarily disable my account’ ಆಯ್ಕೆಯನ್ನು ಕ್ಲಿಕ್ಕಿಸಿ.

  6. ಕಾರಣವನ್ನು ಆಯ್ಕೆ ಮಾಡಿ ಮತ್ತು ಅಕೌಂಟ್ ಪಾಸ್ ವರ್ಡ್ ನ್ನು ಮತ್ತೆ ಬರೆಯಿರಿ ಮತ್ತು ಪ್ರೊಸೆಸ್ ನ್ನು ಪೂರ್ಣಗೊಳಿಸಿ.

  ಶಾಶ್ವತವಾಗಿ ಇನ್ಸ್ಟಾಗ್ರಾಂ ಖಾತೆಯನ್ನು ಡಿಲೀಟ್ ಮಾಡುವುದು ಹೇಗೆ?

  1. ನಿಮ್ಮ ಲ್ಯಾಪ್ ಟಾಪ್ ಅಥವಾ ಪಿಸಿ ಬಳಸಿ ಯಾವುದಾದರೂ ಬ್ರೌಸರ್ ಸಹಾಯದಿಂದ ಇನ್ಸ್ಟಾಗ್ರಾಂ.ಕಾಂ ಗೆ ತೆರಳಿ ನಿಮ್ಮ ಲಾಗಿನ್ ಕ್ರಿಡೆನ್ಶಿಯಲ್ಸ್ ಬಳಸಿ ಲಾಗಿನ್ ಆಗಿ.

  2. ಈ ಲಿಂಕನ್ನು ಕ್ಲಿಕ್ಕಿಸಿ ಮತ್ತು ನಿಮ್ಮ ಅಕೌಂಟನ್ನು ಡಿಲೀಟ್ ಮಾಡಿ.

  3. ಇನ್ಸ್ಟಾಗ್ರಾಂ ಅಕೌಂಟ್ ಡಿಲೀಟ್ ಮಾಡಲು ಏನು ಕಾರಣ ಎಂಬುದನ್ನು ಡ್ರಾಪ್ ಡೌನ್ ಮೆನುವನ್ನು ಬಳಸಿ ಆಯ್ಕೆ ಮಾಡಿ.

  4. ಯಾವಾಗ ಕೇಳುತ್ತದೋ ಆಗ ಅಕೌಂಟಿನ ಪಾಸ್ ವರ್ಡ್ ನ್ನು ರೀಎಂಟರ್ ಮಾಡಿ.

  5. 'Permanently delete my account’ ನ್ನು ಕ್ಲಿಕ್ಕಿಸಿ ಮತ್ತು ಪ್ರೊಸೆಸ್ ಅನ್ನು ಪೂರ್ಣಗೊಳಿಸಿ.

  English summary
  Millions of Instagram users across the globe share information on the social media platform daily in the form of photos, videos and Stories.to know more visit to kannada.gizbot.vom

  ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot

  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more