Home
Social media

ಹೇ ಬೆಕ್ಕೆ ಬಾ ಇಲ್ಲಿ..! ಟೆಕ್ನಾಲಜಿ ಜತೆ ಕ್ಯಾಟ್‌ ವಾಕ್‌..!

ಮಾನವನ ಜೀವನದಲ್ಲಿ ತಂತ್ರಜ್ಞಾನ ಬಂದ ನಂತರ ಮಹತ್ತರ ಬದಲಾವಣೆಗಳೇ ಆಗಿವೆ. ಒಂದೇ ಬಾರಿಗೆ ತಂತ್ರಜ್ಞಾನ ಬರದಿದ್ದರೂ, ಕಾಲಕ್ರಮೇಣ ಮನುಷ್ಯನನ್ನು ಟೆಕ್ನಾಲಜಿ ಆವರಿಸಿಕೊಂಡಿದೆ. ಅದು ಕಂಪ್ಯೂಟರ್‌ ಬಂದ ನಂತರವಂತೂ ಮನುಷ್ಯನ ಜೀವನಶೈಲಿಯೇ ಬದಲಾಗಿ ಹೋಗಿದೆ.

ಪುಸ್ತಕಗಳೆಲ್ಲ ಮಾಯವಾಗಿ ಇಬುಕ್‌ಗಳು ಬಂದಿವೆ, ಮುಖ ಕೊಟ್ಟು ಮಾತನಾಡುವುದನ್ನು ಬಿಟ್ಟು ಫೇಸ್‌ಬುಕ್‌ನಂತಹ ಸಾಮಾಜಿಕ ಜಾಲತಾಣಗಳತ್ತ ಮುಖ ಮಾಡಿದ್ದೇವೆ. ಮನುಷ್ಯ ಮಾತ್ರ ತಂತ್ರಜ್ಞಾನದ ಪರಿಣಾಮಕ್ಕೆ ಒಳಗಾಗುತ್ತಿಲ್ಲ. ಬದಲಾಗಿ, ಪ್ರಾಣಿಗಳು ಕೂಡ ತಂತ್ರಜ್ಞಾನದ ಪ್ರಭಾವದಿಂದ ತಮ್ಮ ಜೀವನವನ್ನು ಬದಲಾಯಿಸಿಕೊಂಡಿವೆ.

ಹೇ ಬೆಕ್ಕೆ ಬಾ ಇಲ್ಲಿ..! ಟೆಕ್ನಾಲಜಿ ಜತೆ ಕ್ಯಾಟ್‌ ವಾಕ್‌..!

ಬೆಕ್ಕು ಎಲ್ಲರ ಮನೆಯಲ್ಲಿ ಇದ್ದೇ ಇರುತ್ತೇ, ಬೆಕ್ಕು ಅಡ್ಡ ಬಂದರೆ ಅಪಶಕುನವೆನ್ನುವವರು ಮನೆಯಲ್ಲಿ ಅದೇ ಬೆಕ್ಕನ್ನು ಮುದ್ದಾಡುತ್ತಾರೆ. ಅದಕ್ಕಾಗಿಯೇ ಬೆಕ್ಕಿನ ದೃಷ್ಟಾಂತದೊಂದಿಗೆ ಮಾನವನ ಜೀವನವನ್ನು ತಂತ್ರಜ್ಞಾನ ಯಾವ ರೀತಿ ಆಕ್ರಮಿಸಿಕೊಂಡಿದೆ ಎಂಬುದನ್ನು ಮುಂದಿನ ಚಿತ್ರಗಳು ತೋರಿಸುತ್ತವೆ. ಮತ್ತು ಬೆಕ್ಕು ಕೂಡ ತಂತ್ರಜ್ಞಾನದೊಂದಿಗೆ ತನ್ನ ಪರ್ಯಾಯವನ್ನು ಕಂಡುಕೊಂಡಿರುವುದನ್ನು ನೋಡಿದರೆ ನಿಮಗೆ ನಗು ಬರಬಹುದು. ಬೆಕ್ಕು ಪ್ರಿಯರಾಗಿದ್ದರೆ ಸ್ವಲ್ಪ ಬೇಸರವೂ ಆಗಬಹುದು. ನೋಡ್ಕೊಂಡು ಬನ್ನಿ..

1. ಟಿವಿ ಮೇಲೆ ಮಲಗುವುದು

1. ಟಿವಿ ಮೇಲೆ ಮಲಗುವುದು

ಮೊದಲೆಲ್ಲಾ ಡೂಮ್‌ ಟಿವಿಗಳು ಬರುತ್ತಿದ್ದವು ಆಗ ಬೆಕ್ಕು ಕೂಡ ಟಿವಿ ಮೇಲೆ ಬೆಚ್ಚಗೆ ಮಲಗುತ್ತಿತ್ತು. ಆದರೆ, ಈಗ ಎಲ್ಲಾ ಫ್ಲಾಟ್‌ ಟಿವಿಗಳು ಆಗಿರುವುದರಿಂದ ಬೆಕ್ಕು ಮತ್ತೊಂದು ಜಾಗವನ್ನು ಮಲಗಲು ಹುಡುಕುತ್ತಿದೆ.

2. ಓದುವಾಗ ಜತೆಯಲ್ಲಿರುತ್ತಿತ್ತು

2. ಓದುವಾಗ ಜತೆಯಲ್ಲಿರುತ್ತಿತ್ತು

ನಾವೂ ಓದುತ್ತಿರುವಾಗ ಪುಸ್ತಕದ ಮಧ್ಯದಲ್ಲಿ ಬಂದು ಬೆಕ್ಕು ಮಲಗುತ್ತಿತ್ತು. ಆದರೆ, ಈಗ ಎಲ್ಲಾ ತಂತ್ರಜ್ಞಾನವಾಗಿರುವುದರಿಂದ ಲ್ಯಾಪ್‌ಟಾಪ್‌ ಕೀಬೋರ್ಡ್‌ ಮೇಲೆ ಮಲಗೋಕೆ ಹೋದರ ಲ್ಯಾಪ್‌ಟಾಪ್‌ನಲ್ಲಿ ಕೆಲಸ ಮಾಡೋದು ಹೇಗೆ.

3. ಬೆಚ್ಚನೆ ಜಾಗದಲ್ಲಿ ಬೆಚ್ಚಗಿನ ನಿದ್ದೆ

3. ಬೆಚ್ಚನೆ ಜಾಗದಲ್ಲಿ ಬೆಚ್ಚಗಿನ ನಿದ್ದೆ

ಬೆಕ್ಕುಗಳು ಮಲಗಲು ಬೆಚ್ಚಗಿನ ಜಾಗ ಹುಡುಕುತ್ತಾ ವಾರ್ಮಿಂಗ್‌ ಪೈಪ್‌ ಅಥವಾ ಓಲೆ ಹತ್ತಿರ ಮಲಗುತ್ತಿದ್ದವು, ತಂತ್ರಜ್ಞಾನದ ಆಗಮನದಿಂದ ಬೆಕ್ಕುಗಳು ಎಕ್ಸ್‌ಟೆನ್ಷನ್ ಬಾಕ್ಸ್‌ ಮೇಲೆ ಜಾಗ ಹುಡುಕಿಕೊಂಡಿರುವುದು ನೋಡಿದರೆ ನಿಮಗೆನು ಅನಿಸುತ್ತದೆ.

4. ಬೇಟೆಗಾರ

4. ಬೇಟೆಗಾರ

ಬೆಕ್ಕುಗಳು ಇಲಿಗಳ ಪರಮ ವೈರಿಯಾಗಿದೆ. ಇಲಿಗಳನ್ನು ಬೇಟೆಯಾಡುವುದೇ ಬೆಕ್ಕಿನ ಕಾಯಕ. ತಂತ್ರಜ್ಞಾನ ಬದಲಾದಂತೆ ಬೆಕ್ಕು ಕಂಪ್ಯೂಟರ್‌ ಮೌಸ್‌ನ್ನು ಬೇಟೆಯಾಡುವಂತಾಗಿದೆ. ಏಕೆಂದರೆ, ಇಲಿಗಳು ಬೆಕ್ಕುಗಳ ಕಣ್ಣಿಗೆ ಬೀಳಲ್ಲ ನೋಡಿ ಅದ್ಕೇ.

5. ಹಕ್ಕಿಗಳ ವೀಕ್ಷಣೆ

5. ಹಕ್ಕಿಗಳ ವೀಕ್ಷಣೆ

ಬೆಕ್ಕುಗಳು ಹಿಂದೆ ಎಲ್ಲಾ ಕಿಟಕಿಯಲ್ಲಿ ಪಕ್ಷಿಗಳನ್ನು ನೋಡುತ್ತಾ ಬೇಟೆಗೆ ಹೊಂಚುಹಾಕುತ್ತಿದ್ದವು. ಈಗ ನಗರಗಳಲ್ಲಿ ಆಕಾಶದಲ್ಲಿಯೇ ಹಕ್ಕಿಗಳು ಕಾಣಲ್ಲ ಇನ್ನು ಕಿಟಕಿಯಲ್ಲಿ ಬೆಕ್ಕಿಗೆ ಎಲ್ಲಿಂದ ಕಾಣುತ್ತವೆ. ಅದಕ್ಕಾಗಿ ಬೆಕ್ಕುಗಳು ಲ್ಯಾಪ್‌ಟಾಪ್‌ನಂತಹ ತಂತ್ರಜ್ಞಾನದ ಮೊರೆಹೋಗುತ್ತಿವೆ.

6. ದಾರದ ಜತೆ ಚೆಲ್ಲಾಟ

6. ದಾರದ ಜತೆ ಚೆಲ್ಲಾಟ

ಮನೆಯಲ್ಲಿ ಬೆಕ್ಕುಗಳು ದಾರದ ಜತೆ ತಮ್ಮ ಆಟವನ್ನು ಆಡುತ್ತಾ ದಾರವನ್ನೇಲ್ಲಾ ಮೈಗೆ ಸುತ್ತಿಕೊಂಡು ಬಿಡಿಸಿಕೊಳ್ಳಲು ಒಂಥರ ವಿಚಿತ್ರ ಪ್ರಯತ್ನವನ್ನು ಮಾಡುತ್ತಿದ್ದವು. ಆದರೆ, ಈಗ ಎಲ್ಲಿ ನೋಡಿದರೂ ವೈಯರ್ ಇರುತ್ತದೆ. ಬೆಕ್ಕು ಆಟ ಆಡಲೂ ಹೋದರು ದಾರದ ಅನುಭವವನ್ನು ನೀಡುವುದಿಲ್ಲ.

7. ಮೀನಿಗೆ ಗಾಳ

7. ಮೀನಿಗೆ ಗಾಳ

ಬೆಕ್ಕುಗಳಿಗೆ ನೈಜ ಮೀನುಗಳು ಕಂಡರೆ ಅವುಗಳ ಜತೆ ಆಟವಾಡುವುದು ಸಾಮಾನ್ಯ, ಜೀವಂತ ಮೀನುಗಳಿಗಿಂತ ಈಗ ಟ್ಯಾಬ್ಲೆಟ್‌ನಲ್ಲಿ ಕಾಣುವ ಮೀನುಗಳಿಗೆ ಮುಗಿ ಬೀಳುತ್ತಿವೆ.

8. ಟೆಡ್ಡಿ ಬೆರ್ ಮತ್ತು ಬೆಕ್ಕು

8. ಟೆಡ್ಡಿ ಬೆರ್ ಮತ್ತು ಬೆಕ್ಕು

ಮೊದಲೆಲ್ಲಾ ಬೆಕ್ಕುಗಳು ಟೆಡ್ಡಿ ಬೆರ್‌ ಜತೆ ಆಟವಾಡುತ್ತಿದ್ದವು, ಈಗ ಟೆಡ್ಡಿಬೆರ್ ಬಿಟ್ಟು ಬೆಕ್ಕುಗಳು ಟ್ಯಾಬ್ ಹಿಡಿದುಕೊಂಡು ತಮ್ಮ ಫೋಟೋದ ಜೊತೆಯೇ ಆಟವಾಡುತ್ತಾ ಸಾಗುತ್ತಿವೆ.

9. ಡೇಟಿಂಗ್‌

9. ಡೇಟಿಂಗ್‌

ಬೆಕ್ಕುಗಳು ಯಾವಾಗ ಡೇಟಿಂಗ್‌ ಮಾಡೋದು ಕಲಿತವು ಎಂದುಕೊಂಡಿರಾ. ಮೊದಲೇ ಹೇಳಿದಂತೆ ಬೆಕ್ಕಿನ ದೃಷ್ಟಾಂತದ ಜತೆಗೆ ಮಾನವನ ಸ್ವಭಾವದ ವಿವರಣೆ ಇದು ಎಂದು. ಮೊದಲು ಮುಖಾಮುಖಿ ಡೇಟಿಂಗ್ ಇದ್ದರೆ, ಈಗ ಆನ್‌ಲೈನ್‌ ಡೇಟಿಂಗ್‌ ಬಂದಿದೆ.

10. ಆಟ ಯಾವುದರಲ್ಲಿ ಆಡಲಿ

10. ಆಟ ಯಾವುದರಲ್ಲಿ ಆಡಲಿ

ದಾರದ ಹುಂಡೆ ಜತೆ ಆಟ ಆಡುತ್ತಿದ್ದ ಬೆಕ್ಕು, ಈಗ ಮೊಬೈಲ್‌ ಹಿಡಿದುಕೊಂಡು ಕುಳಿತಿದೆ, ಏನು ಮಾಡೋಕಾಗಲ್ಲ ತಂತ್ರಜ್ಞಾನ ಅಲ್ವಾ..

11. ಎಲ್ಲಿ ಓಡಲಿ

11. ಎಲ್ಲಿ ಓಡಲಿ

ಮೊದಲೆಲ್ಲ ಕೆಲಸದಲ್ಲಿ ವ್ಯಾಯಾಮ ಮತ್ತು ಬೇಟೆಯಾಡುವಾಗ ಓಡುತ್ತಿದ್ದ ಬೆಕ್ಕು ಇಂದು ಅದ್ಯಾವುದೋ ಅಲ್ಲಿಯೇ ತಿರುಗುವ ಯಂತ್ರದಲ್ಲಿ ಓಡ್ತಾ ಇದೆ. ಟೆಕ್ನಾಲಜಿ ಅಂದ್ರೇ ಇದೇ ಏನಪ್ಪಾ..

Best Mobiles in India

English summary
How Technology Has Changed Cats and human Lives. To know more this visit kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+