ನಿಮ್ಮ ವಾಟ್ಸ್ ಆಪ್ ನಲ್ಲಿ ಬಂದ ಮೆಸೇಜ್ ನ್ನು ನಂಬುವ ಮುನ್ನ ಈ 7 ಅಂಶಗಳನ್ನು ಗಮನದಲ್ಲಿಟ್ಟುಕೊಳ್ಳಿ

By Gizbot Bureau
|

ಸಮಾಜ ಘಾತುಕ ಶಕ್ತಿಗಳು ಸಾಮಾಜಿಕ ಜಾಲತಾಣಗಳನ್ನು ಉದಾಹರಣೆಗೆ ವಾಟ್ಸ್ ಆಪ್ ನ್ನು ಸುಳ್ಳು ಸುದ್ದಿಗಳನ್ನು ಮತ್ತು ತಪ್ಪು ಮಾಹಿತಿಗಳನ್ನು ಹರಡುವುದಕ್ಕೆ ಹೆಚ್ಚಾಗಿ ಬಳಸುತ್ತಿವೆ. ಸದ್ಯ ಎಲ್ಲರ ಮನಸ್ಸಲ್ಲೂ ನಡೆಯುತ್ತಿರುವ ಸಾಮಾನ್ಯ ಉದ್ವಗ್ನತೆ ಆಗಿರುವ ಭಾರತ-ಪಾಕಿಸ್ತಾನದ ನಡುವಿನ ಆಂತರಿಕ ಬಿಕ್ಕಟ್ಟಿನ ಬಗ್ಗೆ ಸುಳ್ಳು ಸುದ್ದಿಗಳು ಲೆಕ್ಕವಿಲ್ಲದಂತೆ ಹರಿದಾಡುತ್ತಿವೆ. ಫೇಸ್ ಬುಕ್ ಮಾಲೀಕತ್ವದ ವಾಟ್ಸ್ ಆಪ್ ಈ ಸುಳ್ಳು ಸುದ್ದಿಗಳ ಬಗ್ಗೆ ಜಾಗೃತಿ ಮೂಡಿಸುವ ಹಲವು ಕಾರ್ಯಗಳನ್ನು ಮಾಡಿದೆ ಮತ್ತು ಅದಕ್ಕಾಗಿ ಸಾಕಷ್ಟು ಕ್ರಮಗಳನ್ನು ಕೂಡ ತೆಗೆದುಕೊಂಡಿದೆ.

ವಾಟ್ಸ್ ಆಪ್ ನಲ್ಲಿ ಬರುವ ಸುದ್ದಿಗಳೆಲ್ಲವೂ ಸತ್ಯವಲ್ಲ

ವಾಟ್ಸ್ ಆಪ್ ನಲ್ಲಿ ಬಂದಿರುವ ಮೆಸೇಜ್ ಸತ್ಯವೋ, ಸುಳ್ಳೋ ಎಂಬ ಬಗ್ಗೆ ನೀವು ತಿಳಿದುಕೊಳ್ಳುವುದಕ್ಕಾಗಿ ಇಲ್ಲಿ ಕೆಲವು ಟಿಪ್ಸ್ ನೀಡಲಾಗಿದೆ. ಮುಂದೆ ಓದಿ.

ನಿಮ್ಮ ಕೋಪಗೊಳಿಸುವ ಅಥವಾ ವಿಚಿತ್ರವೆನಿಸುವ ವಾಟ್ಸ್ ಆಪ್ ಮೆಸೇಜ್ ಗಳನ್ನು ಯಾವಾಗಲೂ ಪ್ರಶ್ನಿಸಿ

ನಿಮ್ಮ ಕೋಪಗೊಳಿಸುವ ಅಥವಾ ವಿಚಿತ್ರವೆನಿಸುವ ವಾಟ್ಸ್ ಆಪ್ ಮೆಸೇಜ್ ಗಳನ್ನು ಯಾವಾಗಲೂ ಪ್ರಶ್ನಿಸಿ

ವಾಟ್ಸ್ ಆಪ್ ನಲ್ಲಿ ಬರುವ ಯಾವುದೇ ಮೆಸೇಜ್ ನಿಮ್ಮನ್ನ ಉದ್ರಿಕ್ತಗೊಳಿಸುತ್ತಿದ್ದರೆ ಅಂತಹ ಮಾಹಿತಿಯ ಬಗ್ಗೆ ಮರುಪ್ರಶ್ನೆಗಳನ್ನು ಕೇಳಿ ಮತ್ತು ನಿಮಗಾದ ಭಾವನೆ ಮತ್ತೊಬ್ಬರಿಗೆ ಆಗಬೇಕೇ ಎಂಬ ಬಗ್ಗೆ ಪ್ರಶ್ನಿಸಿಕೊಳ್ಳಿ. ಒಂದು ವೇಳೆ ಉತ್ತರ ಹೌದಾಗಿದ್ದರೆ ಮತ್ತೊಬ್ಬರಿಗೆ ಹಂಚಿಕೊಳ್ಳುವ ಮುನ್ನ ಎರಡೆರಡು ಬಾರಿ ಯೋಚಿಸಿ.

ನೀವು ರಿಸೀವ್ ಮಾಡಿದ ವಾಟ್ಸ್ ಆಪ್ ಮೆಸೇಜ್ ನಲ್ಲಿರುವ ಫಾರ್ವರ್ಡ್ ಲೇಬಲ್ ನ್ನು ಗಮನಿಸಿ

ನೀವು ರಿಸೀವ್ ಮಾಡಿದ ವಾಟ್ಸ್ ಆಪ್ ಮೆಸೇಜ್ ನಲ್ಲಿರುವ ಫಾರ್ವರ್ಡ್ ಲೇಬಲ್ ನ್ನು ಗಮನಿಸಿ

ವಾಟ್ಸ್ ಆಪ್ ನಲ್ಲಿ ಹೊಸ ಫೀಚರ್ ಬಿಡುಗಡೆಗೊಂಡಿದ್ದು ಅದು ಬಳಕೆದಾರರಿಗೆ ಫಾರ್ವರ್ಡ್ ಮೆಸೇಜ್ ಗಳ ಬಗ್ಗೆ ಜಾಗೃತಿ ಮೂಡಿಸುತ್ತದೆ. ಇದೀಗ ವಾಟ್ಸ್ ಆಪ್ ನಲ್ಲಿ ಎಲ್ಲಾ ಫಾರ್ವರ್ಡ್ ಮೇಸೇಜ್ ಗಳು ಕೂಡ ಲೇಬಲ್ ನಲ್ಲಿ ಇರುತ್ತದೆ.

ನಂಬಲು ಅಸಾಧ್ಯವಾಗಿರುವ ಮಾಹಿತಿಯ ಬಗ್ಗೆ ಎರಡೆರಡು ಬಾರಿ ಪರೀಕ್ಷಿಸಿ ನಾವು ಯಾವಾಗಲೂ ವಾಟ್ಸ್ ಆಪ್ ನಲ್ಲಿ ಸ್ಟೋರಿಗಳನ್ನು ರಿಸೀವ್ ಮಾಡುತ್ತಿರುತ್ತೇವೆ ಮತ್ತು ಕೆಲವು ನಂಬಲು ಕಠಿಣವೆನಿಸುವಂತಿರುತ್ತದೆ. ಕಣ್ಣು ಮುಚ್ಚಿಕೊಂಡು ಯಾವುದೇ ಮಾಹಿತಿಯನ್ನು ನಂಬುವ ಬದಲು ಅದರ ಬಗ್ಗೆ ಪರೀಕ್ಷೆ ನಡೆಸುವುದು ಸೂಕ್ತ. ಕೆಲವು ಮಾಹಿತಿಗಳು ಸುಳ್ಳು ಸುದ್ದಿಗಳಾಗಿರುವ ಸಾಧ್ಯತೆಗಳಿರುತ್ತದೆ.

ವಿಭಿನ್ನವಾಗಿರುವ ವಾಟ್ಸ್ ಆಪ್ ಮೆಸೇಜ್ ನ್ನು ಗಮನಿಸಿ

ವಿಭಿನ್ನವಾಗಿರುವ ವಾಟ್ಸ್ ಆಪ್ ಮೆಸೇಜ್ ನ್ನು ಗಮನಿಸಿ

ಕೆಟ್ಟ ವ್ಯಾಕರಟ ಮತ್ತು ಸ್ಪೆಲ್ಲಿಂಗ್ ಮಿಸ್ಟೇಕ್ ಗಳು ಹೆಚ್ಚಾಗಿ ಫೇಕ್ ನ್ಯೂಸ್ ಗಳಲ್ಲಿ ಇರುತ್ತದೆ. ನೀವು ಪಡೆದ ಮಾಹಿತಿಯಲ್ಲಿ ಇಂತಹ ಅಕ್ಷರಗಳು ಮತ್ತು ತಪ್ಪುಗಳು ಇವೆಯೇ ಎಂಬ ಬಗ್ಗೆ ಗಮನಿಸಿ.

ಫೋಟೋ/ವೀಡಿಯೋಗಳನ್ನು ಸೂಕ್ಷ್ಮವಾಗಿ ಗಮನಿಸಿ

ಫೋಟೋ/ವೀಡಿಯೋಗಳನ್ನು ಸೂಕ್ಷ್ಮವಾಗಿ ಗಮನಿಸಿ

ಟೆಕ್ಸ್ಟ್ ಮೆಸೇಜ್ ಗಳನ್ನು ನೋಡಿದಂತೆಯೇ ಫೋಟೋ ಮತ್ತು ವೀಡಿಯೋಗಳನ್ನು ಕೂಡ ಸೂಕ್ಷ್ಮವಾಗಿ ಗಮನಿಸಿ. ಇವೆರಡನ್ನೂ ಕೂಡ ಸುಲಭದಲ್ಲಿ ಎಡಿಟ್/ಫೋಟೋಶಾಪ್ ಮಾಡಿ ಓದುಗರನ್ನು ಹಾದಿತಪ್ಪಿಸುವ ಕೆಲಸವನ್ನು ಮಾಡಬಹುದು. ಕೆಲವೊಮ್ಮೆ ಫೋಟೋ ನಿಜವಾಗಿದ್ದು ಅದರ ಸುತ್ತ ಹೆಣೆದಿರುವ ಕಥೆ ಸುಳ್ಳಾಗಿರುತ್ತದೆ. ಹಾಗಾಗಿ ಯಾವುದೇ ಇಂತಹ ಫೋಟೋಗಳ ಬಗ್ಗೆ ಆನ್ ಲೈನ್ ನಲ್ಲಿ ಪರೀಕ್ಷೆ ಮಾಡಿನೋಡಿ. ಅನುಮಾನವಿರುವ ಸುದ್ದಿಗಳನ್ನು ಹಂಚಬೇಡಿ.

ವಾಟ್ಸ್ ಆಪ್ ನಲ್ಲಿ ಹಂಚಿರುವ ಲಿಂಕ್ ಗಳನ್ನು ಸೂಕ್ಷ್ಮವಾಗಿ ಗಮನಿಸಿ

ವಾಟ್ಸ್ ಆಪ್ ನಲ್ಲಿ ಹಂಚಿರುವ ಲಿಂಕ್ ಗಳನ್ನು ಸೂಕ್ಷ್ಮವಾಗಿ ಗಮನಿಸಿ

ವಾಟ್ಸ್ ಆಪ್ ನಲ್ಲಿ ಹಂಚಿಕೆಯಾಗುವ ಲಿಂಕ್ ಗಳಿಗೆ ಯಾವಾಗಲೂ ಮರುಳಾಗಬೇಡಿ. ನೀವು ಪರಿಚಿತವಿರುವ ವೆಬ್ ಸೈಟ್ ನದ್ದೇ ಎಂದೆನಿಸಿದರೂ ಕೂಡ ಅದು ಫೇಕ್ ವೆಬ್ ಸೈಟ್ ಗಳ ಲಿಂಕ್ ಆಗಿರುವ ಸಾಧ್ಯತೆ ಇರುತ್ತದೆ. ಇಲ್ಲೂ ಕೂಡ ಗ್ರಾಮರ್ ಮಿಸ್ಟೇರ್ ಗಳನ್ನು ಸರಿಯಾಗಿ ಗಮನಿಸಿಕೊಳ್ಳಿ.

ಅಧಿಕೃತ ಸ್ಟೇಟ್ ಮೆಂಟ್ ಮತ್ತು ಇತರೆ ಮಾಹಿತಿ ಮೂಲಗಳನ್ನು ಪರೀಕ್ಷಿಸಿ ವಾಟ್ಸ್ ಆಪ್ ನಲ್ಲಿ ಬಂದಿರುವ ಯಾವುದೇ ಸ್ಟೋರಿಯ ಬಗ್ಗೆ ಕ್ರಮ ತೆಗೆದುಕೊಳ್ಳುವ ಅಥವಾ ನಂಬುವ ಮುನ್ನ ಇತರೆ ನ್ಯೂಸ್ ವೆಬ್ ಸೈಟ್ ಗಳಲ್ಲಿ ಮತ್ತು ಹಲವು ವಿಭಿನ್ನ ತಾಣಗಳಲ್ಲಿ ಸ್ಟೋರಿಯನ್ನು ಪರೀಕ್ಷಿಸಿ. ಕೆಲವು ಸತ್ಯಕ್ಕೆ ದೂರವಾಗಿರುವ ಸುದ್ದಿಗಳಾಗಿರುವ ಸಾಧ್ಯತೆ ಇದೆ.

ಬೇರೆ ಸುದ್ದಿ ಮೂಲಗಳನ್ನು ಪರೀಕ್ಷಿಸಿ

ಬೇರೆ ಸುದ್ದಿ ಮೂಲಗಳನ್ನು ಪರೀಕ್ಷಿಸಿ

ವಾಟ್ಸ್ ಆಪ್ ನಲ್ಲಿ ಹಂಚಿಕೆಯಾಗಿರುವ ಯಾವುದೇ ಸುದ್ದಿಯನ್ನು ಮತ್ತೊಬ್ಬರಿಗೆ ಕಣ್ಣು ಮುಚ್ಚಿಕೊಂಡು ಫಾರ್ವರ್ಡ್ ಮಾಡುವ ಮುನ್ನ ಇತರೆ ವೆಬ್ ಸೈಟ್ ಮತ್ತು ಆಪ್ ಗಳಲ್ಲಿ ಪರೀಕ್ಷೆ ಮಾಡಿ ನೋಡಿ. ಈ ರೀತಿಯ ಪರೀಕ್ಷೆಗಾಗಿ ಹಲವು ಸುದ್ದಿ ಮೂಲಗಳು ನಿಮಗೆ ಲಭ್ಯವಾಗುತ್ತದೆ ಎಂಬುದನ್ನು ಮರೆಯಬೇಡಿ.

Best Mobiles in India

Read more about:
English summary
India-Pakistan tension: Check these 7 things before believing the WhatsApp messages you get

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X