ಟಿಕ್‌ಟಾಕ್‌ನಿಂದ ಮಾಹಿತಿ ಕೇಳುವುದರಲ್ಲಿ ಭಾರತವೇ ಫಸ್ಟ್..!

By Gizbot Bureau
|

ಟಿಕ್‌ಟಾಕ್‌ ಬಗ್ಗೆ ನಮಗೆ ನಿಮಗೆಲ್ಲಾ ಗೊತ್ತೆ ಇದೆ. ಹಾಡು, ಸಂಗೀತ, ಡೈಲಾಗ್‌ಗಳಿಗೆ ಲಿಪ್‌ ಸಿಂಕ್‌ ಜೊತೆಗೆ ಒಂದಿಷ್ಟು ನಟನೆ ಹಾಗೂ ಕಿರು ವಿಡಿಯೋಗಳ ತಯಾರಿಕಾ ವೇದಿಕೆ. ಈ ಪ್ಲಾಟ್‌ಫಾರ್ಮ್‌ನಿಂದ ಜನ ಭಾರೀ ಮನರಂಜನೆ ಪಡೆಯುತ್ತಿರುವುದಂತೂ ಖಂಡಿತ. ಆದರೆ, ಈ ಸುದ್ದಿ ಮನರಂಜನೆಗೆ ಸಂಬಂಧಿಸಿದ್ದಲ್ಲ, ಬದಲಾಗಿ ಚೀನಾದ ಟಿಕ್‌ಟಾಕ್‌ ಕಂಪನಿಗೆ ಒಂದಿಷ್ಟು ಅಕೌಂಟ್‌ಗಳ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಭಾರತ ಸರ್ಕಾರ ಬರೋಬ್ಬರಿ 118 ಮನವಿಗಳನ್ನು ಸಲ್ಲಿಸಿದೆ.

ಚೀನಾದಿಂದ ಒಂದು ಮನವಿಯಿಲ್ಲ

ಚೀನಾದಿಂದ ಒಂದು ಮನವಿಯಿಲ್ಲ

ಆದರೆ, ಕುತೂಹಲಕಾರಿ ಅಂಶ ಏನು ಎಂದರೆ, ಚೀನಾ ಒಂದೇ ಒಂದು ಮನವಿಯನ್ನು ಕೂಡ ಟಿಕ್‌ಟಾಕ್‌ಗೆ ಸಲ್ಲಿಸಿಲ್ಲ. ಟಿಕ್‌ಟಾಕ್‌ ತವರು ಚೀನಾದಲ್ಲಿ ಡೊಯಿನ್‌ ಎಂಬ ಹೆಸರಿನಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಕಟ್ಟುನಿಟ್ಟಿನ ನಿಯಂತ್ರಣವನ್ನು ಹೊಂದಿದೆ.

107 ಕಾನೂನಾತ್ಮಕ ಮನವಿ

107 ಕಾನೂನಾತ್ಮಕ ಮನವಿ

107 ಕಾನೂನಾತ್ಮಕ ಮನವಿಗಳಲ್ಲಿ, ಭಾರತ ಸರ್ಕಾರ 11 ಖಾತೆಗಳ ಬಗ್ಗೆ ಮಾಹಿತಿಯನ್ನು ಕೇಳಿದೆ ಮತ್ತು ಸ್ಥಳೀಯ ಕಾನೂನುಗಳನ್ನು ಉಲ್ಲಂಘಿಸಿರುವ ವಿಷಯಗಳನ್ನು ಡಿಲೀಟ್‌ ಮಾಡುವಂತೆ ಅಥವಾ ಅಂತಹ ಖಾತೆಗಳ ವಿವರಗಳನ್ನು ನೀಡುವಂತೆ ಮನವಿ ಮಾಡಿದೆ ಎಂದು ಟಿಕ್‌ಟಾಕ್‌ ತನ್ನ ಮೊದಲ ಪಾರದರ್ಶಕ ವರದಿಯಲ್ಲಿ ಹೇಳಿದೆ.

ಶೇ.47ರಷ್ಟು ಪ್ರಕರಣ ಇತ್ಯರ್ಥ

ಶೇ.47ರಷ್ಟು ಪ್ರಕರಣ ಇತ್ಯರ್ಥ

ಭಾರತದಲ್ಲಿ ಸುಮಾರು 200 ಮಿಲಿಯನ್‌ ಬಳಕೆದಾರರು ಟಿಕ್‌ಟಾಕ್‌ ಬಳಸುತ್ತಿದ್ದು, 107 ಕಾನೂನಾತ್ಮಕ ಮನವಿಯನ್ನು ಭಾರತ ಮಾಡಿದೆ. ಅದರಲ್ಲಿ ಶೇ.47ರಷ್ಟು ಪ್ರಕರಣಗಳನ್ನು ಇತ್ಯರ್ಥಪಡಿಸಿದ್ದು, 8 ಖಾತೆಗೆಳನ್ನು ರಿಮೂವ್‌ ಮಾಡಲಾಗಿದೆ.

ಅಮೆರಿಕ ಸೆಕೆಂಡ್‌

ಅಮೆರಿಕ ಸೆಕೆಂಡ್‌

ಭಾರತದ ನಂತರ ಹೆಚ್ಚಿನ ಮನವಿಗಳನ್ನು ಅಮೆರಿಕ ಸಲ್ಲಿಸಿದೆ. 255 ಖಾತೆಗಳಿಗೆ ಸಂಬಂಧಿಸಿದಂತೆ 79 ಮನವಿಗಳನ್ನು ಯುಎಸ್‌ ಸಲ್ಲಿಸಿದ್ದು, ಶೇ.86ರಷ್ಟು ಮಾಹಿತಿಯನ್ನು ಪಡೆದಿದೆ. ಇನ್ನು, ತೃತೀಯ ಸ್ಥಾನದಲ್ಲಿ ಜಪಾನ್‌ ಇದ್ದು, 39 ಖಾತೆಗಳಿಗೆ ಸಂಬಂಧಿಸಿದಂತೆ 35 ಮನವಿಗಳನ್ನು ಸಲ್ಲಿಸಿದೆ. ಟಿಕ್‌ಟಾಕ್‌ ಜಾಗತಿಕವಾಗಿ 1.5 ಬಿಲಿಯನ್‌ ಡೌನ್‌ಲೋಡ್‌ಗಳನ್ನು ಕಂಡಿದೆ. ಯುಎಸ್‌ನಲ್ಲಿ 37.6 ಮಿಲಿಯನ್‌ ಆಪ್‌ ಡೌನ್‌ಲೋಡ್‌ ಆಗಿದ್ದು, ಭಾರತ ಮತ್ತು ಚೀನಾದ ನಂತರ ಮೂರನೇ ಸ್ಥಾನದಲ್ಲಿದೆ.

ಕಾನೂನು, ಗೌಪ್ಯತೆ

ಕಾನೂನು, ಗೌಪ್ಯತೆ

ಕಾನೂನು, ಬಳಕೆದಾರರ ಗೌಪ್ಯತೆ ಹಾಗೂ ನಮ್ಮ ಜವಾಬ್ದಾರಿಗಳನ್ನು ಗಮನದಲ್ಲಿಟ್ಟುಕೊಂಡು, ಕೇವಲ ಕಾನೂನಾತ್ಮಕ ಮನವಿಗಳಿಗೆ ಮಾತ್ರ ಪ್ರತಿಕ್ರಿಯಿಸಲಾಗಿದ್ದು, ಅಗತ್ಯ ಮಾಹಿತಿಯನ್ನು ಮಾತ್ರ ಹಂಚಿಕೊಳ್ಳಲಾಗಿದೆ ಎಂದು ಟಿಕ್‌ಟಾಕ್‌ನ ಸಾರ್ವಜನಿಕ ನೀತಿ ಮುಖ್ಯಸ್ಥ ಎರಿಕ್‌ ಎಬೆನ್ಸ್‌ಟೆನ್‌ ಹೇಳಿದ್ದಾರೆ.

ಅಮೆರಿಕ ಸೇನೆಯಿಂದ ನಿಷೇಧ

ಅಮೆರಿಕ ಸೇನೆಯಿಂದ ನಿಷೇಧ

ಪಾರದರ್ಶಕ ವರದಿಯು ಬೀಜಿಂಗ್‌ ಆಧಾರಿತ ಬೈಟ್‌ಡ್ಯಾನ್ಸ್‌ ಕಂಪನಿಯ ಆಪ್‌ನ್ನು ಯುಎಸ್‌ ಭೂಸೇನೆ ಮತ್ತು ನೌಕಾಪಡೆಯಲ್ಲಿ ನಿಷೇಧಿಸಿರುವ ಕುರಿತು ಸಹ ಉಲ್ಲೇಖಿಸಿದೆ.

ಚೀನಾ ಸರ್ಕಾರ ಬಳಕೆದಾರರ ಮಾಹಿತಿಯನ್ನು ಸಂಗ್ರಹಿಸಿ ಅಥವಾ ಹಂಚಿಕೊಂಡ ಅಂಶಗಳನ್ನು ನಿಯಂತ್ರಿಸುತ್ತದೆ ಎಂಬ ಕಾರಣಕ್ಕಾಗಿ ಬೈಟ್‌ಡ್ಯಾನ್ಸ್‌ ಮೇಲೆ ತನಿಖೆ ನಡೆಸುವಂತೆ ಅಮೆರಿಕ ಸರ್ಕಾರ ಬೇಡಿಕೆ ಇಟ್ಟಿದ್ದರು. ಅದರಂತೆ ಬೈಟ್‌ಡ್ಯಾನ್ಸ್‌ ಮೇಲೆ ಅಮೆರಿಕದಲ್ಲಿ ವಿದೇಶಿ ಹೂಡಿಕೆಯ ಸಮಿತಿ (ಸಿಎಫ್‌ಐಯುಎಸ್‌) ಕಣ್ಣಿಟ್ಟಿತ್ತು. ಇನ್ನು, ಕಳೆದ ನವೆಂಬರ್‌ನಲ್ಲಿ ಯುಎಸ್‌ ಆಪಲ್‌ ಆಪ್‌ ಸ್ಟೋರ್‌ನಲ್ಲಿ ಮೊದಲ ಸ್ಥಾನ ಪಡೆದ ಮೊದಲ ಚೀನಾ ಆಪ್‌ ಆಗಿ ಟಿಕ್‌ಟಾಕ್‌ ಹೊರಹೊಮ್ಮಿದೆ.

Best Mobiles in India

Read more about:
English summary
Indian Govt Tops To Seek Information From TikTok

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X