ಸ್ಟೊರೀಸ್ ಗೆ ಮೂರು ಹೊಸ ಫೀಚರ್ ನ್ನು ಸೇರಿಸಿದ ಇನ್ಸ್ಟಾಗ್ರಾಂ

|

ಫೋಟೋ ಶೇರಿಂಗ್ ಫ್ಲ್ಯಾಟ್ ಫಾರ್ಮ್ ಆಗಿರುವ ಇನ್ಸ್ಟಾಗ್ರಾಂ ಹೊಸದಾಗಿ ಕೆಲವು ಫೀಚರ್ ಗಳನ್ನು ಪ್ರಕಟಿಸಿದೆ. ಇದು ನೀವು ಈ ಫ್ಲ್ಯಾಟ್ ಫಾರ್ಮ್ ನಲ್ಲಿ ಜನರ ಜೊತೆಗೆ ಸಂವಹನ ನಡೆಸುವ ರೀತಿಯನ್ನೇ ಬದಲಾಯಿಸುತ್ತದೆ ಎಂದು ಅಭಿಪ್ರಾಯಪಡಲಾಗುತ್ತಿದೆ.ಹಾಗಾದ್ರೆ ಆ ಮೂರು ಫೀಚರ್ ಗಳು ಯಾವುದು?ಅವು ಹೇಗೆ ಕೆಲಸ ಮಾಡುತ್ತದೆ ಎಂಬ ಬಗೆಗಿನ ವಿವರ ಇಲ್ಲಿದೆ.

ಫೀಚರ್ 1:

ಫೀಚರ್ 1:

ಸ್ಟೊರೀಸ್ ನಲ್ಲಿ ಮ್ಯೂಸಿಕ್ ನ ಶಿಫಾರಸುಗಳಿರುವಲ್ಲಿ ಇದೀಗ ಬಳಕೆದಾರರು ಪ್ರಶ್ನೆಗಳ ಸ್ಟಿಕ್ಕರ್ ಬಳಸುವುದಕ್ಕೆ ಅವಕಾಶವಿದೆ.ನಿಮ್ಮನ್ನು ಫಾಲೋ ಮಾಡುವವರು ಮ್ಯೂಸಿಕ್ ಲೈಬ್ರರಿ ಮೂಲಕ ನಿಮ್ಮ ಪ್ರಶ್ನೆಗಳಿಗೆ ಹಾಡುಗಳ ಮೂಲಕ ಉತ್ತರ ನೀಡಬಹುದು. ಈ ಪ್ರತ್ಯುತ್ತರಗಳು ನಿಮ್ಮ ಸ್ಟೋರಿಯನ್ನು ನೋಡಿದ ಜನರ ಪಟ್ಟಿ ಇರುವ ಬಲಭಾಗದ ಮೇಲ್ಬದಿಯಲ್ಲಿ ಇರುತ್ತದೆ ಮತ್ತು ನೀವು ಕೇವಲ ಟ್ಯಾಪ್ ಮಾಡಿ ಟ್ರ್ಯಾಕ್ ನ್ನು ಕೇಳಿಸಿಕೊಳ್ಳಬಹುದು.

ನೀವು ಅವರ ಪ್ರತ್ಯುತ್ತರವನ್ನು ಇನ್ಸ್ಟಾಗ್ರಾಂ ಸ್ಟೋರೀಸ್ ನಲ್ಲಿ ಹಂಚಿಕೊಳ್ಳುವುದಕ್ಕೂ ಕೂಡ ಅವಕಾಶವಿರುತ್ತದೆ. ಮ್ಯೂಸಿಕ್ ಪ್ಲೇ ಆಗುತ್ತಿರುವ ಬ್ಯಾಕ್ ಗ್ರೌಂಡ್ ಬಳಸಿ ಫೋಟೋ ಅಥವಾ ವೀಡಿಯೋ ಕ್ಯಾಪ್ಚರ್ ಮಾಡುವುದಕ್ಕೂ ಕೂಡ ಸಾಧ್ಯವಿದೆ.

ಇಂದಿನಿಂದಲೇ ಲಭ್ಯ:

ಇನ್ಸ್ಟಾಗ್ರಾಂ ತಿಳಿಸುವಂತೆ ಹೊಸ ಮ್ಯೂಸಿಕ್ ಫೀಚರ್ ಐಓಎಸ್ ಮತ್ತು ಆಂಡ್ರಾಯ್ಡ್ ನ ನೂತನ ಇನ್ಸ್ಟಾಗ್ರಾಂ ವರ್ಷನ್ ನಲ್ಲಿ ಯಾವೆಲ್ಲ ಪ್ರದೇಶದಲ್ಲಿ ಮ್ಯೂಸಿಕ್ ಲೈಬ್ರರಿ ಈಗಾಗಲೇ ಲಭ್ಯವಿದೆಯೋ ಆ ಎಲ್ಲಾ ಪ್ರದೇಶದಲ್ಲಿ ಇಂದಿನಿಂದಲೇ ಲಭ್ಯವಿರುತ್ತದೆ.

ಫೀಚರ್ 2:

ಫೀಚರ್ 2:

ಎರಡನೇಯದಾಗಿ ಲೈವ್ ನಲ್ಲಿ ಪ್ರಶ್ನಾತ್ಮಕ ಸ್ಟಿಕ್ಕರ್ (question sticker )ನ್ನು ಬಳಕೆದಾರರಿಗೆ ಬಳಸಲು ಅವಕಾಶ ಸಿಗುತ್ತಿದೆ. ಇದನ್ನು ಮಾಡಲು ಮೊದಲು ನೀವು ಯಾರದ್ದಾದರೂ ಸ್ಟೋರಿಗೆ ತೆರಳಬೇಕು ಮತ್ತು ನಾವು ಸಾಮಾನ್ಯವಾಗಿ ಮಾಡುವಂತೆ ಅವರ ಪ್ರಶ್ನಾರ್ತಕ ಸ್ಟಿಕ್ಕರ್ ಗೆ ಪ್ರತಿಕ್ರಿಯೆ ನೀಡಬೇಕು. ಒಂದು ವೇಳೆ ಆ ಬಳಕೆದಾರರು ಉತ್ತರಿಸಲು ಲೈವ್ ಆದಲ್ಲಿ ನೀವು ನಿಮ್ಮ ಸ್ಟೋರೀಸ್ ಟ್ರೇ ನಲ್ಲಿ "Q&A" ನ್ನು ನೋಡುತ್ತೀರಿ.ನಂತರ ನೀವು ಲೈವ್ ವೀಡಿಯೋಗೆ ಜಾಯಿನ್ ಆಗಬೇಕು ಮತ್ತು ನಿಮ್ಮ ಪ್ರಶ್ನೆಗೆ ಅವರು ಉತ್ತರಿಸುವುದನ್ನು ನೀವು ಕಾಣಬಹುದು. ಒಂದು ವೇಳೆ ನೀವು ಮತ್ತಷ್ಟು ಪ್ರಶ್ನೆಗಳನ್ನು ಕೇಳಲು ಇಚ್ಛಿಸಿದರೆ ಮರಳಿ ಅವರ ಸ್ಟೋರಿಗೆ ತೆರಳಿ ಮತ್ತು ಪ್ರಶ್ನೆಗಳನ್ನು ಕೇಳಿ. ಅದು ಅವರ ಪ್ರಶ್ನೆಗಳ ಪಟ್ಟಿಯಲ್ಲಿ ಕಾಣಿಸುತ್ತದೆ.ಯಾರು ಲೈವ್ ನಲ್ಲಿ ಇರುತ್ತಾರೋ ಅವರಿಗೆ ಫೋಟೋ, ವೀಡಿಯೋ ಮತ್ತು ಲೈವ್ ವೀಡಿಯೋಗೆ ಕ್ಯಾಮರಾ ರೋಲ್ ಆಯ್ಕೆಗಳು ಕೂಡ ಇರುತ್ತದೆ.

ಇಂದಿನಿಂದಲೇ ಲಭ್ಯ:

ಇನ್ಸ್ಟಾಗ್ರಾಂ ತಿಳಿಸುವಂತೆ ಲೈವ್ ನಲ್ಲಿ ಪ್ರಶ್ನೆಗಳು (Questions in Live) ವೈಶಿಷ್ಟ್ಯತೆಯು ಐಓಎಸ್ ಮತ್ತು ಆಂಡ್ರಾಯ್ಡ್ ನ ನೂತನ ಇನ್ಸ್ಟಾಗ್ರಾಂ ವರ್ಷನ್ ನಲ್ಲಿ ಇಂದಿನಿಂದ ಲಭ್ಯವಾಗುತ್ತದೆ. ಇದುವರೆಗೂ ಐಓಎಸ್ ಬಳಕೆದಾರರು ಫೋಟೋ ಶೇರಿಂಗ್ ಮತ್ತು ಲೈವ್ ವೀಡಿಯೋ ಮಾಡಲು ಅವಕಾಶವಿತ್ತು. ಇದೀಗ ಆಂಡ್ರಾಯ್ಡ್ ಮತ್ತು ಐಓಎಸ್ ಎರಡೂ ಬಳಕೆದಾರರರಿಗೂ ಅವಕಾಶವಿರುತ್ತದೆ.

ಫೀಚರ್ 3:

ಫೀಚರ್ 3:

ಕೊನೆಯದಾಗಿ ಇನ್ಸ್ಟಾಗ್ರಾಂ ನ ಇನ್ಸ್ಟಾಗ್ರಾಂ ಸ್ಟೋರೀಸ್ ನಲ್ಲಿ ಇಂಟರ್ಯಾಕ್ಟೀವ್ ಕೌಂಟ್ ಡೌನ್ ಸ್ಟಿಕ್ಕರ್ ಫೀಚರ್ ಬಿಡುಗಡೊಗೊಂಡಿದೆ. ಇದು ಸ್ಟಿಕ್ಕರ್ ಟ್ರೇನಲ್ಲಿ ಲಭ್ಯವಿದೆ. ನೀವು ಕೌಂಟ್ ಡೌನ್ ಗೆ ಹೆಸರನ್ನು ಸೇರಿಸಬಹುದು. ನಿಮ್ಮ ಸ್ಟೋರಿಯನ್ನು ಶೇರ್ ಮಾಡುವ ಮುನ್ನ ಕಸ್ಟಮೈಜ್ ಮಾಡಲು ಅವಕಾಶವಿರುತ್ತದೆ. ಕೌಂಟ್ ಡೌನ್ ಮುಗಿಯುವವರಗೆ ಇದು ನಿಮ್ಮ ಸ್ಟಿಕ್ಕರ್ ಟ್ರೇನಲ್ಲೇ ಇರುತ್ತದೆ ಮತ್ತು ಹೊಸಸ್ಟೋರಿಯಲ್ಲಿ ಮರುಬಳಕೆ ಮಾಡಲು ಅವಕಾಶ ನೀಡುತ್ತದೆ.

ಲಭ್ಯತೆ:

ನಿಮ್ಮ ಫಾಲೋವರ್ಸ್ ನಿಮ್ಮ ಕೌಂಟ್ ಡೌನ್ ಮೇಲೆ ಟ್ಯಾಪ್ ಮಾಡಬಹುದು ಮತ್ತು ಅದನ್ನು ಫಾಲೋ ಮಾಡಬಹುದು ಜೊತೆಗೆ ತಮ್ಮ ಸ್ವಂತ ಸ್ಟೋರಿಯಲ್ಲಿ ಶೇರ್ ಮಾಡಬಹುದು. ಕೌಂಟ್ ಡೌನ್ ಮುಗಿದ ನಂತರ ನೀವು ಮತ್ತು ನಿಮ್ಮ ಕೌಂಟ್ ಡೌನ್ ನ್ನು ಸ್ಟಾರ್ಟ್ ಮಾಡಿದ ಎಲ್ಲರಿಗೂ ಕೂಡ ನೋಟಿಫಿಕೇಷನ್ ಸಿಗುತ್ತದೆ. ಈ ಫೀಚರ್ ಕೂಡ ಇವತ್ತಿನಿಂದಲೇ ವಿಶ್ವದಾದ್ಯಂತ ಐಓಎಸ್ ಮತ್ತು ಆಂಡ್ರಾಯ್ಡ್ ಎರಡರಲ್ಲೂ ಕೂಡ ಬಿಡುಗಡೆಗೊಳ್ಳುತ್ತಿದೆ.

Best Mobiles in India

Read more about:
English summary
Instagram adds three new features to Stories

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X