ಲ್ಯಾಪ್ ಟಾಪ್ ಬಳಸಿ ಇನ್ಸ್ಟಾಗ್ರಾಂ ಪಿಕ್ಚರ್ ಪೋಸ್ಟ್ ಮಾಡುವುದು ಹೇಗೆ?
ಸುಮಾರು 400 ಮಿಲಿಯನ್ ಆಕ್ಟೀವ್ ಬಳಕೆದಾರರು ಪ್ರತಿದಿನ ಇರುವ ಫೇಸ್ ಬುಕ್ ಮಾಲೀಕತ್ವದ ಫೋಟೋ ಮತ್ತು ವೀಡಿಯೋ ಶೇರಿಂಗ್ ಫ್ಲಾಟ್ ಫಾರ್ಮ್ ಆಗಿರುವ ಇನ್ಸ್ಟಾಗ್ರಾಂ ವಿಶ್ವದ ಅತ್ಯಂತ ಹೆಚ್ಚು ಬಳಕೆದಾರರನ್ನು ಹೊಂದಿರುವ ಒಂದು ಫ್ಲಾಟ್ ಫಾರ್ಮ್ ಆಗಿದೆ. ಸ್ಮಾರ್ಟ್ ಫೋನ್ ನಲ್ಲಿರುವ ಇನ್ಸ್ಟಾಗ್ರಾಂ ಆಪ್ ಕೆಲವು ಅಧ್ಬುತ ಫೀಚರ್ ಗಳನ್ನು ಒಳಗೊಂಡಿದೆ. ಉದಾಹರಣೆಗೆ ಇಮೇಜ್ ಗಳು, ವೀಡಿಯೋಗಳು, ಸ್ಟೋರಿಗಳು ಮತ್ತು ಇತ್ಯಾದಿಗಳನ್ನು ಹಂಚಿಕೊಳ್ಳುವುದಕ್ಕೆ ಅವಕಾಶ ನೀಡುತ್ತದೆ. ಆದರೆ ಈ ಫ್ಲಾಟ್ ಫಾರ್ಮ್ ನ ವೆಬ್ ವರ್ಷನ್ ನಲ್ಲಿ ಕೆಲವು ವೈಶಿಷ್ಟ್ಯತೆಗಳು ಮತ್ತು ವಿಶೇಷತೆಗಳು ಲಿಮಿಟೆಡ್ ಆಗಿದೆ ಎಂಬುದು ಗಮನಾರ್ಹ ಸಂಗತಿ.

ಇದರ ಡೆಸ್ಕ್ ಟಾಪ್ ವರ್ಷನ್ ಬಳಕೆದಾರರಿಗೆ ಇತರರು ಹಂಚಿಕೊಂಡ ಪೋಸ್ಟ್ ನ್ನು ನೋಡಲು ಜೊತೆಗೆ ಕೆಲವು ವೈಶಿಷ್ಟ್ಯತೆಗಳು ಡಿಲೀಟಿಂಗ್, ಡಿಸೇಬಲಿಂಗ್ ಮತ್ತು ಅಕೌಂಟಿನಿಂದ ಇನ್ಸ್ಟಾಗ್ರಾಂ ಡಾಟಾ ಡೌನ್ ಲೋಡ್ ಮಾಡುವ ಅವಕಾಶವನ್ನು ಮಾತ್ರ ಕಲ್ಪಿಸುತ್ತದೆ.
ಕೆಲವರು ಇನ್ಸ್ಟಾಗ್ರಾಂ ನಲ್ಲಿ ಪಿಸಿಯಿಂದ ಇಮೇಜ್ ಗಳನ್ನು ಪೋಸ್ಟ್ ಮಾಡಲು ಇಚ್ಛಿಸುವುದಾದರೆ ಅದನ್ನು ಸಾಧಿಸುವುದು ಹೇಗೆ ಎಂಬುದು ತಿಳಿದಿಲ್ಲದೇ ಇರಬಹುದು. ಅದನ್ನು ಸ್ಮಾರ್ಟ್ ಫೋನ್ ಗೆ ಟ್ರಾನ್ಸ್ ಫರ್ ಮಾಡಿ ನಂತರ ಪೋಸ್ಟ್ ಮಾಡಬೇಕಾಗಿರುವ ದೊಡ್ಡ ಕೆಲಸಕ್ಕೆ ಕೈ ಹಾಕುವ ಬದಲಾಗಿ ಸುಲಭದಲ್ಲಿ ಲ್ಯಾಪ್ ಟಾಪ್ ಮೂಲಕವೇ ಅಥವಾ ಪಿಸಿಯ ಮೂಲಕವೇ ಪೋಸ್ಟ್ ಮಾಡಲು ಸಾಧ್ಯವಾಗುತ್ತದೆ. ಹೇಗೆ ಎಂಬುದು ನಿಮ್ಮ ಪ್ರಶ್ನೆಯಾಗಿದ್ದರೆ ಆ ಕೆಳಗಿನ ಲೇಖನವನ್ನು ನೀವು ಪೂರ್ತಿಯಾಗಿ ಓದಬೇಕು ಮತ್ತು ಇಲ್ಲಿ ತಿಳಿಸಿರುವ ಹಂತಗಳನ್ನು ಅನುಸರಿಸಬೇಕು.

ಅಗತ್ಯತೆಗಳು:
ಗೂಗಲ್ ಕ್ರೋಮ್ ನ ಲೇಟೆಸ್ಟ್ ವರ್ಷನ್ (Version 67) ನ್ನು ಡೌನ್ ಲೋಡ್ ಮಾಡಿ ಮತ್ತು ಇನ್ಸ್ಟಾಲ್ ಮಾಡಿ.
ಅನುಸರಿಸಬೇಕಾಗಿರುವ ಹಂತಗಳು:
ನಿಮ್ಮ ಪಿಸಿಯಲ್ಲಿ ಅಥವಾ ಮ್ಯಾಕ್ ನಲ್ಲಿ ಗೂಗಲ್ ಕ್ರೋಮ್ ನ್ನು ತೆರೆಯಿರಿ
'www.instagram.com’ ತೆರಳಿ ಮತ್ತು ನಿಮ್ಮ ಕ್ರೆಡೆನ್ಶಿಯಲ್ ಬಳಸಿ ಲಾಗಿನ್ ಆಗಿ.
ಮೇಲ್ಬಾಗದ ಬಲ ಬದಿಯಲ್ಲಿರುವ ಲಂಬವಾಗಿರುವ ಮೂರು ಚುಕ್ಕಿಗಳನ್ನು ಕ್ಲಿಕ್ಕಿಸಿ
'More tools’ ಗೆ ತೆರಳಿ ಮತ್ತು 'Developers tools’ನ್ನು ಸೆಲೆಕ್ಟ್ ಮಾಡಿ (ಇದರ ಬದಲಾಗಿ Ctrl+Shift+C ಯನ್ನು ಪ್ರೆಸ್ ಮಾಡುವುದರಿಂದ ಡೆವಲಪರ್ ಟೂಲ್ ನ್ನು ತೆರೆಯಬಹುದು)
'Developers tools’ ಪೇಜ್ ನಲ್ಲಿ 'Elements’ ಆಯ್ಕೆಯ ಎಡಭಾಗದಲ್ಲಿರುವ Mobile’ ಐಕಾನ್ ನ್ನು ಪ್ರೆಸ್ ಮಾಡಿ.

ಈಗ ವೆಬ್ ಪೇಜ್ ನ್ನು ರೀಲೋಡ್ ಮಾಡಿ
'+’ ಸೈನ್ ನ್ನು ಕ್ಲಿಕ್ಕಿಸಿ. ಅದು ಪೇಜಿನ ಕೆಳಭಾಗದ ಮಧ್ಯದಲ್ಲಿ ಇರುತ್ತದೆ.
ಲೊಕೇಷನ್ ನ್ನು ನೇವಿಗೇಟ್ ಮಾಡಿ ಮತ್ತು ನೀವು ಅಪ್ ಲೋಡ್ ಮಾಡಲು ಇಚ್ಛಿಸುವ ಇಮೇಜ್ ನ್ನು ಆಯ್ಕೆ ಮಾಡಿ.
ನಂತರ, 'Next’ ಆಯ್ಕೆಯನ್ನು ಕ್ಲಿಕ್ಕಿಸಿ.
ಈಗ ಕ್ಯಾಷ್ಶನ್ ನ್ನು ಬರೆಯಿರಿ, ಲೊಕೇಷನ್ ಸೇರಿಸಿ ಮತ್ತು ಯಾರಿಗೆಲ್ಲ ಪೋಸ್ಟ್ ಮಾಡಬೇಕು ಎಂದಿದ್ದೀರೋ ಆ ವ್ಯಕ್ತಿಗಳಿಗೆ ಟ್ಯಾಗ್ ಮಾಡಿ.
'Share’ ಬಟನ್ ನ್ನು ಕ್ಲಿಕ್ಕಿಸಿ. ಇದು ಮೇಲ್ಬಾಗದ ಬಲಬದಿಯಲ್ಲಿ ಇರುತ್ತದೆ. ಈಗ ನಿಮ್ಮ ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಅಪ್ ಲೋಡ್ ಆಗಿರುತ್ತದೆ.


Click it and Unblock the Notifications