ಇನ್ಸ್ಟಾಗ್ರಾಂನಲ್ಲಿ ಆಗಲಿದೆ ಕೆಲವು ಬದಲಾವಣೆಗಳು!

|

ಫೋಟೋ ಶೇರಿಂಗ್ ಆಪ್ ಇನ್ಸ್ಟಾಗ್ರಾಂ ಒಂದು ಬದಲಾವಣೆಯನ್ನು ಮಾಡುತ್ತಿದೆ. ನೇವಿಗೇಷನ್ ಆಯ್ಕೆ, ಬಟನ್ ಗಳು ಮತ್ತು ಐಕಾನ್ ಗಳನ್ನು ರಿಅರೆಂಜ್ ಮಾಡಲು ಇನ್ಸ್ಟಾಗ್ರಾಂ ಚಿಂತಿಸುತ್ತಿದೆ.

ಇನ್ಸ್ಟಾಗ್ರಾಂನಲ್ಲಿ ಆಗಲಿದೆ ಕೆಲವು ಬದಲಾವಣೆಗಳು!

ಬ್ಲಾಗ್ ಪೋಸ್ಟ್ ನಲ್ಲಿ ಸಂಸ್ಥೆ ತಿಳಿಸಿರುವಂತೆ ಮುಂದಿನ ಕೆಲವು ವಾರಗಳವರೆಗೆ ವಿಭಿನ್ನ ಕಾಂಬಿನೇಷನ್ ಮತ್ತು ಹಂತಗಳನ್ನು ಈ ಬದಲಾವಣೆಯ ನಿಟ್ಟಿನಲ್ಲಿ ಪರೀಕ್ಷಿಸಲಾಗುತದೆ. ನಿಮ್ಮ ಸಲಹೆಗಳ ಅನುಸಾರ ನಾವು ಮತ್ತಷ್ಟು ಉತ್ತಮ ಅನುಭವ ಮತ್ತು ಅಪ್ ಡೇಟ್ ಗಳನ್ನು ಇನ್ಸ್ಟಾಗ್ರಾಂನಲ್ಲಿ ಮಾಡುವುದಕ್ಕೆ ಸಾಧ್ಯವಾಗುತ್ತದೆ ಎಂದು ಬ್ಲಾಗ್ ನಲ್ಲಿ ತಿಳಿಸಿದೆ.

ಬ್ಲಾಗ್ ಪೋಸ್ಟ್ ನಲ್ಲಿ ಇನ್ಸ್ಟಾಗ್ರಾಂ ಮೂರು ಸ್ಕ್ರೀನ್ ಶಾಟ್ ಗಳನ್ನು ಕೂಡ ಹಂಚಿಕೊಂಡಿದ್ದು ಮುಂದಿನ ಕೆಲವು ವಾರಗಳಲ್ಲಿ ಬಳಕೆದಾರರಿಗೆ ಅನುಭವಕ್ಕೆ ಬರುವ ಬದಲಾವಣೆಗಳು ಯಾವುದು ಎಂಬ ಬಗ್ಗೆ ವಿವರಣೆ ನೀಡಿದಂತಿದೆ.

ಮೊದಲನೆಯದಾಗಿ ಪ್ರೊಫೈಲ್ ಪಿಕ್ಚರ್ ಮೇಲ್ಬಾಗದ ಎಡ ಬದಿಯಲ್ಲಿ ಇದ್ದದ್ದು ಇದೀಗ ಬಲಭಾಗಕ್ಕೆ ಬರಲಿದೆ. ಇದರಲ್ಲಿ ಮಾಹಿತಿಗಳಾದ ಪ್ರೊಫೈಲ್ ಹೆಸರು ಮತ್ತು ವಿವರಣೆ ಇರಲಿದ್ದು ಅದು ಮೇಲ್ಬಾಗದಲ್ಲಿ ಇರಲಿದೆ. ಅದರ ಕೆಲವು ಎಷ್ಟು ಜನರ ಫಾಲೋವರ್ ಗಳಿದ್ದಾರೆ ಎಂಬ ವಿವರ ಇರಲಿದೆ.

ಮುಂದಿನ ಭಾಗದಲ್ಲಿ ಬಳಕೆದಾರರು ಮೂರು ಆಯ್ಕೆಗಳ ಬದಲಾಗಿ ನಾಲ್ಕು ಆಯ್ಕೆಗಳನ್ನು ಗಮನಿಸಲಿದ್ದಾರೆ. ಪೋಸ್ಟ್ ನ ಬಲಗಡೆ ಐಜಿಟಿವಿ ಹೆಚ್ಚುವರಿಯಾಗಿ ಸೇರಿರಲಿದೆ. ಸದ್ಯ ಗ್ರಿಡ್, ಪೋಸ್ಟ್ಸ್ ಮತ್ತು ಟ್ಯಾಗ್ಡ್ ಟ್ಯಾಬ್ಸ್ ಗಳು ಸಿಂಬಲ್ ಗಳಾಗಿದ್ದವು ಆದರೆ ಇನ್ನು ಮುಂದೆ ಇವುಗಳು ಟೆಕ್ಸ್ಟ್ ಆಗಿರಲಿದೆ.

ಮತ್ತೊಂದು ಬದಲಾವಣೆ ಎಂದರೆ ಬಳಕೆದಾರರು ಫಾಲೋವರ್ಸ್ ಗಳ ಟ್ಯಾ ಗಳು ಮತ್ತು ಫಾಲೋಯಿಂಗ್ ಗಳು ಮರ್ಜ್ ಆಗಿರಲಿದೆ.ಬಳಕೆದಾರರಿಗೆ ಮ್ಯೂಚುವಲ್ ಪ್ರೊಫೈಲ್ ಗಳನ್ನು ಸೆಟ್ ಮಾಡುವುದಕ್ಕೆ ಅವಕಾಶವಿರುತ್ತದೆ.

ಬ್ಯೂಸಿನೆಸ್ ಗೆ ಸಂಬಂಧಿಸಿದ ಇನ್ಸ್ಟಾಗ್ರಾಂ ಪ್ರೊಫೈಲ್ ಗೆ ಹೆಚ್ಚು ಆಯ್ಕೆಗಳನ್ನು ನೀಡಲಾಗುತ್ತದೆ. ಪೋಸ್ಟ್ ನ ಬಲಭಾಗದಲ್ಲಿ ಬಳಕೆದಾರರಿಗೆ ಅನೇಕ ಕಮ್ಯುನಿಕೇಷನ್ ಪೋಸ್ಟ್ ಗಳು ಉದಾಹರಣೆಗೆ ಮೆಸೇಜ್,ಕಾಲ್, ಇಮೇಲ್, ಡೈರೆಕ್ಷನ್ ಮತ್ತು ಸ್ಮಾರ್ಟ್ ಆರ್ಡರ್ ಸೇರಿದಂತೆ ಇನ್ನು ಹಲವು ಆಯ್ಕೆಗಳಿರುತ್ತದೆ. ಈ ಪೋಸ್ಟ್ ನಲ್ಲಿ ನಿರ್ಧಿಷ್ಟ ಗ್ರಿಡ್ ಕೂಡ ಹೊರಹಾಕಲ್ಪಟ್ಟಿದ್ದು ಇನ್ಸ್ಟಾಗ್ರಾಂ ಇದಕ್ಕೆ ನೀಡುವ ಪ್ರಾಮುಖ್ಯತೆಯನ್ನು ಸ್ಪಷ್ಟವಾಗಿ ಸೂಚಿಸುತ್ತಿದೆ.

ಇನ್ಸ್ಟಾಗ್ರಾಂ ನ “ಯುವರ್ ಆಕ್ಟಿವಿಟಿ” ವೈಶಿಷ್ಟ್ಯತೆಯು ಆಪ್ ನಲ್ಲಿ ನೀವೆಷ್ಟು ಸಮಯ ಕಳೆದಿದ್ದೀರಿ ಎಂಬುದನ್ನು ತಿಳಿಸುತ್ತದೆ.

ಇತ್ತೀಚೆಗಷ್ಟೇ ಇನ್ಸ್ಟಾಗ್ರಾಂ ಹೊಸ ವೈಶಿಷ್ಟ್ಯತೆಯನ್ನು ಆರಂಭಿಸಿದ್ದು ಇದು ಆಪ್ ನಲ್ಲಿ ನೀವು ಎಷ್ಟು ಸಮಯ ಕಳೆದಿದ್ದೀರಿ ಎಂಬುದನ್ನು ಬಳಕೆದಾರರಿಗೆ ತಿಳಿಸುತ್ತದೆ.ಈ ವೈಶಿಷ್ಟ್ಯತೆಯ ಹೆಸರು “ಯುವರ್ ಆಕ್ಟಿವಿಟಿ”. ಪ್ರತಿದಿನ ನೀವೆಷ್ಟು ಇನ್ಸ್ಟಾಗ್ರಾಂ ಉಪಯೋಗಿಸಬೇಕು ಎಂಬುದನ್ನು ನೀವು ಸೆಟ್ ಮಾಡಿ ಇಡುವುದಕ್ಕೂ ಕೂಡ ಇದು ಅವಕಾಶ ನೀಡುತ್ತದೆ. ಪ್ರೊಫೈಲ್ ಪೇಜಿನ ಮೇಲ್ಬಾಗದ ಬದಬದಿಯಲ್ಲಿರುವ ಹ್ಯಾಮ್ ಬರ್ಗರ್ ಐಕಾನ್ ನ್ನ ಟ್ಯಾಪ್ ಮಾಡುವ ಮೂಲಕ ಈ ಹೊಸ ವೈಶಿಷ್ಟ್ಯತೆಯನ್ನು ಆಕ್ಸಿಸ್ ಮಾಡಬಹುದಾಗಿದೆ.

ಪ್ರತಿದಿನ ಇನ್ಸ್ಟಾಗ್ರಾಂನಲ್ಲಿ ಕಳೆದ ಸರಾಸರಿ ಸಮಯವನ್ನು ಈ ಫೀಚರ್ ಮೂಲಕ ಬಳಕೆದಾರರು ತಿಳಿದುಕೊಳ್ಳಬಹುದು.ಇದು ವಾರದ ಲೆಕ್ಕಾಚಾರವನ್ನು ತಿಳಿಸುತ್ತದೆ. ಇನ್ಸ್ಟಾಗ್ರಾಂ ಬಳಕೆಗೆ ಪ್ರತಿದಿನ ರಿಮೈಂಡರ್ ಇಟ್ಟುಕೊಳ್ಳುವುದಕ್ಕೆ ಬಳಕೆದಾರರಿಗೆ ಇದರಲ್ಲಿ ಅವಕಾಶವಿರುತ್ತದೆ ಮತ್ತು ಫುಶ್ ನೋಟಿಫಿಕೇಷನ್ ನ್ನು ಮ್ಯೂಟ್ ಮಾಡಿ ಇಟ್ಟುಕೊಳ್ಳುವುದಕ್ಕೂ ಸಾಧ್ಯವಿದೆ..

Best Mobiles in India

Read more about:
English summary
Instagram is set to get a makeover. Here's all that's new

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X