Home
Social media

ಕಂಟೆಂಟ್ ರೀಚ್ ಹೆಚ್ಚಿಸಲು ಇನ್‌ಸ್ಟಾಗ್ರಾಂ ತಂದಿದೆ ಹೊಸ ಬದಲಾವಣೆ!

ಮೆಟಾ ಮಾಲೀಕತ್ವದ ಜನಪ್ರಿಯ ಸೋಶಿಯಲ್ ಮೀಡಿಯಾ ಪ್ಲಾಟ್‌ಫಾರ್ಮ್ ಇನ್‌ಸ್ಟಾಗ್ರಾಂ(Instagram) ತನ್ನ ಕಂಟೆಂಟ್ ಡಿಸ್ಕವರಿ ವ್ಯವಸ್ಥೆಯನ್ನು ಮತ್ತಷ್ಟು ನಿಖರ ಹಾಗೂ ಬಳಕೆದಾರ ಸ್ನೇಹಿಯಾಗಿಸಲು ಪ್ರಮುಖ ಬದಲಾವಣೆಯನ್ನು ಜಾರಿಗೆ ತಂದಿದೆ. ಇನ್ನುಮುಂದೆ ಇನ್‌ಸ್ಟಾಗ್ರಾಂ ನಲ್ಲ ರೀಲ್ಸ್ ಹಾಗೂ ಫೀಡ್ ಪೋಸ್ಟ್‌ಗಳಿಗೆ ಗರಿಷ್ಠ ಐದು ಹ್ಯಾಶ್‌ಟ್ಯಾಗ್‌ಗಳನ್ನು ಮಾತ್ರ ಬಳಸಲು ಅವಕಾಶವಿರುತ್ತದೆ.ಪೋಸ್ಟ್‌ಗಳು ಸರಿಯಾದ ಆಸಕ್ತಿ ಹೊಂದಿರುವ ಪ್ರೇಕ್ಷಕರಿಗೆ ತಲುಪುವಂತೆ ಮಾಡುವ ಉದ್ದೇಶದಿಂದ ಈ ನಿರ್ಧಾರವನ್ನು ಕೈಗೊಳ್ಳಲಾಗಿದೆ

ಹೌದು, ಇನ್‌ಸ್ಟಾಗ್ರಾಂ ಸ್ಪಷ್ಟನೆ ಪ್ರಕಾರ, ಅತಿಯಾಗಿ ಅಥವಾ ವಿಷಯಕ್ಕೆ ಸಂಬಂಧವಿಲ್ಲದ ಹ್ಯಾಶ್‌ಟ್ಯಾಗ್‌ಗಳನ್ನು ಬಳಸಿ ಕ್ಯಾಪ್ಶನ್‌ಗಳನ್ನು ತುಂಬಿಸುವುದು ಈಗ ಪ್ರಯೋಜನಕಾರಿಯಾಗುವುದಿಲ್ಲ. ಬದಲಾಗಿ, ಕಡಿಮೆ ಆದರೆ ಅರ್ಥಪೂರ್ಣ ಹಾಗೂ ವಿಷಯಕ್ಕೆ ನೇರವಾಗಿ ಹೊಂದಿಕೊಳ್ಳುವ ಹ್ಯಾಶ್‌ಟ್ಯಾಗ್‌ಗಳು ಪೋಸ್ಟ್‌ಗಳ ಪ್ರದರ್ಶನವನ್ನು (ಎಂಗೇಜ್‌ಮೆಂಟ್) ಹೆಚ್ಚಿಸಲು ಸಹಕಾರಿಯಾಗುತ್ತವೆ. ಇದರಿಂದ ಬಳಕೆದಾರರಿಗೆ ಕ್ಲೀನ್ ಮತ್ತು ಉಪಯುಕ್ತ ಫೀಡ್ ಅನುಭವವೂ ಸಿಗುತ್ತದೆ.

ಹೊಸ ಹ್ಯಾಶ್‌ಟ್ಯಾಗ್ ಮಿತಿ ಕ್ರಿಯೇಟರ್‌ಗಳನ್ನು ಕೇಂದ್ರೀಕೃತ ಟ್ಯಾಗಿಂಗ್ ಕಡೆಗೆ ಪ್ರೇರೇಪಿಸುತ್ತದೆ. ಉದಾಹರಣೆಗೆ, ಬ್ಯೂಟಿ ಸಂಬಂಧಿತ ಕಂಟೆಂಟ್ ಸೃಜಿಸುವವರು ಬ್ಯೂಟಿ, ಮೇಕಪ್ ಅಥವಾ ಸ್ಕಿನ್‌ಕೇರ್‌ಗೆ ಸಂಬಂಧಿಸಿದ ಹ್ಯಾಶ್‌ಟ್ಯಾಗ್‌ಗಳನ್ನು ಮಾತ್ರ ಬಳಸಬೇಕು. ಸಾಮಾನ್ಯವಾಗಿ ಬಳಸುವ #reels ಅಥವಾ #explore ಹ್ಯಾಶ್‌ಟ್ಯಾಗ್‌ಗಳು ಕಂಟೆಂಟ್‌ನ್ನು ಸ್ವಯಂಚಾಲಿತವಾಗಿ ಎಕ್ಸ್‌ಪ್ಲೋರ್ ಪುಟಕ್ಕೆ ತಲುಪಿಸುವುದಿಲ್ಲ ಎಂಬುದನ್ನು ಇನ್‌ಸ್ಟಾಗ್ರಾಂ ಮತ್ತೊಮ್ಮೆ ಸ್ಪಷ್ಟಪಡಿಸಿದೆ.

ಕಂಟೆಂಟ್ ರೀಚ್ ಹೆಚ್ಚಿಸಲು ಇನ್‌ಸ್ಟಾಗ್ರಾಂ ತಂದಿದೆ ಹೊಸ ಬದಲಾವಣೆ!

ರೀಲ್ಸ್ ಆಗಿರಲಿ ಅಥವಾ ಸಾಮಾನ್ಯ ಪೋಸ್ಟ್‌ಗಳಾಗಿರಲಿ, ಸಂಬಂಧಿತ ಹ್ಯಾಶ್‌ಟ್ಯಾಗ್‌ಗಳ ಬಳಕೆ ನಿಮ್ಮ ವಿಷಯವನ್ನು ನಿಜವಾಗಿಯೂ ಆಸಕ್ತಿ ಹೊಂದಿರುವ ಬಳಕೆದಾರರ ಮುಂದೆ ತಲುಪಿಸಲು ಸಹಾಯ ಮಾಡುತ್ತದೆ. ಇದು ದೀರ್ಘಾವಧಿಯಲ್ಲಿ ಕ್ರಿಯೇಟರ್‌ಗಳ ಬ್ರ್ಯಾಂಡ್ ವ್ಯಾಲ್ಯೂ ಮತ್ತು ಫಾಲೋವರ್ ನಂಬಿಕೆಯನ್ನು ಹೆಚ್ಚಿಸಬಹುದು. ಅಲ್ಲದೆ, ಇನ್‌ಸ್ಟಾಗ್ರಾಂ ನಲ್ಲಿ ಹಲವು ಹ್ಯಾಶ್‌ಟ್ಯಾಗ್ ಬಳಕೆಯಿಂದ ಸುಖಾಸುಮ್ಮನೆ ಆಗುತ್ತಿದ್ದ ವಿಭಿನ್ನ ಕಂಟೆಂಟ್ ಟ್ಯಾಗಿಂಗ್ ಕೂಡ ತಪ್ಪಲಿದೆ ಎಂದು ಡಿಜಿಟಲ್ ಮಾರ್ಕೆಟಿಂಗ್ ತಜ್ಞರು ಅಭಿಪ್ರಾಯಪಡುತ್ತಾರೆ.

ಇದರ ನಡುವೆ, ಇನ್‌ಸ್ಟಾಗ್ರಾಂ "Instagram for TV" ಎಂಬ ಹೊಸ ಅನುಭವವನ್ನೂ ಪರಿಚಯಿಸಿದೆ. ಈ ವೈಶಿಷ್ಟ್ಯದಿಂದ ಬಳಕೆದಾರರು ತಮ್ಮ ಟಿವಿಗಳ ದೊಡ್ಡ ಪರದೆಯಲ್ಲೇ ರೀಲ್ಸ್ ವೀಕ್ಷಿಸಬಹುದು. ಈ ಫೀಚರ್ ಪ್ರಸ್ತುತ ಪರೀಕ್ಷಾ ಹಂತದಲ್ಲಿದ್ದು, ಅಮೆರಿಕದಲ್ಲಿ ಅಮೆಜಾನ್ ಫೈರ್ ಟಿವಿ ಸಾಧನಗಳಿಗೆ ಮಾತ್ರ ಲಭ್ಯವಾಗಿದೆ. ಮೊಬೈಲ್ ಆಪ್‌ನಲ್ಲಿ ಇರುವಂತೆ, ಟಿವಿ ಆವೃತ್ತಿಯಲ್ಲೂ ಟೀನ್ ಬಳಕೆದಾರರಿಗಾಗಿ ಅಗತ್ಯ ಸುರಕ್ಷತಾ ನಿಯಂತ್ರಣಗಳು ಮುಂದುವರಿಯುತ್ತವೆ.

ಇನ್‌ಸ್ಟಾಗ್ರಾಂನ ಈ ಹೊಸ ಅಪ್‌ಡೇಟ್‌ಗಳು ಕಂಟೆಂಟ್ ಡಿಸ್ಕವರಿಯನ್ನು ಹೆಚ್ಚು ಗುಣಮಟ್ಟದ, ಸಂಬಂಧಿತ ಮತ್ತು ಬಳಕೆದಾರ ಕೇಂದ್ರಿತವಾಗಿಸಲು ಉದ್ದೇಶಿಸಿರುವಂತಿದೆ. ಸರಿಯಾದ ಹ್ಯಾಶ್‌ಟ್ಯಾಗ್ ತಂತ್ರ ಮತ್ತು ಹೊಸ ವೀಕ್ಷಣಾ ಆಯ್ಕೆಗಳು ಮುಂದಿನ ದಿನಗಳಲ್ಲಿ ಕ್ರಿಯೇಟರ್‌ಗಳು ಹಾಗೂ ಪ್ರೇಕ್ಷಕರ ಅನುಭವವನ್ನು ಮತ್ತಷ್ಟು ಸುಧಾರಿಸುವ ನಿರೀಕ್ಷೆಯಿದೆ. ನೀವು ಕೂಡ ಇನ್‌ಸ್ಟಾಗ್ರಾಂ ಕಂಟೆಂಟ್ ಕ್ರಿಯೇಟರ್ ಆಗಿದ್ದರೆ, ಇನ್ನು ಹೆಚ್ಚಿನ ಹ್ಯಾಶ್‌ಟ್ಯಾಗ್‌ಗಳನ್ನು ತುಂಬಿಸು ಬದಲು ನಿಖರವಾದ ವಿಷಯದ ಕುರಿತು ಮಾಹಿತಿ ನೀಡಿ. ಇದು ಭವಿಷ್ಯದಲ್ಲಿ ನಿಮ್ಮನ್ನು ಮತ್ತಷ್ಟು ಹೆಚ್ಚು ರೀಚ್ ಮಾಡುತ್ತದೆ.

Best Mobiles in India

English summary
Instagram has updated its hashtag policy, allowing users to add only up to five hashtags on Reels and Feed posts. The change aims to improve content discovery by showing posts to more relevant audiences.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+