Subscribe to Gizbot

ಇನ್ಸ್ಟಗ್ರಾಂಗೆ ಒಂದು ವರ್ಷದ ಸವಿ ನೆನಪಿನಲ್ಲಿ ಸೆಲೆಬ್ರೇಷನ್ ಸ್ಟಿಕ್ಕರ್ ಪ್ಯಾಕ್ ಲಾಂಚ್!!

Posted By: Prathap T

ಫೇಸ್ಬುಕ್ ಅಂಗಸಂಸ್ಥೆಯಾದ ಇನ್ಸ್ಟಗ್ರಾಂ ಆರಂಭಗೊಂಡ ಕಡಿಮೆ ಅವಧಿಯಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ನಿರೀಕ್ಷೆಗೂ ಮೀರಿದ ಬಳಕೆದಾರರನ್ನು ಹೊಂದಿದ ಕೀರ್ತಿಗೆ ಭಾಜನವಾಗಿದೆ. ಸ್ನಾಪ್ಚಾಟ್ ಸ್ಟೋರೀಸ್ ವೈಶಿಷ್ಟ್ಯದ ಅನುಭವ ಎಲ್ಲರನ್ನೂ ಆಕರ್ಷಿಸಿದೆ.

ಸೆನೆಬ್ರೇಷನ್ ಸ್ಟಿಕ್ಕರ್ ಪ್ಯಾಕ್ ಮಾಡಿದ ಇನ್ಸ್ಟಗ್ರಾಂ

ಕಳೆದ ವರ್ಷ ಆಗಸ್ಟ್ 2ರಂದು ಪರಿಚಯಿಸಲಾಗಿದ್ದ ಇನ್ಸ್ಟಗ್ರಾಂಗೆ ಈಗ ಒಂದು ವರ್ಷದ ಸಂಭ್ರಮಾಚರಣೆಯಲ್ಲಿದೆ. ಈ ಸವಿನೆನಪಿಗಾಗಿ ಬಳಕೆಗಾರರಿಗೆ ಸೆಲೆಬ್ರೇಷನ್ ಸ್ಟಿಕ್ಕರ್ ಪ್ಯಾಕ್ ಲಾಂಚ್ ಮಾಡಿದೆ. ಪ್ರಸ್ತುತ ವಿಶ್ವದಾದ್ಯಂತ 700 ಮಿಲಿಯನ್ ಇನ್ಸ್ಟಗ್ರಾಂ ಬಳಕೆದಾರರಿದ್ದಾರೆ. ಆ ಪೈಕಿ 250 ದಶಲಕ್ಷ ದೈನಂದಿನ ಬಳಕೆದಾರರು ಸ್ಟೋರೀಸ್ ವೈಶಿಷ್ಟ್ಯದ ಅನುಭವವನ್ನು ಆಹ್ಲಾದಿಸುತ್ತಿದ್ದಾರೆ.

ಬಳಕೆದಾರರು ತಮ್ಮ ಎಲ್ಲಾ ಬಗೆಯ ವಿಷಯಗಳನ್ನು ವಿನಿಯಮ ಮಾಡಿಕೊಳ್ಳಲು ಈ ಇನ್ಸ್ಟಗ್ರಾಂ ಸ್ಟೋರೀಸ್ ಪ್ರಯೋಜನಕಾರಿಯಾಗಿದೆ. ಈ ಇದರಲ್ಲಿ ಹೆಚ್ಚಿನ ಸಮಯ ತೊಡಗಿಸಿಕೊಂಡು ವಿಷಯ ಹಂಚಿಕೊಳ್ಳಲು ಉತ್ತಮ ವೇದಿಕೆಯಾಗಿದೆ ಎಂದು ಬಿಂಬಿಸಲಾಗುತ್ತಿದೆ.

'ನಮ್ಮ ಟೈಗರ್' ಕ್ಯಾಬ್ ಸೇವೆಗೆ 25 ಸಾವಿರ ಚಾಲಕರು ಎಂಟ್ರಿ..ಭಯದಲ್ಲಿ ಓಲಾ ಮತ್ತು ಉಬರ್!!

ಅಧಿಕೃತ ಬ್ಲಾಗ್ ಪೋಸ್ಟ್ ಮಾಹಿತಿ ಪ್ರಕಾರ 25 ವರ್ಷಕ್ಕಿಂತ ಕಡಿಮೆ ವಯಸ್ಸಿನವರು ದಿನಂಪ್ರತಿ ಸರಾಸರಿ 32 ನಿಮಿಷ ಇನ್ಸ್ಟಗ್ರಾಂ ವೇದಿಕೆಯಲ್ಲಿ ಸಮಯ ಕಳೆಯುತ್ತಿದ್ದಾರೆ ಎಂದು ಅಂದಾಜಿಸಲಾಗಿದೆ. 25 ವರ್ಷಕ್ಕಿಂತ ಮೇಲ್ಪಟ್ಟವರು ದಿನಕ್ಕೆ ಸರಾಸರಿ 24 ನಿಮಿಷ ಇನ್ಸ್ಟಗ್ರಾಂ ಬಳಕೆಯಲ್ಲಿ ತೊಡಗಿಸಿಕೊಂಡಿದ್ದಾರೆ ಎನ್ನಲಾಗುತ್ತಿದೆ.

ಕಳೆದ ವರ್ಷ ಫೇಸ್ ಫಿಲ್ಟರ್ಸ್, ಬೂಮರಾಂಗ್, @ಮೆನ್ಶನ್ ಸೇರಿದಂತೆ 20 ಕ್ಕೂ ಹೆಚ್ಚಿನ ಹೊಸ ವೈಶಿಷ್ಟ್ಯತೆ ಸ್ಟಿಕರ್ಗಳನ್ನು ಇನ್ಸ್ಟಗ್ರಾಂ ಪರಿಚಯಿಸಿತ್ತು. ಸೃಜನಾತ್ಮಕತೆ, ಸುಲಭವಾಗಿ, ಆತ್ಮೀಯವಾಗಿ, ಭಾವನಾತ್ಮಕವಾಗಿ ಸ್ಟೋರಿಗಳು, ಫೋಟೋಗಳು ಮತ್ತು ವೀಡಿಯೊಗಳಿಗೆ ತಕ್ಷಣದಲ್ಲಿ ಇತರರೊಡನೆ ವಿನಿಯಮ ಮಾಡಿಕೊಳ್ಳಲು ಉತ್ತಮ ವೇದಿಕೆಯಾಗಿ ರೂಪುಗೊಳ್ಳುವಲ್ಲಿ ಯಶಸ್ವಿಯಾಗಿತ್ತು.

ಇದಲ್ಲದೆ, ಬ್ಲಾಗ್ ಪೋಸ್ಟ್ ಇನ್ಸ್ಟಾಗ್ರಾಮ್ನಲ್ಲಿನ ಸ್ಟೋರೀಸ್ ಗಳನ್ನು ಹಂಚಿಕೊಳ್ಳುವ ಮೂಲಕ ವ್ಯವಹಾರಿಕವಾಗಿಯೂ ಬಳಕೆ ಮಾಡಿ ಪ್ರಯೋಜನ ಪಡೆದುಕೊಳ್ಳಲಾಗಿದೆ ಎಂದು ಹೇಳಲಾಗುತ್ತಿದೆ. ಕಳೆದ ತಿಂಗಳು ಈ ವೇದಿಕೆಯ 50% ಕ್ಕಿಂತಲೂ ಹೆಚ್ಚಿನ ವ್ಯವಹಾರಿಕ ಸ್ಟೋರಿಗಳನ್ನು ವಿನಿಯಮ ಮಾಡಲಾಗಿದೆ ಎನ್ನಲಾಗಿದೆ.. ಅಲ್ಲದೆ, 20%ರಷ್ಟು ಆರ್ಗನಿಕ್ ಸ್ಟೋರಿಗಳು ಹಂಚಿಕೆಯಾಗಿವೆ. ಇನ್ಸ್ಟಗ್ರಾಂ ಮೊದಲ ಹುಟ್ಟುಹಬ್ಬದ ಸಂದರ್ಭದಲ್ಲಿ, ಅತ್ಯುನ್ನತ ಲೋಕೇಶನ್ ಟ್ಯಾಗ್ಸ್, ಹ್ಯಾಶ್ ಟ್ಯಾಗ್ಸ್, ಸ್ಟಿಕ್ಕರ್ಸ್ ಹಾಗೂ ಫೇಸ್ ಫಿಲ್ಟರ್ಸ್ ಕೊಡುಗೆ ನೀಡುವ ಮೂಲಕ ಬಳಕೆದಾರರನ್ನು ಇನ್ನಷ್ಟು ಆಕರ್ಷಿಸಿದೆ.

Read more about:
English summary
Instagram Stories feature has turned one year old. The company has introduced a new celebration sticker pack in order to celebrate the same.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot