ಇನ್‌ಸ್ಟಾಗ್ರಾಂನಲ್ಲಿ ಸ್ಟಾರ್ ಆಗುವುದು ಹೇಗೆ..? ಇಲ್ಲಿದೆ ಸಿಂಪಲ್ ಟಿಪ್ಸ್..!

|

ಸದ್ಯ ಫೇಸ್‌ಬುಕ್ ನಂತರದಲ್ಲಿ ಹೆಚ್ಚು ಸದ್ದು ಮಾಡುತ್ತಿರುವುದು ಫೋಟೋ ಶೇರಿಂಗ್ ತಾಣ ಇನ್‌ಸ್ಟಾಗ್ರಾಂ. ದಿನದಿಂದ ದಿನಕ್ಕೆ ಇನ್‌ಸ್ಟಾಗ್ರಾಂ ಬಳಕೆಯೂ ಅಧಿಕವಾಗುತ್ತಿದ್ದು, ಹೆಚ್ಚು ಪ್ರಮಾಣದಲ್ಲಿ ಫೋಟೋಗಳು ಮತ್ತು ವಿಡಿಯೋಗಳು ಶೇರ್ ಆಗುತ್ತಿವೆ. ಹೆಚ್ಚಿನ ಜನಪ್ರಿಯ ತಾರೆಗಳು ಸಹ ಇನ್‌ಸ್ಟಾಗ್ರಾಂನಲ್ಲಿ ಖಾತೆಯನ್ನು ಹೊಂದಿದ್ದು, ಅಭಿಮಾನಿಗಳಿಗೆ ನಿತ್ಯವು ಇಲ್ಲಿ ದರ್ಶವನ್ನು ನೀಡುತ್ತಿದ್ದಾರೆ.ಈ ಹಿನ್ನಲೆಯಲ್ಲಿ ಇನ್‌ಸ್ಟಾಗ್ರಾಂ ಬಳಕೆ ಅಧಿಕವಾಗುತ್ತಿದೆ.

ಇನ್‌ಸ್ಟಾಗ್ರಾಂನಲ್ಲಿ ಸ್ಟಾರ್ ಆಗುವುದು ಹೇಗೆ..? ಇಲ್ಲಿದೆ ಸಿಂಪಲ್ ಟಿಪ್ಸ್..!


ಇನ್‌ಸ್ಟಾಗ್ರಾಂನಲ್ಲಿ ಫೋಟೊ ಶೇರ್ ಮಾಡುವುದು, ಸ್ಟೋರಿಯನ್ನು ಫೋಸ್ಟ್ ಮಾಡುವುದು ತುಂಬಾ ಸುಲಭವಾಗಿದ್ದು, ನೀವು ಸ್ಟಾರ್ ಆಗಿ ಹೆಚ್ಚಿನ ಲೈಕ್ ಪಡೆದುಕೊಳ್ಳಬಹುದಾಗಿದೆ. ಇದಕ್ಕಾಗಿ ಕೆಲವು ಟಿಪ್ಸ್ ಗಳನ್ನು ತಿಳಿಸಿಕೊಡುವ ಪ್ರಯತ್ನವು ಇಲ್ಲಿದೆ.

ಫಸ್ಟ್ ಫೇಸ್‌ಬುಕ್ ಜತೆ ಲಿಂಕ್ :

ಫಸ್ಟ್ ಫೇಸ್‌ಬುಕ್ ಜತೆ ಲಿಂಕ್ :

ನೀವು ಈಗಾಗಲೇ ಬಳಕೆ ಮಾಡತ್ತಿರುವ ಫೇಸ್‌ಬುಕ್‌ ನೊಂದಿಗೆ ಇನ್‌ಸ್ಟಾಗ್ರಾಂ ಖಾತೆಯನ್ನು ಲಿಂಕ್ ಮಾಡಿ. ಹೀಗೆ ಮಾಡುವುದರಿಂದ ನಿಮ್ಮ ಇನ್‌ಸ್ಟಾಗ್ರಾಂ ಪೋಸ್ಟ್ ಫೇಸ್‌ಬುಕ್‌ನಲ್ಲಿಯೂ ಕಾಣಿಸಿಕೊಳ್ಳುತ್ತದೆ, ಇದರಿಂದ ನಿಮ್ಮ ಇನ್‌ಸ್ಟಾಗ್ರಾಂ ಖಾತೆ ಬಗ್ಗೆ ನಿಮ್ಮ ಫೇಸ್‌ಬುಕ್ ಸ್ನೇಹಿತರಿಗೂ ತಿಳಿಯುತ್ತದೆ. ಅವರು ಸಹ ನಿಮನ್ನು ಫಾಲೋ ಮಾಡಿ, ನಿಮ್ಮ ಪೋಸ್ಟ್ ಗಳಿಗೆ ಲೈಕ್ ಒತ್ತಲಿದ್ದಾರೆ.

ಸ್ನೇಹಿತರ ಫೋಟೋ ಲೈಕ್ ಮಾಡಿ:

ಸ್ನೇಹಿತರ ಫೋಟೋ ಲೈಕ್ ಮಾಡಿ:

ನಿಮ್ಮ ಸ್ನೇಹಿತರ ಫೋಟೋ ಗಳಿಗೆ ಲೈಕ್, ಕಾಮೆಂಟ್ ಮಾಡಿ. ಅವರು ಪ್ರತಿಯಾಗಿ ನಿಮ್ಮ ಪೋಸ್ಟ್‌ಗಳಿಗೆ ಲೈಕ್ ಒತ್ತುತ್ತಾರೆ, ಕಾಮೆಂಟ್ ಮಾಡುತ್ತಾರೆ. ಹೆಚ್ಚು ಸ್ನೇಹಿತರೊಂದಿಗೆ ಆಕ್ಟೀವ್ ಆಗಿದಷ್ಟು ನೀವು ಸ್ಟಾರ್ ಆಗಬಹುದು.

ಸೆಲ್ಫೀಗಳು ಹೆಚ್ಚು ಬೇಡ:

ಸೆಲ್ಫೀಗಳು ಹೆಚ್ಚು ಬೇಡ:

ಒಂದೇ ರೀತಿಯ ಫೋಟೊಗಳನ್ನು ಇನ್‌ಸ್ಟಾಗ್ರಾಂನಲ್ಲಿ ಹಾಕಬೇಡಿ. ಗಮನ ಸೆಳೆಯುವ ಗುಣಮಟ್ಟದ ಫೋಟೋಗಳನ್ನು ಮಾತ್ರ ಶೇರ್ ಮಾಡಿ. ಸೆಲ್ಫೀಗಳನ್ನು ಅತಿಯಾಗಿ ಪೋಸ್ಟ್ ಮಾಡುವುದಕ್ಕಿಂತ ಬೇರೆ ವಸ್ತುಗಳನ್ನು ಕ್ಲಿಕ್ ಮಾಡಿ ಪೋಸ್ಟ್ ಮಾಡಿರಿ.

ಆಂಡ್ರಾಯ್ಡ್‌ನಲ್ಲಿ Facebook Instagram ವಿಡಿಯೋ ಡೌನ್‌ಲೋಡ್ ಮಾಡುವುದು ಹೇಗೆ..?
ಫೋಟೋ ಎಡಿಟ್ ಮಾಡಿ:

ಫೋಟೋ ಎಡಿಟ್ ಮಾಡಿ:

ಇನ್‌ಸ್ಟಾಗ್ರಾಂನಲ್ಲಿ ಫೋಟೊವನ್ನು ಪೋಸ್ಟ್ ಮಾಡುವ ಮುನ್ನ ಎಡಿಟ್ ಮಾಡಿ. ಇದಕ್ಕಾಗಿ ಫಿಲ್ಟರ್‌ಗಳು ಲಭ್ಯವಿದೆ. ಇವುಗಳು ಫೋಟೊವನ್ನು ವಿಭಿನ್ನವಾಗಿ ಕಾಣುವಂತೆ ಮಾಡುತ್ತವೆ. ಅಲ್ಲದೇ ಹೊಸ ಲುಕ್ ವೊಂದನ್ನು ನೀಡಲು ಸಹಾಯ ಮಾಡುತ್ತವೆ.

ಹ್ಯಾಶ್‌ಟ್ಯಾಗ್ ಬಳಸಿ:

ಹ್ಯಾಶ್‌ಟ್ಯಾಗ್ ಬಳಸಿ:

ಇನ್‌ಸ್ಟಾಗ್ರಾಂನಲ್ಲಿ ಹ್ಯಾಶ್‌ಟ್ಯಾಗ್ ತುಂಬಾ ಮಹತ್ತರ ಪಾತ್ರ ವಹಿಸುತ್ತದೆ. ಪ್ರತಿಯೊಂದು ಫೋಟೊ ಜತೆ ಅದಕ್ಕೆ ತಕ್ಕ ಹ್ಯಾಶ್‌ಟ್ಯಾಗ್ ಮತ್ತು ಜನಪ್ರಿಯ ಹ್ಯಾಶ್‌ಟ್ಯಾಗ್‌ಗಳನ್ನು ಬಳಸಿದರೆ ನಿಮ್ಮ ಪೋಸ್ಟ್ ಹೆಚ್ಚು ಮಂದಿಯನ್ನು ತಲುಪುತ್ತದೆ. ಅಲ್ಲದೇ ಸ್ನೇಹಿತರನ್ನು ಟ್ಯಾಗ್ ಮಾಡುವುದು ಹಾಗೂ ಲೋಕೆಷನ್ ಬಗ್ಗೆಯೂ ಮಾಹಿತಿಯನ್ನು ಹಂಚಿಕೊಳ್ಳಿ.

Best Mobiles in India

English summary
instagram tips and tricks to get more followers. to know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X