ಇನ್‌ಸ್ಟಾಗ್ರಾಮ್‌ನಲ್ಲಿಯೇ ಅಮೆಜಾನ್-ಫ್ಲಿಪ್‌ಕಾರ್ಟ್ ಶಾಪಿಂಗ್ ಮಾಡಿ..!

|

ಜಾಗತಿಕವಾಗಿ ತನ್ನ ಬಾಹುಗಳನ್ನು ಬೆಳೆಸಿಕೊಳ್ಳುತ್ತಿರುವ ಫೇಸ್‌ಬುಕ್ ಮಾಲೀಕತ್ವದ ಇನ್‌ಸ್ಟಾಗ್ರಾಮ್, ಜಾಗತಿಕವಾಗಿ 100 ಕೋಟಿ ಬಳಕೆದಾರರನ್ನು ಹೊಂದಿದೆ. ಈ ಹಿನ್ನಲೆಯಲ್ಲಿ ತನ್ನ ಬಳಕೆದಾರರಿಗೆ ಸಾಕಷ್ಟು ಹೊಸ ಮಾದರಿಯ ಆಯ್ಕೆಗಳನ್ನು ನೀಡಲು ಮುಂದಾಗಿದೆ. ಈಗಾಗಲೇ ಫೇಸ್‌ಬುಕ್ ಆಪ್‌ನಲ್ಲಿ ಇರುವ ಮಾದರಿಯ ಆಯ್ಕೆಯೊಂದನ್ನು ಇನ್‌ಸ್ಟಾಗ್ರಾಮ್ ನಲ್ಲಿಯೂ ನೀಡಲು ಮುಂದಾಗಿದೆ.

ಇನ್‌ಸ್ಟಾಗ್ರಾಮ್‌ನಲ್ಲಿಯೇ ಅಮೆಜಾನ್-ಫ್ಲಿಪ್‌ಕಾರ್ಟ್ ಶಾಪಿಂಗ್ ಮಾಡಿ..!

ಇನ್‌ಸ್ಟಾಗ್ರಾಮ್ ತನ್ನ ಬಳಕೆದಾರರಿಗೆ ಈಗಾಗಲೇ IG TV ಎನ್ನುವ ಆಯ್ಕೆಯೊಂದನ್ನು ನೀಡಿದೆ. ಇದರಲ್ಲಿ ವೀಡಿಯೋಗಳನ್ನು ನೋಡಬಹುದಾಗಿದೆ. ಇದರೊಂದಿಗೆ ತನ್ನ ಆಪ್‌ನಲ್ಲಿ ಬಳಕೆದಾರರಿಗೆ ಹೊಸದೊಂದು ಆಯ್ಕೆಯನ್ನು ನೀಡುತ್ತಿದೆ. ಇನ್ನು ಮುಂದೆ ಇನ್‌ಸ್ಟಾಗ್ರಾಮ್ ಬಳಕೆದಾರರು ಆಪ್‌ನಲ್ಲಿಯೇ ಶಾಪಿಂಗ್ ಮಾಡುವ ಅವಕಾಶವನ್ನು ಪಡೆದುಕೊಳ್ಳಲಿದ್ದಾರೆ. ಇದು ಇನ್ನುಷ್ಟು ಹೆಚ್ಚು ಮಂದಿ ಬಳಕೆದಾರರನ್ನು ಸೆಳೆಯಲಿದೆ ಎನ್ನಲಾಗಿದೆ.

IG ಶಾಪಿಂಗ್:

IG ಶಾಪಿಂಗ್:

ಈಗಾಗಲೇ ಹೆಚ್ಚು ಮಂದಿ ಸೆಲೆಬ್ರಿಟಿಗಳು ಸೇರಿದಂತೆ ಎಲ್ಲಾರು ಫೋಟೋ ಮತ್ತು ವಿಡಿಯೋ ಶೇರ್ ಮಾಡಲು ಬಳಕೆ ಮಾಡಿಕೊಳ್ಳುತ್ತಿರುವ ಇನ್‌ಸ್ಟಾಗ್ರಾಮ್, ಹೊಸ ಮಾದರಿಯಲ್ಲಿ ಬಳಕೆದಾರರಿಗೆ ಶಾಪಿಂಗ್ ಆಯ್ಕೆಯನ್ನು ನೀಡಲಿದೆ ಎನ್ನಲಾಗಿದೆ. IG ಶಾಪಿಂಗ್ ಆಯ್ಕೆಯಲ್ಲಿ ಬಳಕೆದಾರರು ಆಪ್‌ನಲ್ಲಿಯೇ ಶಾಪಿಂಗ್ ಮಾಡಬಹುದಾಗಿದೆ.

ಅಮೆಜಾನ್-ಫ್ಲಿಪ್‌ಕಾರ್ಟ್:

ಅಮೆಜಾನ್-ಫ್ಲಿಪ್‌ಕಾರ್ಟ್:

ಇನ್‌ಸ್ಟಾಗ್ರಾಮ್ ನಲ್ಲಿ ಬಳಕೆದಾರರಿಗೆ ಆನ್‌ಲೈನ್‌ ಶಾಪಿಂಗ್ ಮಾಡುವ ಅವಕಾಶವು ದೊರೆಯುತ್ತಿದೆ. ಇನ್‌ಸ್ಟಾಗ್ರಾಮ್ ಕಾಣಿಸಿಕೊಳ್ಳುವ ಅಮೆಜಾನ್-ಫ್ಲಿಪ್‌ಕಾರ್ಟ್ ಆಡ್‌ಗಳಲ್ಲಿ ಅಲ್ಲಿಯೇ ಖರೀದಿ ಮಾಡುವ ಅವಕಾಶವನ್ನು ನೀಡಲು ಮುಂದಾಗಿದೆ. ಈ ಹಿನ್ನಲೆಯಲ್ಲಿ ಶಾಪಿಂಗ್ ಅನುಭವವು ಉತ್ತಮವಾಗಲಿದೆ.

ಫೇಸ್‌ಬುಕ್ ಮಾರ್ಕೇಟಿಂಗ್:

ಫೇಸ್‌ಬುಕ್ ಮಾರ್ಕೇಟಿಂಗ್:

ಈಗಾಗಲೇ ಫೇಸ್‌ಬುಕ್ ನಲ್ಲಿ ಕಾಣಿಸಿಕೊಂಡಿರುವ ಫೇಸ್‌ಬುಕ್ ಮಾರ್ಕೆಟಿಂಗ್ ಪ್ಲೇಸ್ ಮಾದರಿಯಲ್ಲಿ IG ಶಾಪಿಂಗ್ ಸಹ ಕಾರ್ಯನಿರ್ವಹಿಸಲಿದೆ. ಇನ್‌ಸ್ಟಾಗ್ರಾಮ್ ಬಳಕೆದಾರರಿಗೆ ಇದು ಹೊಸ ಮಾದರಿಯ ಅನುಭವವನ್ನು ನೀಡಲಿದೆ ಎನ್ನಲಾಗಿದೆ.

ಆದಾಯದ ಹೊಸ ಮೂಲ:

ಆದಾಯದ ಹೊಸ ಮೂಲ:

ಫೇಸ್‌ಬುಕ್ ಹೊಸ ಆದಾಯದ ಮೂಲಗಳನ್ನು ಹುಡುಕುತ್ತಿದೆ. ಇನ್‌ಸ್ಟಾಗ್ರಾಮ್ ನಿಂದ ಆದಾಯವನ್ನು ಗಳಿಸಿಕೊಳ್ಳಲು IG ಶಾಪಿಂಗ್ ಅನ್ನು ಹೊಸದಾಗಿ ಕಾಣಿಸಿಕೊಳ್ಳುತ್ತಿದೆ. ಇದರಿಂದಾಗಿ ಬಳಕೆದಾರರಿಗೆ ಸಹಾಯ ಹಾಗೂ ಫೇಸ್‌ಬುಕ್‌ಗೂ ಆದಾಯ ದೊರೆಯಲಿದೆ.

Best Mobiles in India

English summary
Instagram working on standalone e-commerce app called IG Shopping. to know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X