ರೈಲು ಪ್ರಯಾಣಕ್ಕೆ ವಾಟ್ಸ್ಆಪ್ ಸಾಕು: ಏನಿದು ಹೊಸ IRCTC ಯೋಜನೆ..!
ದೇಶದ ನರನಾಡಿಯಂತಿರುವ ರೈಲ್ವೆ ವ್ಯವಸ್ಥೆಯೂ ಹಲವು ಮಂದಿಗೆ ಜೀವನವನ್ನು ನೀಡಿದೆ. ದಿನಕ್ಕೆ ಲಕ್ಷಾಂತರ ಮಂದಿ ರೈಲ್ವೆ ಸಾರಿಗೆಯನ್ನು ಬಳಸುತ್ತಿದ್ದು, ದೇಶದಲ್ಲಿಯೇ ಅತೀ ಹೆಚ್ಚು ಮಂದಿ ಅವಲಂಬಿತವಾಗಿರುವ ಸಾರಿಗೆ ಎನ್ನುವ ಖ್ಯಾತಿಯನ್ನು ಪಡೆದುಕೊಂಡಿದೆ. ಈ ಹಿನ್ನಲೆಯಲ್ಲಿ ರೈಲ್ವೆ ಇಲಾಖೆಯೂ ತನ್ನ ಪ್ರಯಾಣಿಕರಿಗೆ ಸುಖಕರ ಪ್ರಯಾಣವನ್ನು ನೀಡುವ ಸಲುವಾಗಿ ಸಾಕಷ್ಟು ಆಧುನೀಕತೆಯನ್ನು ಮೈಗೂಡಿಸಿಕೊಂಡಿದ್ದು, ತಂತ್ರಜ್ಞಾನದ ಸಹಾಯದಿಂದ ಬಳಕೆದಾರರಿಗೆ ಸುಲಭ ಪ್ರಯಾಣಕ್ಕೆ ಅನುವು ಮಾಡಿಕೊಡುತ್ತಿದೆ.

ಇದೇ ಮಾದರಿಯಲ್ಲಿ IRCTC ಟ್ರೈನ್ ಸ್ಟೆಟಸ್ ಅನ್ನು ವಾಟ್ಸ್‌ಆಪ್ ನಲ್ಲಿಯೇ ಪಡೆದುಕೊಳ್ಳುವ ಹೊಸ ಅವಕಾಶವನ್ನು ಮಾಡಿಕೊಟ್ಟಿದೆ. ದೇಶದಲ್ಲಿ ಅತೀ ಹೆಚ್ಚು ಮಂದಿ ವಾಟ್ಸ್ಆಪ್ ಬಳಕೆ ಮಾಡಿಕೊಳ್ಳುತ್ತಿದ್ದು, ಹೀಗಾಗಿ ಹೆಚ್ಚಿನ ಮಂದಿಗೆ ತನ್ನ ಸೇವೆಯನ್ನು ತಲುಪಿಸುವ ಸಲುವಾಗಿ ವಾಟ್ಸ್ಆಪ್‌ನಲ್ಲಿಯೇ IRCTC ಟ್ರೈನ್ ಸ್ಟೆಟಸ್ ಮಾಹಿತಿಯನ್ನು ನೀಡುತ್ತಿದೆ ಎನ್ನಲಾಗಿದೆ. ಇದರಿಂದಾಗಿ ರೈಲು ಪ್ರಯಾಣಿಕರಿಗೆ ಸಾಕಷ್ಟು ದೊಡ್ಡ ಪ್ರಮಾಣದಲ್ಲಿ ಸಹಾಯವಾಗಲಿದೆ.

ಮೈಕ್ ಮೈ ಟ್ರಿಪ್:
ಅತೀ ಹೆಚ್ಚು ಮಂದಿ ತಮ್ಮ ಪ್ರಯಾಣಕ್ಕೆ ಸಾರಿಗೆಯನ್ನು ಆರಿಸಿಕೊಳ್ಳಲು ಬಳಕೆ ಮಾಡಿಕೊಳ್ಳುತ್ತಿರುವ ಮೈಕ್ ಮೈ ಟ್ರಿಪ್ ನಿಂದ ವಾಟ್ಸ್ಆಪ್‌ನಲ್ಲಿಯೇ IRCTC ಟ್ರೈನ್ ಸ್ಟೆಟಸ್ ಮಾಹಿತಿ ಸೇರಿಂದ ಪ್ರಯಾಣಿಕರಿಗೆ ಟ್ರೈನ್ ಟೈಮಿಂಗ್, ಬುಕ್ಕಿಂಗ್ ಸ್ಟೆಷಸ್ ಸೇರಿದಂತೆ ಎಲ್ಲಾ ಮಾದರಿಯ ಮಾಹಿತಿಯನ್ನು ನೀಡಲು ಮುಂದಾಗಿದೆ. ಇದು ರೈಲ್ವೆ ಪ್ರಯಾಣದಲ್ಲಿ ಭಾರೀ ಬದಲಾವಣೆಯನ್ನು ಮಾಡಲಿದೆ.

ಮೊಬೈಲ್ ನಂಬರ್:
ವಾಟ್ಸ್ಆಪ್‌ನಲ್ಲಿಯೇ IRCTC ಟ್ರೈನ್ ಸ್ಟೆಟಸ್ ಮಾಹಿತಿಯನ್ನು ಪಡೆದುಕೊಳ್ಳಲು ನೀವು 7349389104 ಸಂಖ್ಯೆಗೆ ನಿಮಗೆ ಬೇಕಾದ ಟ್ರೈನ್‌ನ ನಂಬರ್ ಅನ್ನು ಸೆಂಡ್ ಮಾಡಿದರೆ ಸಾಕು, ಆ ಕಡೆಯಿಂದ ನಿಮಗೆ ಬೇಕಾದ ಎಲ್ಲಾ ರೀತಿಯ ಮಾಹಿತಿಯನ್ನು ಮೈಕ್ ಮೈ ಟ್ರಿಪ್ ಕಳುಹಿಸಲಿಕೊಡಲಿದೆ.

10 ಸೆಕೆಂಡ್‌ನಲ್ಲಿ ಸೇವೆ:
ನೀವು ಮೈಕ್ ಮೈ ಟ್ರಿಪ್ ವಾಟ್ಸ್ಆಪ್‌ನಲ್ಲಿಯೇ IRCTC ಟ್ರೈನ್ ಸ್ಟೆಟಸ್ ಮಾಹಿತಿಯನ್ನು ಕೇಳಿದ ಕೆಲವೇ ಕೆಲವು ಸೆಕೆಂಡ್ ಗಳಲ್ಲಿ ನಿಮಗೆ ಮಾಹಿತಿಯೂ ದೊರೆಯಲಿದೆ ಎನ್ನಲಾಗಿದೆ. ಇದರ ಸರ್ವರ್ ಯಾವ ಸಮಯದಲ್ಲಿಯೂ ಬಳಕೆದಾರರಿಗೆ ಮಾಹಿತಿಯನ್ನು ಒದಗಿಸಲು ವೇಗವಾಗಿ ಕಾರ್ಯನಿರ್ವಹಿಸಲಿದೆ.

ವಾಟ್ಸ್‌ಆಪ್ ಇರುವವರೇಲ್ಲರೂ ಬಳಸಬಹುದು:
ವಾಟ್ಸ್ಆಪ್‌ನಲ್ಲಿಯೇ IRCTC ಟ್ರೈನ್ ಸ್ಟೆಟಸ್ ಮಾಹಿತಿಯನ್ನು ಪಡೆದುಕೊಳ್ಳಲುವುದು ಸುಲಭವಾಗಿದ್ದು, ಇದಕ್ಕಾಗಿಯೇ ಯಾವುದೇ ಆಪ್ ಅನ್ನು ಹಾಕಿಕೊಳ್ಳುವ ಅವಶ್ಯಕತೆ ಇರುವುದಿಲ್ಲ. ಬದಲಾಗಿ ಇರುವ ವಾಟ್ಸ್‌ಆಪ್‌ನಲ್ಲಿಯೇ ಮಾಹಿತಿಯನ್ನು ನಿಮ್ಮದಾಗಿಸಿಕೊಳ್ಳಬಹುದಾಗಿದೆ.

ಕರೆ ಮಾಡಬಹುದು:
ಇದಲ್ಲದೇ ಬಳಕೆದಾರರು IRCTC ಟ್ರೈನ್ ಸ್ಟೆಟಸ್ ಮಾಹಿತಿಯನ್ನು ಪಡೆದುಕೊಳ್ಳಲು ಮೇಸೆಜ್ ಮಾಡುವ ರೀತಿಯಲ್ಲಿಯೇ 139 ಸಂಖ್ಯೆಗೆ ಕರೆ ಮಾಡುವ ಮೂಲಕವು ಮಾಹಿತಿಯನ್ನು ಪಡೆದುಕೊಳ್ಳಬಹುದಾಗಿದೆ. ಒಟ್ಟಿನಲ್ಲಿ ಇದರಿಂದಾಗಿ ಬಳಕೆದಾರರಿಗೆ ಹೆಚ್ಚಿನ ಲಾಭವಾಗಲಿದೆ.


Click it and Unblock the Notifications








