ವೈರಲ್ ಆಯ್ತು ವೆಡ್ಡಿಂಗ್ ಫೋಟೋ ಶೂಟ್: ವಾಟ್ಸ್‌ಆಪ್ -ಫೇಸ್‌ಬುಕ್‌ನಲ್ಲಿ ಫುಲ್ ಹವಾ..!
ಇಂದಿನ ದಿನದಲ್ಲಿ ಮದುವೆ ಎಂದ ತಕ್ಷಣ ತಲೆ ಬರುವುದು ಪ್ರೀವೆಂಡಿಂಗ್, ವೆಡ್ಡಿಂಗ್ ಶೂಟ್‌ಗಳು. ಇದಕ್ಕಾಗಿ ಕೋಟಿ ಕೋಟಿ ಹಣವನ್ನು ಖರ್ಚು ಮಾಡುವರು ಇದ್ದಾರೆ. ಆದರೆ ಇಲ್ಲೊಂದು ವೆಡ್ಡಿಂಗ್ ಫೋಟೋ ಶೂಟ್ ವಿಡಿಯೋವೊಂದು ಸದ್ದು ಮಾಡುತ್ತಿದ್ದು, ಫೋಟೋ ಕ್ಲಿಕಿಸಲು ಪೋಟೋಗ್ರಾಫರ್ ಕೋತಿ ಹಾಗೆ ನೆತಾಡಿ ಸುದ್ದಿಯಾಗಿದ್ದಾನೆ.

ಫೋಟೋಗಳನ್ನು ತೆಗೆಯಲು ಪೋಟೋಗ್ರಾಫರ್ ಪಡುವ ಪಾಡು ಅಷ್ಟಿಷ್ಟಲ್ಲ. ಟ್ರೆಂಡ್ ಸೆಟ್ಟರ್ ಮಾದರಿಯಲ್ಲಿ ಫೋಟೋ ಕ್ಲಿಕಿಸಬೇಕು ಎನ್ನುವುದರೊಂದಿಗೆ, ಜೋಡಿಗಳನ್ನು ಮುದ್ದಾಗಿ ತೋರಿಸಬೇಕು ಎನ್ನುವ ಕಾರಣಕ್ಕೆ ಸಾಕಷ್ಟು ಶ್ರಮವಹಿಸುತ್ತಾರೆ. ಇದೇ ಹಿನ್ನಲೆಯಲ್ಲಿ ವೈರಲ್ ಆಗಿರುವ ವಿಡಿಯೋ ಪೋಟೋಗ್ರಾಫರ್ ಒಬ್ಬನ ಶ್ರಮವನ್ನು ತೋರಿಸುತ್ತದೆ.
ಕೇರಳದಲ್ಲಿ ನಡೆದ ಫೋಟೋ ಶೂಟ್ ವೊಂದರಲ್ಲಿ ಪೋಟೋಗ್ರಾಫರ್ ಏರಿಯಲ್ ಶಾಟ್ನಂತಹ ಚಿತ್ರ ತೆಗೆಯುವ ಸಲುವಾಗಿ ತಾನೇ ಮರಕ್ಕೆ ಜೋತು ಬಿದ್ದು, ಕೋತಿಯ ಹಾಗೇ ನೇತಾಡಿ ಮುದ್ದಾದ ಫೋಟೋವೊಂದನ್ನು ಕ್ಲಿಕ್ ಮಾಡಿದ್ದಾನೆ.,ಇದನ್ನು ಯಾರೋ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿ ಬಿಟ್ಟಿದ್ದಾರೆ.

ಇನ್ಸ್ಟಾಗ್ರಾಮ್, ಫೇಸ್ಬುಕ್, ವಾಟ್ಸ್ಆ್ಯಪ್ ಸೇರಿದಂತೆ ಇತರೆ ತಾಣಗಳಲ್ಲಿ ವೈರಲ್ ಆಗಿರುವ ಈ ವಿಡಿಯೋವನ್ನು ನೀವು ಒಮ್ಮೆ ನೋಡಿ. ದಿನೇ ದಿನೇ ಸಾಮಾಜಿಕ ತಾಣದಲ್ಲಿ ಕೇರಳಿಗರು ಹೆಚ್ಚಿನ ಸಂಖ್ಯೆಯಲ್ಲಿ ಸದ್ದು ಮಾಡುತ್ತಿದ್ದಾರೆ. ಈ ಹಿಂದೆ ಪ್ರಿಯಾ ಕಣ್ ಹೊಡೆದಿದ್ದಳು, ಈಗ ಈ ಪೋಟೋಗ್ರಾಫರ್ ಸದ್ದು ಮಾಡುತ್ತಿದ್ದಾನೆ.



Click it and Unblock the Notifications