ವೈರಲ್ ಆಗಿದೆ 'ಕಿಕಿ ಚಾಲೆಂಜ್': ಮಾಡಿದ್ರೆ ಪೊಲೀಸರು ಹೊಡಿತ್ತಾರೆ...!
ಸೋಶಿಯಲ್ ಮಿಡಿಯಾದಲ್ಲಿ ದಿನಕ್ಕೊಂದು ಮಾದರಿಯ ಚಾಲೆಂಜ್‌ಗಳು ವೈರಲ್ ಆಗುತ್ತಿದೆ. ಇದೇ ಮಾದರಿಯಲ್ಲಿ ಸದ್ಯ ಕಿಕಿ ಚಾಲೆಂಜ್ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಈ ಚಾಲೆಂಜ್ ಹೆಚ್ಚಿನ ಪ್ರಮಾಣದಲ್ಲಿ ಸದ್ದು ಮಾಡುತ್ತಿರುವುದು ವಿಶೇಷತೆಯಿಂದಾಗಿ ಅಲ್ಲ, ಬದಲಾಗಿ ಅನಾಹುತಗಳಿಂದ. ಈಗಾಗಲೇ ಜಾಗತಿಕವಾಗಿ ಸಾಕಷ್ಟು ಸದ್ದು ಮಾಡಿರುವ ಈ ಚಾಲೆಂಜ್ ಸದ್ಯ ಭಾರತಕ್ಕೂ ಕಾಲಿಟಿದೆ.

ಸೋಶಿಯಲ್ ಮೀಡಿಯಾದಲ್ಲಿ ಕಿಕಿ ಚಾಲೆಂಜ್ ಸ್ವೀಕರಿಸಿದ ಹಲವು ಮಂದಿ ಬೇರೆವರಿಗೆ ಚಾಲೆಂಜ್ ಹಾಕುತ್ತಿದ್ದಾರೆ. ಈ ಹಿನ್ನಲೆಯಲ್ಲಿ ಈ ಚಾಲೆಂಜ್ ಸ್ವೀಕರಿಸಿದವರಲ್ಲಿ ಸಾಮಾನ್ಯವಾಗಿ ಪೂರ್ಣಗೊಳಿಸಿದವರ ಸಂಖ್ಯೆ ತೀರಾ ಕಡಿಮೆ, ಎದ್ದು ಬಿದ್ದು ಬೇರೆಯವರಿಗೆ ತೊಂದರೆ ನೀಡಿದವರ ಪ್ರಮಾಣವೇ ಅಧಿಕ ಎನ್ನಲಾಗಿದೆ. ಅದರಲ್ಲೂ ಭಾರತದಂತಹ ಪ್ರದೇಶದಲ್ಲಿ ಈ ಚಾಲೆಂಜ್ ಫೂರ್ಣ ಮಾಡಲು ಹೊದರೆ ತೊಂದರೆ ತಪ್ಪಿದಲ್ಲ.
ಏನಿದು ಕಿಕಿ ಚಾಲೆಂಜ್?
ಹಾಲಿವುಡ್ ಗಾಯಕ ಡ್ರೇಕ್‌ನ ಇನ್'ಮೈ ಫೀಲಿಂಗ್ಸ್' ಹಾಡಿಗೆ ಚಲಿಸುವ ಕಾರಿನಿಂದ ಆಚೆ ಬಂದು ಕಾರಿನ ವೇಗಕ್ಕೆ ಸರಿ ಹೊಂದುವಂತೆ ರಸ್ತೆಯಲ್ಲಿ ಡ್ಯಾನ್ಸ್ ಮಾಡಿ ನಂತರ ಮತ್ತೆ ಚಲಿಸುತತ್ಇರುವ ಕಾರಿಗೆ ಹತ್ತುವ ಅಪಾಯಕಾರಿ ಚಾಲೆಂಜ್ ಆಗಿದ್ದು, ಹಲವು ಮಂದಿ ಇದರಿಂದ ಅಪಘಾತಕ್ಕೆ ಗುರಿಯಾಗಿದ್ದಾರೆ. ಅಲ್ಲದೇ ಹಲವು ಮಂದಿಯನ್ನು ಅಪಾಯಕ್ಕೆ ಗುರಿ ಮಾಡಿದ್ದಾರೆ ಎನ್ನಲಾಗಿದೆ.
ಸ್ವೀಕರಿಸಬೇಡಿ:
ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುವ ಕಿಕಿ ಚಾಲೆಂಜ್ ಅಪಾಯಕಾರಿಯಾಗಿದ್ದು, ಯಾರು ಈ ಚಾಲೆಂಜ್ ಸ್ವೀಕರಿಸಬೇಡಿ ಎಂದು ಪೊಲೀಸರು ಎಚ್ಚರಿಕೆ ನೀಡುತ್ತಿದ್ದಾರೆ. ಈ ಕುರಿತು ಮುಂಬೈ ಪೊಲೀಸರುವ ವಿಡಿಯೋವೊಂದನ್ನು ಟ್ವಿಟರ್‌ನಲ್ಲಿ ಹಾಕಿ ಅರಿವು ಮೂಡಿಸಲು ಮುಂದಾಗಿದ್ದಾರೆ.
ನೀರಿಗೆ ಹಾಕ್ತಾರೆ:
ರಸ್ತೆ ಮಧ್ಯ ಡ್ಯಾನ್ಸ್ ಮಾಡಿದ್ರೆ ರೋಡಲ್ಲಿ ಹೋಗುವವರು ಸುಮ್ಮನೆ ಇರ್ತಾರಾ..? ಎತ್ತಿ ನೀರಿಗೆ ಹಾಕ್ತಾರೆ.
ಇದಕ್ಕೆ ಬೇಡ ಅಂದಿದ್ದು:
ಯಾರೋ ಚಾಲೆಂಜ್ ಮಾಡಿದ್ರೂ ಅಂತ ನೀವು ಮಾಡಕ್ಕೆ ಹೋದ್ರೆ ತೊಂದರೆ ಖಂಡಿತ, ಇಲ್ಲಿದೇ ಸಾಕ್ಷಿ
ಜೀವಕ್ಕೆ ಅಪಾಯ
ರಸ್ತೆ ಮಧ್ಯ ನೀವು ಡ್ಯಾನ್ಸ್ ಮಾಡೋದು ಬೇರೆ ಯಾರಿಗೂ ಹೇಗೆ ಗೊತ್ತಾಗ್ ಬೇಕು...? ಜೀವಕ್ಕೆ ಅಪಾಯ ತಂದುಕೊಳ್ಳಬೇಡಿ.
ನಮ್ಮ ದೇಶದಲ್ಲಿ:
ಕಿಕಿ ಚಾಲೆಂಜ್ ಅಂತ ರಸ್ತೆಯಲ್ಲಿ ಈ ರೀತಿ ಮಾಡಕ್ಕೆ ಹೋದ್ರೆ ಏನ್ ಆಗುತ್ತೆ..? ಈ ವೀಡಿಯೋ ನೋಡಿ ತಿಳಿಯುತ್ತೆ.
ಕಳ್ಳರಿಗೂ ಹಬ್ಬ:
ರಸ್ತೆಯಲ್ಲಿ ಸ್ಟೈಲಾಗಿ ಸ್ಪೇಪ್ ಹಾಕ್ತಿದ್ರೆ ಕಳ್ಳರಿಗೂ ಹಬ್ಬ, ನಿಮ್ಮ ಹತ್ತಿರ ಇರೋದನ್ನ ಕಿತ್ತುಕೊಂಡು ಹೋಗ್ತಾರೆ.
UP ಪೊಲೀಸರು:
ರಸ್ತೆ ಮೇಲೆ ಆಟ ಆಡಲೂ ಹೋದರೆ ಏನು ಆಗಬಹುದು ಎಂಬುದನ್ನು ವಿಡಿಯೋ ಸಮೇತ ಹೇಳಿದ್ದಾರೆ UP ಪೊಲೀಸರು.
ಇಬ್ಬರು ಡ್ಯಾನ್ಸ್ ಮಾಡಿದ್ರೆ:
ರಸ್ತೆಯಲ್ಲಿ ಕಾರಿನಿಂದ ಇಳಿದು ಇಬ್ಬರು ಡ್ಯಾನ್ಸ್ ಮಾಡಿದ್ರೆ ಏನು ಆಗಬಹುದು ಅಂದ್ರಾ..? ಈ ವಿಡಿಯೋ ನೋಡಿ.
ಈ ವಿಡಿಯೋ ನೋಡಿ:
ಈ ಚಾಲೆಂಜ್ ಸ್ವೀಕರಿಸಲು ಹೋಗಿ ಮಾಡಿಕೊಂಡ ಎಡವಟ್ಟುಗಳ ಕುರಿತ ಮಾಹಿತಿ ಇದರಲ್ಲಿದೆ.


Click it and Unblock the Notifications








