Home
Social media

ನಿಮ್ಮ ಸಾವಿನ ಬಳಿಕ ನಿಮ್ಮ ಫೇಸ್‌ಬುಕ್ ಮತ್ತು ಗೂಗಲ್ ಖಾತೆಗಳು ಏನಾಗಲಿವೆ ಗೊತ್ತಾ?

By Bhaskar N J

ಬದುಕಿದ್ದಾಗ ನಾವು ಫೇಸ್‌ಬುಕ್, ಟ್ವಿಟ್ಟರ್‌ಗಳಂತಹ ಸಾಮಾಜಿಕ ಜಾಲತಾಣ ಜಾಲತಾಣಗಳಲ್ಲಿ ನಮ್ಮದೇ ಒಂದು ಚಿತ್ರಣವನ್ನು ಅಲ್ಲಿ ರೂಪಿಸಿಕೊಳ್ಳುತ್ತೇವೆ. ಹಲವಾರು ಸ್ನೇಹಿತರನ್ನು ಮಾಡಿಕೊಳ್ಳುತ್ತೇವೆ. ನಮ್ಮ ಜೀವನದಲ್ಲಿ ನಡೆದ ಪ್ರತಿಯೊಂದನ್ನೂ ಅಲ್ಲಿ ಹಂಚಿಕೊಳ್ಳುತ್ತೇವೆ. ಮಾಸದ ನೆನಪುಗಳನ್ನು ಜೀವಂತವಾಗಿ ಅಲ್ಲಿ ಇರಿಸಿಕೊಳ್ಳುತ್ತೇವೆ ಅಲ್ಲವೇ?.

ಆದರೆ, ಎಂದಾದರೂ ನಮ್ಮ ಮರಣದ ನಂತರ ನಮ್ಮ ಈ ಖಾತೆಗೆ ಏನುಂಟಾಗಬಹುದು ಎಂಬುದನ್ನು ಕುರಿತು ಆಲೋಚಿಸಿದ್ದೀರಾ?. ನಿಮ್ಮ ಸಾವಿನ ಬಳಿಕ ಈ ಖಾತೆ ಏನಾಗುವುದು ಎಂದು ನಿಮಗೆ ತಿಳಿದಿದೆಯಾ? ಮರಣದ ಬಗ್ಗೆ ಸಾಮಾಜಿಕ ಜಾಲತಾಣಗಳು ಅದರದ್ದೇ ಆಗಿರುವ ಕೆಲವೊಂದು ಖಾಸಗಿ ನಿಯಮಗಳನ್ನು ರೂಪಿಸಿರುತ್ತವೆ ಎಂಬುದು ನಿಮಗೆ ಗೊತ್ತಾ?.

ನಿಮ್ಮ ಸಾವಿನ ಬಳಿಕ ನಿಮ್ಮ ಫೇಸ್‌ಬುಕ್ ಮತ್ತು ಗೂಗಲ್ ಖಾತೆಗಳು ಏನಾಗಲಿವೆ ಗೊತ್ತಾ?

ಈ ಎಲ್ಲಾ ಪ್ರಶ್ನೆಗಳು ನಿಮ್ಮ ಕಿವಿಗೆ ಬಿದ್ದ ನಂತರ ನಿಮಗೂ ಸಹ ಕುತೋಹಲ ಉಂಟಾಗುವುದು ಸಹಜ. ಹಾಗಾಗಿ, ಇಂದಿನ ಲೇಖನದಲ್ಲಿ ಫೇಸ್‌ಬುಕ್, ಟ್ವಿಟ್ಟರ್‌ನಿಂದ ಹಿಡಿದು ಕೊರಾ ತನಕ ಎಲ್ಲಾ ಜಾಲತಾಣಗಳಲ್ಲಿ ನಿಮ್ಮ ಮರಣದ ನಿಮ್ಮ ಅಕೌಂಟ್ ಏನಾಗುವುದು? ನಿಮ್ಮ ಸಾವಿನ ಬಳಿಕ ಇದನ್ನು ಯಾರು ನಿರ್ವಹಿಸಬಹುದು ಎಂಬುದನ್ನು ಮುಂದೆ ತಿಳಿಯಿರಿ.

ಫೇಸ್‌ಬುಕ್

ಫೇಸ್‌ಬುಕ್

ಫೇಸ್‌ಬುಕ್ ನಲ್ಲಿ ಮೃತಪಟ್ಟವರಿಗಾಗಿಯೇ ಕೆಲವೊಂದು ವಿಶೇಷ ಕಾನೂನುಗಳಿವೆ. ಮೃತರ ಖಾತೆಯನ್ನು ಡಿಲೀಟ್ ಮಾಡಬಹುದು ಅಥವಾ ನೆನಪಿಗಾಗಿ ಮುಂದುವರಿಸಬಹುದು. ನೆನಪಿಗಾಗಿ ಮೃತರ ಖಾತೆಯ ಮುಂದುವರಿಸಲು ಬಯಸಿದರೆ, ಆ ಖಾತೆಯ ಹೆಸರಿನ ಮುಂದೆ `ನೆನಪಿಗಾಗಿ' ಪದವು ಬರುವುದು.

ಯೂಟ್ಯೂಬ್

ಯೂಟ್ಯೂಬ್

ಯೂಟ್ಯೂಬ್ ಖಾತೆದಾರರು ತಮ್ಮ ಭವಿಷ್ಯದ ಬಗ್ಗೆ ನಿರ್ಧರಿಸಲು ಯೂಟೂಬ್ ಅವಕಾಶ ನೀಡುವುದು.ಸಾವಿನ ಬಳಿಕ ನಿಮ್ಮ ಚಾನೆಲ್ ನ್ನು ಯಾರು ನಿರ್ವಹಿಸಬಹುದು ಎನ್ನುವ ಬಗ್ಗೆ ಒಂದು ಕಾನೂನು ಪತ್ರ ಸಲ್ಲಿಸಬೇಕು. ಈ ಆಯ್ಕೆ ಮಾಡದೇ ಇದ್ದರೆ ಕೆಲವು ಸಮಯದ ತನಕ ಯಾವುದೇ ಪ್ರತಿಕ್ರಿಯೆ ಇಲ್ಲದೆ ಇರುವಂತಹ ನಿಮ್ಮ ಖಾತೆಯನ್ನು ಯೂಟ್ಯೂಬ್ ಮುಚ್ಚುವುದು.

ಗೂಗಲ್ ಖಾತೆ

ಗೂಗಲ್ ಖಾತೆ

ನಿಮ್ಮ ಸಾವಿನ ಬಗ್ಗೆ ಯಾರಾದರೂ ತಿಳಿಸುವ ತನಕ ಫೇಸ್ ಬುಕ್ ಖಾತೆಯು ಸಕ್ರಿಯವಾಗಿರುವುದು. ಲಿಕ್ಡ್ ಇನ್ ಖಾತೆಯು ಸಾವಿನ ಸುದ್ದಿ ತಿಳಿದ ತಕ್ಷಣ ಮುಚ್ಚಲ್ಪಡುವುದು. ಮರಣದ ಬಗ್ಗೆ ಗೂಗಲ್ ಗೆ ವರದಿ ನೀಡಿದ ತಕ್ಷಣವೇ ನಿಮ್ಮ ಗೂಗಲ್ ಖಾತೆಯು ನಿಷ್ಕ್ರೀಯವಾಗುವುದು.

ಇನ್‌ಸ್ಟಾಗ್ರಾಮ್

ಇನ್‌ಸ್ಟಾಗ್ರಾಮ್

ಇನ್‌ಸ್ಟಾಗ್ರಾಮ್ನ ನಿಯಮಗಳು ಅದರ ಮೂಲ ಕಂಪನಿ ಫೇಸ್ ಬುಕ್ ಗೆ ಸಮಾನವಾಗಿದೆ. ಖಾತೆಯನ್ನು ನೆನಪಿಗಾಗಿ ಅಥವಾ ಖಾಯಂ ಆಗಿ ಮುಚ್ಚಿಬಿಡಬಹುದು. ಆದರೆ ಇದು ನಿಮ್ಮ ಕೈಯಲ್ಲಿ ಇಲ್ಲ. ಇನ್‌ಸ್ಟಾಗ್ರಾಮ್ಗೆ ನಿಮ್ಮ ಮರಣಪತ್ರ ಸಲ್ಲಿಸುವ ವ್ಯಕ್ತಿಯು ಖಾತೆ ಡಿಲೀಟ್ ಮಾಡುವ ಅಥವಾ ನೆನಪಿಗಾಗಿ ಮುಂದುವರಿಸುವ ನಿರ್ಧಾರ ಮಾಡಬಹುದು.

ಟ್ವಿಟ್ಟರ್

ಟ್ವಿಟ್ಟರ್

ಟ್ವಿಟ್ಟರ್‌ನಲ್ಲಿ ಸಾವಿನ ಬಳಿಕ ಖಾತೆ ಯಾರು ಮುಂದುವರಿಸಿಕೊಂಡು ಹೋಗಬಹುದು ಎನ್ನುವ ಬಗ್ಗೆ ಯಾವುದೇ ನಿಯಮವಿಲ್ಲ. ಆದರೆ, ಮೃತನ ಕುಟುಂಬದವರು ಖಾತೆ ಮುಚ್ಚಬೇಕೆಂದು ಟ್ವಿಟ್ಟರ್ ಗೆ ಮನವಿ ಮಾಡಿಕೊಳ್ಳಬಹುದು. ಖಾತೆದಾರನ ಕುಟುಂಬದವರು ಎಂದು ದೃಢಪಟ್ಟ ಬಳಿಕವಷ್ಟೇ ಆ ಖಾತೆಯ ಪೋಸ್ಟ್, ಫೋಟೋ ಮತ್ತು ಖಾತೆ ತೆಗೆದುಹಾಕಲಾಗುವುದು.

ಕೊರಾ

ಕೊರಾ

ಕಳೆದ ಕೆಲವು ವರ್ಷಗಳಿಂದ ತುಂಬಾ ವೇಗವಾಗಿ ಬೆಳೆಯುತ್ತಿರುವ ಸಾಮಾಜಿಕ ಜಾಲತಾಣವೆಂದರೆ ಕೊರಾ. ಮನವಿಯ ಬಳಿಕ ನಿಮ್ಮ ಖಾತೆಯನ್ನು ನೆನೆಪಿಗಾಗಿ ಇಡುವಂತಹ ನಿಯಮವು ಕೊರಾದಲ್ಲಿದೆ. ಆದರೆ ಖಾತೆದಾರನ ಮರಣಪ್ರಮಾಣ ಪತ್ರ ನೀಡುವುದು ಕಡ್ಡಾಯ.

ಬಳಕೆದಾರರ ಹೆಸರು ಏನಾಗುವುದು?

ಬಳಕೆದಾರರ ಹೆಸರು ಏನಾಗುವುದು?

ಫೇಸ್ ಬುಕ್, ಟ್ವಿಟ್ಟರ್, ಇನ್‌ಸ್ಟಾಗ್ರಾಮ್ ಮತ್ತು ಇತರ ಕೆಲವು ಸಾಮಾಜಿಕ ಜಾಲತಾಣಗಳಲ್ಲಿ ಪ್ರತಿಯೊಬ್ಬ ಖಾತೆದಾರನು ವಿಶಿಷ್ಟ ಗುರುತಿನ ಹೆಸರುಹೊಂದಿರುತ್ತಾರೆ. ಲಿಂಕ್ಡ್ ಇನ್ ಮತ್ತು ಫೇಸ್‌ಬುಕ್‌ನಲ್ಲಿ ಬೇರೆಯವರು ನಿಮ್ಮ ಹೆಸರು ಪಡೆಯಬಹುದು. ಆದರೆ, ಇನ್‌ಸ್ಟಾಗ್ರಾಮ್, ಟ್ವಿಟ್ಟರ್ ಮತ್ತು ಗೂಗಲ್ ಬಳಕೆದಾರರ ಹೆಸರನ್ನು ಬೇರೆಯವರೊಂದಿಗೆ ಹಂಚಿಕೊಳ್ಳುವುದಿಲ್ಲ.

Best Mobiles in India

English summary
What happens to all my social networking information when I die. to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+