Home
Social media

ವಾಟ್ಸ್‌ಆಪ್‌ನಲ್ಲಿ ಸಿಕ್ರೆಟ್ ಚಾಟ್ ಬೇಕಾ..? ಹಾಗಿದ್ರೆ ಈ ಲಿಸ್ಟ್ ಓಕೆನಾ ನೋಡಿ..?

By Srinidhi

ಫೇಸ್‌ಬುಕ್ ಮಾಲೀಕತ್ವದ ಅನೇಕ ಆಪ್‌ಗಳು ಬಳಕೆದಾರರನ್ನು ಸೆಳೆಯುತ್ತಿದೆ. ಇವುಗಳಲ್ಲಿ ಮೊದಲನೇ ಸ್ಥಾನದಲ್ಲಿ ಇರುವುದು ಎಂದರೆ ವಾಟ್ಸ್‌ಆಪ್. ಇದು ವಿಶ್ವದಲ್ಲಿಯೇ ಅತೀ ಹೆಚ್ಚು ಮಂದಿ ಬಳಕೆದಾರರನ್ನು ಹೊಂದಿದೆ ಎನ್ನಲಾಗಿದೆ. ತಿಂಗಳಲ್ಲಿ ಒಂದು ಬಿಲಿಯನ್‌ಗೂ ಅಧಿಕ ಮಂದಿ ವಾಟ್ಸ್ಆಪ್ ಬಳಕೆದಾರರು ಇದ್ದಾರೆ. ಈ ಹಿನ್ನಲೆಯಲ್ಲಿ ತನ್ನ ಬಳಕೆದಾರರಿಗೆ ಹೊಸ ಮಾದರಿಯಲ್ಲಿ ಸೇವೆಯನ್ನು ನೀಡುವ ಸಲುವಾಗಿ ಹಲವು ಹೊಸ ಮಾದರಿಯ ಸೇವೆಗಳನ್ನು ವಾಟ್ಸ್ಆಪ್ ನೀಡುತ್ತಿದೆ.

ವಾಟ್ಸ್‌ಆಪ್‌ನಲ್ಲಿ ಸಿಕ್ರೆಟ್ ಚಾಟ್ ಬೇಕಾ..? ಹಾಗಿದ್ರೆ ಈ ಲಿಸ್ಟ್ ಓಕೆನಾ ನೋಡಿ..?

ಮಾರುಕಟ್ಟೆಯಲ್ಲಿ ಸಾಕಷ್ಟು ದೊಡ್ಡ ಪ್ರಮಾಣದಲ್ಲಿ ಬಳಕೆದಾರರನ್ನು ಹೊಂದಿರುವ ವಾಟ್ಸ್ಆಪ್ ವಾರಕ್ಕೊಂದು ಹೊಸ ಆಪ್‌ಡೇಟ್ ಅನ್ನು ನೀಡುತ್ತಿದೆ. ಈ ಹಿನ್ನಲೆಯಲ್ಲಿ ಬಳಕೆದಾರರು ಇನ್ನು ಹೆಚ್ಚಿನ ಬೇಡಿಕೆಯನ್ನು ಹೊಂದಿದ್ದಾರೆ ಎನ್ನಲಾಗಿದೆ. ಈ ಹಿನ್ನಲೆಯಲ್ಲಿ ಈ ಕೆಲವು ಆಯ್ಕೆಗಳನ್ನು ನೀಡಿದರೆ ವಾಟ್ಸ್‌ಆಪ್ ಇನ್ನಷ್ಟು ಸುಂದರವಾಗಬಹುದು. ಈ ಹಿನ್ನಲೆಯಲ್ಲಿ ನೀವು ವಾಟ್ಸ್ಆಪ್ ಬಳಕೆ ಮಾಡುತ್ತಿದ್ದರೇ ಈ ಆಯ್ಕೆಗಳು ಬಂದರೆ ಹೇಗಿರುತ್ತದೆ ಎಂಬುದನ್ನು ಯೋಜಿಸಿ.

ಸಿಕ್ರೆಟ್ ಚಾಟ್:

ಸಿಕ್ರೆಟ್ ಚಾಟ್:

ವಾಟ್ಸ್‌ಆಪ್ ತನ್ನ ಬಳಕೆದಾರರಿಗೆ ಸಿಕ್ರಿಟ್ ಅಥವಾ ಇನ್‌ಕಾಗ್ನಿಟೋ ಮೋಡ್ ಅನ್ನು ನೀಡಬೇಕು. ಇದರಲ್ಲಿ ಬಳಕೆದಾರರು ಸಿಕ್ರಿಟ್ ಆಗಿ ಚಾಟ್ ಮಾಡುವ ಅವಕಾಶ ಮಾಡಿಕೊಡಬೇಕು. ಅಲ್ಲದೇ ಚಾಟ್ ಮೇಸೆಜ್ ಇಷ್ಟು ಸಮಯದ ನಂತರದಲ್ಲಿ ಆಟೋ ಡಿಲೀಟ್ ಆಗುವಂತೆಯೂ ಮಾಡಬೇಕು. ಅಲ್ಲದೇ ಗೂಪ್‌ನಲ್ಲಿಯೇ ಇನ್ನೊಬ್ಬರಿಗೆ ತಿಳಿಯದಂತೆ ಮೇಸೆಜ್ ಮಾಡಲು ಅವಕಾಶ ಮಾಡಿಕೊಡಬೇಕು.

ಪಾಸ್‌ವರ್ಡ್:

ಪಾಸ್‌ವರ್ಡ್:

ವಾಟ್ಸ್ಆಪ್ ಗ್ರೂಪ್ ಚಾಟ್‌ನಲ್ಲಿ ಬಳಕೆದಾರರಿಗೆ ಒಬ್ಬರೊಂದಿಗೆ ಚಾಟ್ ಮಾಡಲು ಅವಕಾಶ ಮಾಡಿಕೊಟ್ಟು ಮತ್ತು ಆ ಮೇಸೆಜ್‌ಗೆ ಪಾಸ್‌ವರ್ಡ್ ಇಟ್ಟುಕೊಳ್ಳುವ ಅವಕಾಶವನ್ನು ನೀಡಬೇಕಿದೆ. ಇದರಿಂದ ಬೇರೆಯವರು ನಿಮ್ಮ ಮೇಸೆಜ್ ನೋಡಲು ಸಾಧ್ಯವಾಗದಂತೆ ಮಾಡಬೇಕು.

ಫೇಕ್ ನ್ಯೂಸ್:

ಫೇಕ್ ನ್ಯೂಸ್:

ಇದಲ್ಲದೇ ದೇಶದಲ್ಲಿ ವಾಟ್ಸ್‌ಆಪ್‌ನಿಂದ ಹರಡುತ್ತಿರುವ ಫೇಸ್‌ ಸುದ್ದಿ ಮತ್ತು ರೂಮರ್ ಗಳಿಂದಾಗಿ ದೊಡ್ಡ ಮಟ್ಟದಲ್ಲಿ ದೊಂಬಿಗಳು ಮತ್ತು ಹಿಂಸೆ ಪ್ರಕರಣಗಳು ವರದಿಯಾಗುತ್ತಿದೆ. ಈ ಹಿನ್ನಲೆಯಲ್ಲಿ ಬಳಕೆದಾರರಿಗೆ ಮತ್ತು ಸಮಾಜಕ್ಕೆ ಉತ್ತಮ ಸಂದೇಶವನ್ನು ನೀಡುವ ಸಲುವಾಗಿ ಫೇಸ್‌ ನ್ಯೂಸ್‌ಗಳಿಗೆ ಫೇಸ್‌ಬುಕ್ ಮಾದರಿಯಲ್ಲಿ ಕಡಿವಾಣ ಹಾಕಲು ಯೋಜನೆ ರೂಪಿಸಬೇಕು.

ಗ್ರೂಪ್ ಎಂಟ್ರಿ:

ಗ್ರೂಪ್ ಎಂಟ್ರಿ:

ಈ ಹಿಂದೆ ಯಾರು ಬೇಕಾದರೂ ಯಾರನ್ನ ಬೇಕಾದರೂ ಗ್ರೂಪ್‌ಗೆ ಆಡ್ ಮಾಡಬಹುದಾಗಿದೆ. ಇದರಲ್ಲಿ ಬಳಕೆದಾರರಿಗೆ ಸಾಕಷ್ಟು ದೊಡ್ಡ ಪ್ರಮಾಣದಲ್ಲಿ ಕಿರಿಕಿರಿ ಆಗುತ್ತಿದೆ. ಇದನ್ನು ತಡೆಯುವ ಸಲುವಾಗಿ ಬಳಕೆದಾರರಿಗೆ ಗ್ರೂಪ್‌ಗೆ ಎಂಟ್ರಿ ಬೇಕೆ ಬೇಡವೇ ಎಂದು ವಿಚಾರಿಸಿ ಅವರ ಅಪ್ಪಣೆಯನ್ನು ಪಡೆದು ಸೇರ್ಪಡೆ ಮಾಡಲು ಆಯ್ಕೆಯೊಂದನ್ನು ನೀಡಬೇಕಿದೆ.

ಇನ್‌ವಿಸಿಬಲ್:

ಇನ್‌ವಿಸಿಬಲ್:

ಇದಲ್ಲದೇ ನೀವು ಆನ್‌ಲೈನಿಲ್ಲಿ ಇರುವ ಸಂದರ್ಭದಲ್ಲಿ ಬೇರೆಯವರಿಗೆ ಕಾಣಿಸದಂತೆ ಮಾಡಲು ಇನ್‌ವಿಸಿಬಲ್ ಮಾಡಲು ಹೊಸದೊಂದು ಮಾದರಿಯ ಆಯ್ಕೆಯನ್ನು ನೀಡಬೇಕಿದೆ. ಅಲ್ಲದೇ ಯಾವ ವ್ಯಕ್ತಿ ನಾವು ಕಾಣಿಸಬಾರದು ಎಂಬುದನ್ನು ನಿರ್ಧರಿಸು ಅವಕಾಶವು ಹೊಸದಾಗಿ ನೀಡಬೇಕಾಗಿದೆ.

ಸ್ಟೀಕರ್:

ಸ್ಟೀಕರ್:

ಇದುವರೆಗೂ ವಾಟ್ಸ್‌ಆಪ್ ಕೇಲವ ಬಳಕೆದಾರರಿಗೆ ಎಮೋಜಿಗಳನ್ನು ಬಳಕೆ ಮಾಡಿಕೊಳ್ಳುವ ಅವಕಾಶವನ್ನು ಮಾತ್ರವೇ ನೀಡಲಾಗಿದೆ. ಇದರ ಬದಲು ಬಳಕೆದಾರರಿಗೆ ಸ್ಟೀಕರ್ ಗಳನ್ನು ಬಳಕೆ ಮಾಡಿಕೊಳ್ಳುವ ಅವಕಾಶವನ್ನು ನೀಡಬೇಕಾಗಿದೆ. ಇದು ಬಂದರೆ ಇನ್ನಷ್ಟು ದೊಡ್ಡ ಪ್ರಮಾಣದಲ್ಲಿ ಚಾಟಿಂಗ್‌ನಲ್ಲಿ ಸಹಾಯವಾಗಲಿದೆ.

Best Mobiles in India

English summary
'much-needed' features we want to see in WhatsApp. to know more visit kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+