Home
Social media

ಫೇಸ್ ಬುಕ್ ನಲ್ಲಿ ಮತ್ತೊಂದು ಸಮಸ್ಯೆ – ಭದ್ರತಾ ಅಧಿಕಾರಿಗಳಿಂದ ಪತ್ತೆ

By Gizbot Bureau

ಫೇಸ್ ಬುಕ್ ನ ಸಮಸ್ಯೆಗಳು ಅಂತ್ಯವಾಗುವ ಲಕ್ಷಣಗಳೇ ಕಾಣುತ್ತಿಲ್ಲ. ಕಳೆದ ಮೂರು ವರ್ಷಗಳಲ್ಲಿ ಸುಮಾರು 1.5 ಮಿಲಿಯನ್ ಬಳಕೆದಾರರ ಇಮೇಲ್ ಕಾಂಟ್ಯಾಕ್ಟ್ಸ್ ನ್ನು ಉದ್ದೇಶಪೂರ್ವಕವಲ್ಲದೆ ಕದ್ದಿದೆ ಎಂಬ ವರದಿಯೊಂದು ಲಭ್ಯವಾಗುತ್ತಿದೆ.

ವರದಿ ಹೇಳೋದೇನು?

ವರದಿ ಹೇಳೋದೇನು?

ಬ್ಯುಸಿನೆಸ್ ಇನ್ ಸೈಡರ್ ವರದಿಯೊಂದು ತಿಳಿಸುವ ಪ್ರಕಾರ, ಭದ್ರತಾ ಅಧಿಕಾರಿಯೊಬ್ಬರು ಸಾಮಾಜಿಕ ಜಾಲತಾಣದ ಅಕೌಂಟಿಗೆ ಸೈನಿಂಗ್ ಮಾಡುವಾಗ ವೆರಿಫಿಕೇಷನ್ನಿನ ಕಾರಣದಿಂದಾಗಿ ಇಮೇಲ್ ಐಡಿ ಮತ್ತು ಪಾಸ್ ವರ್ಡ್ ನ್ನು ಕೇಳುವ ಸಂದರ್ಬದಲ್ಲಿ ಇದನ್ನು ಗಮನಿಸಿದ್ದಾರೆ. ಯಾವಾಗ ಬಳಕೆದಾರ ತನ್ನ ಪಾಸ್ ವರ್ಡ್ ನ್ನು ಎಂಟರ್ ಮಾಡಿದರೋ ಆಗ ಕಾಂಟ್ಯಾಕ್ಟ್ಸ್ ನ್ನು ಇಂಪೋರ್ಟ್ ಮಾಡುವ ಪಾಪ್ ಅಪ್ ಮೆಸೇಜ್ ಕಾಣಿಸಿಕೊಂಡಿದೆ. ಇದಕ್ಕಾಗಿ ಅವರು ಯಾವುದೇ ಪರ್ಮಿಷನ್ ನ್ನು ಕೂಡ ಒದಗಿಸಿ ಇರಲಿಲ್ಲ.

1.5 ಮಿಲಿಯನ್ ಜನರ ಕಾಂಟ್ಯಾಕ್ಟ್ಸ್ ಸಂಗ್ರಹ:

1.5 ಮಿಲಿಯನ್ ಜನರ ಕಾಂಟ್ಯಾಕ್ಟ್ಸ್ ಸಂಗ್ರಹ:

ಆನ್ ಲೈನ್ ನಲ್ಲಿ ಈ ವರದಿ ಬಂದ ನಂತರ ಫೇಸ್ ಬುಕ್ ವಕ್ತಾರರು ಮೇ 2016 ರಿಂದ ಈ ವಿಧಾನದಿಂದ ಸುಮಾರು 1.5 ಮಿಲಿಯನ್ ಜನರ ಕಾಂಟ್ಯಾಕ್ಟ್ಸ್ ನ್ನು ಸಂಗ್ರಹಿಸಲಾಗಿದೆ ಎಂಬುದನ್ನು ಒಪ್ಪಿಕೊಂಡಿದ್ದಾರೆ.ಇದೇ ವಿಧಾನವು ಸಾಮಾಜಿಕ ಜಾಲತಾಣಕ್ಕೆ ಫ್ರೆಂಡ್ಸ್ ಸಜೆಷನ್ ಮತ್ತು ಸೋಷಿಯಲ್ ಕನೆಕ್ಷನ್ ಒದಗಿಸುವುದಕ್ಕೆ ನೆರವು ನೀಡಿರುವುದು ಎಂಬುದು ತಿಳಿದುಬಂದಿದೆ.

ಫೇಸ್ ಬುಕ್ ಹೇಳೋದೇನು?

ಫೇಸ್ ಬುಕ್ ಹೇಳೋದೇನು?

ವರದಿಯ ಪ್ರಕಾರ ಫೇಸ್ ಬುಕ್ ವಕ್ತಾರರು ಹೀಗೆ ಹೇಳಿದ್ದಾರೆ" ಕಳೆದ ತಿಂಗಳು ಮೊದಲ ಬಾರಿಗೆ ಫೇಸ್ ಬುಕ್ ಗೆ ಸೈನ್ ಅಪ್ ಆಗುವಾಗ ಜನರ ಅಕೌಂಟ್ ವೆರಿಫಿಕೇಷನ್ ಗಾಗಿ ನಾವು ನಡೆಸುತ್ತಿದ್ದ ಇಮೇಲ್ ಪಾಸ್ ವರ್ಡ್ ವೆರಿಫಿಕೇಷನ್ ಆಯ್ಕೆಯನ್ನು ನಿಲ್ಲಿಸಿದ್ದೇವೆ..ನಾವು ಈ ವಿಧಾನದಲ್ಲಿ ಜನರ ಖಾತೆಗಳನ್ನು ಪರಿಶೀಲಿಸಲು ಮುಂದಾದಾಗ ಕೆಲವರು ಅನುಚಿತವಾಗಿ ಫೇಸ್ ಬುಕ್ ಗೆ ತಮ್ಮ ಅಕೌಂಟ್ ಗಳನ್ನು ಅಪ್ ಲೋಡ್ ಮಾಡಿದ್ದಾರೆ ಎಂಬುದನ್ನು ಗಮನಿಸಿದ್ದೇವೆ."

ಸಮಸ್ಯೆ ಪರಿಹಾರವಾಗಿದೆಯಂತೆ!

ಸಮಸ್ಯೆ ಪರಿಹಾರವಾಗಿದೆಯಂತೆ!

ಈಗಾಗಲೇ ಫೇಸ್ ಬುಕ್ ಈ ಸಮಸ್ಯೆಗೆ ಪರಿಹಾರ ಮಾಡಿದ್ದೇವೆ ಎಂದು ತಿಳಿಸಿದೆ ಮತ್ತು ಜನರಿಗೆ ತಮ್ಮ ಕಾಂಟ್ಯಾಕ್ಟ್ಸ್ ಇಂಪೋರ್ಟ್ ಆಗುವ ಬಗ್ಗೆ ಮಾಹಿತಿ ನೀಡಲಾಗಿದೆ ಎಂಬುದನ್ನು ತಿಳಿಸಲಾಗುತ್ತಿದೆ. ಈ ರೀತಿ ಪಡೆದ ಕಾಂಟ್ಯಾಕ್ಟ್ಸ್ ಗಳನ್ನು ಯಾರೊಂದಿಗೂ ಅಥವಾ ಯಾವುದೇ ಕಾರಣಕ್ಕೂ ಹಂಚಲಾಗುವುದಿಲ್ಲ ಮತ್ತು ಅದನ್ನು ಇದೀಗ ಡಿಲೀಟ್ ಮಾಡಲಾಗುತ್ತಿದೆ.ಸೆಟ್ಟಿಂಗ್ಸ್ ಮೆನುವಿಗೆ ತೆರಳುವ ಮೂಲಕ ಬಳಕೆದಾರರು ತಮ್ಮ ಕಾಂಟ್ಯಾಕ್ಟ್ಸ್ ನ್ನು ಮ್ಯಾನೇಜ್ ಮಾಡಬಹುದು ಮತ್ತು ರಿವ್ಯೂ ಮಾಡುವುದಕ್ಕೂ ಅವಕಾಶವಿರುತ್ತದೆ ಎಂಬುದಾಗಿ ಫೇಸ್ ಬುಕ್ ತಿಳಿಸಿದೆ.

ಮಾರ್ಕ್ ಪೋಸ್ಟ್ ಗಳೇ ಡಿಲೀಟ್:

ಮಾರ್ಕ್ ಪೋಸ್ಟ್ ಗಳೇ ಡಿಲೀಟ್:

ಕಳೆದ ತಿಂಗಳು ಮಾರ್ಕ್ ಜ್ಯೂಕ್ ಬರ್ಗ್ ರ ಹಳೆಯ ಪೋಸ್ಟ್ ಗಳನ್ನು ಫೇಸ್ ಬುಕ್ ತಪ್ಪಾಗಿ ಡಿಲೀಟ್ ಮಾಡಿದೆ ಎಂದು ವರದಿ ಮಾಡಲಾಗಿತ್ತು. ಆ ಪೋಸ್ಟ್ ಗಳಲ್ಲಿ ಕೆಲವು 2007 ಮತ್ತು 2008 ನೇ ಇಸವಿಗೆ ಸಂಬಂಧಿಸಿರುವುದು ಎಂಬುದಾಗಿ ತಿಳಿದುಬಂದಿತ್ತ. ಒಟ್ಟಾರೆ ಫೇಸ್ ಬುಕ್ ಒಂದಲ್ಲ ಒಂದು ವಿಚಿತ್ರ ಕಾರಣಕ್ಕೆ ಸುದ್ದಿಯಲ್ಲಿ ಇದ್ದೇ ಇರುತ್ತದೆ. ಬಹುಶ್ಯಃ ಇದೇ ವಿಚಾರಕ್ಕೆ ಇರಬೇಕು ಹಿಂದಿನವರು ಒಳ್ಳೇದು ಇದ್ದಲ್ಲಿ ಕೆಟ್ಟದ್ದೂ ಇದ್ದೇ ಇರುತ್ತೆ ಎಂದು ನುಡಿದಿರೋದು!


Best Mobiles in India

English summary
Nothing is safe on Facebook, not even your email contacts. Here’s why
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+