ನಿಮ್ಮ ಮೇಲೆ ಎಷ್ಟು ಹುಡುಗಿಯರಿಗೆ ಕ್ರಶ್ ಆಗಿದೆ?..ಲಿಂಕ್ ಒತ್ತಿ ಸಮಸ್ಯೆ ಎದುರಿಸಿ!!

ಫೇಸ್‌ಬುಕ್ ಬಳಕೆದಾರರ ಮಾಹಿತಿ ದುರುಪಯೋಗವಾಗಿರುವುದು ಒಂದು ಸಮಸ್ಯೆಯಾದರೇ, ಥರ್ಡ್‌ ಪಾರ್ಟಿ ಕ್ವಿಜ್‌ ಆಪ್‌ಗಳ ಬಳಕೆದಾರರ ಸಂಖ್ಯೆ ಹೆಚ್ಚಾಗಿರುವುದು ಭಾರತಕ್ಕೆ ಮತ್ತೊಂದು ಸಮಸ್ಯೆಯಾಗಿದೆ. !!

|

ಫೇಸ್‌ಬುಕ್ ಬಳಕೆದಾರರ ಮಾಹಿತಿ ದುರುಪಯೋಗವಾಗಿರುವುದು ಈಗಾಗಲೇ ಸ್ಪಷ್ಟವಾಗಿದೆ. ಕೆಂಬ್ರಿಜ್ ಎನಾಲಿಟಿಕಾ ಎಂಬ ಥರ್ಡ್ ಪಾರ್ಟಿ ಕಂಪನಿ ಫೇಸ್‌ಬುಕ್‌ನಿಂದ ಬಳಕೆದಾರರ ಮಾಹಿತಿಯನ್ನು ಕದ್ದು ಸ್ವಹಿತಕ್ಕಾಗಿ ಬಳಸಿಕೊಂಡಿದೆ. ಈ ಘಟನೆ ಹೊರದೇಶಲ್ಲಿಯೇ ನಡೆದರೂ ಇದು ನೇರವಾಗಿ ಭಾರತೀಯ ಫೇಸ್‌ಬುಕ್ ಬಳಕೆದಾರರ ಮೇಲೆ ಹೆಚ್ಚು ಪ್ರಭಾವ ಬೀರಿದೆ.!!

ಹೌದು, ಕೆಂಬ್ರಿಜ್ ಎನಾಲಿಟಿಕಾ ಎಂಬ ಕಂಪನಿ ''ಥರ್ಡ್‌ ಪಾರ್ಟಿ ಕ್ವಿಜ್‌" ಆಪ್‌ನ ಮೂಲಕ ಫೇಸ್‌ಬುಕ್ ಬಳಕೆದಾರರ ಮಾಹಿತಿ ದುರುಪಯೋಗ ಮಾಡಿಕೊಂಡಿದೆ. ಇಲ್ಲಿ ಫೇಸ್‌ಬುಕ್ ಬಳಕೆದಾರರ ಮಾಹಿತಿ ದುರುಪಯೋಗವಾಗಿರುವುದು ಒಂದು ಸಮಸ್ಯೆಯಾದರೇ, ಥರ್ಡ್‌ ಪಾರ್ಟಿ ಕ್ವಿಜ್‌ ಆಪ್‌ಗಳ ಬಳಕೆದಾರರ ಸಂಖ್ಯೆ ಹೆಚ್ಚಾಗಿರುವುದು ಭಾರತಕ್ಕೆ ಮತ್ತೊಂದು ಸಮಸ್ಯೆಯಾಗಿದೆ. !!

ನಿಮ್ಮ ಮೇಲೆ ಎಷ್ಟು ಹುಡುಗಿಯರಿಗೆ ಕ್ರಶ್ ಆಗಿದೆ?..ಲಿಂಕ್ ಒತ್ತಿ ಸಮಸ್ಯೆ ಎದುರಿಸಿ!

ನಿಮ್ಮ ಮೇಲೆ ಎಷ್ಟು ಹುಡುಗಿಯರಿಗೆ ಕ್ರಶ್ ಆಗಿದೆ? ಹಿಂದಿನ ಜನ್ಮದಲ್ಲಿ ಏನಾಗಿ ನೀವು ಹುಟ್ಟಿದ್ದಿರಿ? ನಿಮ್ಮ ಒಳ್ಳೆಯ ಗುಣಗಳು ಯಾವುವು? ಹೀಗೆ ಮನರಂಜನೆ ಪೋಸ್ಟ್‌ಗಳನ್ನು ನೀವು ಫೇಸ್‌ಬುಕ್‌ನಲ್ಲಿ ನೋಡಿರಬಹುದು. ಇವೆಲ್ಲವೂ ಥರ್ಡ್‌ ಪಾರ್ಟಿ ಆಪ್‌ಗಳಿಂದಾಗಿದ್ದು, ಹೆಚ್ಚು ಭಾರತೀಯರು ಇಂತಹ ಥರ್ಡ್‌ ಪಾರ್ಟಿ ವೆಬ್‌ಸೈಟ್‌ಗಳನ್ನು ಬಳಸುತ್ತಿದ್ದಾರೆ.!!

ಈ ಥರ್ಡ್‌ ಪಾರ್ಟಿ ಆಪ್‌ಗಳು ಫೇಸ್‌ಬುಕ್‌ ಮೂಲಕ ಲಾಗಿನ್‌ ಅವಕಾಶ ಕಲ್ಪಿಸುತ್ತವೆ. ಒಮ್ಮೆ ನೀವು ಫೇಸ್‌ಬುಕ್‌ ಮೂಲಕ ಲಾಗಿನ್‌ ಆದರೆ, ಆ ಆಪ್‌ಗಳು ನೇರವಾಗಿ ನಿಮ್ಮ ಹಾಗೂ ನಿಮ್ಮ ಫ್ರೆಂಡ್‌ ಲಿಸ್ಟ್‌ನಲ್ಲಿರುವ ಎಲ್ಲರ ಮಾಹಿತಿಯನ್ನು ಪಡೆದುಕೊಂಡು ಅವುಗಳನ್ನು ಹಣಕ್ಕಾಗಿ ಮಾರ್ಕೆಟಿಂಗ್ ಕಂಪೆನಿಗಳಿಗೆ ಮಾರುವ ಅಪಾಯ ಇದ್ದೇ ಇರುತ್ತದೆ.!!

ನಿಮ್ಮ ಮೇಲೆ ಎಷ್ಟು ಹುಡುಗಿಯರಿಗೆ ಕ್ರಶ್ ಆಗಿದೆ?..ಲಿಂಕ್ ಒತ್ತಿ ಸಮಸ್ಯೆ ಎದುರಿಸಿ!

ಕೆಲವು ಥರ್ಡ್ ಪಾರ್ಟಿ ಆಪ್‌ ಜಾಹಿರಾತು ಮಾರಾಟಕ್ಕಾಗಿ ಇಂತಹ ಕೆಲಸಗಳನ್ನು ಮಾಡುತ್ತವೆ. ಆದರೆ, ಯಾವ ಥರ್ಡ್ ಪಾರ್ಟಿ ಆಪ್‌ ಯಾವ ಮಾಹಿತಿಯನ್ನು ಕದಿಯುತ್ತದೆ ಎಂಬುದನ್ನು ಬಲ್ಲವರಾರು? ಹಾಗಾಗಿ, ಫೇಸ್‌ಬುಕ್‌ ಮೂಲಕವೇ ಲಾಗಿನ್‌ ಬಯಸುವ ಯಾವುದೇ ಥರ್ಡ್ ಪಾರ್ಟಿ ಆಪ್‌ಗಳಿಗೆ ಲಾಗಿನ್ ಆಗದೇ ಇರುವುದು ಒಳ್ಳೆಯದು.!!

ಮೊಬೈಲ್‌ನಲ್ಲಿಯೇ 'PF' ಬ್ಯಾಲೆನ್ಸ್ ಚೆಕ್ ಮಾಡುವುದು ಹೇಗೆ?

ಓದಿರಿ: ಮೊಬೈಲ್ ಜಗತ್ತನೇ ಹೆದರಿಸಿರುವ 'ಶಿಯೋಮಿ' ಸ್ಮಾರ್ಟ್‌ಫೋನ್ ಬಿಡುಗಡೆ!!

Best Mobiles in India

English summary
This weekend The New York Times reported that 50 million Facebook users had their profile information . to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X