ಮತ್ತೇ ಬಂದಿದೆ ಆರ್ಕುಟ್: ಹೊಸ ವಿನ್ಯಾಸ, ಹೊಸ ಹೆಸರು..!
ಭಾರತದಲ್ಲಿ ಫೇಸ್‌ಬುಕ್ ಆರಂಭಕ್ಕೂ ಮುನ್ನವೇ ಸಾಕಷ್ಟು ಸದ್ದು ಮಾಡಿದ್ದ ಸೋಶಿಯಲ್ ಮೀಡಿಯಾ ಎಂದರೆ ಅದು ಆರ್ಕುಟ್ ಮಾತ್ರವೇ. ಅಂದಿನ ಸಮಯದಲ್ಲಿ ಯುವ ಸಮೂಹವನ್ನು ಸೂಜಿಗಲ್ಲಿನಂತೆ ಸೆಳಿದ್ದ ಆರ್ಕುಟ್ ನಂತರದಲ್ಲಿ ತೆರೆಮೆರೆಗೆ ಸೆರೆದಿತ್ತು. ಫೇಸ್‌ಬುಕ್ ಅಬ್ಬರ ಮುಂದೆ ತತ್ತರಿಸಿ ಹೋಗಿತ್ತು. ಬಳಕೆದಾರರನ್ನು ಕಳೆದುಕೊಂಡು ಜನಪ್ರಿಯತೆಯನ್ನು ಕಳೆದುಕೊಂಡ ಪರಿಣಾಮ ಗೂಗಲ್ ಆರ್ಕುಟ್ ಅನ್ನು ಅಧಿಕೃತವಾಗಿ 2014ರಲ್ಲಿ ಬಂದ್ ಮಾಡಿತ್ತು.

ಈಗ ಹೊಸ ಅವತಾರದಲ್ಲಿ, ಹೊಸ ಮುಖವಾಗಿ ಕಾಣಿಸಿಕೊಂಡಿದ್ದು, ಆರ್ಕುಟ್ ನಿರ್ಮಾಪಕರೇ ಹೊಸದಾಗಿ 'ಹಲೋ' ಎನ್ನುವ ಹೊಸ ಜಾಲತಾಣವನ್ನು ಆರಂಭಿಸಿದ್ದಾರೆ. ಈಗಾಗಲೇ ವಿದೇಶಗಳಲ್ಲಿ ಹಿಟ್ ಆಗಿರುವ ಆರ್ಕುಟ್ ಹಲೋ ದೇಶದಲ್ಲಿಯೂ ಹೊಸ ಕ್ರಾಂತಿಗೆ ಕಾರಣವಾಗಲಿದೆ.

ಫೇಸ್‌ಬುಕ್‌ಗೆ ಬದಲಿ ಆಯ್ಕೆ:
ಸದ್ಯ ಮಾರುಕಟ್ಟೆಯಲ್ಲಿ ಫೇಸ್‌ಬುಕ್ ಜನಪ್ರಿಯತೆಯನ್ನು ಕಳೆದುಕೊಂಡಿದ್ದು, ಬಳಕೆದಾರರ ನಂಬಿಕೆಗೆ ಹೊಡೆತವನ್ನು ನೀಡಿದೆ. ಆದರೆ ಜನರಿಗೆ ಬೇರೆ ಆಯ್ಕೆಯೊಂದು ಇಲ್ಲದ ಕಾರಣ ಇನ್ನು ಫೇಸ್‌ಬುಕ್ ಮೇಲೆಯೇ ಹೆಚ್ಚಿನ ಅವಲಂಬಿತರಾಗಿದ್ದಾರೆ. ಇದಕ್ಕೆ ಉತ್ತರವಾಗಿ ಫೇಸ್‌ಬುಕ್ ಗಿಂತಲೂ ಸೇಫ್ ಆಗಿ, ವಿಶೇಷವಾಗಿ ಮಾರುಕಟ್ಟೆಗೆ ಕಾಲಿಟ್ಟಿರುವ ಆರ್ಕುಟ್ ಹಲೋ ಯುವ ಜನರಿಗೆ ಹತ್ತಿರವಾಗಲಿದೆ. ಫೇಸ್‌ಬುಕ್‌ಗೆ ಬದಲಿ ಆಯ್ಕೆಯಾಗಿದೆ.

ಆಪ್ ಸೇವೆ
ಸದ್ಯ ಆಪ್ ಮಾದರಿಯಲ್ಲಿ ಮಾತ್ರವೇ ಕಾಣಿಸಿಕೊಂಡಿರುವ ಆರ್ಕುಟ್ ಹಲೋ, ಹೊಸ ಮಾದರಿಯ ಸೋಶಿಯಲ್ ಮೀಡಿಯಾವನ್ನು ಬಳಕೆದಾರರಿಗೆ ತೋರಿಸಿಕೊಡಲಿದೆ. ಈ ಹಿಂದಿನ ಆರ್ಕುಟ್ ಅನುಭವ ಮತ್ತು ಹೊಸ ತಲೆಮಾರಿನ ಯುವ ಜನರನ್ನು ಗಮನದಲ್ಲಿ ಇಟ್ಟುಕೊಂಡು ಆರ್ಕುಟ್ ಹಲೋವನ್ನು ವಿನ್ಯಾಸ ಮಾಡಲಾಗಿದೆ.

ಈಗಾಗಲೇ ಹಿಟ್:
ಈಗಾಗಲೇ ಬ್ರೆಜಿಲ್ ನಲ್ಲಿ ಲಭ್ಯವಿರುವ ಆರ್ಕುಟ್ ಹಲೋ, ಸುಮಾರು ಒಂದು ಮಿಲಿಯನ್ ಡೌನ್‌ಲೋಡ್ ಕಂಡಿದೆ. ಅಲ್ಲದೇ ಸದ್ಯ ಇದು ಬೀಟಾ ಆವೃತ್ತಿಯಲ್ಲಿ. ಒಂದು ವೇಳೆ ಸಂಪೂರ್ಣ ಆವೃತ್ತಿ ಬಿಡುಗಡೆಯಾದಲ್ಲಿ ಬಳಕೆದಾರರ ಸಂಖ್ಯೆಯೂ ಫೇಸ್‌ಬುಕ್ ಅನ್ನು ಮೀರಿಸಲಿದೆ ಎನ್ನುವ ಮಾತು ಕೇಳಿಬಂದಿದೆ.


ಸ್ಟೋರ್‌ನಲ್ಲಿ ಲಭ್ಯ:
ಸದ್ಯ ಆರ್ಕುಟ್ ಹಲೋ ಗೂಗಲ್ ಪ್ಲೇ ಸ್ಟೋರ್ ಮತ್ತು ಆಪಲ್ ಆಪ್ ಸ್ಟೋರಿನಲ್ಲಿ ದೊರೆಯುತ್ತಿದ್ದು, ಆಪ್ ಆವೃತ್ತಿಯಲ್ಲಿ ಮಾತ್ರವೇ ಕಾರ್ಯನಿರ್ವಹಿಸುತ್ತಿದೆ. ಬಳಕೆದಾರರು ಫೇಸ್‌ಬುಕ್‌ನಿಂದ ಬೇಸತ್ತಿದ್ದು, ಹೊಸದಾಗಿ ಎನ್ನನಾದರು ಬಳಕೆ ಮಾಡಬೇಕು ಎನ್ನುವವರಿಗೆ ಆರ್ಕುಟ್ ಹಲೋ ಹೇಳಿ ಮಾಡಿಸಿದ ಆಯ್ಕೆಯಾಗಿದೆ.


Click it and Unblock the Notifications