ಇನ್‌ಸ್ಟಾಗ್ರಾಂನಲ್ಲಿ ವಿಶ್ವ ದಾಖಲೆಯ ಲೈಕ್ ಪಡೆದ ಈ ಮೊಟ್ಟೆಯಲ್ಲಿ ಏನಿದೆ?
ಹಾಲಿವುಡ್‌ನ ಪ್ರಖ್ಯಾತ ನಟಿ ಕೈಲಿ ಜೆನ್ನರ್ ಹೆಸರಿನಲ್ಲಿದ್ದ ಇನ್‌ಸ್ಟಾಗ್ರಾಂನ ಅಪರೂಪದ ದಾಖಲೆಯೊಂದನ್ನು ಕೋಳಿ ಮೊಟ್ಟೆಯೊಂದು ಮುರಿದಿದೆ.! ಹೌದು, ನೀವಿದ್ದನ್ನು ನಂಬಲೇಬೇಕು. ಪ್ರಖ್ಯಾತ ಚಿತ್ರ ಜಾಲತಾಣ ಇನ್‌ಸ್ಟಾಗ್ರಾಂನಲ್ಲಿ ಅತಿ ಹೆಚ್ಚು ಲೈಕ್ಸ್ ಪಡೆದಿದ್ದ ಹಾಲಿವುಡ್‌ನ ಖ್ಯಾತ ನಟಿಕೈಲಿ ಜೆನ್ನರ್ ಅವರ ಚಿತ್ರವೊಂದನ್ನು ಮೊಟ್ಟೆಯ ಫೋಟೊವೊಂದು ಮುರಿದಿದೆ.
ಇಲ್ಲಿಯವರೆಗೂ ಇನ್‌ಸ್ಟಾಗ್ರಾಂನಲ್ಲಿ ಕೈಲಿ ಜೆನ್ನರ್‌ನ ಒಂದು ಫೋಟೋ ದಾಖಲೆಯ ಸುಮಾರು 18 ಮಿಲಿಯನ್ ಲೈಕ್ ಪಡೆದು ದಾಖಲೆಯನ್ನು ನಿರ್ಮಿಸಿತ್ತು. ಆದರೆ, ಈ ದಾಖಲೆಯನ್ನು ಒಂದು ಮೊಟ್ಟೆಯ ಫೋಟೋ ಮುರಿದು ಹಾಕಿದ್ದು. ಇದೀಗ ಇನ್‌ಸ್ಟಾಗ್ರಾಂನಲ್ಲೇ ಅತಿ ಹೆಚ್ಚು ಲೈಕ್ಸ್ ಪಡೆದ ಚಿತ್ರ ಎಂಬ ಕೀರ್ತಿಗೆ ಭಾಜನವಾಗಿದೆ. ಇದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

'ವರ್ಲ್ಡ್ ರೆಕಾರ್ಡ್ ಎಗ್' ಎಂಬ ಹೆಸರಿನ ಇನ್‌ಸ್ಟಾಗ್ರಾಂ ಖಾತೆ ತೆರೆದು ಮೊಟ್ಟೆಯೊಂದರ ಫೋಟೋ ಹಾಕಲಾಗಿತ್ತು. ಈ ಫೋಟೋಗೆ ಕೈಲಿ ಜೆನ್ನರ್ ದಾಖಲೆಯನ್ನು ಮುರಿದು ಇನ್ ಸ್ಟಾಗ್ರಾಂನಲ್ಲಿ ಹೊಸ ದಾಖಲೆ ಸೃಷ್ಟಿಸೋಣ ಎಂಬ ಟ್ಯಾಗ್ ಲೈನ್ ಕೂಡ ನೀಡಲಾಗಿತ್ತು. ನಂತರ ಆ ಫೋಟೋ ವೈರಲ್ ಆಗಿ ಇನ್‌ಸ್ಟಾಗ್ರಾಂನಲ್ಲಿ ಕೈಲಿ ಜೆನ್ನರ್ ಚಿತ್ರವನ್ನು ಹಿಂದಿಕ್ಕಿ ದಾಖಲೆ ನಿರ್ಮಿಸಿದೆ.
ದಾಖಲೆ ಸೃಷ್ಟಿಸಿರುವ ಮೊಟ್ಟೆಯ ಫೋಟೋ ಇಲ್ಲಿಯವರೆಗೂ 40 ಮಿಲಿಯನ್‌ಗಿಂತ ಹೆಚ್ಚು ಲೈಕ್ ಪಡೆದು ಮುನ್ನುಗ್ಗುತ್ತಿದೆ. ವರ್ಲ್ಡ್ ರೆಕಾರ್ಡ್ ಎಗ್ ಹೆಸರಿನ ಈ ಖಾತೆಯ ಮತ್ತೊಂದು ವಿಶೇಷತೆ ಎಂದರೆ, ಆ ಮೊಟ್ಟೆಯ ಫೋಟೋ ಅವರು ಅಪ್ಲೋಡ್ ಮಾಡಿದ ಮೊದಲ ಚಿತ್ರವಾಗಿದೆ. ಅಲ್ಲದೆ ಈ ಒಂದೇ ಒಂದು ಪೋಸ್ಟ್ನಿಂದ ಖಾತೆಗೆ 7.3 ಕೋಟಿ ಜನರು ಫಾಲೋವರ್ಸ್ ಸಿಕ್ಕಿದ್ದಾರೆ.
View this post on Instagramಈ ಹಿಂದೆ ನಟಿ ಜೆನ್ನರ್ ತನ್ನ ಮಗಳ ಫೋಟೋವನ್ನು ಇನ್‌ಸ್ಟಾಗ್ರಾಂ ನಲ್ಲಿ ಹಂಚಿಕೊಂಡಿದ್ದರು. ಈ ಫೋಟೋಗೆ 18 ಮಿಲಿಯನ್ ಲೈಕ್ಸ್ ಸಿಕ್ಕಿತ್ತು. ಇದು ಈವರೆಗಿನ ದಾಖಲೆಯಾಗಿತ್ತು. ಆದರೆ ಈ ದಾಖಲೆಯನ್ನು ಅದ್ಯಾರೋ ಹಾಕಿದ ಒಂದು ಮೊಟ್ಟೆಯ ಫೋಟೋ ಅಳಿಸಿ ಹಾಕಿದೆ. ಸಾಮಾಜಿಕ ಜಾಲತಾಣದಲ್ಲಿ ಯಾರಿಗಿಂತ ನಾನೂ ಕಡಿಮೆ ಇಲ್ಲ ಎಂದು ಆ ಮೊಟ್ಟೆ ಕೂಗಿ ಹೇಳುತ್ತಿದೆ.
CommentsBest Mobiles in India English summaryKylie Jenner will have to settle for second-best now that a stock photo of an egg has overtaken her birth announcement as the most-liked photo on Instagram.to know more visit to kannada.gizbot.com


Click it and Unblock the Notifications