Subscribe to Gizbot

ಸನ್ನಿಲಿಯೋನ್ ಹಿಂದಿಕ್ಕಿ ಗೂಗಲ್ ಮೋಸ್ಟ್ ಸರ್ಚಿಂಗ್ ಪಟ್ಟ ಪಡೆದಳು 'ವಾರಿಯರ್'!!

Written By:

ಕೇವಲ ಒಂದು ವೈರಲ್ ವಿಡಿಯೋದಿಂದ ಒಂದೇ ದಿನದಲ್ಲಿ ಇಂಟರ್‌ನೆಟ್‌ನಲ್ಲಿ ಹವಾ ಎಬ್ಬಸಿದ ಮಲಯಾಳಂ ನಟಿ ಪ್ರಿಯಾ ಪ್ರಕಾಶ್ ವಾರಿಯರ್ ಇದೀಗ ಸನ್ನಿಲಿಯೋನ್ ಅನ್ನು ಹಿಂದಿಕ್ಕಿದ್ದಾಳೆ.! ಹೌದು, ಭಾರತದ ಗೂಗಲ್‌ ಇಂಟರ್‌ನೆಟ್ ಬಳಕೆದಾರರಲ್ಲಿ ಗೂಗಲ್‌ ಮೋಸ್ಟ್ ಸರ್ಚಿಂಗ್ ನಟಿ ಎಂಬ ದಾಖಲೆ ಪ್ರಿಯಾ ಪ್ರಕಾಶ್ ಅವರಿಗೆ ದಕ್ಕಿದೆ!!

ಕಳೆದ ಎರಡು ವರ್ಷಗಳಿಂದ ಭಾರತದ ಗೂಗಲ್‌ನಲ್ಲಿ ಮೊದಲ ಸ್ಥಾನವನ್ನೇ ಪಡೆದುಕೊಂಡು ಬಂದಿದ್ದ ಸನ್ನಿಲಿಯೋನ್ ಅನ್ನು ಒಂದೇ ವಾರದಲ್ಲಿ ಪ್ರಿಯಾ ಪ್ರಕಾಶ್ ವಾರಿಯರ್ ಹಿಂದಿಕ್ಕಿರುವ ಮಾಹಿತಿಯನ್ನು ಜನಪ್ರಿಯ ಎಎನ್ಐ ಮಾಧ್ಯಮ ಸಂಸ್ಥೆ ಪ್ರಕಟಿಸಿದೆ.! ಹಾಗಾಗಿ, ಭಾರತದ ಹೊಸ ಸೆಲೆಬ್ರಿಟಿಯಾಗಿ ಪ್ರಿಯಾ ಪ್ರಕಾಶ್ ವಾರಿಯರ್ ಹೊರಹೊಮ್ಮಿದ್ದಾರೆ.!!

ಸನ್ನಿಲಿಯೋನ್ ಹಿಂದಿಕ್ಕಿ ಗೂಗಲ್ ಮೋಸ್ಟ್ ಸರ್ಚಿಂಗ್ ಪಟ್ಟ ಪಡೆದಳು 'ವಾರಿಯರ್'!!

ಸಾಮಾಜಿಕ ಜಾಲತಾಣದಲ್ಲಿ ರಾತ್ರೋರಾತ್ರಿ ಜಗತ್ಪ್ರಸಿದ್ದರಾದ ಸೆಲೆಬ್ರಿಟಿಗಳ ಸಾಲಿಗೆ 18ನೇ ವಯಸ್ಸಿನ ಪ್ರಿಯಾ ಪ್ರಕಾಶ್ ವಾರಿಯರ್ ಕೂಡ ಸೇರಿದ್ದು, ಪ್ರಿಯ ಪ್ರಕಾಶ್ ವಾರಿಯರ್ ಬಗ್ಗೆ ಇಂಟರ್‌ನೆಟ್‌ನಲ್ಲಿ ಟ್ರೆಂಡ್ ಆಗಿರುವ ಇನ್ನಿತರ ಕುತೋಹಲ ಅಂಶಗಳನ್ನು ನೀವು ಮುಂದಿನ ಸ್ಲೈಡರ್‌ಗಳಲ್ಲಿ ತಿಳಿಯಬಹುದು.!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಇನ್‌ಸ್ಟಾಗ್ರಾಂ ಕ್ವೀನ್!!

ಇನ್‌ಸ್ಟಾಗ್ರಾಂ ಕ್ವೀನ್!!

ವಿಶ್ವದಲ್ಲಿಯೇ ಅತ್ಯಂತ ಬೇಗ ಅತಿಹೆಚ್ಚು ಇನ್‌ಸ್ಟಾಗ್ರಾಂ ಫಾಲೋವರ್ಸ್ ಪಡೆದ ಖ್ಯಾತಿ ಪ್ರಿಯಾ ಪ್ರಕಾಶ್ ವಾರಿಯರ್ ಅವರ ಪಾಲಾಗಿದೆ. ಕೇವಲ ಮೂರು ದಿನಗಳಲ್ಲಿ ಮೂರು ಮಿಲಿಯನ್‌ಗೂ ಹೆಚ್ಚು ಜನರು ಪ್ರಿಯಾ ಪ್ರಕಾಶ್ ವಾರಿಯರ್ ಅವರ ಫಾಲೊ ಮಾಡಲು ಶುರು ಮಾಡಿದ್ದಾರೆ.!!

ಸನ್ನಿಲಿಯೋನ್ ಮಣಿಸಿದ್ದು.!!

ಸನ್ನಿಲಿಯೋನ್ ಮಣಿಸಿದ್ದು.!!

ರಾತ್ರೋರಾತ್ರಿ ಜಗತ್ಪ್ರಸಿದ್ದರಾದ ಸೆಲೆಬ್ರಿಟಿ ಪ್ರಿಯಾ ಪ್ರಕಾಶ್ ವಾರಿಯರ್ ಬಾಲಿವುಡ್ ಖಾನ್‌ಗಳು, ದೀಪಿಕಾ, ಐಶ್ವರ್ಯ ಬಚ್ಚನ್‌ಗೂ ಸಾಧ್ಯವಾಗದ ದಾಖಲೆ ನಿರ್ಮಿಸಿದ್ದಾರೆ. ಕಳೆದ ಎರಡು ವರ್ಷಗಳಿಂದಲೂ ಭಾರತದಲ್ಲಿ ಮೋಸ್ಟ್ ಗೂಗಲ್ ಸರ್ಚ್ ವ್ಯಕ್ತಿ ಎಂಬ ಪಟ್ಟವನ್ನು ಸನ್ನಿಲಿಯೋನ್‌ರಿಂದ ಪ್ರಕಾಶ್ ವಾರಿಯರ್ ಕಿತ್ತುಕೊಂಡಿದ್ದಾರೆ.!!

ವಿಶ್ವದಲ್ಲಿಯೂ ಜನಪ್ರಿಯತೆ!!

ವಿಶ್ವದಲ್ಲಿಯೂ ಜನಪ್ರಿಯತೆ!!

ಪ್ರಿಯಾ ಪ್ರಕಾಶ್ ವಾರಿಯರ್ ಅವರ ಜನಪ್ರಿಯತೆ ಭಾರತದಲ್ಲಿ ಮಾತ್ರವಲ್ಲದೇ ವಿಶ್ವದಲ್ಲಿಯೇ ಹಬ್ಬಿದೆ. ಪಾಕಿಸ್ತಾನ, ಬಾಂಗ್ಲಾದೇಶ ಸೇರಿದಂತೆ ಇತರೆ ಹಲವು ದೇಶಗಳಲ್ಲಿಯೂ ಕೂಡ ವಾರಿಯರ್ ಅವರನ್ನು ಭಾರತೀಯರಷ್ಟೆ ಹೆಚ್ಚು ಸರ್ಚ್ ಮಾಡಿದದ್ದಾರೆ. ಅಂದರೆ, ವಿಶ್ವದಲ್ಲಿಯೂ ವಾರಿಯರ್ ಜನಪ್ರಿಯತೆ ಹೆಚ್ಚಿದೆ.!!

Redmi Note 5 ಬಿಡುಗಡೆಗೆ..! ಬೆಸ್ಟ್, ಬಜೆಟ್, ಬೊಂಬಾಟ್
ಫೇಸ್‌ಬುಕ್ ವೈರೆಲ್ !!

ಫೇಸ್‌ಬುಕ್ ವೈರೆಲ್ !!

ಮಲಯಾಳಂ ಚಿತ್ರ 'ಒರು ಆಧಾರ್ ಲವ್' ಚಿತ್ರದ ಹಾಡೊಂದು ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ ವೈರಲ್ ಆಗಿತ್ತು.! ವಿಡಿಯೋ ಬಿಡುಗಡೆಯಾದ ಎರಡು ದಿನ ಫೇಸ್‌ಬುಕ್ ನ್ಯೂಸ್‌ಫೀಡ್‌ನಲ್ಲಿನ 10 ಪೋಸ್ಟ್‌ಗಳಲ್ಲಿ ಕನಿಷ್ಟ ಒಂದಕ್ಕಿಂತ ಹೆಚ್ಚು ಪೋಸ್ಟ್ ಪ್ರಕಾಶ್ ವಾರಿಯರ್ ಅವರದ್ದಾಗಿತ್ತು ಎಂದು ಕೆಲವು ಮಾಧ್ಯಮಗಳು ವರದಿ ಮಾಡಿದ್ದವು.!!

ಫೇಸ್‌ಬುಕ್ ಪೇಜ್‌ಗಳ ಪಾತ್ರ!!

ಫೇಸ್‌ಬುಕ್ ಪೇಜ್‌ಗಳ ಪಾತ್ರ!!

ಭಾರತದ ಇಂಟರ್‌ನೆಟ್‌ನಲ್ಲಿ ಪ್ರಿಯಾ ಪ್ರಕಾಶ್ ವಾರಿಯರ್ ಅವರ ಜನಪ್ರಿಯತೆಗೆ ಫೇಸ್‌ಬುಕ್ ಪೇಜ್‌ಗಳ ಪಾತ್ರ ಹೆಚ್ಚಿದೆ.! ಸರ್ಕ್ಯಾಸ್ಮ್, ಲಾಫಿಂಗ್ ಕಲರ್‌ನಂತಹ ಹೆಚ್ಚು ಫಾಲೊವರ್ಸ್ ಹೊಂದಿರುವ ಪೇಜ್‌ಗಳು ಪ್ರಿಯಪ್ರಕಾಶ್ ಅವರ ಬಗ್ಗೆ ನೂರಕ್ಕೂ ಅಧಿಕ ಪೋಸ್ಟ್ ಮಾಡಿದ್ದಾರೆ ಎಂದು ಮನರಂಜನಾ ಮಾಧ್ಯಮವೊಂದು ಹೇಳಿದೆ.!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Viral sensation Priya Prakash Varrier has taken down Sunny Leone to become Google's most searched actress.to know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot