Home
Social media

ಕಣ್ ಹೊಡೆದು ಆನ್‌ಲೈನಿನಲ್ಲಿ ಹವಾ ಎಬ್ಬಿಸಿದ ಮಲಯಾಳಿ ಸುಂದರಿ..! ಯಾರಿವಳು..?

By Srinidhi

ಮಲಯಾಲಂ ಸಿನಿ ಲೋಕವು ಕೆಲವು ದಿನಗಳಲ್ಲಿ ಹೆಚ್ಚು ಸದ್ದು ಮಾಡುತ್ತಿದ್ದು, ಎಲ್ಲಾ ಭಾಷಿಗರನ್ನು ತನ್ನಡೆಗೆ ಸೆಳೆಯುತ್ತಿದೆ. ಹೊಸ ಮಾದರಿಯ ಸಿನಿಮಾಗಳು ಮತ್ತು ಸಂಗತಿಗಳು ಮಲಯಾಳಂ ಸಿನಿ ಲೋಕವನ್ನು ಶ್ರೀಮಂತಗೊಳಿಸುತ್ತದ್ದು, ತನ್ನ ಮಾರುಕಟ್ಟೆಯನ್ನು ವಿಸ್ತಾರಗೊಳಿಸಿಕೊಂಡಿದೆ. ಮೊನ್ನೆವರೆಗೂ ಮಲಯಾಳಂನ ಸಿನಿಮಾದ ಜುಮುಕಿ ಕಮಲ್ ಹಾಡು ಹೆಚ್ಚು ಸದ್ದು ಮಾಡುತ್ತಿತ್ತು ಇದಕ್ಕೆ ಇನ್ನೊಂದು ಹೊಸ ಸೇರ್ಪಡೆಯನ್ನು ಕಾಣಬಹುದಾಗಿದೆ.

ಪ್ರೇಮಿಗಳ ದಿನಾಚರಣೆ ಹತ್ತಿರ ಬರುತ್ತಿರುವ ಸಂದರ್ಭದಲ್ಲಿ ಬಿಡುಗಡೆಯಾಗಿರುವ ಒರು ಅದರ್ ಲವ್ ಹೆಸರಿನ ಸಿನಿಮಾದ ಮಾಣಿಕ್ಯ ಮಲರಾಯ ಪೂಪಿ ಎನ್ನುವ ಸಾಂಗ್ ವೊಂದು ಹೆಚ್ಚು ಸದ್ದು ಮಾಡುತ್ತಿದೆ. ಅದರಲ್ಲಿ ಈ ಸಾಂಗ್‌ನಲ್ಲಿರುವ ಒಂದು ತುಣುಕು ಫೇಸ್‌ಬುಕ್- ವಾಟ್ಸ್‌ಆಪ್ ನಲ್ಲಿ ಸಖತ್ ಸದ್ದು ಮಾಡುತ್ತಿದೆ ಎನ್ನಲಾಗಿದೆ. ಅದರಲ್ಲಿ ಕಾಣಿಸಿಕೊಂಡಿರುವ ಚೆಲುವೆ ಹಲವರ ನಿದ್ದೆಗೆ ಕನ್ನ ಹಾಕಿದ್ದಾಳೆ.

ಟ್ಯಾಗ್ ಪೇಜ್‌:

ಟ್ಯಾಗ್ ಪೇಜ್‌:

ಫೇಸ್‌ಬುಕ್‌ನಲ್ಲಿರುವ ಎಲ್ಲಾ ಟ್ಯಾಗ್ ಪೇಜ್‌ಗಳಲ್ಲಿ ಈ ಹೊಸ ಹಾಡಿನಲ್ಲಿ ಬರುವ ಹುಡುಗಿಯೊಬ್ಬಳು ಕಣ್ಣು ಹೊಡೆಯುವ ದೃಶ್ಯವು ರಾಜಾಜಿಸುತ್ತಿದೆ ಎನ್ನಲಾಗಿದೆ, ಕನ್ನಡ, ಇಂಗ್ಲಿಷ್, ಹಿಂದಿ ಸೇರಿದಂತೆ ಎಲ್ಲಾ ಭಾಷೆಯ ಪೇಜ್ ಗಳಲ್ಲೂ ಇದೇ ಹಾಡಿನ ತುಣುಕು ಕಾಣಬಹುದಾದೆ.

ವೈರಲ್:

ಫೇಸ್‌ಬುಕ್ ಮಾತ್ರವಲ್ಲದೇ ಟ್ವಿಟರ್, ವಾಟ್ಸ್ ಆಪ್ ನಲ್ಲಿ ಇಂದು ಈ ಹಾಡಿನಲ್ಲಿ ಕಾಣಿಸಿಕೊಂಡಿರುವ ಪ್ರಿಯಾ ಪ್ರಕಾಶ್ ವಾರಿಯರ್ ಎನ್ನುವ ಹುಡುಗಿಯೂ ರಾತೋರಾತ್ರಿ ಫೇಮಸ್ ಆಗಿದ್ದಾಳೆ ಎನ್ನಲಾಗಿದೆ.

ಒಂದೇ ದಿನದಲ್ಲಿ ಸಖತ್ ಫೇಮಸ್:

ಒಂದೇ ದಿನದಲ್ಲಿ ಸಖತ್ ಫೇಮಸ್:

ಇನ್ ಸ್ಟಾಗ್ರಮ್ ನಲ್ಲಿ ಆಕೌಂಟ್ ಹೊಂಡಿರುವ ಪ್ರಿಯಾ ಪ್ರಕಾಶ್ ವಾರಿಯರ್ ಒಂದೇ ದಿನಲ್ಲಿ ಸಖತ್ ಫೇಮಸ್ ಆಗಿದ್ದು, 819K ಹಿಂಬಾಲಕರನ್ನು ಸೃಷ್ಟಿಸಿಕೊಂಡಿದ್ದು ಒಂದೇ ದಿನದಲ್ಲಿ ಸುಮಾರು ಆರು ಕೋಟಿ ಹತ್ತು ಲಕ್ಷಕ್ಕೂ ಹೆಚ್ಚು ಜನರು ಫಾಲೋ ಮಾಡಲು ಶುರು ಮಾಡಿದ್ದಾರೆ.

ಸೋಶಿಯಲ್ ಮೀಡಿಯಾ ತುಂಬ ಅವಳೆ:

ನಿನ್ನೆ ಮತ್ತು ಇಂದಿನ ಸೋಶಿಯಮ್ ಮೀಡಿಯಾ ತುಂಬ ಆಕೆಯೆ ತುಂಬಿಕೊಂಡಿದ್ದಾಳೆ ಎನ್ನಲಾಗಿದೆ. ಎಲ್ಲಿ ನೋಡಿದರು ಆಕೆಯದ್ದೆ ಸ್ಟೋರಿ, ಎಲ್ಲಿ ನೋಡಿದರೂ ಅದೇ ವಿಡಿಯೋ ಒಟಿನಲ್ಲಿ ಯಾವ ಟಾಪ್ ಸೆಲೆಬ್ರಿಟಿಗೂ ಸಿಗದ ಪ್ರಚಾರ ಆಕೆಗೆ ದೊರೆಯುತ್ತಿದೆ.

ಯಾರಿಗೂ ಸಿಕ್ಕಿಲ್ಲ

ಇಂತಹ ಜನ ಬೆಂಗಲವು ಈ ಹಿಂದೆ ಯಾರಿಗೂ ಸಿಕ್ಕಿಲ್ಲ ಎನ್ನಲಾಗಿದೆ.

ಟ್ರೋಲ್:

ಈ ಕಣ್ ಹೊಡೆಯುವ ವಿಡಿಯೋವನ್ನು ಟ್ರೋಲ್ ಗಾಗಿಯೂ ಬಳಕೆ ಮಾಡಿಕೊಳ್ಳುತ್ತಿದ್ದಾರೆ.

ಪ್ರೇಮಿಗಳ ದಿನಾಚರಣೆ ಗಿಫ್ಟ್

ಹಲವು ಮಂದಿ ತಮ್ಮ ಸ್ನೇಹಿತರನ್ನು ರೇಗಿಸಲು ಈ ವಿಡಿಯೋವನ್ನು ಪ್ರೇಮಿಗಳ ದಿನಾಚರಣೆ ಗಿಫ್ಟ್ ಎಂದೆ ಕರೆಯುತ್ತಿದ್ದಾರೆ.

Best Mobiles in India

English summary
Priya Prakash Varrier Has Taken The Internet By Storm. to know more visit kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+