Home
Social media

ಡೇಟಾ ಸೋರಿಕೆ ಹಗರಣವಾದರೂ ಭಾರೀ ಹೆಚ್ಚಾಗಿದೆ ಫೇಸ್‌ಬುಕ್ ಆದಾಯ!!

ಇತ್ತೀಚೆಗಷ್ಟೇ ಬಳಕೆದಾರರ ವೈಯಕ್ತಿಕ ವಿವರಗಳ ಸೋರಿಕೆ ಆರೋಪ ಕೇಳಿಬಂದಿದ್ದರೂ ಸಹ ಫೇಸ್‌ಬುಕ್ ಲಾಭ ಗಳಿಕೆಯ ಪ್ರಮಾಣ ಏರಿಕೆ ಕಂಡಿದೆ.

By Bhaskar N J

ಇತ್ತೀಚೆಗಷ್ಟೇ ಬಳಕೆದಾರರ ವೈಯಕ್ತಿಕ ವಿವರಗಳ ಸೋರಿಕೆ ಆರೋಪ ಕೇಳಿಬಂದಿದ್ದರೂ ಸಹ ಫೇಸ್‌ಬುಕ್ ಲಾಭ ಗಳಿಕೆಯ ಪ್ರಮಾಣ ಏರಿಕೆ ಕಂಡಿದೆ. 2018 ರ ಮೊದಲ ತ್ರೈಮಾಸಿಕದಲ್ಲಿ ಕಳೆದ ವರ್ಷಕ್ಕಿಂತ ಶೇ. 63 ರಷ್ಟು (5 ಬಿಲಿಯನ್) ಆದಾಯ ಏರಿಕೆಯಾಗಿದ್ದು, ಒಟ್ಟಾರೆ ಆದಾಯದಲ್ಲಿ ಶೇ.49 ರಷ್ಟು ಏರಿಕೆಯಾಗಿದೆ ಎಂದು ಫೇಸ್‌ಬುಕ್ ಸಂಸ್ಥೆ ತಿಳಿಸಿದೆ.!

ಇನ್ನು ರಾಜಕೀಯ ಸಂಸ್ಥೆಯಿಂದ ಬಳಕೆದಾರರ ವೈಯಕ್ತಿಕ ಮಾಹಿತಿಯ ಅಪಹರಣಕ್ಕೆ ಬಹಿರಂಗಪಡಿಸಿದ ಹಿನ್ನೆಲೆಯಲ್ಲಿ ಕಳೆದ ತಿಂಗಳು ಬಹುತೇಕ ಬಳಕೆದಾರರನ್ನು ಫೇಸ್‌ಬುಕ್ ಕಳೆದಕೊಂಡಿದೆ ಎಂಬುದು ಸುಳ್ಳಾಗಿದೆ. ವೈಯಕ್ತಿಕ ವಿವರಗಳ ಸೋರಿಕೆಯಾಗಿದ್ದರೂ ಕೂಡ ಫೇಸ್‌ಬುಕ್ ಬಳಕೆದಾರರ ಸಂಖ್ಯೆಯೂ ಏರಿಕೆಯಾಗಿದೆ ಎಂದು ತಿಳಿದುಬಂದಿದೆ.!

ಡೇಟಾ ಸೋರಿಕೆ ಹಗರಣವಾದರೂ ಭಾರೀ ಹೆಚ್ಚಾಗಿದೆ ಫೇಸ್‌ಬುಕ್ ಆದಾಯ!!

ಫೇಸ್‌ಬುಕ್ ಶೇರುಗಳು ಶೇಕಡ 4.7 ಕ್ಕಿಂತ ಹೆಚ್ಚಿನ ಏರಿಕೆ ಕಂಡಿದ್ದು, 167.33 ಯುಎಸ್ ಡಾಲರ್‌ಗೆ ಏರಿಕೆಯಾಗಿದೆ. ಇನ್ನು ಪ್ರತಿ ತಿಂಗಳುಫೇಸ್‌ಬುಕ್ ಬಳಸುವ ಜನರ ಸಂಖ್ಯೆ ಕಳೆದ ವರ್ಷದಿಂದ ಶೇ. 13 ರಷ್ಟು ಏರಿಕೆಯಾಗಿದ್ದು, ಈ ಮಾರ್ಚ್ ಅಂತ್ಯದ ವೇಳೆಗೆ ಇದು 2.2 ಬಿಲಿಯನ್‌ಗೆ ಏರಿಕೆಯಾಗಿದೆ ಎಂದು ಫೇಸ್‌ಬುಕ್ ಬಿಡುಗಡೆ ಮಾಡಿರುವ ವರದಿಯಲ್ಲಿ ತಿಳಿದುಬಂದಿದೆ.

How to Send a WhatsApp Message Without Saving the Contact in Your Phone - GIZBOT KANNADA

ಈ ತ್ರೈ ಮಾಸಿಕದ ಫೇಸ್‌ಬುಕ್ ರಿಪೋರ್ಟ್ ಹೊರಬಿದ್ದ ನಂತರ, ಪ್ರಮುಖ ಸವಾಲುಗಳನ್ನು ಎದುರಿಸುತ್ತಿರುವ ಹೊರತಾಗಿಯೂ, ನಮ್ಮ ಸಮುದಾಯ ಮತ್ತು ವ್ಯವಹಾರವು 2018 ರಲ್ಲಿ ಬಲವಾದ ಆರಂಭಕ್ಕೆ ಬಂದಿದೆ. ಇದಕ್ಕೆ ಕಾರಣಕರ್ತರಾದ ಎಲ್ಲರಿಗೂ ನನ್ನ ಧನ್ಯವಾದಗಳು ಎಂದು ಫೇಸ್‌ಬುಕ್ ಸಂಸ್ಥೆಯ ಮಾಲಿಕ ಹಾಗೂ ಸಿಇಒ ಮಾರ್ಕ್ ಜುಕರ್‌ಬರ್ಗ್ ಹೇಳಿದ್ದಾರೆ.

ಡೇಟಾ ಸೋರಿಕೆ ಹಗರಣವಾದರೂ ಭಾರೀ ಹೆಚ್ಚಾಗಿದೆ ಫೇಸ್‌ಬುಕ್ ಆದಾಯ!!

ರಾಜಕೀಯ ಸಂಸ್ಥೆಯಿಂದ ವೈಯಕ್ತಿಕ ಡೇಟಾವನ್ನು ಅಪಹರಿಸುವುದರ ಬಗ್ಗೆ ಬಹಿರಂಗಗೊಂಡ ಹಿನ್ನೆಲೆಯಲ್ಲಿ ಕಳೆದ ತಿಂಗಳು ಬಹುತೇಕ ಬಳಕೆದಾರರನ್ನು ಫೇಸ್‌ಬುಕ್ ಕಳೆದುಕೊಂಡಿತ್ತು. ಆ ನಂತರ ಹೂಡಿಕೆದಾರರಿಗೆ ಮತ್ತು ಫೇಸ್‌ಬುಕ್ ಬಳಕೆದಾರರಿಗೆ ಇತ್ತೀಚಿನ ನವೀಕರಣದಲ್ಲಿ ಭರವಸೆ ನೀಡಲು ಮಾರ್ಕ್ ಜುಕರ್‌ಬರ್ಗ್ ಅವರು ಪ್ರಯತ್ನಿಸಿದ್ದರು.

ಓದಿರಿ: ಜೆನ್‌ಫೋನ್ 'ಮ್ಯಾಕ್ಸ್ ಪ್ರೊ ಎಂ1' ಫೀಚರ್ಸ್ ಮತ್ತು ಬೆಲೆ ತಿಳಿದರೆ ಈಗಲೇ ಫೋನ್ ಖರೀದಿಸುತ್ತೀರಾ!!

ಓದಿರಿ: ಈ ಸುಂದರ ಫೋಟೊಗಳ ಹಿಂದಿರುವ ಸೃಜನಾತ್ಮಕ ಕಲೆಗೆ ಖಂಡಿತ ಬೆರಗಾಗ್ತೀರಾ!!

Best Mobiles in India

English summary
Facebook Profit in the first quarter of 2018 jumped 63 per cent from a year ago to US$5 billion.to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+