ಸ್ಕ್ರಿನ್‌ಶಾಟ್ ಸ್ಪಾಟ್ ಆಗುತ್ತಿದೆ PUBG ಗೇಮ್: ಕಾರಣ ಮಹಿಂದ್ರಾ ಟ್ರಾಕ್ಟರ್..!
ಸದ್ಯದ ಸ್ಮಾರ್ಟ್‌ಫೋನ್ ಮಾರುಕಟ್ಟೆಯ ಗೇಮಿಂಗ್ ವಿಭಾಗದಲ್ಲಿ ಸಾಕಷ್ಟು ಸದ್ದು ಮಾಡುತ್ತಿರುವ PUBG ಗೇಮ್, ಈಗಾಗಲೇ ಎಲ್ಲಾ ಸ್ಮಾರ್ಟ್‌ಫೋನ್‌ಗಳಲ್ಲಿ ಕಾಣಿಸಿಕೊಳ್ಳುತ್ತಿದೆ. ಜಾಗತಿಕವಾಗಿ ಸಾಕಷ್ಟು ದೊಡ್ಡ ಮಟ್ಟದಲ್ಲಿ ಹೆಚ್ಚಿನ ಬಳಕೆದಾರರನ್ನು ತನ್ನದಾಗಿಸಿಕೊಂಡಿದೆ, ಹೀಗೆಯೇ ಭಾರತದಲ್ಲಿಯೂ ಈ ಗೇಮ್ ಹೆಚ್ಚು ಮಂದಿಯನ್ನು ಸೆಳೆದಿದೆ.

ಸದ್ಯ ಭಾರತದಲ್ಲಿ ಈ ಗೇಮ್ ವೈರಲ್ ಆಗಲು ಮತ್ತೊಂದು ಕಾರಣವಿದ್ದು, ಈ ಗೇಮ್‌ನಲ್ಲಿ ಕಾಣಿಸಿಕೊಳ್ಳುವ ಒಂದು ಪ್ರದೇಶದಲ್ಲಿ ಮಹೇಂದ್ರ ಟಾಕ್ಟರ್ ಕಾಣಿಸಿಕೊಂಡಿದೆ. ಇದನ್ನು ನೋಡಿದ ಹಲವು ಮಂದಿ ಸ್ಕ್ರಿನ್ ಶಾಟ್ ತೆಗೆದು ಸಾಮಾಜಿಕ ತಾಣಗಳಲ್ಲಿ ಫೋಸ್ಟ್ ಮಾಡುತ್ತಿದ್ದಾರೆ. ಈ ಪೋಸ್ಟ್‌ಗಳು ವೈರಲ್ ಆಗಿದ್ದು, ಸೆಲ್ಪೀಗೆ ಫೋಸ್ ಕೋಡುವ ಮಾದರಿಯಲ್ಲಿ ಎಲ್ಲಾ ಆಟಗಾರರು ಅಲ್ಲಿ ಹೋಗಿ ಸ್ಕ್ರಿನ್ ಶಾಟ್ ತೆಗೆದುಕೊಳ್ಳುತ್ತಿದ್ದಾರೆ.

ಭಾರತದಲ್ಲಿ ವೈರಲ್:
ಈ ಹಿಂದೆಯೇ PUBG ಗೇಮ್ ಸಾಕಷ್ಟು ಹಿಟ್ ಆಗಿತ್ತು. ಯಾವಗ ಮಹೀಂದ್ರ ಟ್ರಾಕ್ಟರ್ ಇದೆ ಎನ್ನುವುದು ತಿಳಿಯಿತೋ ಪ್ರತಿಯೊಬ್ಬರು ಅದನ್ನು ಹುಡುಕಲು ಶುರು ಮಾಡಿದ್ದಾರೆ. PUBG ಯಲ್ಲಿರುವ ಫಾರ್ಮ್ ಎಂಬ ಸ್ಥಳದಲ್ಲಿ ಈ ಟ್ರಾಕ್ಟರ್ ಅನ್ನು ಕಾಣಬಹುದಾಗಿದೆ.
ಸೆಲ್ಫಿ ಸ್ಪಾಟ್ ಮಾದರಿ:
ಸದ್ಯ ಫೇಮಸ್ ಪ್ಲೇಸ್‌ಗಳಲ್ಲಿ ಸೆಲ್ಪಿ ತೆಗೆಯುವ ಮಾದರಿಯಲ್ಲಿ PUBG ಗೇಮ್ನ ಟ್ರಾಕ್ಟರ್ ಜಾಗ ಹೆಚ್ಚಿನ ಮಂದಿಗೆ ಸ್ಕ್ರಿನ್ ಶಾಟ್ ತೆಗೆಯುವ ಸ್ಪಾಟ್‌ಆಗಿದೆ ಎಂದರೆ ತಪ್ಪಾಗುವುದಿಲ್ಲ. ಈ ಹೊಸದಾಗಿ ಟ್ವೀಟರ್ ನಲ್ಲಿ ಟ್ರೆಂಡ್ ಆಗುತ್ತಿದೆ.

ಮೊದಲಿಗೆ ಕಂಡುಹಿಡಿದಿದ್ದು:
ಮೊದಲಿಗೆ ಯೂಟ್ಯೂಬರ್ ಚಾಕೋಟಾಕೋ ಎನ್ನುವಾತ ಮಹಿಂದ್ರಾ ಟ್ರಾಕ್ಟರ್ PUBG ಗೇಮ್ ನಲ್ಲಿ ಇರುವುದನ್ನು ಕಂಡು ಹಿಡಿದ ಎನ್ನಲಾಗಿದೆ. ಚಿತ್ರದಲ್ಲಿ ಮಹೀಂದ್ರಾ ಹೆಸರನ್ನು ಅಳಿಸುವ ಪ್ರಯತ್ನ ಮಾಡಲಾಗಿದೆ ಆದರೆ ಅದು ಫೂರ್ಣ ಪ್ರಮಾಣದಲ್ಲಿ ಸಾಧ್ಯವಾಗಿಲ್ಲ.
ಕೋಟಿಗೂ ಹೆಚ್ಚು ಡೌನ್‌ಲೋಡ್:
ಗೇಮಿಂಗ್ ಪ್ರಿಯರಿಗೆ PUBG ಗೇಮ್ ಅಮಲೇರಿಸಿದೆ ಎಂದರೆ ತಪ್ಪಾಗುವುದಿಲ್ಲ. ಎಲ್ಲಾ ವಯಸ್ಸಿನ, ಎಲ್ಲಾ ವರ್ಗದ ಬಳಕೆದಾರರು PUBG ಗೇಮ್ ಆಡುವುದನ್ನು ಕಾಣಬಹುದಾಗಿದೆ. ಪ್ಲೇ ಸ್ಟೋರಿನಲ್ಲಿ 100 ಮಿಲಿಯನ್ ಡೌನ್‌ಲೋಡ್ ಅನ್ನು ಕಂಡಿದೆ ಎನ್ನಲಾಗಿದೆ. ಸ್ಮಾರ್ಟ್‌ಫೋನಿನಲ್ಲಿ ಹೊಸ ಮಾದರಿ ಗೇಮ್ ಬೇಕು ಎನ್ನುವವರಿಗೆ ಇದು ಬೆಸ್ಟ್ ಆಯ್ಕೆಯಾಗಿದೆ.

PUBG ಗೇಮ್ ಲೈಟ್:
ದೇಶಿಯ ಮಾರುಕಟ್ಟೆಯಲ್ಲಿ PUBG ಗೇಮ್ ಹೆಚ್ಚಿನ ಖ್ಯಾತಿಯನ್ನು ಪಡೆದುಕೊಳ್ಳುತ್ತಿರುವ ಹಿನ್ನಲೆಯಲ್ಲಿ ಈಗಾಗಲೇ ಯಶಸ್ಸು ಕಂಡಿರುವ PUBG ಗೇಮ್ ನ ಲೈಟ್ ಆವೃತ್ತಿಯಲ್ಲಿ ಕಾಣಿಸಿಕೊಂಡಿದ್ದು, ಕಡಿಮೆ RAM ಹೊಂದಿರುವ ಸ್ಮಾರ್ಟ್‌ಫೋನ್‌ಗಳಲ್ಲಿ ಇದನ್ನು ಬಳಕೆ ಮಾಡಿಕೊಳ್ಳಬಹುದಾಗಿದೆ.


Click it and Unblock the Notifications








