Home
Social media

ಫೇಸ್‌ಬುಕ್‌ನಲ್ಲಿ ಈಗ ಈ ತಪ್ಪು ಮಾಡಿದರೆ ಜೈಲು ಸೇರುವುದು ಖಚಿತ!!

By Bhaskar N J

ಚುನಾವಣಾ ಆಯೋಗದ ಪ್ರಕಾರ ಮಾಧ್ಯಮಗಳೆಲ್ಲವೂ ಸೇರಿದಂತೆ ಸಾಮಾಜಿಕ ಜಾಲತಾಣಗಳೂ ಸಹ 'ವಿದ್ಯುನ್ಮಾನ ಮಾಧ್ಯಮ'ದ ವ್ಯಾಪ್ತಿಗೆ ಒಳಪಟ್ಟಿವೆ. ಹಾಗಾಗಿ, ಸಾಮಾಜಿಕ ಜಾಲತಾಣಗಳಲ್ಲಿಯೂ ಚುನಾವಣಾ ಪ್ರಚಾರ ಕೈಗೊಂಡರೆ ಅದನ್ನು ಅಪರಾಧ ಎಂದು ಕ್ರಮ ಕೈಗೊಳ್ಳಲಾಗುವುದು ಎಂದು ಚುನಾವಣಾ ಆಯೋಗ ಹೇಳಿದೆ.

ಕೋಟ್ಯಂತರ ಮಂದಿ ಸದಸ್ಯರಾಗಿರುವ ಈ ಸಾಮಾಜಿಕ ತಾಣಗಳನ್ನು ಪರಿಶೀಲಿಸುವುದಕ್ಕೆ ಬೇಕಿರುವಷ್ಟು ಸಾಮರ್ಥ್ಯವೂ ಚುನಾವಣಾ ಆಯೋಗದ ಬಳಿ ಇಲ್ಲವಾದರೂ, ಸಾಮಾಜಿಕ ಜಾಲತಾಣಗಳಲ್ಲಿರುವ ನಿರ್ದಿಷ್ಟ ಪಕ್ಷಗಳನ್ನು ಬೆಂಬಲಿಸುವ ವಿಚಾರದ ಕುರಿತಂತೆ ದೂರುಗಳು ಬಂದರೆ ನಾವು ಕ್ರಮ ಕೈಗೊಳ್ಳಬಹುದು ಎಂದು ಚುನಾವಣಾ ಆಯೋಗ ತಿಳಿಸಿದೆ.

ಫೇಸ್‌ಬುಕ್‌ನಲ್ಲಿ ಈಗ ಈ ತಪ್ಪು ಮಾಡಿದರೆ ಜೈಲು ಸೇರುವುದು ಖಚಿತ!!

ಪ್ರತಿಯೊಬ್ಬರಿಗೂ ಅವರದ್ದೇ ರಾಜಕೀಯ ನಿಲುವುಗಳು ಇರುತ್ತವೆ. ಹಾಗಾಗಿ, ಸಾಮಾಜಿಕ ಮಾಧ್ಯಮಗಳಲ್ಲಿ ರಾಜಕೀಯ ವಿಷಯಗಳ ಬಗ್ಗೆ ಅಭಿಪ್ರಾಯಗಳನ್ನು ದಾಖಲಿಸುವಾಗಲೂ ಕೆಲವೊಂದು ಶಿಷ್ಚಾಚಾರಗಳನ್ನು ಪಾಲಿಸಿದರೆ ಒಳ್ಳೆಯದು ಎಂದು ಚುನಾವಣಾ ಆಯೋಗದ ಅಧಿಕಾರಿಗಳು ತಿಳಿಸಿದ್ದಾರೆ. ಹಾಗಾದರೆ, ಆ ಶಿಷ್ಚಾಚಾರಗಳಾವುವು ಎಂಬುದನ್ನು ಮುಂದೆ ತಿಳಿಯಿರಿ.

ಪೋಸ್ಟ್ ಶೇರ್ ಮಾಡುವ ಮುನ್ನ!!

ಪೋಸ್ಟ್ ಶೇರ್ ಮಾಡುವ ಮುನ್ನ!!

ಸಾಮಾಜಿಕ ಜಾಲತಾಣಗಳ್ಲಿ ಯಾವುದೇ ವಿಷಯಗಳನ್ನು ಶೇರ್ ಮಾಡುವ ಮುನ್ನ ಅದರ ಸತ್ಯಾಸತ್ಯತೆಯನ್ನು ಪರಿಶೀಲಿಸಿ ಎಂದು ಚುನಾವಣಾ ಆಯೋಗ ಸಲಹೆ ನೀಡಿದೆ. ಫೇಕ್ ನ್ಯೂಸ್‌ಗಳು ಸಿಕ್ಕಾಪಟ್ಟೆ ಹರಿದಾಡುತ್ತಿರುವುದರಿಂದ ನಾವು ಶೇರ್ ಮಾಡುವ ವಿಷಯಗಳು ನಿಜ ಸಂಗತಿಯೇ ಎಂದು ಪರಿಶೀಲಿಸಿದ ನಂತರವೇ ಶೇರ್ ಮಾಡಿದರೆ ಉತ್ತಮ.

ನಿಮ್ಮ ಅಭಿಪ್ರಾಯ ಎಂದು ಸ್ಪಷ್ಟವಾಗಿ ಹೇಳಿ!

ನಿಮ್ಮ ಅಭಿಪ್ರಾಯ ಎಂದು ಸ್ಪಷ್ಟವಾಗಿ ಹೇಳಿ!

ಯಾವುದೇ ಪೋಸ್ಟ್ ಮಾಡುವ ಮುನ್ನ ನಿಮ್ಮದೇ ಆದ ಅಭಿಪ್ರಾಯ ದಾಖಲಿಸುವುದಾದರೆ ಅದು ನಿಮ್ಮ ಅಭಿಪ್ರಾಯ ಎಂದು ಸ್ಪಷ್ಟವಾಗಿ ಹೇಳಿ. ಇನ್ಯಾರದ್ದೋ ಪೋಸ್ಟ್‌ಗಳನ್ನು ಶೇರ್ ಮಾಡುವ ಮುನ್ನ, ಆ ಪೋಸ್ಟನ್ನು ಓದಿ ಅರ್ಥೈಸಿಕೊಂಡ ನಂತರವೇ ಶೇರ್ ಮಾಡಿ. ಶೇರ್ ಮಾಡುವ ಸಂಗತಿಗಳಿಂದ ಉಂಟಾಗುವ ಪರಿಣಾಮದ ಬಗ್ಗೆಯೂ ಗಮನಿಸಿ.

ಪ್ರತಿಕ್ರಿಯಿಸದೇ ಇರುವುದು ಒಳಿತು.!

ಪ್ರತಿಕ್ರಿಯಿಸದೇ ಇರುವುದು ಒಳಿತು.!

ನಿಮ್ಮ ರಾಜಕೀಯ ನಿಲುವುಗಳು ಎಲ್ಲರಿಗೂ ಇಷ್ಟವಾಗಬೇಕೆಂದೇನಿಲ್ಲ. ಹಾಗಾಗಿ, ನೀವು ವ್ಯಕ್ತಪಡಿಸಿದ ಅಭಿಪ್ರಾಯಗಳ ಬಗ್ಗೆ ಭಿನ್ನಾಭಿಪ್ರಾಯಗಳು ಎದುರಾದರೆ ಫೇಸ್‌ಬುಕ್‌ನಲ್ಲಿ ಜಗಳವಾಡಬೇಡಿ. ಕಾಮೆಂಟ್‌ಗಳಲ್ಲಿ ಪ್ರತಿಕ್ರಿಯಿಸದೇ ಇರುವುದು ಒಳಿತು ಅಥವಾ ಪೋಸ್ಟ್ ಡಿಲೀಟ್ ಮಾಡುವುದು ಜಾಣತನ ಎನ್ನಬಹುದು.

ವಿವಾದಿತ ವಿಷಯಗಳು!

ವಿವಾದಿತ ವಿಷಯಗಳು!

ಚುನಾವಣಾ ಸಂಭಂದಿತ ವಿವಾದಿತ ವಿಷಯಗಳ ಬಗ್ಗೆ ಅಭಿಪ್ರಾಯ ದಾಖಲಿಸುವಾಗ ಮತ್ತು ಶೇರ್ ಮಾಡುವಾಗ ಎಚ್ಚರದಿಂದಿರಿ. ಯಾವುದೇ ವಿಷಯಗಳ ಪಾಸಿಟಿವ್ ಮತ್ತು ನೆಗೆಟಿವ್ ಗಳನ್ನು ಅರಿತುಕೊಂಡಿದ್ದರೆ ಒಳ್ಳೆಯದು. ಇಂಥಾ ವಿಷಯಗಳ ಬಗ್ಗೆ ಅಭಿಪ್ರಾಯಗಳನ್ನು ಹೇಳುವಾಗ ಸಂಯಮದ ವರ್ತನೆ ಮುಖ್ಯವಾಗಿರುತ್ತದೆ.

ಜಾಲತಾಣಗಳು ವೈಯಕ್ತಿಕವಾಗಿರಲಿ!!

ಜಾಲತಾಣಗಳು ವೈಯಕ್ತಿಕವಾಗಿರಲಿ!!

ನಿಮ್ಮ ಅಭಿಪ್ರಾಯಗಳಿಗೆ ವಿರೋಧ ವ್ಯಕ್ತವಾದರೆ ಅದನ್ನು ಯಾವ ರೀತಿ ನಿಭಾಯಿಸಬೇಕು ಎಂಬುದನ್ನೂ ಅರಿತಿರಿ. ಜಾಲತಾಣಗಳಲ್ಲಿ ಜಗಳವಾಡುವಂತಹ ಪರಿಸ್ಥಿತಿ ಎದುರಾದರೆ ಈ ಪರಿಸ್ಥಿತಿಯಲ್ಲಿ ಸಾಮಾಜಿಕ ಜಾಲತಾಣಗಳಿಂದ ಸ್ವಲ್ಪ ದೂರವಿದ್ದರೆ ಒಳಿತು. ಏಕೆಂದರೆ, ಯಾರೋ ಒಬ್ಬರು ತಮಾಷೆಗಾಗಿ ಹರಿಬಿಟ್ಟ ಸುದ್ದಿ ಇನ್ಯಾರದ್ದೋ ಜೀವಕ್ಕೆ ಸಂಚಕಾರವನ್ನು ತಂದೊಡ್ಡಬಹುದು.

Best Mobiles in India

English summary
social media,facebook, twitter, ಫೇಸ್‌ಬುಕ್‌, ಟ್ವಿಟ್ಟರ್‌, news
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+