ಕೋಕಾ-ಕೋಲಾ ಇತಿಹಾಸ ಬದಲಾಯಿಸಿದ ರಾಹುಲ್ ಗಾಂಧಿ ಟ್ವಿಟ್ಟರ್‌ನಲ್ಲಿ ಟ್ರೋಲ್ ಆಗಿದ್ದು ಹೀಗೆ!!
ಅಮೆರಿಕದಂತಹ ದೇಶಗಳಲ್ಲಿ ಸಾಮಾನ್ಯ ವ್ಯಕ್ತಿಗಳು ಸಹ ದೊಡ್ಡ ಕಂಪೆನಿ ಮಾಲೀಕರಾಗಿ ಬೆಳೆದು ನಿಂತ ಉದಾಹರಣೆ ಇದೆ. ಶರಬತ್ತು ಮಾರುತ್ತಿದ್ದ ವ್ಯಕ್ತಿ ಕೋಕಾ-ಕೋಲಾ ಕಂಪನಿ ಸ್ಥಾಪಿಸಿದರೆ, ಡಾಬಾ ನಡೆಸುತ್ತಿದ್ದ ಸಾಮಾನ್ಯ ವ್ಯಕ್ತಿ ಮ್ಯಾಕ್ ಡೋನಾಲ್ಡ್‌ನಂತಹ ಕಂಪೆನಿಯನ್ನು ಹುಟ್ಟುಹಾಕಿದ ರಾಹುಲ್ ಗಾಂಧಿ ಹೇಳಿಕೆ ಟ್ವಿಟ್ಟರ್‌ನಲ್ಲಿ ಸಂಚಲನ ಮೂಡಿಸಿದೆ.
ರಾಷ್ಟ್ರ ರಾಜಧಾನಿಯಲ್ಲಿ ನಡೆದ ಒಬಿಸಿ ಸಮ್ಮೇಳನವನ್ನು ಉದ್ದೇಶಿಸಿ ಮಾತನಾಡುತ್ತಿದ್ದ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಕೋಕಾ-ಕೋಲಾ ಮತ್ತು ಮ್ಯಾಕ್ ಡೊನಾಲ್ದ್ ಕಂಪೆನಿಯ ಮೂಲ ಚರಿತ್ರೆಯನ್ನೇ ಬದಲಾಯಿಸುವ ಮೂಲಕ ಮತ್ತೆ ಅಪಹಾಸ್ಯಕ್ಕೀಡಾಗಿದ್ದಾರೆ. ಇದು ಟ್ವಿಟ್ಟರ್ ಮತ್ತು ಫೇಸ್‌ಬುಕ್‌ನಲ್ಲಿ ಟ್ರೋಲ್ ಮಾಡುವವರಿಗೆ ತಿನ್ನಲು ಹಾಟ್ ಚಿಪ್ಸ್ ದೊರಕಿದಂತಾಗಿದೆ.

ಇಲ್ಲಿ ಸೇರಿರುವ ಎಲ್ಲರಿಗೂ ಕೋಕಾ-ಕೋಲಾ ಗೊತ್ತಲ್ಲವೇ? ಹಾಗಾದರೆ ಅದರ ಸಂಸ್ಥಾಪಕ ಯಾರೂ ಹೇಳಿ ನೋಡೋಣ. ಯಾರಾತ? ಇಲ್ಲಿ ಸೇರಿರುವ ಯಾರಿಗಾದರೂ ಗೊತ್ತೆ,ಎಂದು ಪ್ರಶ್ನಿಸಿರುವ ರಾಹುಲ್ ಅದಕ್ಕೆ ಉತ್ತರವನ್ನೂ ನೀಡಿದ್ದಾರೆ. ಕೋಕಾ ಕೋಲಾ ಸಂಸ್ಥಾಪಕ ಅಮೆರಿಕದಲ್ಲಿ ನಿಂಬೆ ರಸ ಮಾರುವವನಾಗಿದ್ದ ಎಂದು ಹೇಳಿರುವುದು ಈಗ ವೈರಲ್ ಆಗಿದೆ.

ಆದರೆ, ಈ ಎರಡು ಕಂಪನಿಗಳ ಮೂಲಕ್ಕೂ ಮತ್ತು ರಾಹುಲ್ ಹೇಳಿಕೆಗೂ ಸಂಬಂಧವಿಲ್ಲದಿರುವುದು ಗೂಗಲ್ ಮೂಲಕ ಸ್ಪಷ್ಟವಾಗುತ್ತಿದೆ. ಅದೇನೇ ಇದ್ದರೂ, ಟ್ವಿಟ್ಟರ್ ಮತ್ತು ಫೇಸ್‌ಬುಕ್‌ನಲ್ಲಿ ಟ್ರೋಲ್ ಮಾಡುವವರಿಗೆ ಆಹಾರವಾಗಿರುವ ರಾಹುಲ್ ಗಾಂಧಿಯ ಶರಬತ್ತು ಹೇಳೀಕೆ ಟ್ವಿಟ್ಟರ್‌ನಲ್ಲಿ ಹೇಗೆಲ್ಲಾ ಟ್ರೋಲ್ ಆಗಿದೆ ಎಂಬುದನ್ನು ಮುಂದೆ ನೋಡಿ ಎಂಜಾಯ್ ಮಾಡಿ.


Click it and Unblock the Notifications








