Home
Social media

ಆಂಡ್ರಾಯ್ಡ್, ಐಫೋನ್ ಮತ್ತು ಡೆಸ್ಕ್ ಟಾಪ್ ನಲ್ಲಿ ಕಾಲ್ ರೆಕಾರ್ಡಿಂಗ್ ಗೆ ಅವಕಾಶ ಕೊಟ್ಟ ಸ್ಕೈಪ್

By Gizbot Bureau

ಒಂದು ತಿಂಗಳ ಹಿಂದೆ ಮೈಕ್ರೋಸಾಫ್ಟ್ ಸಂಸ್ಥೆ ತಾನು ಕಾಲ್ ರೆಕಾರ್ಡಿಂಗ್ ವೈಶಿಷ್ಟ್ಯತೆಯ ಬಗ್ಗೆ ಕೆಲಸ ಮಾಡುತ್ತಿರುವುದಾಗಿಯೂ ಮತ್ತು ಅದನ್ನು ಮೊಬೈಲ್ ಜೊತೆಗೆ ಡೆಸ್ಕ್ ಟಾಪ್ ಗೆ ಬಿಡುಗಡೆಗೊಳಿಸುವುದಾಗಿ ಬ್ಲಾಗ್ ಪೋಸ್ಟ್ ಒಂದರಲ್ಲಿ ತಿಳಿಸಿತ್ತು.

ಆಂಡ್ರಾಯ್ಡ್, ಐಫೋನ್ ಮತ್ತು ಡೆಸ್ಕ್ ಟಾಪ್ ನಲ್ಲಿ ಕಾಲ್ ರೆಕಾರ್ಡಿಂಗ್ ಕೊಟ್ಟ ಸ್ಕೈಪ

ಎಪ್ರಿಲ್ ನಲ್ಲಿ ಸಂಸ್ಥೆ ಹೇಳಿರುವ ಪ್ರಕಾರ ಈ ವೈಶಿಷ್ಟ್ಯತೆಯನ್ನು ಡೆಸ್ಕ್ ಟಾಪ್ ಸ್ಕೈಪ್ ಕ್ಲೈಂಟ್ ಗಳಿಗೆ ಕಟೆಂಟ್ ಕ್ರಿಯೇಟರ್ ಮೋಡ್ ನಲ್ಲಿ ಪರಿಚಯಿಸಲಾಗುತ್ತದೆ ಎಂದು ತಿಳಿಸಲಾಗಿತ್ತು.ಆದರೆ ಈಗ ಈ ವೈಶಿಷ್ಟ್ಯತೆಯು ಎಲ್ಲಾ ಫ್ಲಾಟ್ ಫಾರ್ಮ್ ಗಳಲ್ಲೂ ಕೂಡ ಲಭ್ಯವಿದ್ದು ಸ್ಮಾರ್ಟ್ ಫೋನ್ ಗಳಲ್ಲೂ ಅಪ್ ಡೇಟ್ ನ ಒಂದು ಭಾಗವಾಗಿ ಕಾಣಿಸಿಕೊಂಡಿದೆ.

ಸ್ಕೈಪ್ ಟೀಮ್ ಮಾಹಿತಿ ನೀಡಿರುವ ಪ್ರಕಾರ ಸದ್ಯ ಕಾಲ್ ರೆಕಾರ್ಡಿಂಗ್ ವೈಶಿಷ್ಟ್ಯತೆಯು ವಿಂಡೋಸ್ 10 ರಲ್ಲಿ ಬಂದಿಲ್ಲ ಆದರೆ ಇನ್ನು ಕೆಲವೇ ದಿನಗಳಲ್ಲಿ ಅದರಲ್ಲೂ ಬರಲಿದೆ ಎಂಬುದನ್ನು ಖಾತ್ರಿಪಡಿಸಿದೆ.

“ ಕಾಲ್ ರೆಕಾರ್ಡಿಂಗ್ ಸಂಪೂರ್ಣವಾಗಿ ಕ್ಲೌಡ್ ಬೇಸ್ಡ್ ಆಗಿದೆ ಮತ್ತು ಈಗ ಸ್ಕೈಪ್ ನ ನೂತನ ವರ್ಷನ್ ನಲ್ಲಿ ಲಭ್ಯವಿದ್ದು ಹೆಚ್ಚು ಕಡಿಮೆ ಎಲ್ಲಾ ಫ್ಲಾಟ್ ಫಾರ್ಮ್ ಗಳನ್ನು ಕಾಣಬಹುದಾಗಿದ್ದು,ಸದ್ಯಕ್ಕೆ ವಿಂಡೋಸ್ 10 ನಲ್ಲಿ ಲಭ್ಯವಿರುವುದಿಲ್ಲ. ಇನ್ನು ಕೆಲವೇ ದಿನಗಳಲ್ಲಿ ಬಿಡುಗಡೆಯಾಗುವ ನೂತನ ವರ್ಷನ್ ನ ಸ್ಕೈಪ್ ಅವತರಿಣಿಕೆಯಲ್ಲಿ ವಿಂಡೋಸ್ 10 ನಲ್ಲೂ ಇರಲಿದೆ” ಎಂದು ಸಂಸ್ಥೆಯು ಒಂದು ನಿರ್ಧಿಷ್ಟ ಬ್ಲಾಗ್ ನಲ್ಲಿ ಬರೆದುಕೊಂಡಿದೆ.

ಯಾವಾಗ ಬಳಕೆದಾರರು ಕರೆಯನ್ನು ರೆಕಾರ್ಡ್ ಮಾಡಲು ಪ್ರಾರಂಭಿಸುತ್ತಾರೋ ಆಗ ಕರೆಯಲ್ಲಿರುವ ಇನ್ನೊಂದು ವ್ಯಕ್ತಿಗೂ ಕೂಡ ಕರೆ ರೆಕಾರ್ಡ್ ಆಗುತ್ತಿರುವ ಬಗ್ಗೆ ನೋಟಿಫಿಕೇಷನ್ ಸಿಗುತ್ತದೆ. ಒಂದು ವೇಳೆ ಅದು ವೀಡಿಯೋ ಕಾಲ್ ಆಗಿದ್ದಲ್ಲಿ ಸ್ಕೈಪ್ ಕರೆಯನ್ನು ರೆಕಾರ್ಡ್ ಮಾಡುತ್ತದೆ ಜೊತೆಗೆ ಅದರಲ್ಲಿ ಸ್ಕ್ರೀನ್ ಶೇರ್ ಕೂಡ ಇರುತ್ತದೆ. ಕಾಲ್ ರೆಕಾರ್ಡಿಂಗ್ ಗಳನ್ನು ಸ್ಥಳೀಯವಾಗಿಯೂ ಸೇವ್ ಮಾಡಿಕೊಳ್ಳಬಹುದು. ಅಥವಾ ಕ್ಲೌಡ್ ನಲ್ಲಿಯೂ ಸೇವ್ ಮಾಡಬಹುದು ಕ್ಲೌಡ್ ನಲ್ಲಿ ಸೇವ್ ಮಾಡಿಕೊಂಡಿರೆ ಸ್ವಯಂಚಾಲಿತವಾಗಿ 30 ದಿನಗಳಿಗೊಮ್ಮೆ ಎಲ್ಲಾ ಕಾಲ್ ರೆಕಾರ್ಡಿಂಗ್ ಫೈಲ್ ಗಳು ಡಿಲೀಟ್ ಆಗುತ್ತದೆ.

ಡೆಸ್ಕ್ ಟಾಪ್ ನಲ್ಲಿ ನೀವು ಸ್ಕ್ರೀನ್ ನ ಕೆಳಭಾಗದಲ್ಲಿರುವ + ಚಿಹ್ನೆಯನ್ನು ಟ್ಯಾಪ್ ಮಾಡುವ ಮುಖಾಂತರ ಕಾಲ್ ರೆಕಾರ್ಡಿಂಗ್ ಪ್ರಾರಂಭಿಸಬಹುದು. ಅದರಲ್ಲಿ 'Start Recording’ ಎಂದು ಕೂಡ ಇರುತ್ತದೆ.ಇದನ್ನೇ ಮೊಬೈಲ್ ನಲ್ಲೂ ಕೂಡ ಮೊಬೈಲ್ ನಲ್ಲೂ ಮಾಡಬಹುದು.

ರೆಕಾರ್ಡಿಂಗ್ ಆರಂಭವಾಗುತ್ತಿದ್ದಂತೆ, ಮೇಲ್ಬಾಗದಲ್ಲಿ ರೆಕಾರ್ಡಿಂಗ್ ಪ್ರಾರಂಭವಾಗಿದೆ ಎಂಬ ಬ್ಯಾನರ್ ವೊಂದನ್ನು ಪ್ರತಿಯೊಬ್ಬರೂ ಗಮನಿಸಬಹುದು.ಅಂದರೆ ಕರೆಯಲ್ಲಿರುವ ಸದಸ್ಯರೆಲ್ಲರಿಗೂ ಅಲರ್ಟ್ ಸಿಗುತ್ತದೆ.

ಒಮ್ಮೆ ಕರೆಯು ಮುಗಿದ ನಂತರ ರೆಕಾರ್ಡಿಂಗ್ ಫೈಲ್ 30 ದಿನಗಳವರೆಗೆ ಎಲ್ಲಿ ಸೇವ್ ಆಗಿ ಇರುತ್ತದೆ ಎಂಬುದನ್ನು ತಿಳಿಸುತ್ತದೆ. ಯಾರು ಈ ಕರೆಯ ಭಾಗವಾಗಿದ್ದಾರೋ ಅವರು ಅದನ್ನು ಅಗತ್ಯವಿದ್ದರೆ ಸ್ಥಳೀಯ ತಮ್ಮ ನಿರ್ಧಿಷ್ಟ ಫೋಲ್ಡರ್ ನಲ್ಲಿ ಕಾಪಿ ಮಾಡಿ ಇಟ್ಟುಕೊಳ್ಳಬಹುದು.

ಡೆಸ್ಕ್ ಟಾಪ್ ನಲ್ಲಿ ಲೋಕಲ್ ಆಗಿ ಸೇವ್ ಮಾಡಬೇಕು ಎಂಬುವುದಾದರೆ, ನೀವು ಚಾಟ್ ನ್ನು ನೇವಿಗೇಟ್ ಮಾಡಿ ಮತ್ತು ಮೂರು ಚುಕ್ಕಿಗಳ 'More’ ಆಯ್ಕೆಯನ್ನು ಕ್ಲಿಕ್ಕಿಸಿ, ಅಲ್ಲಿ ನೀವು ರೆಕಾರ್ಡಿಂಗ್ ನ್ನು MP4 ಫೈಲ್ ಆಗಿ ಡೌನ್ ಲೋಡ್ ಆಗಿರುವುದನ್ನು ಗಮನಿಸಿ.

ಮೊಬೈಲ್ ನಲ್ಲಿ ನೀವು ಟ್ಯಾಪ್ ಮಾಡಿ ಹೋಲ್ಡ್ ಮಾಡಿದರೆ ಚಾಟ್ ನ ಪಾಪ್ ಅಪ್ ಮೆನುವನ್ನು ಗಮನಿಸಬಹುದು ಮತ್ತು ಸೇವ್ ಬಟನ್ ಇರುತ್ತದೆ. 'More’ ವಿಭಾಗದಿಂದ ಈ ಕರೆಯ ಚಾಟ್ ರೆಕಾರ್ಡಿಂಗ್ ನ್ನು ಫಾರ್ವಡ್ ಮಾಡಲು ಕೂಡ ಇಲ್ಲಿ ಸಾಧ್ಯವಾಗುತ್ತದೆ.

Best Mobiles in India

English summary
Skype now lets you record calls on iPhone, Android and desktop
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+