ಸ್ನಾಪ್ ಚಾಟ್ ನಿಂದ ಮತ್ತೊಂದು ಹೊಸ ಆಯ್ಕೆ..! ಕದಿಯಲು ಆಗಲೇ ಸ್ಕೆಚು..!

By: Precilla Dias

ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಿರುವ ಸ್ನಾಪ್ ಚಾಟ್ ಹೊಸದೊಂದು ಆಯ್ಕೆಯನ್ನು ಬಳಕೆದಾರರಿಗೆ ನೀಡಲು ಮುಂದಾಗಿದೆ. ಈ ಮೂಲಕ ತನ್ನ ಕಡೆಗೆ ಹೆಚ್ಚಿನ ಬಳಕೆದಾರನ್ನು ಸೆಳೆಯುವ ಕಾರ್ಯ ತಂತ್ರವನ್ನು ರೂಪಿಸಿದೆ ಎನ್ನಲಾಗಿದೆ. ಈ ಹೊಸ ಆಯ್ಕೆಯನ್ನು ಕದಿಯಲು ಬೇರೆ ಜಾಲತಾಣಗಳು ಸಿದ್ಧವಾಗಿದೆ ಎಂದು ತಿಳಿದುಬಂದಿದೆ.

ಸ್ನಾಪ್ ಚಾಟ್ ನಿಂದ ಮತ್ತೊಂದು ಹೊಸ ಆಯ್ಕೆ..! ಕದಿಯಲು ಆಗಲೇ ಸ್ಕೆಚು..!

ನಿಮ್ಮ ಸ್ನೇಹಿತರು ಎಲ್ಲಿದ್ದಾರೆ ಎಂಬುದನ್ನು ತಿಳಿದುಕೊಳ್ಳುವ ಸಲುವಾಗಿ, ಅವರು ಏನು ಮಾಡುತ್ತಿದ್ದಾರೆ ಎಂಬುದನ್ನು ತಿಳಿಯಲು ಸ್ನಾಪ್ ಮ್ಯಾಪ್ ಆಯ್ಕೆನನ್ನು ಪರಿಚಯಿಸಿದೆ.

ನೀವು ಇದಕ್ಕಾಗಿ ನಿಮ್ಮ ಕ್ಯಾಮೆರಾ ಟ್ಯಾಬ್ ಗೆ ಹೊಗಿ ಜೂಮ್ ಓಟ್ ಮಾಡಿ ಮ್ಯಾಪ್ ವಿವ್ ಮಾಡಬೇಕಾಗಿದೆ. ಆನಂತರ ನಿಮ್ಮ ಸ್ನೇಹಿತ ಮೇಲೆ ಟಿಪ್ ಮಾಡಿ ಅವರೊಂದಿಗೆ ಚಾಟ್ ಮಾಡಬಹುದಾಗಿದೆ. ಅಲ್ಲದೇ ಅವರು ಅಪ್ ಡೇಟ್ ಮಾಡಿದ ಲೋಕೆಷನ್ ಅಲ್ಲಿ ಕಾಣಿಸಿಕೊಳ್ಳಲಿದೆ.

ಅಲ್ಲದೇ ಅವರು ಡ್ರೈವಿಂಗ್ ಮಾಡುತ್ತಿದ್ದಾರೆಯೋ, ವಾಕಿಂಗ್ ಮಾಡುತ್ತಿದ್ದಾರೆಯೋ ಎಂಬುದನ್ನ ಅರಿಯಬಹುದಾಗಿದೆ. ಸ್ನಾಪ್ ಮ್ಯಾಪ್ ಯಾವ ರೀತಿಯಲ್ಲಿ ಕಾರ್ಯನಿರ್ವಹಿಸಲಿದೆ ಎನ್ನುವುದನ್ನು ತಿಳಿಯುವ ಸಲುವಾಗಿ ವಿಡಿಯೋವೊಂದನ್ನು ಬಿಡುಗಡೆ ಮಾಡಿದೆ.

ಇದರಲ್ಲಿ ಇಡೀ ವಿಶ್ವದಲ್ಲಿರುವ ನಿಮ್ಮ ಎಲ್ಲಾ ಸ್ನೇಹಿತರನ್ನು ಕಾಣಬಹುದಾಗಿದೆ. ಅಲ್ಲಿರುವ ಸರ್ಚ್ ಬಾರಿನಲ್ಲಿ ಅವರ ಹೆಸರನ್ನು ದಾಖಲಿಸಿದರೆ ಸಾಕು. ಅವರ ಜಾಗವನ್ನು ತೋರಿಸಲಿದೆ. ಇದಲ್ಲದೇ ನಿಮ್ಮನ್ನು ಯಾರು ಫಾಲೋ ಮಾಡಬೇಕು ಎಂಬುದರ ಬಗ್ಗೆಯೂ ನೀವೆ ನಿರ್ಧರಿಸಬಹುದಾಗಿದೆ, ಇದಕ್ಕಾಗಿ ಸೆಟ್ಟಿಂಗ್ಸ್ ಸಹ ನೀಡಲಾಗಿದೆ.

ಇದರೊಂದಿಗೆ ಇನ್ನಷ್ಟು ಆಯ್ಕೆಗಳು ಲಭ್ಯವಿದೆ. ಗೋಸ್ಟ್ ಮೋಡ್ ಹಾಕಿಕೊಂಡರೆ ಯಾವರು ಸಹ ನಿಮ್ಮನ್ನು ಫಾಲೋ ಮಾಡಲು ಸಾಧ್ಯವಿಲ್ಲ. ಮೈ ಫ್ರೆಂಡ್ ಮೋಡಿನಲ್ಲಿ ನಿಮ್ಮ ಸ್ನೇಹಿತರು ಮಾತ್ರವೇ ನಿಮ್ಮನ್ನು ಹಿಂಬಾಲಿಸಬಹುದಾಗಿದೆ. ಇನ್ನೊಂದು ಆಯ್ಕೆಯಿದ್ದು ಸೆಲೆಕ್ಟ್ ಫ್ರೆಂಡ್ಸ್ ಆಯ್ಕೆಯಲ್ಲಿ ನೀವು ಆಯ್ಕೆ ಮಾಡಿದ ಸ್ನೇಹಿತರು ಮಾತ್ರವೇ ನಿಮ್ಮನ್ನು ಹುಡುಕಬಹುದಾಗಿದೆ.

ಸದ್ಯ ಎಲ್ಲಾ ಸೋಶಿಯಲ್ ನೆಟ್ವರ್ಕಿಂಗ್ ಸೈಟುಗಳು ಸ್ನಾಪ್ ಚಾಟ್ ಆಯ್ಕೆಯನ್ನು ಕದಿಯುತ್ತಿವೆ., ಆದರೆ ಮುಂದಿನ ದಿನದಲ್ಲಿ ಈ ಆಯ್ಕೆಯನ್ನು ಕದ್ದು ಅಳವಡಿಸಿಕೊಂಡರೆ ಯಾವುದೇ ಆಶ್ಚರ್ಯವಿಲ್ಲ ಎನ್ನಲಾಗಿದೆ. ಫೇಸ್ ಬುಕ್ ಈ ರೇಸಿನಲ್ಲಿ ಮುಂದಿದೆ.

English summary
Snapchat has introduced a new feature called Snap Map that will not only show you on a map where your friends are but also what they are doing.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot