ಆಪಲ್‌ನಿಂದ ದುಬಾರಿ ಐಫೋನ್‌ಗಳ ಲಾಂಚ್..! ಆನ್‌ಲೈನ್‌ನಲ್ಲಿ ಟ್ರೆಂಡ್ ಆದ 'ಟೇಕ್ ಮೈ ಕಿಡ್ನಿ'..!
ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಹೊಸ ಅಧ್ಯಾಯವನ್ನು ಶುರು ಮಾಡುವ ನಿಟ್ಟಿನಲ್ಲಿ ಆಪಲ್ ನೂತನ ಐಫೋನ್‌ಗಳನ್ನು ಲಾಂಚ್ ಮಾಡಿದೆ. ಅಮೆರಿಕದ ಕ್ಯಾಲಿಫೋರ್ನಿಯಾದ ಆಪಲ್ ಪಾರ್ಕ್‌ನ ಸ್ಟೀವ್ ಜಾಬ್ಸ್ ಥಿಯೇಟರ್‌ನಲ್ಲಿ ಬುಧವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಐಫೋನ್ XS, ಐಫೋನ್ XS ಮ್ಯಾಕ್ಸ್ ಮತ್ತು ಐಫೋನ್ XRಗಳು ಲಾಂಚ್ ಆಗಿವೆ. ಈ ಮೂರು ಐಫೋನ್‌ಗಳು ಬಳಕೆದಾರರಿಗೆ ವಿವಿಧ ಮಾದರಿಯಲ್ಲಿ ಲಭ್ಯವಿರಲಿವೆ. ಆದರೆ, ಆಪಲ್ ಬಿಡುಗಡೆ ಮಾಡಿರುವ ಹೊಸ ಐಫೋನ್‌ಗಳು ಆನ್‌ಲೈನ್‌ನಲ್ಲಿ ಫುಲ್ ಟ್ರೋಲ್ ಆಗುತ್ತಿದ್ದು, ಟ್ವಿಟ್ಟರ್‌ನಲ್ಲಿ ಹೊಸ ಟ್ರೆಂಡ್ ಸೃಷ್ಟಿಸಿವೆ.
ಆಪಲ್ ಬಿಡುಗಡೆ ಮಾಡಿರುವ ಹೊಸ ಫೋನ್‌ಗಳು ದುಬಾರಿಯಾಗಿದ್ದು, ಐಫೋನ್ XR 749 ಯುಎಸ್ ಡಾಲರ್ ಮೌಲ್ಯ ಹೊಂದಿದ್ದರೆ, ಐಫೋನ್ XS 999 ಯುಎಸ್ ಡಾಲರ್ ಬೆಲೆ ಹೊಂದಿದೆ. ಐಫೋನ್ XS Max 1099 ಯುಎಸ್ ಡಾಲರ್ ದರವನ್ನು ಹೊಂದಿದ್ದು, ದುಬಾರಿಯಾಗಿ ಪರಿಣಮಿಸಿದ್ದು, ನೆಟ್ಟಿಗರು ಟ್ವಿಟ್ಟರ್‌ನಲ್ಲಿ ಆಪಲ್ ಮೇಲೆ ವಾಕ್ ಪ್ರಹಾರ ನಡೆಸಿದ್ದಾರೆ.

ಹೌದು, ಆಪಲ್‌ನ ನೂತನ ಫೋನ್‌ಗಳ ಬೆಲೆಗಳು ಹಾಗೂ ಹೊಸ ಐಫೋನ್‌ಗಾಗಿ ಹಣದ ಹೊಂದಾಣಿಕೆಯ ಬಗ್ಗೆ ಹೊಸ ಹೊಸ ಐಡಿಯಾಗಳನ್ನು ಟ್ವಿಟ್ಟರ್‌ನಲ್ಲಿ ಹರಿಬಿಡಲಾಗುತ್ತಿದೆ. ಅದರಲ್ಲಿ 'ಟೇಕ್ ಮೈ ಕಿಡ್ನಿ' ಟ್ರೆಂಡ್ ಆಗಿದ್ದು, ಆಪಲ್ ಇವೆಂಟ್‌ಗೆ ಟ್ಯಾಗ್ ಮಾಡಿ ಟ್ವೀಟ್ ಮಾಡಲಾಗುತ್ತಿದೆ. ಅದರಲ್ಲಿ ಒಂದಿಷ್ಟು ಫನ್ ಟ್ವೀಟ್‌ಗಳು ಸಹ ಇದ್ದು, ನೋಡಿಕೊಂಡು ಬರೋಣ ಬನ್ನಿ. ನಿಮಗೂ ನಗು ತರಿಸಬಹುದು ಮತ್ತು ಆಶ್ಚರ್ಯ ಮೂಡಿಸಬಹುದು.
ಹೊಸ ಐಫೋನ್‌ಗಳಲ್ಲಿ ಆಗಿರುವ ಅಪ್‌ಡೇಟ್‌ಗಳ ಬಗ್ಗೆಯೂ ಟ್ವಿಟರ್‌ನಲ್ಲಿ ಆಪಲ್ ಟ್ರೋಲ್‌ಗೊಳಗಾಗಿದೆ.


Click it and Unblock the Notifications








