Home
Social media

ಒಂದು ಇನ್‌ಸ್ಟಾಗ್ರಾಂ ಪೋಸ್ಟ್‌ಗೆ 'ಕೋಹ್ಲಿ' ಪಡೆಯುವ ಹಣ ಎಷ್ಟು ಗೊತ್ತಾ?!..ಶಾಕ್ ಆಗ್ತೀರಾ!!

ಸಾಮಾಜಿಕ ಜಾಲತಾಣಗಳಲ್ಲಿ ಕೋಹ್ಲಿ ಅಪ್‌ಲೋಡ್ ಮಾಡುವ ಒಂದೇ ಒಂದು ಪೋಸ್ಟ್ ಕೂಡ ಅವರಿಗೆ ಕೋಟಿ ಕೋಟಿ ಹಣಗಳಿಕೆ ನೀಡುತ್ತಿದೆ.!

By Bhaskar N J

ಜಗತ್ತಿನ ಕ್ರಿಕೆಟ್ ಆಟಗಾರರಲ್ಲಿಯೇ ಹೆಚ್ಚು ಜನಪ್ರಿಯ ಹಾಗೂ ಅತ್ಯಂತ ಹೆಚ್ಚು ಆದಾಯ ಪಡೆಯುತ್ತಿರುವ ಏಕೈಕ ಆಟಗಾರ ಮಾತ್ರವಲ್ಲದೇ, ಪ್ರಪಂಚದ ಟಾಪ್ ಹತ್ತು ಜನಪ್ರಿಯ ಕ್ರೀಡಾಗಾರರಲ್ಲಿ ಹೆಸರು ಪಡೆದಿರುವ ಭಾರತ ಕ್ರಿಕೆಟ್ ತಂಡದ ನಾಯಕ ಮತ್ತು ಸ್ಪೋಟಕ ಬ್ಯಾಟ್ಸ್‌ಮನ್ ಜನಪ್ರಿಯತೆ ಈಗಾಗಲೇ ಉತ್ತುಂಗಕ್ಕೇರಿದೆ.!!

ಇದೇ ಜನಪ್ರಿಯತೆಯಿಂದ ಕ್ರಿಕೆಟ್ ಮತ್ತು ಜಾಹಿರಾತು ಮೂಲಕ ವಿರಾಟ್ ಕೋಹ್ಲಿ ವರ್ಷಕ್ಕೆ 200 ಕೋಟಿಗೂ ಹೆಚ್ಚು ಹಣ ಸಂಪಾದಿಸುತ್ತಾರೆ ಎಂಬ ಸುದ್ದಿ ಸಹ ಗುಟ್ಟಾಗಿ ಉಳಿದಿಲ್ಲ. ಆದರೆ, ನಿಮಗೆ ಗೊತ್ತಾ? ಕ್ರಿಕೆಟ್ ಮತ್ತು ಜಾಹಿರಾತುಗಳನ್ನು ಬಿಟ್ಟು ಸಾಮಾಜಿಕ ಜಾಲತಾಣಗಳಿಂದ ಕೂಡ ಕೋಟಿ ಕೋಟಿ ಹಣ ಗಳಿಸುತ್ತಾರೆ.!!

ಸಾಮಾಜಿಕ ಜಾಲತಾಣಗಳಲ್ಲಿ ಕೋಹ್ಲಿ ಅಪ್‌ಲೋಡ್ ಮಾಡುವ ಒಂದೇ ಒಂದು ಪೋಸ್ಟ್ ಕೂಡ ಅವರಿಗೆ ಕೋಟಿ ಕೋಟಿ ಹಣಗಳಿಕೆ ನೀಡುತ್ತಿದೆ.! ಹಾಗಾದರೆ, ವಿರಾಟ್ ಕೋಹ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಎಷ್ಟು ಹಣಗಳಿಸುತ್ತಿದ್ದಾರೆ ಎಂಬ ಕುತ್ತೋಹಲ ನಿಮಗಿದೆಯಾ? ಹಾಗಿದ್ದರೆ ಕೆಳಗಿನ ಸ್ಲೈಡರ್‌ಗಳಲ್ಲಿ ಈ ಬಗ್ಗೆ ಪೂರ್ಣ ಮಾಹಿತಿ ತಿಳಿಯಿರಿ.!!

ಜಾಲತಾಣಗಳ ಅಧಿಪತಿ ಕೋಹ್ಲಿ!!

ಜಾಲತಾಣಗಳ ಅಧಿಪತಿ ಕೋಹ್ಲಿ!!

ಭಾರತದಲ್ಲಿ ಜನಪ್ರಿಯ ಕ್ರೀಡೆ ಕ್ರಿಕೆಟ್‌ ಆಟಗಾರರು ಹೆಚ್ಚು ಜನಪ್ರಿಯವಾಗುವುದು ಕಾಮನ್ ಎನ್ನಬಹುದು.! ಕ್ರಿಕೆಟ್ ದೇವರು ಸಚಿನ್, ಧೋನಿ ನಂತರ ಇದೀಗ ವಿರಾಟ್ ಕೋಹ್ಲಿ ಜಾಲತಾಣಗಳ ಅಧಿಪತಿಯಾಗಿದ್ದು, ಸ್ಪೋಟಕ ಬ್ಯಾಟ್ಸ್‌ಮನ್ ಬಹುತೇಕ ಎಲ್ಲಾ ಸಾಮಾಜಿಕ ಜಾಲತಾಣಗಳಲ್ಲಿ ಕೋಟಿ ಕೋಟಿ ಹಿಂಬಾಲಕರನ್ನು ಹೊಂದಿದ್ದಾರೆ.!!

ಜಾಲತಾಣಗಳ ಹಿಂಬಾಲಕರ ಸಂಖ್ಯೆ?

ಜಾಲತಾಣಗಳ ಹಿಂಬಾಲಕರ ಸಂಖ್ಯೆ?

ಭಾರತದಲ್ಲಿ ಹೆಚ್ಚು ಜನಪ್ರಿಯ ಸಾಮಾಜಿಕ ಜಾಲತಾಣ ಫೇಸ್‌ಬುಕ್‌ನಲ್ಲಿ ಕೋಹ್ಲಿಗೆ 36 ಮಿಲಿಯನ್ ಫಾಲೋವರ್‌ಗಳಿದ್ದರೆ, ಟ್ವಿಟರ್‌ನಲ್ಲಿ 20 ಮಿಲಿಯನ್ ಹಾಗೂ ಇನ್‌ಸ್ಟಾಗ್ರಾಂನಲ್ಲಿ ಬರೊಬ್ಬರಿ 15 ಮಿಲಿಯನ್ ಫಾಲೋವರ್‌ಗಳನ್ನು ಹೊಂದಿದ್ದಾರೆ. ಇದು ಅವರ ಜನಪ್ರಿತೆಗೆ ಸಾಕ್ಷಿಯಾಗಿದೆ.!!

ಒಂದು ಪೋಸ್ಟ್‌ಗೂ ಕೋಟಿ ಹಣ!!

ಒಂದು ಪೋಸ್ಟ್‌ಗೂ ಕೋಟಿ ಹಣ!!

ವಿರಾಟ್ ಕೋಹ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಅಪ್‌ಲೋಡ್ ಮಾಡುವ ಒಂದೇ ಒಂದು ಪೋಸ್ಟ್ ಕೂಡ ಕೋಟಿ ಕೋಟಿ ಹಣ ಗಳಿಕೆ ಮಾಡುತ್ತಿದೆ. ಕೊಹ್ಲಿ ಅವರ ಪೋಸ್ಟ್‌ಗಳು ಕೋಟ್ಯಂತರ ಮಂದಿಯನ್ನು ತಲುಪುತ್ತಿರುವುದರಿಂದ ಜಾಲತಾಣಗಳು ಕೋಹ್ಲಿಗೆ ಹಣದ ಸುರಿಮಳೆಯನ್ನೇ ಹರಿಸುತ್ತಿವೆ.!!

ಇನ್‌ಸ್ಟಾಗ್ರಾಂ ಒಂದರಿಂದಲೇ 3.2 ಕೋಟಿ!!

ಇನ್‌ಸ್ಟಾಗ್ರಾಂ ಒಂದರಿಂದಲೇ 3.2 ಕೋಟಿ!!

ನೀವು ನಂಬಿದರೆ ನಂಬಿ ಬಿಟ್ಟರೆ ಬಿಡಿ..15 ಮಿಲಿಯನ್ ಫಾಲೋವರ್‌ಗಳನ್ನು ಹೊಂದಿರುವ ಇನ್‌ಸ್ಟಾಗ್ರಾಂ ಒಂದರಿಂದಲೇ ವಿರಾಟ್ ಕೋಹ್ಲಿ ಬರೊಬ್ಬರಿ 3.2 ಕೋಟಿ ಹಣವನ್ನು ಗಳಿಸುತ್ತಿದ್ದಾರೆ. ಅದು ಕೂಡ ಕೇವಲ ಒಂದು ಇನ್‌ಸ್ಟಾಗ್ರಾಂ ಪೋಸ್ಟ್‌ನಿಂದ ಎಂದು ಫೋರ್ಬ್ಸ್ ಮ್ಯಾಗಜಿನ್ ವರದಿ ಮಾಡಿದೆ.!!

ಫೇಸ್‌ಬುಕ್ ಮತ್ತು ಟ್ವಿಟರ್ ಆದಾಯ?

ಫೇಸ್‌ಬುಕ್ ಮತ್ತು ಟ್ವಿಟರ್ ಆದಾಯ?

ಇನ್‌ಸ್ಟಾಗ್ರಾಂನಲ್ಲಿ ಕೇವಲ ಒಂದೇ ಒಂದು ಪೋಸ್ಟ್‌ಗೆ 3.2 ಕೋಟಿ ಹಣವನ್ನು ಕೋಹ್ಲಿ ಗಳಿಸುತ್ತಿದ್ದರೆ, ಫೇಸ್‌ಬುಕ್ ಮತ್ತು ಟ್ವಿಟರ್ ಮೂಲಕ ಕೋಹ್ಲಿಗೆ ಹರಿದುಬರುತ್ತಿರುವ ಆದಾಯ ಇನ್ನು ಹೆಚ್ಚಾಗಿರುತ್ತದೆ ಎನ್ನಲಾಗಿದೆ. ಆದರೆ, ಫೇಸ್‌ಬುಕ್ ಮತ್ತು ಟ್ವಿಟರ್‌ಗಳಿಂದ ಕೋಹ್ಲಿ ಗಳಿಸುತ್ತಿರುವ ಆದಾಯ ಎಷ್ಟು ಎಂಬುದರ ಬಗ್ಗೆ ಸ್ಪಷ್ಟ ಮಾಹಿತಿಯಿಲ್ಲ.!!

Best Mobiles in India

English summary
Kohli earns a whopping Rs. 3.2 crore per Instagram post. to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+