ಸಾಮಾಜಿಕ ಜಾಲತಾಣ ಬಳಸುವ ಹಿರಿಯ ನಾಗರೀಕರಿಗೆ ಸಿಹಿಸುದ್ದಿ!
ಫೇಸ್‌ಬುಕ್‌ನಂತಹ ಸಾಮಾಜಿಕ ಜಾಲತಾಣಗಳಿಂದ ಸಮಯ ಹಾಳಾಗುತ್ತಿದೆ, ಜನರ ಮನಸ್ಸು ಕೆಡುತ್ತಿದೆ ಎಂಬ ನೆಗಟಿವ್ ವಿಷಯಗಳ ಬಗ್ಗೆಯೇ ನಾವು ಹೆಚ್ಚು ಕೇಳಿದ್ದೇವೆ ಅಲ್ಲವೇ?. ಆದರೆ, ಇತ್ತೀಚಿನ ಅಧ್ಯಯನವೊಂದು ಸಾಮಾಜಿಕ ಜಾಲತಾಣಗಳಿಂದ ಆಗುತ್ತಿರುವ ಸದುಪಯೋಗದ ಬಗ್ಗೆ ವರದಿಯೊಂದನ್ನು ಪ್ರಕಟಿಸಿದೆ. ಈ ವರದಿ ಹಿರಿಯ ನಾಗರೀಕರಿಗೆ ಸಂತಸ ಮೂಡಿಸಿದೆ.
ಹೌದು, ಸಾಮಾಜಿಕ ಜಾಲತಾಣಗಳನ್ನು ಹೆಚ್ಚು ಬಳಸುವ ಹಿರಿಯ ನಾಗರೀಕರಿಗೆ ಇದು ಸಿಹಿಸುದ್ದಿಯಾಗಿದ್ದು, ಸಾಮಾಜಿಕ ಜಾಲತಾಣಗಳನ್ನು ಬಳಸುವ ಹಿರಿಯರು ಮಾನಸಿಕ ಖಿನ್ನತೆಯಿಂದ ಬಳಲುವುದನ್ನು ತಪ್ಪಿಸಿಕೊಳ್ಳುತ್ತಾರೆ. ಒಂದು ವೇಳೆ ಅವರು ಅಂತಹ ಖಿನ್ನತೆಯಿಂದ ಬಳಲುತ್ತಿದ್ದರೂ ಸಹ ಸಾಮಾಜಿಕ ಜಾಲತಾಣಗಳು ಅದನ್ನು ಪರಿಹರಿಸಲಿದೆ ವರದಿಯಲ್ಲಿ ಹೇಳಲಾಗಿದೆ.

ಯುನಿವರ್ಸಿಟಿ ಆಫ್ ಮಿಚಿಗನ್ ನಡೆಸಿದ ಈ ಒಂದು ಅಧ್ಯಯನದಲ್ಲಿ ಹೀಗೆ ತಿಳಿಸಲಾಗಿದ್ದು, ವೃದ್ಯಾಪ್ಯದತ್ತ ಹೊರಳುತ್ತಿರುವ ಸಮಾಜದಲ್ಲಿ ಹೆಚ್ಚಾಗಿ ಏಕಾಂತತೆ ಮತ್ತು ಒಂಟಿತನವು ಯೋಗಕ್ಷೇಮದ ಪ್ರಮುಖ ನಿರ್ಣಾಯಕ ಅಂಶಗಳಾಗಿವೆ. ಅಂತವರ ಮೇಲೆ ಸಾಮಾಜಿಕ ಜಾಲತಾಣಗಳು ಸಕಾರಾತ್ಮಕ ಪರಿಣಾಮವನ್ನು ಉಂಟು ಮಾಡುತ್ತದೆ ಎಂದು ಹೇಳಲಾಗಿದೆ.
ಜೆರೋಂಟೊಲಜಿ ನಿಯತಕಾಲಿಕೆಯಲ್ಲಿ ಇದನ್ನು ಪ್ರಕಟಿಸಲಾಗಿದ್ದು, ಸಾಮಾಜಿಕ ಜಾಲತಾಣಗಳನ್ನು ಬಳಸುವುದರಿಂದ ಮೂಲಕ ಮಾನವನ ಮೇಲಾಗುವ ಋಣಾತ್ಮಕ ಪರಿಣಾಮದ ಕಡಿಮೆಯಾಗಲಿದೆ. ಸಾಮಾಜಿಕ ಜಾಲತಾಣಗಳು ಅಂತವರ ಮೇಲೆ ಸಕಾರಾತ್ಮಕ ಪರಿಣಾಮವನ್ನು ಉಂಟು ಮಾಡುತ್ತದೆ ಎಂದು ಲೇಖಕ ಶಾನನ್ ಆಂಗ್ ಅವರು ಅಭಿಪ್ರಾಯಪಟ್ಟಿದ್ದಾರೆ.

ನಮ್ಮ ಫಲಿತಾಂಶಗಳು ಪ್ರಾಯಶಃ ಇತರ ರೀತಿಯ ಪರಿಸ್ಥಿತಿಗಳಿಗೆ ವಿಸ್ತರಿಸಬಹುದು ಉದಾಹರಣೆಗೆ, ದೀರ್ಘಕಾಲದ ಅನಾರೋಗ್ಯಗಳು, ಕ್ರಿಯಾತ್ಮಕ ಮಿತಿಗಳು ಎಂದು ಆಂಗ್ ಹೇಳಿದ್ದಾರೆ. ಸಾಮಾಜಿಕ ಚಟುವಟಿಕೆಗಳಲ್ಲಿ ಭಾಗವಹಿಸುವ ಸಾಧ್ಯತೆಯಿಲ್ಲದ ಹಿರಿಯರಿಗೆ ಮುಖತಃ ಸಂಭಾಷಣೆಗಳು ಮಾನಸಿಕ ಪ್ರಯೋಜನಗಳನ್ನು ನೀಡುತ್ತದೆ ಎಂದು ಅಧ್ಯಯನ ತಿಳಿಸಿದೆ.


Click it and Unblock the Notifications








