ಸಾವನ್ನೇ ಪಣಕ್ಕಿಟ್ಟು ತೆಗೆದುಕೊಂಡಿರುವ ಸೆಲ್ಫೀಗಳಿವು..! ನೋಡಿದರೆ ಎದೆ ಜಲ್ಲೆನ್ನುವುದು ಖಂಡಿತ..!
ನಿನ್ನೇ ತಾನೇ ಸೆಲ್ಫೀ ತೆಗೆಯಲು ಹೋಗಿ ಸಾವಿಗೀಡಾಗುತ್ತಿರುವ ಸ್ಟೋರಿ ನೋಡಿದ್ದೇವೆ. ಇವತ್ತು ಮತ್ತೊಂದು ಸೆಲ್ಫೀ ಸಂಬಂಧಿತ ಸ್ಟೋರಿಯನ್ನು ನಿಮ್ಮ ಜತೆ ಹಂಚಿಕೊಳ್ಳಲು ಇಷ್ಟಪಡುತ್ತೇನೆ. ನಿನ್ನೇದು ನಕರಾತ್ಮಕ ಸ್ಟೋರಿ ಆಗಿದ್ರೇ ಇಂದಿನದು ಪಾಸಿಟಿವ್ ಸ್ಟೋರಿ. ಹೌದು, ಯಾವುದೇ ಪೂರ್ವ ತಯಾರಿಯಿಲ್ಲದೇ ಸೆಲ್ಫಿ ತೆಗೆಯಲು ಹೋಗಿ ಇಹಲೋಕದ ದಾರಿಯನ್ನು ತುಳಿಯುತ್ತಾರೆ. ಆದರೆ, ಒಂದಿಷ್ಟು ಸಾಹಸಿಗರಿದ್ದಾರೆ, ಅವರಿಗೂ ಜೀವ ಭಯವಿದ್ದೇ ಇರುತ್ತೇ ಅವರದ್ದು ರಿಸ್ಕ್ ತೆಗೆದುಕೊಳ್ಳುವುದೇ ಕೆಲಸವಾಗಿರುತ್ತೆ. ಆ ರಿಸ್ಕ್‌ನಲ್ಲಿ ಅವರು ಯಶಸ್ವಿಯಾಗುತ್ತಾರೆ ಕೂಡ.

ಯಾಕೀದನ್ನು ಹೇಳುತ್ತಿದ್ದೇವೆ ಎಂದರೆ, ಒಂದಿಷ್ಟು ಸಾಹಸಿ ಪೋಟೋಗ್ರಾಫರ್‌ಗಳು ತಮ್ಮ ಜೀವವನ್ನು ಪಣಕ್ಕಿಟ್ಟು, ಒಂದೊಳ್ಳೆ ಸೆಲ್ಫೀ ಪೋರ್ಟ್‌ರೇಟ್ ತೆಗೆಯಲು ಎಷ್ಟು ಕಷ್ಟ ಪಟ್ಟಿದ್ದಾರೆ ಎಂಬುದನ್ನು ನಿಮಗೆ ಮುಂದೆ ತೋರಿಸುತ್ತೇವೆ. ಎತ್ತರೆತ್ತರದ ಟವರ್‌ಗಳು, ಸೇತುವೆಗಳು, ಸಮುದ್ರದ ಆಳದಲ್ಲಿ ಸೆಲ್ಫೀ ತೆಗೆದುಕೊಂಡಿದ್ದಾರೆ ಇವೆಲ್ಲಾ ಬಿಡಿ ಜ್ವಾಲಾಮುಖಿ ಸಂದರ್ಭದಲ್ಲೂ ಸ್ವಂತಿ ಕ್ರೇಜ್‌ನ್ನು ಇವರು ಬಿಟ್ಟಿಲ್ಲ. ಇವರೆಲ್ಲಾ ಸ್ವಲ್ಪ ಯಾಮಾರಿದ್ರೂ ಸಾವನ್ನಪ್ಪುವುದು ಖಂಡಿತ. ಅದಕ್ಕಾಗಿಯೇ ವಿಶ್ವದ ಅತಿ ಅಪಾಯಕಾರಿ ಸೆಲ್ಫೀಗಳನ್ನು ನಿಮ್ಮ ಮುಂದಿಡಲು ಬಯಸುತ್ತಿದ್ದೇವೆ. ನೋಡಿ..

1. 183 ಮೀ. ಟಿವಿ ಟವರ್ ಮೇಲೆ ಸೆಲ್ಫೀ
ಡೇರ್‌ಡೆವಿಲ್ ಫೋಟೋಗ್ರಾಫರ್ ಎರವಿನ್ ಪುಂಕರ್ ಎಸ್ಟೋನಿಯಾದ ಟರ್ಟುವಿನಲ್ಲಿರುವ 183 ಮೀಟರ್ ಎತ್ತರದ ಟಿವಿ ಟವರ್ ಮೇಲೆ ನಿಂತು ಸೆಲ್ಫೀ ಸ್ಟಿಕ್ ಬಳಸಿ ಸ್ವಂತಿ ತೆಗೆದುಕೊಂಡಿರುವುದನ್ನು ನೋಡಿದರೆ ಏನ್ ಧೈರ್ಯ ಗುರು ನಿಂದು ಎನ್ನಲ್ವೇ.

2. ಕ್ರಿಸ್ತನ ತೋಳಿನ ಮೇಲೊಂದು ಸ್ವಂತಿ
ಬ್ರೆಜಿಲ್‌ನ ರಿಯೋ ಡಿ ಜನೈರೋದಲ್ಲಿರುವ 38 ಮೀಟರ್ ಎತ್ತರದ ಕ್ರಿಸ್ತ ರೇಡಿಮರ್ ಪ್ರತಿಮೆಯ ತೋಳಿನಲ್ಲಿ ಥಿಯಾಗೋ ಕೊರೇರಾ ಪರಿಪೂರ್ಣ ಸೆಲ್ಫೀ ತೆಗೆದುಕೊಂಡಿದ್ದಾನೆ. ಏನಾದ್ರೂ ಆಯತಪ್ಪಿದರೆ ದೇವರೇ ಗತಿ.

3. 420 ಮೀ. ಟವರ್ ಮೇಲಿಂದ ಸೆಲ್ಫೀ
ರಷ್ಯಾದ ಬ್ಯಾಟ್‌ಮನ್ ಉತ್ಸಾಹಿಗಳಾದ ವ್ಲಾಡಿಮರ್ ಸಿಡೋರೋವ್ ಮತ್ತು ಇವಾನ್ ಕುಸ್ನೆಟ್ಸೋವ್ ಚೀನಾದ ಶಾಂಘೋವ್‌ನಲ್ಲಿರುವ 420 ಮೀಟರ್ ಎತ್ತರದ ಟವರ್ ಮೇಲೆ ನಿಂತು ಸೆಲ್ಫೀ ತೆಗೆದುಕೊಂಡಿದ್ದಾರೆ. ನಿಜವಾಗ್ಲೂ ಇವರ ಧೈರ್ಯ ಮೆಚ್ಚಬೇಕಾದುದ್ದೇ.

4. ವಿಮಾನದ ಒಳಗಲ್ಲ ಮೇಲೆ
ಜೆಕ್ ಗಣರಾಜ್ಯದ ಬೈಸ್ಟ್ರಿಕ್‌ನಲ್ಲಿರುವ ಬೆನೆಸೋವ್ ವಿಮಾನ ನಿಲ್ದಾಣದ ಮೇಲೆ ಹಾರಾಟ ಮಾಡುವಾಗ ಜಾಕೂಬ್ ವಲ್ಕ್ ಸೆಲ್ಫೀ ತೆಗೆದುಕೊಂಡಿರುವ ರೀತಿ.

5. 350 ಮೀ. ಎತ್ತರದ ಸೇತುವೆಯ ತುದಿಯಲ್ಲಿ ಸೆಲ್ಫೀ
ಸಾಹಸಿ ಕ್ಲೈಂಬರ್ಸ್ ಆಗಿರುವ ಪಾವೆಲ್ ಸ್ಮಿರ್ನೋವ್ ಮತ್ತು ಓಸ್ಕನ್ ಐಪಾರ್ ಟರ್ಕಿಯ ಇಸ್ತಾಂಬುಲ್‌ನಲ್ಲಿರುವ 350 ಮೀಟರ್ ಎತ್ತರದ ಯವುಜ್ ಸುಲ್ತಾನ್ ಸೆಲಿಮ್ ಸೇತುವೆಯ ತುದಿಯಲ್ಲಿ ನಿಂತು ತೆಗೆದುಕೊಂಡಿರುವ ಸೆಲ್ಫೀ ನೋಡಿ ಹೇಂಗಿದೆ.

6. ಯುದ್ಧ ವಿಮಾನದಲ್ಲೂ ಫೋಟೋ
ಉತ್ತರ ನಾರ್ವೇಯಲ್ಲಿ ನಾರ್ವೇಯ F-16 ಯುದ್ಧ ವಿಮಾನದ ಪೈಲಟ್ ಕೋಲ್ಡ್ ರೆಸ್ಪಾನ್ಸ್ ವ್ಯಾಯಾಮ ಮಾಡುವಾಗ ಸಿಕ್ಕ ಬಿಡುವಿನ ಸಮಯದಲ್ಲಿ ಸೆಲ್ಫೀ ತೆಗೆದುಕೊಂಡಿರುವ ರೀತಿ ನೋಡಿದರೆ, ಯುದ್ಧದಲ್ಲೂ ಇವರು ಸೆಲ್ಫೀ ತೆಗೆದುಕೊಳ್ಳದೆ ಬಿಡುವವರಲ್ಲ ಎನ್ನುವುದು ಗೊತ್ತಾಗುತ್ತದೆ.

7. ಶಾರ್ಕ್ ಜತೆ ರಿಸ್ಕಿ ಸೆಲ್ಫೀ
ದಕ್ಷಿಣ ಆಫ್ರಿಕಾದ ಅಲಿವಾಲ್ ಶೋಹಾಲ್ ಹವಳದ ತೀರದಲ್ಲಿ ಆರನ್ ಗೆಕೋಸ್ಕಿ ಶಾರ್ಕ್ ಜತೆ ಸೆಣಸಾಡುತ್ತಾ ರಿಸ್ಕಿ ಸೆಲ್ಫೀ ತೆಗೆದುಕೊಂಡಿರುವುದು ಎಂತಹವರಿಗೂ ಎದೆ ಜಲ್ಲೆನಿಸುತ್ತದೆ.

8. ಕತ್ತೆಕಿರುಬನ ಜತೆ ಸ್ವಂತಿ
ವನ್ಯಜೀವಿ ಛಾಯಾಗ್ರಾಹಕ ಕಿಮ್ ವೊಲ್ಹೂಟರ್ ಬೊಟ್ಸವಾನಾದಲ್ಲಿರುವ ಮಾಶತು ಗೇಮ್ ಮೀಸಲು ಪ್ರದೇಶದಲ್ಲಿ ಕಾಡು ಕತ್ತೆಕಿರುಬನ ಜತೆ ಸೆಲ್ಫೀ ತೆಗೆದುಕೊಂಡಿರುವ ಸ್ಟೈಲ್ ನೋಡಿ.

9. ಸೆಲ್ಫೀ ವಿಥ್ ಜೆಲ್ಲಿಫೀಷ್
ವೃತ್ತಿಪರ ಛಾಯಾಗ್ರಾಹಕಿ ಹಾಗೂ ಸ್ಕೂಬಾ ಡೈವರ್ ಆಗಿರುವ ನಾದಿಯಾ ಅಲಿ ಪಲಾವುದಲ್ಲಿರುವ ಜೆಲ್ಲಿಫೀಷ್ ಸರೋವರದಲ್ಲಿ ಈಜುತ್ತಾ ಸೆಲ್ಫೀ ವಿತ್ ಜೆಲ್ಲಿಫೀಷ್ ಎಂದು ಸೆಲ್ಫೀ ತೆಗೆದುಕೊಂಡಿರುವುದು ವೈರಲ್ ಆಗಿದೆ.

10. ಕಾಣದ ಸ್ಕೈ ಲೈನ್‌ಗಾಗಿ ಸೆಲ್ಫೀ
ಸಾಹಸ ಛಾಯಾಗ್ರಾಹಕ ಅಲೆಕ್ಸಾಂಡರ್ ರೆಮ್ನೋವ್ ಹಾಂಗ್‌ಕಾಂಗ್ನ ಕಾಣದ ಸ್ಕೈಲೈನ್ ದೃಶ್ಯ ಸೆರೆಹಿಡಿಯಲು ಸೆಲ್ಫೀ ಸ್ಟಿಕ್ ಬಳಸಿ ಸೆಲ್ಫೀ ತೆಗೆದುಕೊಂಡಿರುವ ರೀತಿ ನೋಡಿ.

11. ಜ್ವಾಲಾಮುಖಿನೂ ಬಿಟ್ಟಿಲ್ಲ
ಮೌಂಟೇನರ್ ನಿಕ್ ಹಾಲಿಕ್ಸ್ ಎಂಬಾತ ವನೌತುದ ಅಂಬ್ರೈಮ್ ದ್ವೀಪದಲ್ಲಿನ ಸಕ್ರಿಯ ಬೆನ್‌ಬೋ ಜ್ವಾಲಾಮುಖಿ ಬಳಿ ಸೆಲ್ಫೀ ತೆಗೆದುಕೊಂಡಿರುವುದಂತೂ ಹೇಳೋಕಾಗಲ್ಲ.


Click it and Unblock the Notifications