2018ರ ಬೆಸ್ಟ್ ವೈರಲ್ ವಿಡಿಯೋಗಳೆಂದರೆ ಇವು..! ಇಂಟರ್‌ನೆಟ್ ಲೋಕದಲ್ಲಿ ಟ್ರೆಂಡ್..!
ನಾವೀಗಾಗಲೇ 2018ರಲ್ಲಿ ಮುಕ್ಕಾಲು ವರ್ಷವನ್ನು ಯಶಸ್ವಿಯಾಗಿ ಮುಗಿಸಿ 2019ನ್ನು ಬರ ಮಾಡಿಕೊಳ್ಳಲು ಕಾಯುತ್ತಿದ್ದೇವೆ. ಇನ್ನು ಮೂರೇ ತಿಂಗಳು 2018 ಅಂತ್ಯವಾಗುತ್ತದೆ. ಈ ವರ್ಷದಲ್ಲಿ ಹಲವು ಘಟನೆಗಳು ನಡೆದಿದೆ. ಅದರಂತೆ, ಸಾಮಾಜಿಕ ಮಾಧ್ಯಮದ ಪರಿಧಿ ಇನ್ನಷ್ಟು ವಿಸ್ತಾರವಾಗಿದ್ದು, ಪ್ರಮುಖ ವಿಡಿಯೋ ವೇದಿಕೆಯಾಗಿ ಬಳಕೆಯಾಗುತ್ತಿದೆ. ಯೂಟ್ಯೂಬ್, ಫೇಸ್‌ಬುಕ್, ಇನ್‌ಸ್ಟಾಗ್ರಾಂ, ವಾಟ್ಸ್‌ಆಪ್‌ನಂತಹ ಸಾಮಾಜಿಕ ಜಾಲತಾಣಗಳು ವಿಡಿಯೋಗಳನ್ನು ಹೆಚ್ಚು ಹೆಚ್ಚು ವೈರಲ್ ಮಾಡುತ್ತಿವೆ.

ಮ್ಯೂಸಿಕ್‌ಲಿಯಂತಹ ಆಪ್‌ಗಳು ವಿಡಿಯೋಗೆ ಬೇರೆ ದಾರಿಯನ್ನು ತೋರಿಸಿವೆ. ಈ ವರ್ಷ ಕಿಕಿ ಚಾಲೆಂಜ್, ಡೈವಿಂಗ್ ಚಾಲೆಂಜ್‌ನಂತಹ ಕ್ರೇಜ್ ಗೇಮ್‌ಗಳು ಹೆಚ್ಚು ವೈರಲ್ ಆಗಿ ಟ್ರೆಂಡ್ ಸೃಷ್ಟಿಸಿದವು. ಒಂದಿಷ್ಟು ನಿಮಗೆ ಮನರಂಜನೆ ನೀಡಿದರೆ, ಮತ್ತೊಂದಿಷ್ಟು ನಿಮ್ಮನ್ನು ಬೇಸರಗೊಳಿಸಬಹುದು. ಅಂತಹ ವೈರಲ್ ವಿಡಿಯೋಗಳಲ್ಲಿ ಹೆಚ್ಚು ಟ್ರೆಂಡ್ ಸೃಷ್ಟಿಸಿ, ಜನರ ಆಸಕ್ತಿ ಕೆರಳಿಸಿದ ಬೆಸ್ಟ್ ವೈರಲ್ ವಿಡಿಯೋಗಳನ್ನು ಇಲ್ಲಿ ನೀಡಲಾಗಿದೆ.
1. ಹಿಮಪಾತದಲ್ಲಿ ಸ್ಲೈಡಿಂಗ್ ಸೆಣಸಾಟ
ಹಿಮ ಪರ್ವತದಲ್ಲಿ ಸ್ನೋಬೋರ್ಡ್‌ರ್ ಸ್ಲೈಡಿಂಗ್ ಮಾಡುವಾಗ ಹಿಮಪಾತ ಉಂಟಾಗುತ್ತದೆ. ಆ ಕಾರಣದಿಂದ ಇದು ರೋಮಾಂಚಕ ರೂಪವನ್ನು ಪಡೆದು ನೋಡುಗರಿಗೆ ಸ್ನೋಬೋರ್ಡರ್ ಉಳಿಯುತ್ತಾನಾ ಎಂಬುದು ವಿಡಿಯೋದಲ್ಲಿ ನೋಡಬಹುದು. ಹಿಮಪಾತದ ಜತೆ ಸೆಣಸಾಟ ಹೇಗಿರುತ್ತದೆ ಎಂಬುದನ್ನು ಮೇಲಿನ ವಿಡಿಯೋದಲ್ಲಿ ನೋಡಿ.
2. ಹವಾಮಾನ ವರದಿ ಕ್ಯಾಮೆರಾದಲ್ಲಿ ಪಕ್ಷಿಯ ಲೈವ್
KTVU ಚಾನಲ್‌ನಲ್ಲಿ ಸ್ಯಾನ್ ಫ್ರಾನಿಸ್ಕೋ ಬೇ ನಗರದ ಸುಂದರ ದೃಶ್ಯದೊಂದಿಗೆ ಹವಾಮಾನ ವರದಿಯ ನೇರಪ್ರಸಾರ ಮಾಡುವಾಗ ಕ್ಯಾಮೆರಾದ ಮುಂದೆ ಒಂದು ಹಕ್ಕಿ ತನ್ನ ಮೂಗನ್ನು ತೂರಿಸಿ ಏನ ನಡೆಯುತ್ತಿದೆ ಎಂಬುದನ್ನು ನೋಡುತ್ತದೆ. ಇದರಿಂದ ಮಾರ್ಕ್ ಟಮಾಯೋ ಮಾಡುತ್ತಿದ್ದ ಹವಮಾನ ವರದಿಯನ್ನು ಅಲ್ಲಿಗೆ ನಿಲ್ಲಿಸಲಾಯಿತು.
3. ನಭಕ್ಕೆ ಜಿಗಿದ ಫಾಲ್ಕಾನ್ ಹೆವಿ
SpaceX ಫಾಲ್ಕಾನ್ ಹೆವಿ ರಾಕೆಟ್‌ನ್ನು ಉಡಾಯಿಸಿದ ರೀತಿ ಇಡೀ ವಿಶ್ವವನ್ನೆ ಬೆರಗಾಗಿಸಿದೆ. ರಾಕೆಟ್ ವಿನ್ಯಾಸ, ಉತ್ಪಾದನೆ, ಕಕ್ಷೆಗೆ ಸೇರಿಸುವ ವಿಡಿಯೋ ಇದಾಗಿದ್ದು, ಟ್ರೆಂಡ್ ಸೃಷ್ಟಿಸಿತ್ತು.
4. ಭಾವೋದ್ವೇಕ ತಂದೆ
ಅಮೇರಿಕಾದ ಫ್ಲೋರಿಡಾದಲ್ಲಿ ನಡೆದ ಶೂಟ್‌ಔಟ್‌ನಲ್ಲಿ ಸಾವನ್ನಪ್ಪಿದ ಮಗಳ ತಂದೆ ತನ್ನ ಭಾವನೆಗಳನ್ನು ಅಮೆರಿಕಾ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಎದುರು ಹೊರಹಾಕಿ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದು ಇಂಟರ್‌ನೆಟ್ ಲೋಕದಲ್ಲಿ ಬಹಳ ವೈರಲ್ ಆಗಿತ್ತು.
5.ಗೋಡೆಗಳಿಲ್ಲದ ಬಾಲ್ಯ
ಜಪಾನ್‌ನ ಒಂದು ಕಿಂಡರ್ ಗಾರ್ಟನ್‌ಗೆ ಗೋಡೆಗಳೆ ಇಲ್ಲ. ಇಲ್ಲಿ ಮಕ್ಕಳಿಗೆ ನಿಜವಾದ ಬಾಲ್ಯ ಸಿಗುತ್ತದೆ. ಈ ವಿಡಿಯೋ ಕೂಡ ವೈರಲ್ ಆಗಿತ್ತು.
6. ರಾಕ್‌ಸ್ಟಾರ್
ಹಾಡುಗಳನ್ನು ಹಾಡುವವರಿಗೆ "ರಾಕ್ ಸ್ಟಾರ್" ಎಂದು ಕರೆಯುತ್ತೀರಿ ಎಂದಾದರೆ, ಕಲ್ಲುಗಳ ಜತೆ ಆಟ ಆಡುವವರಿಗೆ ಏನೇನ್ನಬೇಕು..? ಅವರು ರಾಕ್‌ಸ್ಟಾರ್ ಆಗಿರುತ್ತಾರೆ. ಅದ್ಭುತವಾಗಿ ಬ್ಯಾಲೆನ್ಸ್ ಮಾಡುವುದನ್ನು ನೋಡುವುದೇ ಆನಂದ.
7. ಆಪಲ್ ಪುಡಿಪುಡಿ
ಏನಾಗಿತ್ತೋ ಗೊತ್ತಿಲ್ಲ ಆತನಿಗೆ ಆಪಲ್ ಸ್ಟೋರ್‌ನಲ್ಲಿ ಸಿಕ್ಕಿದ್ದನ್ನೆಲ್ಲ ಪುಡಿ ಮಾಡ್ತಿದ್ದ. ಆತನ ಕೈಯಿಂದ ಅದೆಷ್ಟು ಆಪಲ್ ಡಿವೈಸ್‌ಗಳು ಪುಡಿ ಪುಡಿಯಾದವು ಎಂಬುದು ಗೊತ್ತಾಗಲ್ಲ.
8. ಪಿತೃ ಪ್ರೇಮ
ಶಾಲೆಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಒಂದು ಹುಡುಗಿ ವೇದಿಕೆಯಲ್ಲಿ ನೃತ್ಯ ಮಾಡುವುದನ್ನು ನಿಲ್ಲಿಸುತ್ತಿರುವಾಗ, ಆ ಹುಡುಗಿ ತಂದೆ ವೇದಿಕೆ ಮೇಲೆ ನೃತ್ಯ ಮಾಡಿ ಮಗಳನ್ನು ನೃತ್ಯ ಮಾಡಿಸುವುದು ಪಿತೃ ಪ್ರೇಮಕ್ಕೆ ಸಾಕ್ಷಿಯಾಗುತ್ತದೆ.
9. ಹಿಮ ಕಾರು
ನಿಮ್ಮ ಕಾರನ್ನು ರಸ್ತೆಯಲ್ಲಿ ಅಥವಾ ಹೆಚ್ಚೆಂದರೆ ನೀರಿನಲ್ಲಿ ಓಡಿಸಿರ್ತಿರಿ. ಇಲ್ನೋಡಿ ಕಾರನ್ನು ಮಂಜುಗಡ್ಡೆಯಲ್ಲೂ ಯಾವುದೇ ಅಡೆತಡೆ ಇಲ್ಲದೇ ಓಡಿಸಬಹುದು ಎಂದು ಈ ವಿಡಿಯೋ ತೋರಿಸುತ್ತದೆ.


Click it and Unblock the Notifications








