ಅಮೆರಿಕಾ ವೀಸಾ ಬೇಕಾ..? ಫೇಸ್‌ಬುಕ್ ಸೇರಿದಂತೆ ನಿಮ್ಮ 5 ವರ್ಷದ ಫೋನ್‌ ಕರೆಗಳ ಮಾಹಿತಿ ನೀಡಬೇಕು...!

|

ಫೇಸ್‌ಬುಕ್ ಬಳಕೆದಾರರ ಮಾಹಿತಿ ಲೀಕ್ ಪ್ರಕರಣ ಮಾಸುವ ಮುನ್ನವೇ ಫೇಸ್‌ಬುಕ್ ಸಂಬಂಧಿತ, ಭಾರತೀಯರಿಗೆ ನೇರಾವಾಗಿ ಅನ್ವಯವಾಗುವ ಸುದ್ದಿಯೊಂದು ಬಂದಿದೆ. ಅಮೆರಿಕಾ ವೀಸಾ ಪಡೆಯಲು ಪ್ರಯತ್ನ ನಡೆಸುತ್ತಿರುವವರಿಗೆ ಮತ್ತೊಂದು ಕಂಟಕ ಎದುರಾಗಿದೆ.

ಅಮೆರಿಕಾ ವೀಸಾ ಬೇಕಾ..? ನಿಮ್ಮ 5 ವರ್ಷದ ಫೋನ್‌ ಕರೆಗಳ ಮಾಹಿತಿ ನೀಡಬೇಕು...!

ಇನ್ನು ಮುಂದೆ ಅಮೆರಿಕಾದ ವೀಸಾ ಕೋರಿ ಅರ್ಜಿ ಸಲ್ಲಿಸಬೇಕಾಗಿದರೆ ಅರ್ಜಿದಾರರು ತಮ್ಮ ಫೋನ್, ಇಮೇಲ್ ವಿಳಾಸದೊಂದಿಗೆ ಇನ್ನು ಮುಂದೆ ಸಾಮಾಜಿಕ ಜಾಲತಾಣದ ವಿವರವನ್ನು ನೀಡಬೇಕು ಎಂದು ಎಂದು ಟ್ರಂಪ್ ನೇತೃತ್ವದ ಸರಕಾರ ಸೂಚಿಸಿದೆ. ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚಿನ ಖ್ಯಾತಿಯನ್ನು ಪಡೆದುಕೊಂಡಿರುವ ಫೇಸ್‌ಬುಕ್ ಮತ್ತೆ ಟ್ವಿಟರ್ ಮಾಹಿತಿಯನ್ನು ವೀಸಾ ಪಡೆಯುವವರು ನೀಡಬೇಕಾಗಿದೆ.

ಈ ಮಾಹಿತಿಯನ್ನು ಸಂಗ್ರಹಿಸುತ್ತಿರುವುದಕ್ಕೆ ಕಾರಣವನ್ನು ನೀಡಿರುವ ಅಮೆರಿಕಾ ಸರಕಾರ, ವಲಸಿಗರಿಂದ ಯಾವುದೇ ತೊಂದರೆಯಾಗಬಾರದು ಎಂದು ದೇಶದ ಭದ್ರತೆಯನ್ನು ಗಮನದಲ್ಲಿರಿಸಿಕೊಂಡು ಈ ಕ್ರಮಕ್ಕೆ ಮುಂದಾಗಿರುವುದಾಗಿ ತಿಳಿಸಿದೆ. ದೇಶಕ್ಕೆ ಬೆದರಿಕೆ ಒಡ್ಡುವ ವ್ಯಕ್ತಿಗಳನ್ನು ಅಮೆರಿಕಾಗೆ ಪ್ರವೇಶಿಸುವುದನ್ನು ತಡೆಯುವುದಕ್ಕಾಗಿ ತಪಾಸಣೆ ಪ್ರಕ್ರಿಯೆ ಭಾಗವಾಗಿ ಈ ಕ್ರಮ ಕೈಗೊಳ್ಳಲಾಗಿದೆ ಎಂಬ ಮಾಹಿತಿ ಲಭ್ಯವಾಗಿದ್ದು, ವಲಸೆ ರಹಿತ ವೀಸಾದಡಿ ಅಮೆರಿಕಕ್ಕೆ ಬರುವವರು ಹೊಸ ನಿಯಮಗಳನ್ನು ಒಳಗೊಂಡ ಪ್ರಶ್ನೆಗಳ ಪಟ್ಟಿಗೆ ಉತ್ತರ ನೀಡಬೇಕು ಎನ್ನಲಾಗಿದೆ.

ಅಮೆರಿಕಾ ವೀಸಾ ಬೇಕಾ..? ನಿಮ್ಮ 5 ವರ್ಷದ ಫೋನ್‌ ಕರೆಗಳ ಮಾಹಿತಿ ನೀಡಬೇಕು...!

ಅಮೆರಿಕಾ ವೀಸಾಗೆ ಅರ್ಜಿ ಸಲ್ಲಿಸುವವರು ತಾವು ನಿರ್ವಹಿಸುತ್ತಿರುವ ಸಾಮಾಜಿಕ ಜಾಲತಾಣದ ವಿವರ ವನ್ನು ಅರ್ಜಿ ಯೊಂದಿಗೆ ದಾಖಲಿಸ ಬೇಕಾಗಿದೆ. ಇದಲ್ಲದೇ ಕಳೆದ ಐದು ವರ್ಷಗಳಲ್ಲಿ ತಾವು ಬಳಸಿದ ಫೋನ್ ಮತ್ತು ಮೊಬೈಲ್ ನಂಬರ್ ಅನ್ನು ನೀಡಬೇಕು ಎಂಬ ಷರತ್ತನ್ನು ಸಹ ವಿಧಿಸಲಾಗಿದೆ.

ಮಾರುಕಟ್ಟೆಯಲ್ಲಿ ಹವಾ ಎಬ್ಬಿಸಿರುವ Truvision TX4075 40' Smart LED TV ಹೇಗಿದೆ..?

ಅಮೆರಿಕದ ಈ ಹೊಸ ವೀಸಾ ನಿಯಮ ಸುಮಾರು 710,000 ವಲಸೆಗಾರರಿಗೆ ಮತ್ತು 1.4೦ ಲಕ್ಷ ವಲಸೆ ರಹಿತ ವೀಸಾ ಅರ್ಜಿದಾರರ ಮೇಲೆ ಪರಿಣಾಮ ಬೀರಲಿದೆ ಎನ್ನಲಾಗಿದ್ದು, ಅಮೆರಿಕಾ ವೀಸಾ ಪಡೆಯಲು ಭಾರತೀಯರು ಹೆಚ್ಚಿನ ಸಂಖ್ಯೆಯಲ್ಲಿ ಅರ್ಜಿ ಸಲ್ಲಿಸುತ್ತಿದ್ದು, ಈ ಕ್ರಮ ನೇರವಾಗಿ ಭಾರತೀಯರ ಮೇಲೆ ಪರಿಣಾಮವನ್ನು ಬೀರಲಿದೆ.

Best Mobiles in India

English summary
US wants visa applicants to submit phone, email, social media details. to know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X