Home
Social media

ವೈರಲ್ ವಿಡಿಯೋ: ಪ್ರಧಾನಿ ಮೋದಿಗೆ ಟ್ವಿಟರ್ ನಲ್ಲಿ ಚಾಲೆಂಜ್ ಹಾಕಿದ ವಿರಾಟ್ ಕೊಹ್ಲಿ..!

By Srinidhi

ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಟ್ವಿಟ್ಟರ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸವಾಲು ಹಾಕುವ ಮೂಲಕ ಸುದ್ದಿಯಾಗಿದ್ದಾರೆ. ಹಮ್‌ ಫಿಟ್‌ ತೋ ಇಂಡಿಯಾ ಫಿಟ್‌ ಅಭಿಯಾನದ ಅಂಗವಾಗಿ ವಿರಾಟ್ ಕೊಹ್ಲಿ ಪ್ರಧಾನಿ ಮೋದಿ ಅವರಿಗೆ ತಮ್ಮ ಫಿಟ್ ನೆಸ್ ತೋರಿಸುವಂತೆ ಟ್ವಿಟರ್ ನಲ್ಲಿ ವಿಡಿಯೋ ಫೋಸ್ಟ್ ಮಾಡಿದ್ದು, ಸದ್ಯ ವೈರಲ್ ಆಗಿದೆ.

ವೈರಲ್ ವಿಡಿಯೋ: ಪ್ರಧಾನಿ ಮೋದಿಗೆ ಟ್ವಿಟರ್ ನಲ್ಲಿ ಚಾಲೆಂಜ್ ಹಾಕಿದ ವಿರಾಟ್ ಕೊಹ್ಲಿ

ಕ್ರಿಕೆಟ್ ಮೈದಾನದಲ್ಲಿ ಫಿಟ್ ಆಗಿರುವ ವಿರಾಟ್ ಕೊಹ್ಲಿ, ಯುವ ಆಟಗಾರರಿಗೆ ಮಾದರಿಯಾಗಿದ್ದಾರೆ. ಫಿಲ್ಡಿಂಗ್ ಮತ್ತು ಬ್ಯಾಂಟಿಗ್‌ನಲ್ಲಿ ಚುರುಕಾಗಿರುವ ಕೊಹ್ಲಿ, ಟ್ವಿಟರ್ ವಿಡಿಯೋದಲ್ಲಿ ತಮ್ಮ ಸಾಮರ್ಥ್ಯವನ್ನು ಸಾಬೀತು ಮಾಡಿ ಪ್ರಧಾನಿಗೆ ಸವಾಲು ಹಾಕಿದ್ದಾರೆ.

Twitter Shortcut ಕೀಗಳನ್ನು ಬಳಸುವುದು ಟ್ವಿಟ್ಟಿಗರ ಮೂಲ ಲಕ್ಷಣಗಳಲ್ಲೊಂದು!!

ಪ್ರಧಾನಿಗೆ ಸವಾಲು:

ಟೀಮ್ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ಮೊದಲಿಗೆ ಫಿಟ್‌ನೆಸ್ ಚಾಲೆಂಜ್ ತೆಗೆದಕೊಂಡು ನಂತರದಲ್ಲಿ ಪತ್ನಿ ಅನುಷ್ಕಾ ಶರ್ಮಾ, ಪ್ರಧಾನಿ ನರೇಂದ್ರ ಮೋದಿ ಹಾಗೂ ಮಹೇಂದ್ರ ಸಿಂಗ್​ ಧೋನಿಗೆ ಟ್ವಿಟರ್​​ನಲ್ಲಿ ಸವಾಲು ಹಾಕಿದ್ದಾರೆ.

ಧೋನಿಗೂ ಸವಾಲು;

ಧೋನಿಗೂ ಸವಾಲು;

ಇದೇ ಮಾದರಿಯಲ್ಲಿ ಟೀಮ್ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಸಹ ಫಿಟ್ ನೆಸ್‌ಗೆ ಹೆಸರಾಗಿದ್ದಾರೆ. ಈ ಹಿನ್ನಲೆಯಲ್ಲಿ ಧೋನಿಗೂ ಸವಾಲು ಹಾಕಿರುವ ಕೊಹ್ಲಿ, ತಮ್ಮ ಸಾಮಾರ್ಥ್ಯವನ್ನು ಸಾಬೀತು ಮಾಡಿ ಟ್ವಿಟರ್ ವೀಡಿಯೋ ಹಾಕುವಂತೆ ಕರೆ ನೀಡಿದ್ದಾರೆ.

ಸವಾಲು ಸ್ವೀಕರಿಸಿದ ಪ್ರಧಾನಿ:

ವಿರಾಟ್ ಕೊಹ್ಲಿ ಹಾಕಿರುವ ಚಾಲೆಂಜ್‌ಗೆ ಉತ್ತರಿಸಿರುವ ಪ್ರಧಾನಿ ನರೇಂದ್ರ ಮೋದಿ, ಸವಾಲನ್ನು ಸ್ವೀಕರಿಸಲಾಗಿದೆ​ ವಿರಾಟ್​​. ಶೀಘ್ರವೇ ನಾನು ನನ್ನ ಫಿಟ್​​ನೆಸ್​​ ವಿಡಿಯೋ ಬಿಡುಗಡೆ ಮಾಡುತ್ತೇನೆ ಎಂದು ಟ್ವಿಟ್​ ಮಾಡಿದ್ದಾರೆ.

ಕೊಹ್ಲಿಗೆ ಸವಾಲು:

ಕೇಂದ್ರ ಕ್ರೀಡಾ ಸಚಿವ ರಾಜ ವರ್ಧನ್​​​ ಸಿಂಗ್‌ ರಾಥೋಡ್‌ ಅವರು ‘ಹಮ್‌ ಫಿಟ್‌ ತೋ ಇಂಡಿಯಾ ಫಿಟ್‌' ಎಂಬ ಅಭಿಯಾನಕ್ಕೆ ಕರೆ ನೀಡಿದ್ದು, ತಮ್ಮ ಫಿಟ್‌ನೆಸ್‌ ಮಂತ್ರದ ಬಗ್ಗೆ ವಿಡಿಯೋ ಮಾಡಿ ಟ್ವಿಟರ್​ನಲ್ಲಿ ಹಂಚಿಕೊಳ್ಳಲು ಹೇಳಿದ್ದರು. ಈ ಹಿನ್ನೆಲೆಯಲ್ಲಿ ತಮ್ಮ ಫಿಟ್​​ನೆಸ್​​ ವಿಡಿಯೋ ಮಾಡಿದ್ದ ಕೊಹ್ಲಿ, ಪ್ರಧಾನಿ ಮೋದಿ, ಅನುಷ್ಕಾ ಶರ್ಮಾ, ಧೋನಿಗೆ ಚಾಲೆಂಜ್​ ನೀಡಿದ್ದರು.

ಬಬಿತಾ ಪೋಗಾತ್

ಮಹಿಳಾ ಕುಸ್ತಿಪಟು, ದಂಗಲ್ ಖ್ಯಾತಿಯ ಬಬಿಯಾ ಪೋಗಾತ್ ಸಹ ತಮ್ಮ ಫಿಟ್ ನೆಸ್ ತೋರಿಸಿವು ಟ್ಚಿಟರ್ ವಿಡಿಯೋವನ್ನು ಆಪ್‌ ಲೋಡ್ ಮಾಡಿದ್ದು, ವಿದ್ಯಾ ಬಾಲನ್ ಮತ್ತು ಜಾನ್ ಅಬ್ರಾಹಂಗೆ ಸವಾಲು ಹಾಕಿದ್ದಾರೆ.

ಆಪ್ ಕಿ ಅದಾಲತ್

ಹಿಂದಿಯ ಖ್ಯಾತ ಶೋ ಆಪ್ ಕಿ ಅದಾಲತ್ ನಡೆಸಿಕೊಡುವ ರಜತ್ ಶರ್ಮ ಸಹ ತಮ್ಮ ಫಿಟ್ ನೆಸ್ ವಿಡಿಯೋ ಹಾಕಿದ್ದು, ಸಲ್ಮಾನ್ ಖಾನ್ ನೊಂದಿಗೆ ತಮ್ಮ ಸಾಮರ್ಥ್ಯವನ್ನು ತೋರಿಸಿದ್ದಾರೆ.

ಟೈಗರ್ ಸವಾಲು

ಇದೇ ಮಾದರಿಯಲ್ಲಿ ಸದ್ಯ ಬಾಲಿವುಡ್ ಅಂಗಳದಲ್ಲಿ ಮಿಂಚುತ್ತಿರುವ ಟೈಗರ್ ಶ್ರಾಪ್ ಸಹ ಟ್ವಿಟರ್ ನಲ್ಲಿ ವಿಡಿಯೋ ಮಾಡಿ ಹಾಕಿದ್ದು, ವೈರಲ್ ಆಗಿದೆ.

Best Mobiles in India

English summary
Virat Kohli Tags Narendra Modi for Fitness Challenge, PM Accepts. to know more visit kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+