ವಾಟ್ಸ್ ಆಪ್ ನಿಮ್ಮನ್ನೂ ಬ್ಯಾನ್ ಮಾಡಬಹುದು ಎಚ್ಚರಿಕೆ!

|

ರಾಜ್ಯಸಭೆಯ ಎಂಪಿಗಳನ್ನು ಬ್ಯಾನ್ ಮಾಡಿದ ವಾಟ್ಸ್ ಆಪ್, ನಿಮ್ಮನ್ನೂ ವಾಟ್ಸ್ ಆಪ್ ಬ್ಯಾನ್ ಮಾಡುವುದಕ್ಕೆ 13 ಕಾರಣಗಳು.

ವಾಟ್ಸ್ ಆಪ್ ನಿಮ್ಮನ್ನೂ ಬ್ಯಾನ್ ಮಾಡಬಹುದು ಎಚ್ಚರಿಕೆ!

ಫೇಸ್ ಬುಕ್ ಮಾಲೀಕತ್ವದ ವಾಟ್ಸ್ ಆಪ್ ಇತ್ತೀಚೆಗೆ ತೆಲುಗು ದೇಶಂ ಪಾರ್ಟಿಯ ರಾಜ್ಯ ಸಭೆಯ ಎಂಪಿಗಳನ್ನು ತನ್ನ ಫ್ಲ್ಯಾಟ್ ಫಾರ್ಮ್ ನಿಂದ ಬ್ಯಾನ್ ಮಾಡಿದೆ. ಆದರೆ ರಾಜಕಾರಣಿಗಳು ತಾವು ವಾಟ್ಸ್ ಆಪ್ ನ ಯಾವುದೇ ನಿಯಮವನ್ನೂ ಉಲ್ಲಂಘನೆ ಮಾಡಿಲ್ಲ ಎಂದು ಹೇಳಿದ್ದಾರೆ. ಇವರ ಅಕೌಂಟ್ ಗಳು ಬ್ಯಾನ್ ಆಗುವುದಕ್ಕೆ ಕಾರಣವೇನು ಎಂಬ ಬಗ್ಗೆ ವಾಟ್ಸ್ ಆಪ್ ಇನ್ನೂ ಸ್ಪಷ್ಟನೆ ನೀಡಿಲ್ಲ.

ರೂಮರ್ ಗಳು ಮತ್ತು ಸುಳ್ಳು ಮೆಸೇಜ್ ಗಳು ಭಾರತದಲ್ಲಿ ಹೆಚ್ಚಾಗಿ ಹರಿದಾಡುತ್ತಿವೆ.ನಾಗರೀಕರಿಗೆ ವಾಟ್ಸ್ ಆಪ್ ಸುರಕ್ಷತೆ ಇರುವ ಸ್ಥಳವಾಗಿರುವಂತೆ ನೋಡಿಕೊಳ್ಳುವ ದೃಷ್ಟಿಯಿಂದ ವಾಟ್ಸ್ ಆಪ್ ನಲ್ಲಿ ಸಾಕಷ್ಟು ಬದಲಾವಣೆಗಳನ್ನು ಕೂಡ ಮಾಡಲಾಗಿದೆ. ವಾಟ್ಸ್ ಆಪ್ ರಾಜ್ಯಸಭಾ ಎಂಪಿಗಳನ್ನೇ ಬ್ಯಾನ್ ಮಾಡುವ ತಾಕತ್ತು ಹೊಂದಿದೆ ಎಂದಾದರೆ ಖಂಡಿತ ಒಂದು ದಿನ ನಿಮ್ಮನ್ನೂ ಕೂಡ ವಾಟ್ಸ್ ಆಪ್ ಬ್ಯಾನ್ ಮಾಡುವ ಶಕ್ತಿಯನ್ನು ಹೊಂದಿದೆ.ಹಾಗಾದ್ರೆ ಯಾವೆಲ್ಲ ಕಾರಣಗಳಿಂದಾಗಿ ನೀವು ವಾಟ್ಸ್ ಆಪ್ ನಿಂದ ಬ್ಯಾನ್ ಆಗುವ ಸಾಧ್ಯತೆಗಳಿದೆ ಎಂಬ ಬಗ್ಗೆ ತಿಳಿದುಕೊಳ್ಳಿ.

 • ನಿಮ್ಮ ಅಕೌಂಟಿನ ಬಗ್ಗೆ ಇತರೆ ಯಾವುದೇ ಬಳಕೆದಾರರು ರಿಪೋರ್ಟ್ ಮಾಡಿದರೆ ಬ್ಯಾನ್ ಆಗುವ ಸಾಧ್ಯತೆ ಇದೆ. ಆದರೆ ಅದು ವಾಟ್ಸ್ ಆಪ್ ನ ನೀತಿ ಮತ್ತು ನಿಯಮಗಳ ಉಲ್ಲಂಘನೆಗೆ ಸಂಬಂಧಪಟ್ಟಿರುವುದಾಗಿರಬೇಕು.
 • ಕಾನೂನುಬಾಹಿರ, ಇನ್ನೊಬ್ಬರಿಗೆ ಪ್ರಾಣಭಯಗೊಳಿಸುವ ಮೆಸೇಜ್ ಗಳು, ಇತ್ಯಾದಿ ಮೆಸೇಜ್ ಗಳನ್ನು ಕಳುಹಿಸಿದರೆ ನಿಮ್ಮನ್ನ ವಾಟ್ಸ್ ಆಪ್ ನಿಂದ ಬ್ಯಾನ್ ಮಾಡಲಾಗುತ್ತದೆ.
 • ಕ್ರೈಮ್ ಸುದ್ದಿಗಳಿಗೆ ಪ್ರಮೋಷನ್ ನೀಡುವಂತಹ ಮೆಸೇಜ್ ಗಳನ್ನು ಕಳುಹಿಸಿದರೆ ಕೂಡ ವಾಟ್ಸ್ ಆಪ್ ನಿಮ್ಮನ್ನ ಬ್ಯಾನ್ ಮಾಡುತ್ತದೆ.
 • ಇನ್ನೊಬ್ಬರ ವಾಟ್ಸ್ ಆಪ್ ಅಕೌಂಟ್ ನ್ನು ಫೇಕ್ ಆಗಿ ಸೃಷ್ಟಿ ಮಾಡುವುದರಿಂದಲೂ ಕೂಡ ಬ್ಯಾನ್ ಮಾಡಲಾಗುತ್ತದೆ.
 • ನಿಮ್ಮ ಕಾಂಟ್ಯಾಕ್ಟ್ ಲಿಸ್ಟ್ ನಲ್ಲಿ ಇಲ್ಲದ ವ್ಯಕ್ತಿಗಳಿಗೆ ಅತೀ ಹೆಚ್ಚು ಮೆಸೇಜ್ ಗಳನ್ನು ಕಳುಹಿಸುತ್ತಲೇ ಇದ್ದರೆ ನಿಮ್ಮನ್ನ ವಾಟ್ಸ್ ಆಪ್ ನಿಂದ ಬ್ಯಾನ್ ಮಾಡಲಾಗುತ್ತದೆ.
 • ವಾಟ್ಸ್ ಆಪ್ ನ ಕೋರ್ ಆಪ್ ಕೋಡ್ ನ್ನು ಅಲ್ಟರ್ ಅಥವಾ ಮಾಡಿಫೈ ಮಾಡುವುದಕ್ಕೆ ಪ್ರಯತ್ನಿಸಿದರೆ ನಿಮ್ಮನ್ನ ಬ್ಯಾನ್ ಮಾಡಲಾಗುತ್ತದೆ.
 • ಇತರೆ ಬಳಕೆದಾರರಿಗೆ ವಾಟ್ಸ್ ಆಪ್ ಬಳಸಿ ವೈರಸ್ ಅಥವಾ ಮಾಲ್ವೇರ್ ಗಳನ್ನು ಕಳುಹಿಸಿದರೆ ನಿಮ್ಮನ್ನ ವಾಟ್ಸ್ ಆಪ್ ನಿಂದ ಬ್ಯಾನ್ ಮಾಡಲಾಗುತ್ತದೆ.
 • ವಾಟ್ಸ್ ಆಪ್ ಸರ್ವರ್ ನ್ನು ಹ್ಯಾಕ್ ಮಾಡಲು ಪ್ರಯತ್ನಿಸುವುದು ಮತ್ತು ಇತರರನ್ನು ಸ್ಪೈ ಮಾಡುವ ಕೆಲಸಕ್ಕೆ ಕೈ ಹಾಕಿದರೆ ವಾಟ್ಸ್ ಆಪ್ ನಲ್ಲಿ ಬ್ಯಾನ್ ಮಾಡಲಾಗುತ್ತದೆ.
 • ನೀವು ಇತರೆ ಹಲವಾರು ಬಳಕೆದಾರರಿಂದ ಬ್ಲಾಕ್ ಆಗಿದ್ದರೆ ನಿಮ್ಮನ್ನ ವಾಟ್ಸ್ ಆಪ್ ನಿಂದ ಬ್ಲಾಕ್ ಮಾಡಲಾಗುತ್ತದೆ.
 • ನಿಮ್ಮ ಬಗ್ಗೆ ವಾಟ್ಸ್ ಆಪ್ ಸಾಕಷ್ಟು ದೂರುಗಳನ್ನು ಪಡೆದರೆ ನಿಮ್ಮನ್ನ ವಾಟ್ಸ್ ಆಪ್ ನಿಂದ ಬ್ಯಾನ್ ಮಾಡಲಾಗುತ್ತದೆ.
 • ವಾಟ್ಸ್ ಆಪ್ ಪ್ಲಸ್ ನಂತಹ ಥರ್ಡ್ ಪಾರ್ಟಿ ಆಪ್ ಗಳನ್ನು ಬಳಸುವುದು
 • ಕಳೆದ ಮೂರು ತಿಂಗಳಲ್ಲಿ ವಾಟ್ಸ್ ಆಪ್ ಸುಮಾರು ವಿಶ್ವದಾದ್ಯಂತ 5 ಮಿಲಿಯನ್ ಪ್ಲಸ್ ಮಂದಿಯ ಅಕೌಂಟ್ ಗಳನ್ನು ಬ್ಲಾಕ್ ಮಾಡಿದೆ ಎಂದು ತಿಳಿಸಿದೆ.
 • 75% ವಾಟ್ಸ್ ಆಪ್ ಅಕೌಂಟ್ ಗಳನ್ನು ಇತ್ತೀಚೆಗಿನ ವರದಿ ಅಥವಾ ದೂರುಗಳನ್ನು ಆಧರಿಸದೇ ಬ್ಯಾನ್ ಮಾಡಲಾಗಿದೆ.
Best Mobiles in India

English summary
WhatsApp bans Rajya Sabha MP, 13 reasons why WhatsApp may ban you too

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X