ವಾಟ್ಸ್ಆಪ್ ಬಳಕೆದಾರರೇ ಈ ಒಂದು ವಾರ ಮಾತ್ರ ಎಚ್ಚರವಾಗಿರಿ!..ಏಕೆ ಗೊತ್ತಾ?

|

ಚುನಾವಣೆಗೆ ಸಂಬಂಧಿಸಿದಂತೆ ಜನಪ್ರಿಯ ವಾಟ್ಸ್ಆಪ್ ಆಪ್ ಮೂಲಕ ಸುಳ್ಳು ಸುದ್ದಿ, ಪ್ರಚೋದನಕಾರಿ ವಿಷಯಗಳು ಮತ್ತು ವದಂತಿಗಳನ್ನು ಹರಡಿಸುತ್ತಿರುವವರ ಖಾತಗಳನ್ನು ಬ್ಲಾಕ್ ಮಾಡುವ ಅಥವಾ ನಿಷ್ಕ್ರಿಯಗೊಳಿಸುವಂತಹ ಕೆಲಸಕ್ಕೆ ವಾಟ್ಸ್ಆಪ್ ಸಂಸ್ಥೆ ಚುರುಕು ನೀಡಿದೆ. ದೇಶದ ಲೋಕಸಭಾ ಚುನಾವಣೆಯ ಮೊದಲ ಹಂತದ ಮತದಾನ ಏಪ್ರಿಲ್‌ 11 ರಂದು ಆರಂಭವಾಗಿದ್ದು, ಅಂದಿನಿಂದಲೇ ವಾಟ್ಸ್ಆಪ್ ನಿಯಂತ್ರಕ ಕ್ರಮಗಳನ್ನು ಚುರುಕುಗೊಳಿಸಿರುವುದು ತಿಳಿದುಬಂದಿದೆ.

ಚುನಾವಣಾ ಆಯೋಗದ ಸೂಚನೆಯ ಮೇರೆಗೆ ಆಕ್ಷೇಪಾರ್ಹ ಸಂಗತಿ ಅಥವಾ ಸುಳ್ಳು ಸುದ್ದಿಗಳನ್ನು ಪ್ರಚಾರ ಮಾಡುವವರ ಮೊಬೈಲ್‌ ಸಂಖ್ಯೆಗಳನ್ನು ಪರಿಗಣಿಸಿ, ತನ್ನ ಚಾಟ್‌ ಸರ್ವಿಸ್‌ ರದ್ದುಪಡಿಸುವುದು ಸೇರಿದಂತೆ ನಿಯಂತ್ರಣ ಕ್ರಮಗಳನ್ನು ವಾಟ್ಸ್ಆಪ್ಸಂಸ್ಥೆ ಕೈಗೊಳ್ಳುತ್ತಿದೆ. ನಿಯಮಬಾಹಿರವಾಗಿ ಇಂತಹ ಕಾರ್ಯಗಳನ್ನು ಎಸಗಿರುವ ಒಂದು ದಶಲಕ್ಷಕ್ಕೂ ಹೆಚ್ಚು ವಾಟ್ಸ್ಆಪ್ ಖಾತೆಗಳು ಈಗಾಗಲೇ ನಿಷ್ಕ್ರಿಯವಾಗಿವೆ ಎಂಬ ಸುದ್ದಿ ಕೂಡ ಹೊರಬಿದ್ದಿರುವುದು ಎಚ್ಚರಿಕೆಯ ಗಂಟೆಯಾಗಿದೆ.

ವಾಟ್ಸ್ಆಪ್ ಬಳಕೆದಾರರೇ ಈ ಒಂದು ವಾರ ಮಾತ್ರ ಎಚ್ಚರವಾಗಿರಿ!..ಏಕೆ ಗೊತ್ತಾ?

ಈಗಾಗಲೇ ವಾಟ್ಸ್ಆಪ್ ಸಂಸ್ಥೆಯು ತನ್ನ ಆಪ್‌ನಲ್ಲಿ ಏನೆಲ್ಲಾ ಮಾಡಬಾರದು ಎಂಬ ಅಂಶಗಳನ್ನು ತಿಳಿಸುವ ಮೂಲಕ ಎಚ್ಚರಿಕೆ ನೀಡಿದೆ. ಇನ್ನು ರಾಜ್ಯದಲ್ಲಿ ಕೂಡ ಈ ವಾರದ ಒಳಗಾಗಿ ಚುನಾವಣಾ ಪ್ರಕ್ರಿಯೆಗಳು ನಡೆಯುವುದರಿಂದ ವಾಟ್ಸ್ಆಪ್ ಬಳಕೆದಾರರು ವಾಟ್ಸ್ಆಪ್ ಅನ್ನು ಬಳಸುವ ಮುನ್ನ ಎಚ್ಚರವಾಗಿರಬೇಕು. ಹಾಗಾದರೆ, ಲಕ್ಷಾಂತರ ವಾಟ್ಸ್ಆಪ್ ಖಾತೆಗಳಿಗೆ ವಾಟ್ಸ್ಆಪ್ ಬ್ಲಾಕ್ ಭಾಗ್ಯ ಕರುಣಿಸಿದ್ದು ಏಕೆ?, ನಾವು ಹೇಗೆ ಎಚ್ಚರದಿಂದ ಇರಬೇಕು ಎಂಬುದನ್ನು ಮುಂದೆ ಓದಿ ತಿಳಿಯಿರಿ.

ಲಕ್ಷಾಂತರ ವಾಟ್ಸ್ಆಪ್ ಖಾತೆಗಳು ಬ್ಲಾಕ್!

ಲಕ್ಷಾಂತರ ವಾಟ್ಸ್ಆಪ್ ಖಾತೆಗಳು ಬ್ಲಾಕ್!

ಬಳಕೆದಾರರ ಮೇಲೆ ನಿಗಾವಹಿಸುವಂತೆ ಕೇಂದ್ರ ಸರರ್ಕಾರದಿಂದ ಎಚ್ಚರಿಕೆಗಳು ರವಾನೆಯಾಗುತ್ತಲೇ ಇರುವುದರಿಂದ ಬಳಕೆದಾರರ ಸಣ್ಣ ತಪ್ಪುಗಳಿಗೂ ನಿರ್ಬಂಧ ಹೇರುವ ಕಟ್ಟುನಿಟ್ಟಿನ ಕ್ರಮಕ್ಕೆ ವಾಟ್ಸ್ಆಪ್ ಸಂಸ್ಥೆ ಗಟ್ಟಿ ನಿರ್ಧಾರ ಮಾಡಿದೆ. ಅದರಂತೆ, ವಾಟ್ಸ್ಆಪ್ ನಿರ್ದೇಶನಗಳನ್ನು ಮೀರಿ ಯಾವುದೇ ಕೆಲಸಗಳನ್ನು ನಿರ್ವಹಿಸುತ್ತಿರುವವರನ್ನು ವಾಟ್ಸ್ಆಪ್ ಬ್ಲಾಕ್ ಮಾಡಿದೆ.

ನಿರ್ದೇಶನಗಳನ್ನು ಮೀರಿದರೆ ತಕ್ಷಣ ಸಂದೇಶ!

ನಿರ್ದೇಶನಗಳನ್ನು ಮೀರಿದರೆ ತಕ್ಷಣ ಸಂದೇಶ!

ವಾಟ್ಸ್ಆಪ್ ನಿರ್ದೇಶನಗಳನ್ನು ಮೀರಿ ಯಾವುದೇ ಕೆಲಸಗಳನ್ನು ನಿರ್ವಹಿಸಿದರೆ ಆ ಕೂಡಲೇ, 'ನೀವು ಬಳಸುವ ವಾಟ್ಸ್ಆಪ್ ನಂಬರ್ ಮೇಲೆ ನಿಷೇಧ ಹೇರಲಾಗಿದೆ. ಸಹಾಯಕ್ಕಾಗಿ ನಮ್ಮ ಗ್ರಾಹಕ ಸೇವಾ ಕೇಂದ್ರವನ್ನು ಸಂಪರ್ಕಿಸಿ' ಎಂಬ ಈ ಸಂದೇಶ ಬರಲಿದೆ. ಅಂದರೆ, ನೀವು ನೀಡಿದ್ದ ನಿಮ್ಮ ಮೊಬೈಲ್ ನಂಬರ್ ಅನ್ನು ವಾಟ್ಸ್ಆಪ್ ಕಂಪೆನಿ ಬ್ಲಾಕ್ ಮಾಡಿರುತ್ತದೆ.

ವಾಟ್ಸ್ಆಪ್ ಖಾತೆ ಬ್ಲಾಕ್ ಆಗುವುದು ಏಕೆ?

ವಾಟ್ಸ್ಆಪ್ ಖಾತೆ ಬ್ಲಾಕ್ ಆಗುವುದು ಏಕೆ?

ನಿಮ್ಮ ವಾಟ್ಸ್ಆಪ್ ಖಾತೆಯನ್ನು ಬ್ಯಾನ್ ಮಾಡಬೇಕಿದ್ದರೆ ಬೇರೆ ಬಳಕೆದಾರರು ನಮ್ಮ ವಿರುದ್ಧ ದೂರು ನೀಡಲೇಬೇಕೆಂದೇನಿಲ್ಲ. ಬದಲಾಗಿ, ಇದೀಗ ಕಾನೂನು-ವಿರೋಧಿ, ಅಶ್ಲೀಲ, ಮಾನಹಾನಿಕರ ಅಥವಾ ಬೆದರಿಕೆಯ ಸಂದೇಶಗಳನ್ನು ಕಳುಹಿಸುವುದು ಅಪರಾಧವಾಗಿದ್ದು, ಅದರ ಬಳಕೆಯ ನಿಯಮಗಳನ್ನು ಉಲ್ಲಂಘಿಸಿದರೆ ಸಹ ನಿಮ್ಮ ಖಾತೆ ಬ್ಯಾನ್ ಆಗಲಿದೆ.

ಅನ್ಯರಿಗೆ ಸಂದೇಶ ರವಾನೆ ಮಾಡಿದರೂ ಬ್ಲಾಕ್!

ಅನ್ಯರಿಗೆ ಸಂದೇಶ ರವಾನೆ ಮಾಡಿದರೂ ಬ್ಲಾಕ್!

ಹಿಂಸೆಗೆ ಪ್ರಚೋದನೆ ನೀಡುವ ಯಾವುದೇ ಆಡಿಯೋ, ವೀಡಿಯೊ, ಪಠ್ಯ ಅಥವಾ ಇನ್ಯಾವುದೇ ರೂಪದ ಸಂದೇಶಗಳನ್ನು ಕಳುಹಿಸುವುದರಿಂದ ಖಾತೆ ಬ್ಯಾನ್ ಆಗಲಿದೆ. ಜೊತೆಗೆ ನಿಮ್ಮ ಕಾಂಟ್ಯಾಕ್ಟ್ ಲಿಸ್ಟ್‌ನಲ್ಲಿ ಇಲ್ಲದ ನಂಬರ್‌ಗಳಿಗೆ ಪದೇ ಪದೇ ಸಂದೇಶ ಕಳುಹಿಸುವುದರಿಂದ ಕೂಡ ನಿಯಮಗಳ ಉಲ್ಲಂಘನೆಯಾಗಿ ವಾಟ್ಸ್ಆಪ್ ಖಾತೆ ಬ್ಯಾನ್ ಆಗಲಿದೆ ಎಂದು ಹೇಳಲಾಗಿದೆ.

ಥರ್ಡ್ ಪಾರ್ಟಿ ಆಪ್‌ಗಳು ಬ್ಲಾಕ್!

ಥರ್ಡ್ ಪಾರ್ಟಿ ಆಪ್‌ಗಳು ಬ್ಲಾಕ್!

ಇನ್ಮುಂದೆ ವಾಟ್ಸ್ಆಪ್ ಬಳಕೆದಾರರು ವಾಟ್ಸ್ಆಪ್‌ನ ಅಧಿಕೃತ ಆಪ್ ಅನ್ನೇ ಬಳಸಬೇಕಿದೆ. ವಾಟ್ಸ್ಆಪ್ ಪ್ಲಸ್ ಮತ್ತು ಜಿಬಿ ವಾಟ್ಸ್ಆಪ್ ನಂತಹ ಥರ್ಡ್ ಪಾರ್ಟಿ ಆಪ್‌ಗಳ ಮೂಲಕ ವಾಟ್ಸ್ಆಪ್ ಬಳಸಿದರೆ ಅವುಗಳನ್ನು ಬ್ಲಾಕ್ ಮಾಡಲಾಗುತ್ತಿದೆ. ಈ ಅನಧಿಕೃತ ಅಪ್ಲಿಕೇಶನ್‌ಗಳು ಅಧಿಕೃತ ಅಪ್ಲಿಕೇಶನ್ ಸೇವಾ ನಿಯಮವನ್ನು ಉಲ್ಲಂಘಿಸುತ್ತಿವೆ ಎಂದು ಸಂಸ್ಥೆ ತಿಳಿಸಿದೆ.

ದೂರು ನೀಡಿದರೆ ನಿಷ್ಕ್ರಿಯವಾಗಲಿದೆ ಖಾತೆ!

ದೂರು ನೀಡಿದರೆ ನಿಷ್ಕ್ರಿಯವಾಗಲಿದೆ ಖಾತೆ!

ಇತರರು ನಿಮ್ಮ ವಾಟ್ಸ್ಆಪ್ ಖಾತೆಯ ಮೇಲೆ ದೂರು ನೀಡಿದರೂ ನಿಮ್ಮ ಖಾತೆ ನಿಷ್ಕ್ರಿಯವಾಗಲಿದೆ. ನಿಮ್ಮ ಫೋನ್ ಸಂಖ್ಯೆಯನ್ನು ನೀಡಿ, ನಿಮ್ಮ ವಾಟ್ಸ್ಆಪ್ ಖಾತೆಯಿಂದ ಕಿರಿಕಿರಿ ಮಾಡುವ ಅಥವಾ ಇನ್ಯಾವುದೇ ರೀತಿಯಲ್ಲಿ ಅಪಾಯಕಾರಿಯಾದ ಸಂದೇಶಗಳ ಬಗ್ಗೆ ಸ್ಪಷ್ಟ ದಾಖಲೆಯನ್ನು ಒದಗಿಸಿದ ಕ್ಷಣಮಾತ್ರದಲ್ಲಿ ನಿಮ್ಮ ವಾಟ್ಸ್ಆಪ್ ಖಾತೆ ಬ್ಲಾಕ್ ಆಗಲಿದೆ.

Best Mobiles in India

English summary
WhatsApp blocks numbers spreading fake news during Lok Sabha election. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X